Vikrant Rona: ವಿಕ್ರಾಂತ್ ರೋಣ ಸಿನಿಮಾ ಯಶಸ್ಸಿಗಾಗಿ ಅಭಿಮಾನಿಗಳಿಂದ ವಿಶೇಷ ಪೂಜೆ, ವಿರೇಶ್​ ಚಿತ್ರಮಂದಿರದವರೆಗೆ ಮೆರವಣಿಗೆ

Kiccha Sudeep: ಇಂದು ವಿಜಯನಗರದ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆಯನ್ನು ಕಿಚ್ಚನ ಅಭಿಮಾನಿಗಳು ಸಲ್ಲಿಸಿದ್ದು, 101 ಕಳಶಗಳನ್ನ ಹೊತ್ತು ಮಹಿಳಾ ಅಭಿಮಾನಿಗಳು ಮೆರವಣಿಗೆ ನಡೆಸಿದ್ದಾರೆ.

ವಿಕ್ರಾಂತ್​ ರೋಣ

ವಿಕ್ರಾಂತ್​ ರೋಣ

  • Share this:
ಕಿಚ್ಚ ಸುದೀಪ್ (Kiccha Sudeep) ಅಭಿನಯದ ವಿಕ್ರಾಂತ್ ರೋಣ (Vikrant Rona) ಸಿನಿಮಾ ನಾಳೆ ವಿಶ್ವದಾದ್ಯಂತ ಬಿಡುಗಡೆಯಾಗುತ್ತಿದ್ದು, ಅಭಿಮಾನಿಗಳ (Fans)  ಸಂತೋಷಕ್ಕೆ ಪಾರವೇ ಇಲ್ಲದಂತಾಗಿದೆ. ಬೆಂಗಳೂರು (Bengaluru) ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಸಂಭ್ರಮಾಚರಣೆ ಆರಂಭವಾಗಿದ್ದು, ನಾಳೆ ಸಿನಿಮಾ ಬಿಡುಗಡೆಯಾಗುತ್ತಿರುವ ಹಿನ್ನೆಲೆ ಅಭಿಮಾನಿಗಳು ಬೃಹತ್ ಮೆರವಣಿಗೆ ಮಾಡಿದ್ದಾರೆ.  ವಿವಿಧ ಚಿತ್ರಮಂದಿರಗಳಲ್ಲಿ ಸಹ ಕಿಚ್ಚನ ಕಟೌಟ್​ ರಾರಾಜಿಸುತ್ತಿದ್ದು, ಪ್ಯಾನ್​ ಇಂಡಿಯಾ ಸಿನಿಮಾ ಬಗ್ಗೆ ನಿರೀಕ್ಷೆ ಹೆಚ್ಚಾಗುತ್ತಿದೆ.

ಮೆರವಣಿಗೆ ಮಾಡಿದ ಅಭಿಮಾನಿಗಳು

ಇಂದು ವಿಜಯನಗರದ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆಯನ್ನು ಕಿಚ್ಚನ ಅಭಿಮಾನಿಗಳು ಸಲ್ಲಿಸಿದ್ದು, 101 ಕಳಶಗಳನ್ನ ಹೊತ್ತು ಮಹಿಳಾ ಅಭಿಮಾನಿಗಳು ಮೆರವಣಿಗೆ ಮಾಡಿದ್ದಾರೆ. ಅಲ್ಲದೇ, ಡೊಳ್ಳು ಕುಣಿತ  , ಚಂಡೆ ವಾದ್ಯ , ಪ್ರಚಾರದ ಟ್ಯಾಬ್ಲೋ ಜೊತೆಗೆ ಅಭಿನಯ ಚಕ್ರವರ್ತಿ ಬಾವುಟ ಹಿಡಿದು ಅಭಿಮಾನಿಗಳು ಭರ್ಜರಿ ಮೆರವಣಿಗೆ ಮಾಡುತ್ತಿದ್ದು, ಎಲ್ಲೆಡೆ ಸಂಭ್ರಮ ಮನೆಮಾಡಿದೆ.  ಇನ್ನು ಕಿಚ್ಚನ ಕಟೌಟ್​ಗೆ  ಹಾರ ಹಾಕಿ, ಪಟಾಕಿ ಸಿಡಿಸಿ ಅಭಿಮಾನಿಗಳು ಕಿಚ್ಚನ ಸಿನಿಮಾ ಪ್ರಮೋಷನ್​ ಮಾಡುತ್ತಿದ್ದು, ಮಾಗಡಿ ರಸ್ತೆಯ ವಿರೇಶ ಚಿತ್ರಮಂದಿರದವರೆಗೂ ಮೆರವಣಿಗೆ ಮಾಡಿದ್ದಾರೆ.


ಸಿನಿಮಾ ತಂಡ ಸಹ ಚಿತ್ರದ ಪ್ರಚಾರವನ್ನು ಭರದಿಂದ ಮಾಡುತ್ತಿದ್ದು, ಮುಂಬೈ, ಹೈದರಾಬಾದ್​ ಹಾಗೂ ಬೆಂಗಳೂರಿನಲ್ಲಿ ಪ್ರೀ ರಿಲೀಸ್​ ಈವೆಂಟ್​ಗಳನ್ನು ಮಾಡುತ್ತಿದೆ. ಈಗಾಗಲೇ ಪ್ರೀ ಬುಕ್ಕಿಂಗ್​ನಲ್ಲಿ ಟಿಕೆಟ್​ಗಳು ಸೋಲ್ಡ್​ ಔಟ್​ ಆಗಿದ್ದು, ಚಿಕ್ಕಮಂಗಳೂರು ಜಿಲ್ಲೆ, ಮೈಸೂರು ಸೇರಿದಂತೆ ಅನೇಕ ಕಡೆ ಥಿಯೇಟರ್​ಗಳಲ್ಲಿ ಟಿಕೆಟ್​ ಖಾಲಿ ಆಗಿದ್ದು, ಮೊದಲ ದಿನ ಶೋ ನೋಡಬೇಕು ಎಂದು ಆಸೆ ಹೊಂದಿದ್ದ ಅನೇಕ ಅಭಿಮಾನಿಗಳಿಗೆ ನಿರಾಸೆ ಆಗಿದೆ.

ಇದನ್ನೂ ಓದಿ: '9 ಸುಳ್ಳು ಕಥೆ'ಗೆ ಶಿವಣ್ಣ ಸಾಥ್, ಕುತೂಹಲ ಹೆಚ್ಚಿಸಿದ ಸಿನಿಮಾ ಟ್ರೈಲರ್

ಟಿಕೆಟ್​ ಸೋಲ್ಡ್​ ಔಟ್​

ಕೇವಲ ರಾಜ್ಯದಲ್ಲಿ ಮಾತ್ರವಲ್ಲದೇ ಜರ್ಮನಿಯಲ್ಲಿ ಸಹ ಈ ಸಿನಿಮಾಗೆ ಬಹಳ ಬೇಡಿಕೆ ಇದ್ದು, ಈಗಾಗಲೇ ಅರ್ಧಕ್ಕಿಂತ ಹೆಚ್ಚು ಟಿಕೆಟ್​ಗಳು ಸೋಲ್ಡ್​ ಆಗಿದೆ.  ವಿಕ್ರಾಂತ್ ರೋಣ ಸಿನಿಮಾ ಬಗ್ಗೆ ಜನರಲ್ಲಿ ಬಹಳ ನಿರೀಕ್ಷೆ ಇದೆ. ಇದು ಪ್ಯಾನ್​ ಇಂಡಿಯಾ ಸಿನಿಮಾವಾಗಿದ್ದು, ಕೆಜಿಎಫ್​ ನಂತರ ಮತ್ತೊಮ್ಮೆ ಸ್ಯಾಂಡಲ್​ವುಡ್​ನ ಸಿನಿಮಾ ಎಲ್ಲೆಡೆ ಟ್ರೆಂಡಿಂಗ್​ನಲ್ಲಿದೆ.

ಈ ಸಿನಿಮಾ ಕರ್ನಾಟಕದಲ್ಲಿ 400ಕ್ಕೂ ಹೆಚ್ಚು ಥಿಯೇಟರ್ ಗಳಲ್ಲಿ ರಿಲೀಸ್ ಮಾಡಲಾಗುತ್ತಿದೆ, ಅಲ್ಲದೇ, ವಿಶ್ವದಲ್ಲಿ 3200ಕ್ಕೂ ಹೆಚ್ಚು  ಬಾಲಿವುಡ್ ನಲ್ಲಿ 900ಕ್ಕೂ ಹೆಚ್ಚು ಥಿಯೇಟರ್​ಗಳಲ್ಲಿ ಬಿಡುಗಡೆಯಾಗುತ್ತಿದೆ. ಇನ್ನು ಹಿಂದಿಯಲ್ಲಿ 90% 3Dಯಲ್ಲಿ ರಿಲೀಸ್ ಆಗುತ್ತಿದೆ. ಈಗಾಗಲೇ, ವರ್ಡ್ ವೈಡ್ 800ಕ್ಕೂ ಹೆಚ್ಚು  ಶೋ ಅಡ್ವಾನ್ಸ್ ಬುಕ್ಕಿಂಗ್ ಆಗಿದೆ. 3D ಇರೋ ಕಡೆ ತುಂಬಾ ಪಾಸ್ಟ್ ಆಗಿ ಬುಕಿಂಗ್ ಆಗುತ್ತಿದೆ.  ಇಂದಿನಿಂದ ಮಲ್ಟಿಪ್ಲೆಕ್ಸ್ ಗಳಲ್ಲಿ ಬುಕಿಂಗ್ ಓಪನ್ ಆಗಲಿದೆ ಎಂದು ಮೊನ್ನೆ ಸುದ್ದಿಗೋಷ್ಟಿ ನಡೆಸಿದ್ದ ಸಿನಿಮಾ ನಿರ್ಮಾಪಕ ಜಾಕ್​ ಮಂಜು ಮಾಹಿತಿ ನೀಡಿದ್ದರು.

ಇದನ್ನೂ ಓದಿ: ರಿಲೀಸ್‌ಗೆ 2 ದಿನ ಮುನ್ನವೇ ಬಹುತೇಕ ಟಿಕೆಟ್ ಸೋಲ್ಡ್‌ ಔಟ್, ದಾಖಲೆ ಬರೆಯಲು ಸಜ್ಜಾದ ವಿಕ್ರಾಂತ್ ರೋಣ

ಕೇವಲ ಬೆಂಗಳೂರಿನಲ್ಲಿ ಮಾತ್ರವಲ್ಲದೇ ಕೋಲಾರದಲ್ಲಿ ಸಹ ಸಿನಿಮಾ ರಿಲೀಸ್​ಗೆ ಅಭಿಮಾನಿಗಳು ಸಿದ್ದತೆ ಆರಂಬಿಸಿದ್ದು, ಮೊನ್ನೆಯಿಂದಲೇ ಥಿಯೇಟರ್​ ಸಿಂಗಾರ ಮಾಡಿದ್ದಾರೆ. ಕೋಲಾರ ಜಿಲ್ಲೆಯ ಮಾಲೂರು ಪಟ್ಟಣದ ಬಾಲಾಜಿ ಚಿತ್ರ ಮಂದಿರದಲ್ಲಿ ಸಿನಿಮಾ ಬಿಡುಗಡೆಗೆ ಅಭಿಮಾನಿಗಳು ಈಗಾಗಲೇ ಸಿದ್ದತೆ ಆರಂಭಿಸಿದ್ದು, ಸಿನಿಮಾ ಬಿಡುಗಡೆಗೆ ಇನ್ನು 3 ದಿನ ಬಾಕಿ ಇದ್ದಾಗಲೇ  ಚಿತ್ರಮಂದಿರ ಬಳಿ ಅಭಿಮಾನಿಗಳ ಸಂಭ್ರಮಾಚರಣೆ ಮಾಡಿದ್ದಾರೆ. ಬಾಲಾಜಿ ಸಿನಿಮಾ ಥಿಯೇಟರ್ ಅನ್ನು ಅಭಿಮಾನಿಗಳು ಮದು ಮಗಳಂತೆ ಸಿಂಗಾರ ಮಾಡಿದ್ದು, ನಟ ಸುದೀಪ್ ಕಟೌಟ್ ಕಟ್ಟಿ ಸಂಭ್ರಮಾಚರಣೆ ಆರಂಭಿಸಿದ್ದಾರೆ.
Published by:Sandhya M
First published: