Vikrant Rona: ವಿಕ್ರಾಂತ್ ರೋಣ ಸಿನಿಮಾ ಬಗ್ಗೆ ಅಪಪ್ರಚಾರ ಮಾಡ್ತಿದ್ದಾರಾ ಕಿಡಿಗೇಡಿಗಳು? ಸುದ್ದಿಗೋಷ್ಠಿಯಲ್ಲಿ ನಿರ್ಮಾಪಕ ಜಾಕ್ ಮಂಜು ಗರಂ

Vikrant Rona Press Meet: ಹಾಗೆಯೇ, ವಿಕ್ರಾಂತ್ ರೋಣ ರಿಲೀಸ್ ಬಗ್ಗೆ ನಿರ್ಮಾಪಕ ಜಾಕ್ ಮಂಜು ಹೇಳಿಕೆ ನೀಡಿದ್ದು,  3Dಯಲ್ಲಿ ಸಿನಿಮಾ ಬರಲ್ಲ ಅಂತ ಅಪಪ್ರಚಾರ ಮಾಡ್ತಿದ್ದಾರೆ. ನಾವು  3Dಯಲ್ಲಿಯೇ ಸಿನಿಮಾ ರಿಲೀಸ್ ಮಾಡ್ತೀವಿ.

ವಿಕ್ರಾಂತ್ ರೋಣ

ವಿಕ್ರಾಂತ್ ರೋಣ

  • Share this:
ಕಿಚ್ಚ ಸುದೀಪ್ (Kiccha Sudeep) ಅಭಿನಯದ ಬಹು ನಿರೀಕ್ಷಿತ ವಿಕ್ರಾಂತ್ ರೋಣ (Vikrant Rona)  ಸಿನಿಮಾ ಇದೇ 28 ರಂದು ಬಿಡುಗಡೆಗೆ ಸಜ್ಜಾಗಿದೆ. ಅಭಿಮಾನಿಗಳು ಸಹ ಈ ಸಿನಿಮಾ (Film) ಬಿಡುಗಡೆಗಾಗಿ ಕಾತುರದಿಂದ ಕಾಯುತ್ತಿದ್ದಾರೆ. ಇನ್ನು ಈ ನಡುವೆ ಈ ಸಿನಿಮಾ ತಂಡ ಸಿನೆಡಬ್ಸ್ ಜೊತೆ ಒಪ್ಪಂದ ಮಾಡಿಕೊಂಡಿರುವ ಬಗ್ಗೆ ಎಲ್ಲರಿಗೂ ಗೊತ್ತಿದೆ. ಈ ವಿಚಾರವಾಗಿ ಇಂದು ವಿಕ್ರಾಂತ್ ರೋಣ ನಿರ್ಮಾಪಕರ ಸುದ್ದಿಗೋಷ್ಠಿ ನಡೆಸಿದ್ದು, ಸಿನೆಡಬ್ಸ್ ಬಳಕೆ ಬಗ್ಗೆ ಸಿನೆಡಬ್ಸ್ ಟೀಂ ಎಳೆಎಳೆಯಾಗಿ ಬಿಚ್ಚಿಟ್ಟಿದ್ದೆ.  

ಸಿನೆಡಬ್ಸ್ ಬಗ್ಗೆ ಸಂಪೂರ್ಣ ಮಾಹಿತಿ ಕೊಟ್ಟ ತಂಡ

ಸುದ್ದಿಗೋಷ್ಠಿಯಲ್ಲಿ, ಇಂಡಿಯಾದ ಯಾವುದೇ ಚಿತ್ರಮಂದಿರದಲ್ಲಿ ಕೂತು ಸಿನೆಡಬ್ಸ್ ಆ್ಯಪ್ ಮೂಲಕ ನಮ್ಮ ಭಾಷೆಯಲ್ಲಿ ವಿಕ್ರಾಂತ್ ರೋಣ ನೋಡಬಹುದು. ಒಟ್ಟು ಐದು ಭಾಷೆಗಳಲ್ಲಿ ಈ ಆ್ಯಪ್ ಮೂಲಕ ನೀವು ವಿಕ್ರಾಂತ್ ರೋಣ ಸಿನಿಮಾ ನೋಡಲು ಅವಕಾಶವಿರುತ್ತದೆ. ಕನ್ನಡ, ಹಿಂದಿ,ಇಂಗ್ಲೀಷ್, ತೆಲುಗು, ತಮಿಳು ಭಾಷೆಗಳಲ್ಲಿ ವಿಕ್ರಾಂತ್ ರೋಣ ಸಿನಿಮಾ ನೋಡಲು ಅವಕಾಶ ಸಿಗುತ್ತದೆ. ಇನ್ನು ಸ್ಮಾರ್ಟ್ ಪೋನ್ ಇದ್ದವರು ಈ ಆ್ಯಪ್ ಮೂಲಕ ನಿಮ್ಮಿಷ್ಟದ ಭಾಷೆಯಲ್ಲಿ  ವಿಕ್ರಾಂತ್ ರೋಣ ನೋಡಬಹುದು. ಅಲ್ಲದೇ, ತೆರೆಮೇಲೆ  ತೆಲುಗು ಯಾವುದೇ ಭಾಷೆ ಪ್ಲೇ ಆಗ್ತಿರಲಿ ಸಿನೆಡಬ್ಸ್ ನಲ್ಲಿ ನಮ್ಮ ಭಾಷೆಯ ಆಡಿಯೋ ಕೇಳುತ್ತದೆ ಎಂದು ತಿಳಿಸಿದ್ದಾರೆ.

ಫಸ್ಟ್ ಟೈಂ ದೇಶದಲ್ಲಿ  ಸಿನೆಡಬ್ಸ್ ಮೂಲಕ ನಟ ಆರ್​.ಮಾಧವನ್ ಅಭಿನಯದ ರಾಕೆಟ್ರಿ ಸಿನಿಮಾ ರಿಲೀಸ್ ಆಗಿತ್ತು. ಹಾಗಾಗಿ ಸಿನೆಡಬ್ಸ್ ಆ್ಯಪ್ ಬಳಸಿ ವಿಕ್ರಾಂತ್ ರೋಣ ಸಿನಿಮಾ ರಿಲೀಸ್ ಮಾಡುವಂತೆ ಮಾಧವನ್ ಸಲಹೆ ಕೊಟ್ಟಿದ್ದರಂತೆ. ಈಗ 5  ಭಾಷೆಗಳಲ್ಲಿ ವಿಕ್ರಾಂತ್ ರೋಣ ಸಿನೆಡಬ್ಸ್ ಆ್ಯಪ್ ಜೊತೆ ಟೈಯಪ್ ಆಗಿ ರಿಲೀಸ್ ಆಗುತ್ತಿದೆ ಎಂದು ನಿರ್ಮಾಪಕ ಜಾಕ್ ಮಂಜು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ನಟಿ ರಮ್ಯಾ ಡ್ರಾಮಾ ಕ್ವೀನ್ ಅಂತೆ, ಸ್ಯಾಂಡಲ್​ವುಡ್​ ಪದ್ಮಾವತಿಗೆ ಹೀಗಂದಿದ್ಯಾರು?

ಹಾಗೆಯೇ, ವಿಕ್ರಾಂತ್ ರೋಣ ರಿಲೀಸ್ ಬಗ್ಗೆ ನಿರ್ಮಾಪಕ ಜಾಕ್ ಮಂಜು ಹೇಳಿಕೆ ನೀಡಿದ್ದು,  3Dಯಲ್ಲಿ ಸಿನಿಮಾ ಬರಲ್ಲ ಅಂತ ಅಪಪ್ರಚಾರ ಮಾಡ್ತಿದ್ದಾರೆ. ನಾವು  3Dಯಲ್ಲಿಯೇ ಸಿನಿಮಾ ರಿಲೀಸ್ ಮಾಡ್ತೀವಿ. ಕೆಲವೊಂದು ಕಿಡಿಗೇಡಿಗಳು ಮಾಡಿರೋ ಕೆಲಸಕ್ಕೆ ಇದು ನನ್ನ ಉತ್ತರ ಎಂದಿದ್ದಾರೆ. ಆದರೆ 5 ದಿನಗಳ ಮಟ್ಟಿಗೆ ಊರ್ವಶಿ ಥಿಯೇಟರ್ ನಲ್ಲಿ 3D ರಿಲೀಸ್ ಆಗಲ್ಲ. ಊರ್ವಶಿಯಲ್ಲಿ 3D ಗ್ಲಾಸ್ ಇಲ್ಲ, ಹಾಗಾಗಿ ವೇಟ್ ಮಾಡ್ತಿದ್ದಾರೆ. ಬೇರೆ ದೇಶದಿಂದ ಆ್ಯಕ್ಟಿವ್ ಗ್ಲಾಸ್ ಬಂದಿಲ್ಲ. ಬರೋವರೆಗೆ 2Dಯಲ್ಲಿ ರಿಲೀಸ್ ಆಗುತ್ತದೆ ಎಂದು ತಿಳಿಸಿದ್ದು, ಅಪಪ್ರಚಾರ ಮಾಡುತ್ತಿರುವವರ ಬಗ್ಗೆ ಕಿಡಿಕಾರಿದ್ದಾರೆ.

ಜುಲೈ 28ಕ್ಕೆ ಸಿನಿಮಾ ರಿಲೀಸ್​

ಕರ್ನಾಟಕದಲ್ಲಿ 400ಕ್ಕೂ ಹೆಚ್ಚು ಥಿಯೇಟರ್ ಗಳಲ್ಲಿ ರಿಲೀಸ್ ಮಾಡಲಾಗುತ್ತದೆ, ವಿಶ್ವದಲ್ಲಿ 3200ಕ್ಕೂ ಹೆಚ್ಚು  ಬಾಲಿವುಡ್ ನಲ್ಲಿ 900ಕ್ಕೂ ಹೆಚ್ಚು ಥಿಯೇಟರ್​ಗಳಲ್ಲಿ ಬಿಡುಗಡೆಯಾಗುತ್ತದೆ. ಇನ್ನು ಹಿಂದಿಯಲ್ಲಿ 90% 3Dಯಲ್ಲಿ ರಿಲೀಸ್ ಆಗುತ್ತದೆ. ಈಗಾಗಲೇ, ವರ್ಡ್ ವೈಡ್ 800ಕ್ಕೂ ಹೆಚ್ಚು  ಶೋ ಅಡ್ವಾನ್ಸ್ ಬುಕ್ಕಿಂಗ್ ಆಗಿದೆ.  ನಿನ್ನೆಯಿಂದ  ಬುಕ್ಕಿಂಗ್ ಓಪನ್ ಮಾಡಿದ್ದೇವೆ 3D ಇರೋ ಕಡೆ ತುಂಬಾ ಪಾಸ್ಟ್ ಆಗಿ ಬುಕಿಂಗ್ ಆಗುತ್ತಿದೆ.  ನಾಳೆಯಿಂದ ಮಲ್ಟಿಪ್ಲೆಕ್ಸ್ ಗಳಲ್ಲಿ ಬುಕಿಂಗ್ ಓಪನ್ ಆಗಲಿದೆ ಎಂದು ಸಿನಿಮಾ ಬಗ್ಗೆ ಹೇಳಿದ್ದಾರೆ.

ಇದನ್ನೂ ಓದಿ: ಆದಾಯ ತೆರಿಗೆ ಇಲಾಖೆಯಿಂದ ರಜನಿಕಾಂತ್​ಗೆ ಸನ್ಮಾನ, ತಂದೆಯ ಪರವಾಗಿ ಪ್ರಶಸ್ತಿ ಪಡೆದ ಐಶ್ವರ್ಯಾ

ಇಂದು ಸಂಜೆ ಮುಂಬೈನಲ್ಲಿ ವಿಕ್ರಾಂತ್ ರೋಣ ಪ್ರೀ ರಿಲೀಸ್ ಈವೆಂಟ್ ಇದಕ್ಕೆ ಸಲ್ಮಾನ್ ಖಾನ್ ಗೆಸ್ಟ್,  ನಾಳೆ ಮಾರ್ನಿಂಗ್ ಹೈದ್ರಾಬಾದ್ ನಲ್ಲಿ ಪ್ರೀ ರಿಲೀಸ್ ಈವೆಂಟ್ ಇದ್ದು, ನಾಗಾರ್ಜುನ ಗೆಸ್ಟ್ ನಾಳೆ ಸಂಜೆ ಬೆಂಗಳೂರಿನಲ್ಲಿ ಪ್ರೀ ರಿಲೀಸ್ ಈವೆಂಟ್​ಗೆ ಉಪೇಂದ್ರ ಗೆಸ್ಟ್ ಆಗಿ ಬರಲಿದ್ದಾರೆ ಎಂದು ಸಿನಿಮಾ ನಿರ್ಮಾಪಕ ಜಾಕ್​ ಮಂಜು ಮಾಹಿತಿ ಕೊಟ್ಟಿದ್ದಾರೆ.
Published by:Sandhya M
First published: