Vikrant Rona Review: ರಕ್ಕಮ್ಮನ ಡ್ಯಾನ್ಸ್, ಕಿಚ್ಚನ ಫೈಟ್, ಬಾಕ್ಸ್ ಆಫೀಸ್ ಉಡೀಸ್! ಹೇಗಿದ್ದಾನೆ ಗೊತ್ತಾ ವಿಕ್ರಾಂತ್ ರೋಣ?

Vikrant Rona: ವಿಭಿನ್ನ ಪಾತ್ರದಲ್ಲಿ ನಟ ನಿರೂಪ್ ಭಂಡಾರಿ ಕಾಣಿಸಿಕೊಂಡು ಜನರಿಗೆ ಇಷ್ಟವಾಗಿದ್ದು, ನೀತಾ ಅಶೋಕ್, ಚಿತ್ಕಲಾ ಬಿರಾದಾರ್​, ವಾಸುಕಿ ವೈಭವ್​ ಪಾತ್ರಗಳು ಸಹ ಪ್ರೇಕ್ಷಕರಿಗೆ ಇಷ್ಟವಾಗುತ್ತದೆ.

ವಿಕ್ರಾಂತ್ ರೋಣ

ವಿಕ್ರಾಂತ್ ರೋಣ

  • Share this:
ಸ್ಯಾಂಡಲ್​ವುಡ್​ನಲ್ಲಿ (Sandalwood) ಸಿನಿಪ್ರಿಯರು, ಅದರಲ್ಲೂ ಕಿಚ್ಚನ (Kiccha)  ಅಭಿಮಾನಿಗಳು (Fans) ಬಹಳ ಕಾತುರದಿಂದ ಕಾಯುತ್ತಿದ್ದ ಆ ದಿನ ಬಂದಿದೆ. ಬಹುನಿರೀಕ್ಷಿತ ಸಿನಿಮಾ ವಿಕ್ರಾಂತ್ ರೋಣ (Vikrant Rona) ಬಿಡುಗಡೆಯಾಗಿದ್ದು, ಎಲ್ಲೆಡೆ ಅಭಿಮಾನಿಗಳು ಸಿನಿಮಾವನ್ನು ಅದ್ಧೂರಿಯಾಗಿ ಸ್ವಾಗತಿಸಿದ್ದಾರೆ. ವಿಶ್ವದಾದ್ಯಂತ ಕಿಚ್ಚನ ಅಭಿಮಾನಿಗಳು ಸಿನಿಮಾ ನೋಡಿದ್ದು, ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಸಾಮಾಜಿಕ ಮಾಧ್ಯಮದಲ್ಲಿ (Social Media) ಈ ಸಿನಿಮಾ ಬಗ್ಗೆ ಈಗಾಗಲೇ ರಿವ್ಯೂ ಓಡಾಡುತ್ತಿದೆ. ಕಿಚ್ಚನ ಅಭಿನಯಕ್ಕೆ ಫ್ಯಾನ್ಸ್​ ಫಿದಾ ಆಗಿದ್ದಾರೆ. ಹಾಗಾದ್ರೆ ಕಿಚ್ಚನ ಆಟ ಹೇಗಿದೆ, ಈ ಸಿನಿಮಾದ ಪ್ಲಸ್​ ಪಾಯಿಂಟ್​ ಏನು, ಮೈನಸ್​ ಪಾಯಿಂಟ್​ ಏನು ಎಂಬುದು ಇಲ್ಲಿದೆ.  

ಕಲಾವಿದರು: ಕಿಚ್ಚ ಸುದೀಪ್, ಜಾಕ್ಲೀನ್ ಫರ್ನಾಂಡೀಸ್​, ನಿರೂಪ್ ಭಂಡಾರಿ, ನೀತಾ ಅಶೋಕ್

ನಿರ್ದೇಶನ: ಅನೂಪ್ ಭಂಡಾರಿ

ನಿರ್ಮಾಪಕರು: ಜಾಕ್​ ಮಂಜು

ಈಗಾಗಲೇ ವಿಕ್ರಾಂತ್ ರೋಣ ಸಿನಿಮಾ ಬಹಳ ಹೈಪ್ ಕ್ರಿಯೇಟ್​ ಮಾಡಿತ್ತು, ಪ್ಯಾನ್​ ಇಂಡಿಯಾ ಸಿನಿಮಾವಾಗಿರುವುದರಿಂದ ಅಭಿಮಾನಿಗಳ ನಿರೀಕ್ಷೆ ತುಸು ಹೆಚ್ಚಿತ್ತು. ಹಾಗೆಯೇ ನಿರೀಕ್ಷೆಗೆ ತಕ್ಕಂತೆ ಸಿನಿಮಾ ಇದ್ದು, ಕಿಚ್ಚನ ಅಭಿನಯಕ್ಕೆ ಫುಲ್​ ಮಾರ್ಕ್ಸ್ ಕೊಡಬಹುದು. ಸಾಮಾನ್ಯವಾಗಿ ಕಿಚ್ಚನ ಸಿನಿಮಾ ಎಂದರೆ ವಿಶೇಷತೆಯಿಂದ ಕೂಡಿರುತ್ತದೆ. ಅವರ ಮ್ಯಾನರಿಸಂ, ಸ್ಟೈಲ್​, ಫೈಟಿಂಗ್ ನೋಡುವುದು ಒಂದು ರೀತಿ ಚೆಂದ. ಈ ಸಿನಿಮಾದಲ್ಲಿ ಸಹ ಅವರು ಬಹಳ ಇಷ್ಟವಾಗುತ್ತಾರೆ.

ಸಿನಿಮಾದ ಕಥೆ ಏನು?

ಕರಾವಳಿ ಭಾಗದಲ್ಲಿರುವ ಒಂದು ಕಾಲ್ಪನಿಕ ಊರು ಕಮರೊಟ್ಟು. ಈ ಊರಿನಲ್ಲಿ ನಡೆಯುವ ಕಥೆಯೇ ಈ ಸಿನಿಮಾದ ಜೀವಾಳ. ಈ ಊರಿನಲ್ಲಿ ಬಹಳಷ್ಟು ಜನ ಭೂತರಾಧಕರಿರುತ್ತಾರೆ. ಅಲ್ಲಿ ಮಕ್ಕಳ ಕೊಲೆಯಾಗುತ್ತಿರುತ್ತದೆ. ಇದರ ಹಿಂದೆ ಕಮರೊಟ್ಟು ಮನೆಯಲ್ಲಿರುವ ಬ್ರಹ್ಮರಾಕ್ಷಸನೊಬ್ಬ ಕಾರಣ ಎಂದು ಜನ ನಂಬಿರುತ್ತಾರೆ. ಆದರೆ ಅಲ್ಲಿ ನಡೆಯುತ್ತಿರುವ ಕೊಲೆಗೆ ಕಾರಣ ಏನು ಎಂಬುದು ಮಾತ್ರ ಗೌಪ್ಯವಾಗಿರುತ್ತದೆ. ಈ ಸಮಯದಲ್ಲಿಯೇ ಆ ಊರಿಗೆ ಸಂಜು (ನಟ ನಿರೂಪ್ ಭಂಡಾರಿ) ಮತ್ತು ವಿಕ್ರಾಂತ್ ರೋಣ (ಕಿಚ್ಚ ಸುದೀಪ್) ಬರುತ್ತಾರೆ. ಈ ಊರಿಗೆ ಅವರಿಬ್ಬರು ಏಕೆ ಬರುತ್ತಾರೆ? ಅವರಿಗೂ ಆ ಕೊಲೆಗೂ ಏನು ಸಂಬಂಧ ಎಂಬುದು ಕುತೂಹಲ ಮೂಡಿಸುತ್ತದೆ.

ಇದನ್ನೂ ಓದಿ: ವಿಕ್ರಾಂತ್ ರೋಣನ ಖದರ್, ತೆರೆ ಮೇಲೆ ಕಿಚ್ಚನ ಪವರ್! ಫಸ್ಟ್ ಡೇ ಫಸ್ಟ್ ಶೋ ಸೂಪರೋ ಸೂಪರ್

ಈ ಸಿನಿಮಾ ನಿಜಕ್ಕೂ ವಿಭಿನ್ನವಾಗಿದೆ. ಸುದೀಪ್ ವೃತ್ತಿ ಜೀವನದಲ್ಲಿ ಇದು ಬಹಳ ಪ್ರಮುಖ ಪಾತ್ರ ವಹಿಸುತ್ತದೆ ಎಂಬುದು ಸತ್ಯ. ತಂದೆ ಹಾಗೂ ಮಗಳ ಬಾಂಧವ್ಯ ಈ ಸಿನಿಮಾದ ಪ್ಲಸ್​ ಪಾಯಿಂಟ್​. ಒಬ್ಬ ಪೊಲೀಸ್​ ಅಧಿಕಾರಿಯ ಪಾತ್ರದಲ್ಲಿ ಸುದೀಪ್ ಮಿಂಚಿದ್ದಾರೆ. ಇನ್ನು ಹಾಡುಗಳ ವಿಚಾರಕ್ಕೆ ಬಂದರೆ ಈ ಸಿನಿಮಾದ ಹಾಡುಗಳು ಈಗಾಗಲೇ ಎಲ್ಲೆಡೆ ಸದ್ದು ಮಾಡಿದೆ. ರಾ ರಾ ರಕ್ಕಮ್ಮ, ರಾಜಕುಮಾರಿ, ಗುಮ್ಮ ಬಂದ ಎಲ್ಲಿಯೂ ಅತಿ ಎನಿಸುವುದಿಲ್ಲ. ಇದು ಸಹ ಈ ಸಿನಿಮಾದ ಸ್ಲಸ್​ ಪಾಯಿಂಟ್​ ಎನ್ನಬಹುದು.

ರಸದೌತಣ ಉಣಬಡಿಸುವ ಸಿನಿಮಾ

ನಿರ್ದೇಶನದ ವಿಚಾರಕ್ಕೆ ಬಂದರೆ, ರಂಗಿತರಂಗ ಎನ್ನುವ ಅದ್ಭುತ ಸಿನಿಮಾ ನೀಡಿದ್ದ ಅನೂಪ್ ಭಂಡಾರಿ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದು, ಇಲ್ಲಿ ನಡೆಯುತ್ತಿರುವುದು ಎಲ್ಲವೂ ಸತ್ಯ ಎನ್ನುವ ಭಾವನೆಯನ್ನು ಪ್ರೇಕ್ಷಕರ ಮನದಲ್ಲಿ ಹುಟ್ಟು ಹಾಕುವಲ್ಲಿ ಅವರು ಯಶಸ್ವಿಯಾಗಿದ್ದಾರೆ. ಸಸ್ಪೆನ್ಸ್, ಕಾಮಿಡಿ ಎಲ್ಲವನ್ನು ಮಿಶ್ರಣ ಮಾಡಿ ಜನರಿಗೆ ರಸದೌತಣ ಬಡಿಸಿದ್ದು, ಅದಕ್ಕೆ ತಕ್ಕಂತೆ ಹಿನ್ನೆಲೆ ಸಂಗೀತ ಸಹ ಸಾಥ್ ನೀಡಿದೆ.

ಇದನ್ನೂ ಓದಿ: ಪತಿಯ ಸಿನಿಮಾಗೆ ಫುಲ್ ಮಾರ್ಕ್ಸ್ ಕೊಟ್ಟ ಪತ್ನಿ, ವಿಕ್ರಾಂತ್ ರೋಣ ಬಗ್ಗೆ ಪ್ರಿಯಾ ಸುದೀಪ್ ಮೆಚ್ಚುಗೆ

ವಿಭಿನ್ನ ಪಾತ್ರದಲ್ಲಿ ನಟ ನಿರೂಪ್ ಭಂಡಾರಿ ಕಾಣಿಸಿಕೊಂಡು ಜನರಿಗೆ ಇಷ್ಟವಾಗಿದ್ದು, ನೀತಾ ಅಶೋಕ್, ಚಿತ್ಕಲಾ ಬಿರಾದಾರ್​, ವಾಸುಕಿ ವೈಭವ್​ ಪಾತ್ರಗಳು ಸಹ ಪ್ರೇಕ್ಷಕರಿಗೆ ಇಷ್ಟವಾಗುತ್ತದೆ. ಇನ್ನು ಈ ಸಿನಿಮಾದ ಮೈನಸ್​ ಪಾಯಿಂಟ್​ ಎಂದರೆ ಕೆಲವೆಡೆ ಲಾಜಿಕ್ ಕೊರತೆ ಎದ್ದು ಕಾಣುತ್ತದೆ. ಸ್ವಲ್ಪ ನಿಧಾನ ಎನಿಸುತ್ತದೆ. ಹಾಗೆಯೇ ಕೆಲವೆಡೆ ಏನೋ ಮಿಸ್​ ಆಗಿದೆ ಅನಿಸುತ್ತದೆ. ಇದಿಷ್ಟು ಬಿಟ್ಟರೆ ಈ ಸಿನಿಮಾ ಸೂಪರ್ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ.
Published by:Sandhya M
First published: