Kichcha Sudeep: ಸುದೀಪ್ ಹುಟ್ಟುಹಬ್ಬದ ದಿನ ಅಭಿಮಾನಿಗಳಿಗಾಗಿ ವಿಶೇಷ ಗಿಫ್ಟ್, ಫ್ಯಾನ್ಸ್ ಈ ಫೋಟೋ ಬಳಸಿ ನೋಡಿ!

Kichcha Sudeep: ಸ್ಯಾಂಡಲ್​ವುಡ್ ಸ್ಟಾರ್ ನಟ ಕಿಚ್ಚ ಸುದೀಪ್ ಬರ್ತ್​ಡೇ ಆಚರಿಸುವ ನಿಟ್ಟಿನಲ್ಲಿ ನಟ ಶಿವರಾಜ್ ಕುಮಾರ್ ಕಾಮನ್ ಡಿಸ್ಪ್ಕೇ ಪಿಕ್ಚರ್ (ಡಿಪಿ) ರಿಲೀಸ್ ಮಾಡಿದ್ದಾರೆ.

ಕಿಚ್ಚ ಸುದೀಪ್ ಬರ್ತ್​ಡೇ ಕಾಮನ್ ಡಿಪಿ

ಕಿಚ್ಚ ಸುದೀಪ್ ಬರ್ತ್​ಡೇ ಕಾಮನ್ ಡಿಪಿ

  • Share this:
ಸ್ಟಾರ್ ನಟರ ಬರ್ತ್​ಡೇಗೆ ಕಾಮನ್ ಡಿಪಿ (Common DP) ಹಾಕೋದು ತುಂಬಾ ಕಾಮನ್. ಇತ್ತೀಚೆಗೆ ಈ ರೀತಿಯ ಟ್ರೆಂಡ್​ಗಳು (Trend) ಆಗುತ್ತಲೇ ಇರುತ್ತವೆ. ಬರ್ತ್​ಡೇ (Birthday) ಮಾತ್ರವಲ್ಲದೆ ಇತರ ಸಂದರ್ಭಗಳಲ್ಲಿಯೂ ಕಾನ್ ಡಿಪಿ ಕಾನ್ಸೆಪ್ಟ್ (DP Concept) ಈಗ ತುಂಬಾ ಕಾಮನ್. ಇತ್ತೀಚೆಗೆ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಸಂದರ್ಭ ಪ್ರಧಾನಿ ಮೋದಿ (PM Modi) ಕಾಮನ್ ಡಿಪಿ ಕರೆಕೊಟ್ಟುದ್ದರು. ಮತ್ತು ಎಲ್ಲರ ಸೋಷಿಯಲ್ ಮೀಡಿಯಾದ ಡಿಪಿ ತ್ರಿವರ್ಣಕ್ಕೆ ಬದಲಾಗಿತ್ತು. ಈಗ ನಟ ಕಿಚ್ಚ ಸುದೀಪ್ (Kichcha Sudeep) ಹುಟ್ಟಿದ ಹಬ್ಬಕ್ಕೂ ಇಂಥದ್ದೇ ಟ್ರೆಂಡ್ ಒಂದನ್ನು ಮಾಡಲಾಗಿದೆ. ಸ್ಯಾಂಡಲ್​ವುಡ್ (Sandalwood) ನಟ ಶಿವರಾಜ್ ಕುಮಾರ್ (Shiva Rajkumar) ಅವರು ಸೋಷಿಯಲ್ ಮೀಡಿಯಾದಲ್ಲಿ ಈ ಕಾಮನ್ ಡಿಪಿಯನ್ನು ಶೇರ್ ಮಾಡಿದ್ದು ಇದು ವೈರಲ್ ಆಗಿದೆ.

ಬಾದ್​ಶಾ ಎಂದು ಇಂಗ್ಲೀಷ್​ನಲ್ಲಿ ಬರೆದಿರುವ ಸುದೀಪ್ ಫೋಟೋ ಈಗ ವೈರಲ್ ಆಗಿದ್ದು ಇದರಲ್ಲಿ ಕಿಚ್ಚನ ಚಂದದ ಫೋಟೋವನ್ನು ಸೇರಿಸಲಾಗಿದೆ. ಹಾಗೆಯೇ ಕಿಚ್ಚನ ಸುತ್ತ ಅಭಿಮಾನಿಗಳು ತುಂಬಿರುವುದನ್ನೂ ಇಲ್ಲಿ ಕಾಣಬಹುದು.

ಫೋಟೋವನ್ನು ಶೇರ್ ಮಾಡಿದ ಶಿವರಾಜ್ ಕುಮಾರ್ ನನ್ನ ಗೆಳೆಯ, ಸಹೋದರನ ಹುಟ್ಟಿದ ಹಬ್ಬಕ್ಕೆ ಕಾಮನ್ ಡಿಪಿ ಶೇರ್ ಮಾಡಲು ಖುಷಿಯಾಗುತ್ತಿದೆ ಎಂದು ಕ್ಯಾಪ್ಶನ್ ಬರೆದು ಫೋಟೋವನ್ನು ಹಂಚಿಕೊಂಡಿದ್ದಾರೆ.






ಸೋಷಿಯಲ್ ಮೀಡಿಯಾದಲ್ಲಿ ಭರ್ಜರಿ ಕಮೆಂಟ್

ಶಿವರಾಜ್ ಕುಮಾರ್ ಅವರು ಶೇರ್ ಮಾಡಿದ ಈ ಫೋಟೋ ಈಗಾಗಲೇ 35,149 ಲೈಕ್ಸ್ ಗಳಿಸಿದ್ದು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಫೋಟೋ 225ಕ್ಕೂ ಹೆಚ್ಚು ಕಮೆಂಟ್​ಗಳನ್ನು ಗಳಿಸಿದೆ.

51ನೇ ಹುಟ್ಟುಹಬ್ಬ ಆಚರಿಸಲಿರುವ ಕಿಚ್ಚ ಕಳೆದ ಸಲ ಅಭಿಮಾನಿಗಳ ಜೊತೆ ಬರ್ತ್ ಡೇ ಆಚರಿಸೋಕೆ ಆಗುತ್ತಿಲ್ಲ ಎಂದು ಈ ಹಿಂದೆಯೇ ಹೇಳಿದ್ದರು. ಅಲ್ಲದೆ ಯಾರೂ ಮನೆಯ ಬಳಿ ಬರಬಾರದು ಎಂದೂ ಮನವಿ ಮಾಡಿದ್ದರು. ಪ್ರತಿ ವರ್ಷ ಕಿಚ್ಚನ ಮನೆ ಮುಂದೆ ಅಭಿಮಾನಿಗಳ ಜನ ಜಾತ್ರೆ ಇರುತ್ತಿತ್ತು. ಆದರೆ ಕೊರೋನಾ ಕಾರಣದಿಂದಾಗಿ ಕಳೆದ ವರ್ಷ ನಟ, ಕೊರೋನಾ ಮಾಹಾಮಾರಿಯ ಅಬ್ಬರದ ಹಿನ್ನೆಲೆ ಮನೆಯ ಬಳಿ ಬರಬೇಡಿ ಎಂದು ಸುದೀಪ್ ಅಭಿಮಾನಿಗಳಲ್ಲಿ ಮನವಿ ಮಾಡಿದ್ದರು.

ಇದನ್ನೂ ಓದಿ: Akshay Kumar: ಮಾಡಿದ ಸಿನಿಮಾಗಳೆಲ್ಲವೂ ಫ್ಲಾಪ್​, ಪ್ರಮುಖ ನಿರ್ಧಾರ ತೆಗೆದುಕೊಂಡ ಅಕ್ಷಯ್​! ನಿರ್ಮಾಪಕರು ಫುಲ್​ ಖುಷ್​

ಹುಟ್ಟಿದ ಹಬ್ಬದ ದಿನ ಯಾರಿಗೂ ಸಿಗುವುದಿಲ್ಲ ಅನ್ನೋ ಸಂದೇಶವನ್ನೂ ರವಾನೆ ಮಾಡಿದ್ದರು. ಅಭಿಮಾನಿಗಳನ್ನು ಈಗ ಭೇಟಿ ಆಗುತ್ತಿಲ್ಲ, ಆದರೆ ಪರಿಸ್ಥಿತಿ ಸರಿಹೋದ ನಂತರ ಸಿಗೋಣ ಎಂದು ಸುದೀಪ್​ ಹೇಳಿದ್ದರು. ಅದಕ್ಕೆ ಅಭಿಮಾನಿಗಳಿಗಾಗಿ ಒಂದು ವಿಶೇಷ ಆನ್​ಲೈನ್​ ಕಾರ್ಯಕ್ರಮ ಸಹ ಹಮ್ಮಿಕೊಂಡಿದ್ದರೆ. ಆದರೂ ಅಭಿಮಾನಿಗಳು ಮಾತು ಕೇಳದೆ ಮನೆಯ ಬಳಿ ಬಂದು ಜಮಾಯಿಸಿದ್ದರು.

ಈ ಬಾರಿ ಸ್ಪೆಷಲ್ ಗಿಫ್ಟ್

ಈ ಬಾರಿ ಬರ್ತ್ಡೇ ಹಿನ್ನೆಲೆ ಈಗಾಗಲೇ ಕಾಮನ್ ಡಿಪಿ ರಿಲೀಸ್ ಮಾಡಲಾಗಿದ್ದು ಅಭಿಮಾನಿಗಳು ಸಖತ್  ಥ್ರಿಲ್ ಆಗಿದ್ದಾರೆ. ಈಗಾಗಲೇ ಕಿಚ್ಚ ಅವರ ಅಭಿಮಾನಿಗಳು ಡಿಪಿಯನ್ನು ತಮ್ಮ ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ ಅಪ್​ಲೋಡ್ ಮಾಡಿದ್ದು ಟ್ರೆಂಡ್ ಮಾಡಲು ಸಿದ್ಧರಾಗಿದ್ದಾರೆ.

ಇದನ್ನೂ ಓದಿ: Chandan Kumar: ನಟ ಚಂದನ್ ದೊನ್ನೆ ಬಿರಿಯಾನಿ ಹೋಟೆಲ್​​ನಲ್ಲಿ ಕಳ್ಳತನ

ವಿಕ್ರಾಂತ್ ರೋಣ ಸಕ್ಸಸ್ ಖುಷಿಯಲ್ಲಿರುವ ಕಿಚ್ಚ ಈ ಬಾರಿ ಹೇಗೆ ವಿಭಿನ್ನವಾಗಿ ತಮ್ಮ ಹುಟ್ಟಿದ ಹಬ್ಬ ಆಚರಿಸಲಿದ್ದಾರೆ ಎಂದು ಅಭಿಮಾನಿಗಳು ಸಹ ಕುತೂಹಲದಿಂದ ಕಾಯುತ್ತಿದ್ದಾರೆ.
Published by:Divya D
First published: