ಗರ ಗರ ಗಗ್ಗರ ಜರ್ಬ, ಪಿರನೂಲ್ ನೆತ್ತರ ಪರ್ಬ. ಸದ್ಯಕ್ಕೆ ಈ ಡೈಲಾಗ್ ಟ್ರೆಂಡಿಂಗ್ನಲ್ಲಿದೆ ಕಿಚ್ಚ ಸುದೀಪ್ (Kicha Sudeep) ಅಭಿನಯದ ವಿಕ್ರಾಂತ್ ರೋಣ (Vikrant Rona) ಸಿನಿಮಾ ಇಡೀ ವಿಶ್ವಾದಾದ್ಯಂ ತ ಬಿಡುಗಡೆಯಾಗಿ ಒಳ್ಳೆಯ ಪ್ರತಿಕ್ರಿಯೆ ಗಿಟ್ಟಿಸಿಕೊಂಡಿದೆ. ಈ ಹಿಂದೆ ಯಾವ ಸಿನಿಮಾದಲ್ಲೂ ಮಾಡಿರದ ಪಾತ್ರದಲ್ಲಿ ಕಿಚ್ಚ ಸುದೀಪ್ ಕಾಣಿಸಿಕೊಂಡಿದ್ದಾರೆ. ವಿಕ್ರಾಂತ್ ರೋಣ ತೆರೆ ಮೇಲೆ ವಿಜೃಂಭಿಸಿದ್ದಾರೆ. ಸಿನಿಮಾ ನೋಡಿದ ಪ್ರತಿಯೊಬ್ಬರು ಸಿನಿಮಾ ಚೆನ್ನಾಗಿದೆ ಎಂದು ಹೇಳುತ್ತಿದ್ದಾರೆ. ಕೇವಲ ನಾಲ್ಕೇ ದಿನಕ್ಕೆ 100 ಕೋಟಿ ಕ್ಲಬ್ (100 Crore Club) ಸೇರಿದೆ ವಿಕ್ರಾಂತ್ ರೋಣ ಸಿನಿಮಾ. ಈ ಚಿತ್ರವು ಬೇರೆ ಬೇರೆ ಭಾಷೆಗಳಲ್ಲಿ ಡಬ್ (Dub) ಆಗಿ ತೆರೆ ಕಂಡಿತ್ತು, ಈ ಚಿತ್ರದ ಪ್ರಚಾರಕ್ಕಾಗಿ ಹೊರರಾಜ್ಯಗಳಿಗೆ (Other State) ಸುದೀಪ್ ಪ್ರಯಾಣ ಬೆಳೆಸಿ ಸಂದರ್ಶನ (Kiccha Sudeep Interview) ನೀಡಿದ್ದಾರೆ. ಬೇರೆ ಭಾಷೆಯಲ್ಲೂ ಅದ್ಭುತ ಪ್ರತಿಕ್ರಿಯೆ ಪಡೆದುಕೊಂಡಿದೆ ವಿಕ್ರಾಂತ್ ರೋಣ.
ಹಿಂದಿ ನಿರೂಪಕಿಗೆ ಕಿಚ್ಚನ ಕನ್ನಡ ಪಾಠ!
ಈ ಚಿತ್ರದ ಪ್ರಚಾರಕ್ಕಾಗಿ ಹೊರರಾಜ್ಯಗಳಿಗೆ ಸುದೀಪ್ ಪ್ರಯಾಣ ಬೆಳೆಸಿ ಸಂದರ್ಶನ ನೀಡಿದ್ದಾರೆ. ಸಿನಿಮಾ ರಿಲೀಸ್ ಆದಮೇಲೂ ಹಲವಾರು ಸಂದರ್ಶನಗಳಲ್ಲಿ ಕಿಚ್ಚ ಸುದೀಪ್ ಬ್ಯೂಸಿ ಇದ್ದಾರೆ. ಇದೀಗ ಕಿಚ್ಚ ಸುದೀಪ್ ಅವರ ಬೇರೆ ಭಾಷೆಯ ಸಂದರ್ಶನ ವಿಡಿಯೋವೊಂದು ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಕನ್ನಡವನ್ನು ತಪ್ಪಾಗಿ ಉಚ್ಛರಿಸಿದ ನಿರೂಪಕಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಈ ಹಿಂದೆ ವಿಕ್ರಾಂತ್ ರೋಣ ಪ್ರಚಾರದ ವೇಳೆ ಕಿಚ್ಚ ಸುದೀಪ್ ಹಲವರಿಗೆ ಇದೇ ವಿಚಾರವಾಗಿ ಕ್ಲಾಸ್ ತೆಗೆದುಕೊಂಡಿದ್ದಾರೆ. ಇದೀಗ ಹಿಂದಿ ನಿರೂಪಕಿಯೊಬ್ಬರಿಗೆ ಕನ್ನಡ ಪಾಠ ಮಾಡಿದ್ದಾರೆ ಕಿಚ್ಚ ಸುದೀಪ್.
ಕನ್ನಡ್ ಅಲ್ಲ ಕನ್ನಡ ಎನ್ನಿ ಎಂದ ಸುದೀಪ್!
ಕನ್ನಡವನ್ನು ತಪ್ಪಾಗಿ ಪದಬಳಕೆ ಮಾಡಿದ ಹಲವರಿಗೆ ಕಿಚ್ಚ ಸುದೀಪ್, ಮುಲಾಜಿಲ್ಲದೆ, ಸಾರ್ವಜನಿಕವಾಗಿ ಕನ್ನಡ್ ಅಲ್ಲ ಕನ್ನಡ ಎಂದು ಹೇಳಿಕೊಟ್ಟಿದ್ದರು. ಅಂತೆಯೇ ಈಗಲೂ ಕೂಡ ಕನ್ನಡ ಎಂದು ಸ್ಪಷ್ಟವಾಗಿ ಉಚ್ಛರಿಸುವುದನ್ನು ಹೇಳಿಕೊಟ್ಟಿದ್ದಾರೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಯಾರ ಮೊಬೈಲ್ ವಾಟ್ಸ್ಆ್ಯಪ್ ಸ್ಟೇಟಸ್ ನೋಡಿದರೂ ಇದೇ ವಿಡಿಯೋ ರಾರಾಜಿಸುತ್ತಿದೆ. ಕನ್ನಡ ಬಗ್ಗೆ ಕಿಚ್ಚ ಸುದೀಪ್ ಅವರಿಗೆ ಇರುವ ಗೌರವ ಕಂಡು ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ.
ಇದನ್ನೂ ಓದಿ: ಜಪಾನ್ನಲ್ಲೂ ‘ವಿಕ್ರಾಂತ್ ರೋಣ‘ ಕ್ರೇಜ್, ಸಿನಿಮಾ ನೋಡಲು 300 KM ನಡೆದ ಅಭಿಮಾನಿ!
ಭಾಷೆ ಕಲಿಯೋದಿರಲಿ ಹೆಸರನ್ನು ಸರಿಯಾಗಿ ಹೇಳಿ ಎಂದ ಕಿಚ್ಚ!
ನಿರೂಪಕಿ ಸಂದರ್ಶನದಲ್ಲಿ 'ಕನ್ನಡ್' ಎಂದಿದ್ದಾರೆ. ಕೂಡಲೇ ಕಿಚ್ಚ ಸುದೀಪ್ ಅದು ಕನ್ನಡ ಅಲ್ಲ ಕನ್ನಡ ಎಂದಿದ್ದಾರೆ. ಹಿಂದಿ ಹೇಗೆ ಹಿಂದ್ ಆಗುವುದಿಲ್ಲವೋ ಹಾಗೇ ಕನ್ನಡ ಕೂಡ ಕನ್ನಡ್ ಆಗುವುದಿಲ್ಲ. ಭಾಷೆ ಮಾತನಾಡೋದು ಬಿಡಿ, ಭಾಷೆಯ ಹೆಸರನ್ನು ಮೊದಲು ಸರಿಯಾಗಿ ಹೇಳಿ. ತಮಿಳು, ತೆಲುಗು ಹೆಸರನ್ನು ಸರಿಯಾಗಿ ಹೇಳುತ್ತೀರಿ. ಆದರೆ ಕನ್ನಡದ ಹೆಸರನ್ನು ಮಾತ್ರ ಸರಿಯಾಗಿ ಹೇಳುವುದಿಲ್ಲ ಎಂದು ಕಿಚ್ಚ ಹೇಳಿದ್ದಾರೆ.
Kannad alla kannada @KicchaSudeep loads of love bro, nam bhaashe ge ist on-spot lesson togothidheeraa to all others 💛♥️ pic.twitter.com/Wt8ahfXjfY
— Chethan sharma (@chethans22) August 2, 2022
ಇದನ್ನೂ ಓದಿ: ಎಲ್ಲೆಡೆ ಅಬ್ಬರಿಸುತ್ತಿದೆ ವಿಕ್ರಾಂತ್ ರೋಣ, ಹೇಗಿದೆ 5ನೇ ದಿನದ ಕಲೆಕ್ಷನ್?
ರಂಗಿತರಂಗ ಥರ ಇದ್ರೆ ಏನಿವಾಗ ಎಂದ ಕಿಚ್ಚ!
ಹೌದು, ಕನ್ನಡ ಖಾಸಗಿ ವಾಹಿನಿ ಸಂದರ್ಶನವವೊಂದರಲ್ಲಿ ಈ ಬಗ್ಗೆ ಕಿಚ್ಚ ಸುದೀಪ್ ಮಾತನಾಡಿದ್ದಾರೆ. ರಂಗಿತರಂಗ ಥರ ಇದ್ರೆ ಏನಿವಾಗ? ರಂಗಿತರಂಗ ಥರ ಇದೆ ಓಕೆ, ಆದರೆ ರಂಗಿತರಂಗನೇ ಅಲ್ವಲ್ಲಾ? ಎಂದು ಕಿಚ್ಚ ಸುದೀಪ್ ಖಡಕ್ ಉತ್ತರ ನೀಡಿದ್ದಾರೆ. ಇಷ್ಟು ವರ್ಷ ಅದೆಷ್ಟೋ ಮಂದಿ ಈ ಸಿನಿಮಾಗಾಗಿ ದುಡಿದಿದ್ದಾರೆ. ನನ್ನ ಕೆರಿಯರ್ನಲ್ಲಿ ಈ ಸಿನಿಮಾ ಬೇರೆ ಸ್ಥಾನದಲ್ಲಿ ಇದೆ. ಮತ್ತೆ ಮತ್ತೆ ಇದೆ ರೀತಿ ಸಿನಿಮಾ ಮಾಡುವುದಕ್ಕೆ ನನ್ನಿಂದ ಸಾಧ್ಯವಾಗುತ್ತೋ, ಇಲ್ವೋ ಗೊತ್ತಿಲ್ವಾ ಎಂದಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ