Kichcha Sudeep: ಕಿಚ್ಚನ ಜೊತೆ ಈ ಕ್ಯೂಟ್ ಹುಡುಗಿ: ಫೋಟೋ ಹಿಂದಿರುವ ಕಥೆ ಗೊತ್ತಾ..?

Vikrant Rona: ಸುದೀಪ್​ ಅವರೊಂದಿಗೆ ಇರುವ ಈ ಬೆಡಗಿ ಯಾರು ಅನ್ನೋದೇ ಸದ್ಯ ಚರ್ಚೆಯಾಗುತ್ತಿದೆ. ಇವರಿಗೂ ವಿಕ್ರಾಂತ್ ರೋಣ ಸಿನಿಮಾಗೂ ಸಂಬಂಧವೇನಾದರೂ ಇದೆಯಾ ಅನ್ನೋ ವಿಷಯ ಎಲ್ಲರನ್ನೂ ಕಾಡುತ್ತಿದೆ.

ಕಿಚ್ಚ ಸುದೀಪ್​ ಹಾಗೂ ಜ್ಯೂಲಿಯಾ ವೈದ್ಯ

ಕಿಚ್ಚ ಸುದೀಪ್​ ಹಾಗೂ ಜ್ಯೂಲಿಯಾ ವೈದ್ಯ

  • Share this:
ಅನೂಪ್ ಭಂಡಾರಿ ನಿರ್ದೇಶನದಲ್ಲಿ ಕಿಚ್ಚ ಸುದೀಪ್​ ನಟಿಸಿರುವ ಬಹುನಿರೀಕ್ಷಿತ ಸಿನಿಮಾ ವಿಕ್ರಾಂತ್​ ರೋಣ. ಈ ಚಿತ್ರದ ಚಿತ್ರೀಕರಣ ಈಗಾಗಲೇ ಪೂರ್ಣಗೊಂಡಿದ್ದು ಸಿನಿಮಾ ಇನ್ನೇನು ರಿಲೀಸ್​ಗೆ ಸಿದ್ಧತೆ ನಡೆಸುತ್ತಿದೆ ಅನ್ನೋ ಸುದ್ದಿ ಕೇಳಿ ಬರುತ್ತಿದೆ. ಆದರೆ ಚಿತ್ರತಂಡ ಇನ್ನೊಂದು ಹಾಡಿನ ಶೂಟಿಂಗ್​ ಅನ್ನು ಬಾಕಿ ಉಳಿಸಿಕೊಂಡಿದ್ದು ಅದನ್ನು ಸದ್ಯದಲ್ಲಿ ಪೂರ್ಣಗೊಳಿಸಲಿದೆ ಎಂದು ಹೇಳಲಾಗುತ್ತಿತ್ತು. ಈ ಕುರಿತಾಗಿ ಈಗ ಒಂದು ಅಪ್ಡೇಟ್ ಸಿಕ್ಕಿದೆ. ಹೌದು, ವಿಕ್ರಾಂತ್ ರೋಣ ಸಿನಿಮಾದಲ್ಲಿ ಬಾಲಿವುಡ್​ ನಟಿ ಜಾಕ್ವೆಲಿನ್​ ಫರ್ನಾಂಡಿಸ್​ ಅವರು ಐಟಂ ಹಾಡೊಂದಕ್ಕೆ ಸೊಂಟ ಬಳುಕಿಸಲಿದ್ದಾರೆ ಅನ್ನೋದು ಗೊತ್ತೇ ಇದೆ. ಈಗ ಈ ಹಾಡಿನ ಚಿತ್ರೀಕರಣ ಪೂರ್ಣಗೊಂಡಿದೆಯಂತೆ. ಜಾಕ್ವೆಲಿನ್​ ಜೊತೆ ಕಿಚ್ಚ ಸುದೀಪ್​ ಸಖತ್ ಸ್ಟೆಪ್​ ಹಾಕಿದ್ದಾರಂತೆ. 

ಕಿಚ್ಚ ಸುದೀಪ್​ ಅವರ ವಿಕ್ರಾಂತ್ ರೋಣ ಸಿನಿಮಾದ ವಿಷಯ ಮಾತನಾಡುವಾಗಲೇ ಸಿನಿಮಾದ ಸೆಟ್​ನಲ್ಲಿ ತೆಗೆದ ಕಿಚ್ಚನ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಸುದೀಪ್​ ಅವರ ಜೊತೆ ಒಬ್ಬರು ಕ್ಯೂಟ್​ ಬೆಡಗಿ ಸಹ ಇದ್ದಾರೆ.

vikrant rona song shooting, vikrant rona release date, jacqueline fernandez in vikrant rona song, Jueili Vaidya and sudeep, Choreographer Jueili Vaidya, ವಿಕ್ರಾಂತ್ ರೋಣ ಸಿನಿಮಾ, ವಿಕ್ರಾಂತ್ ರೋಣ ಬಿಡುಗಡೆ ದಿನಾಂಕ, ಜಾಕ್ವೆಲಿನ್ ಫರ್ನಾಂಡೀಸ್, ಸುದೀಪ್ ಮತ್ತು ಜಾಕ್ವೆಲಿನ್ ಫರ್ನಾಂಡೀಸ್, ಜ್ಯೂಯಿಲಿ ವೈದ್ಯಾ, Vikrant Rona Movie Update Kichcha Sudeep and Jueile Vaidya photo gone viral ae
ಕಿಚ್ಚ ಸುದೀಪ್​ ಹಾಗೂ ಜ್ಯೂಲಿಯಾ ವೈದ್ಯ


ಸುದೀಪ್​ ಅವರೊಂದಿಗೆ ಇರುವ ಈ ಬೆಡಗಿ ಯಾರು ಅನ್ನೋದೇ ಸದ್ಯ ಚರ್ಚೆಯಾಗುತ್ತಿದೆ. ಇವರಿಗೂ ವಿಕ್ರಾಂತ್ ರೋಣ ಸಿನಿಮಾಗೂ ಸಂಬಂಧವೇನಾದರೂ ಇದೆಯಾ ಅನ್ನೋ ವಿಷಯ ಎಲ್ಲರನ್ನೂ ಕಾಡುತ್ತಿದೆ.

ಇದನ್ನೂ ಓದಿ: KGF Chapter 2 Release Date: ಹೊಸ ದಾಖಲೆಯತ್ತ ಕೆಜಿಎಫ್​ ಚಾಪ್ಟರ್​ 2: ಪ್ರಶಾಂತ್​ ನೀಲ್​ ಕೊಟ್ರು ಸಿಹಿ ಸುದ್ದಿ..!

ಸುದೀಪ್​ ಜೊತೆ ಕಾಣಿಸಿಕೊಂಡಿರುವ ಈ ಯುವತಿ ಯಾರು ಅಂತಾ ಸ್ಯಾಂಡಲ್​ವುಡ್ ಸಿನಿಪ್ರಿಯರು ತಲೆ ಕೆಡಸಿಕೊಂಡಿದ್ದಾರೆ. ಅಷ್ಟುಕ್ಕೂ ಈಕೆ ಯಾರು ಅಂದರೆ ಡ್ಯಾನ್ಸ್​ ಕೋರಿಯೋಗ್ರಾಫರ್​. ಹೌದು, ಜಾಕ್ವೆಲಿನ್​ ಹೆಜ್ಜೆ ಹಾಕಿರುವ ಹಾಡಿಗೆ ಕೋರಿಯೋಗ್ರಾಫ್​ ಮಾಡಿರುವ ಜ್ಯೂಲಿಯಾ ವೈದ್ಯ. ಇವರು ಕಿಚ್ಚ ಸುದೀಪ್​ ಅವರ ಅಭಿಮಾನಿಯಂತೆ. ಹೀಗೆಂದು ಜ್ಯೂಲಿಯಾ ತಮ್ಮ ಇನ್​ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.

ಕಿಚ್ಚ ಸುದೀಪ್​ ಅವರ ಅಭಿನಯದ ಈಗ ಅಂದರೆ ಹಿಂದಿಯಲ್ಲಿನ ಮಕ್ಕಿ ಚಿತ್ರ ನೋಡಿದ ಮೇಲೆ ಜ್ಯೂಲಿಯಾ ಕಿಚ್ಚನ ಅಭಿಮಾನಿಯಾದರಂತೆ. ಇನ್ನು ಈ ಸಿನಿಮಾದಲ್ಲಿ ಕೆಲಸ ಮಾಡಲು ಅವಕಾಶ ಸಿಕ್ಕಿದ್ದಕ್ಕೆ ಖುಷಿಯಾಗಿದೆ ಎಂದೂ ಅವರ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ನವದಾಂಪತ್ಯಕ್ಕೆ ಕಾಲಿಟ್ಟ ಬಿಗ್‌ಬಾಸ್ ಖ್ಯಾತಿಯ‌ ಜೋಡಿ ರಾಹುಲ್‌ - ದಿಶಾ: ಇಲ್ಲಿವೆ ಮದುವೆ ಫೋಟೋಗಳು ..!

ವಿಕ್ರಾಂತ್ ರೋಣ ಸಿನಿಮಾದ ಟಾಕಿ ಪೋರ್ಷನ್​ನ ಚಿತ್ರೀಕರಣ ಸಹ ಪೂರ್ಣಗೊಂಡಿದೆ. ಇನ್ನು ಸುದೀಪ್​ ಸೇರಿದಂತೆ ಇತರೆ ಕಲಾವಿದರು ಸಹ ತಮ್ಮ ಭಾಗದ ಡಬ್ಬಿಂಗ್​ ಮುಗಿಸಿದ್ದಾರೆ. ಅನೂಪ್ ಭಂಡಾರಿ ನಿರ್ದೇಶನದ ಸಿನಿಮಾದಲ್ಲಿ ಕಿಚ್ಚ ಸುದೀಪ್​ ಜತೆ ನಿರೂಪ್ ಭಂಡಾರಿ, ನೀತಾ ಸೇರಿದಂತೆ ದೊಡ್ಡ ತಾರಾ ಬಳಗವೇ ಇದೆ. ಇನ್ನು ಚಿತ್ರಮಂದಿರಗಳು ಬಾಗಿಲು ತೆರೆಯುತ್ತಿದ್ದಂತೆಯೇ ಸಿನಿಮಾ ರಿಲೀಸ್ ಆಗಲಿದೆ.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ತಮ್ಮ ತಮ್ಮ ಸರದಿ ಬಂದಾಗ ತಪ್ಪದೇ ಲಸಿಕೆ ಪಡೆಯಬೇಕು. ಈಗಿನ ಪರಿಸ್ಥಿತಿಯಲ್ಲಿ ಲಸಿಕೆ ಒಂದೇ ಸೋಂಕಿನ ವಿರುದ್ಧ ಹೋರಾಡುವ ಮಾರ್ಗವಾಗಿದೆ. ಅತ್ಯಗತ್ಯವಿದ್ದರೆ ಮಾತ್ರವೇ ಮನೆಯಿಂದ ಹೊರಗೆ ಹೋಗುವ ಅಭ್ಯಾಸ ರೂಢಿಸಿಕೊಳ್ಳಬೇಕು.
Published by:Anitha E
First published: