Jack Manju: ವಿಕ್ರಾಂತ್ ರೋಣ ನಿರ್ಮಾಪಕ ಆಸ್ಪತ್ರೆಗೆ ದಾಖಲು, ಶಸ್ತ್ರ ಚಿಕಿತ್ಸೆಗೊಳಗಾದ ಜಾಕ್ ಮಂಜು

Vikrant Rona Producer: ಕಳೆದ 20 ದಿನದ ಹಿಂದೆ ಈ ಘಟನೆ ನಡೆದಿತ್ತು. ಎಡವಿ ಬಿದ್ದು ಕಾಲು ಮುರಿದುಕೊಂಡಿದ್ದರಂತೆ. ಕೊನೆಗೆ‌ ಕಾಲಿನ ಸಮಸ್ಯೆಗೆ ಚಿಕಿತ್ಸೆಯನ್ನು ಪಡೆಯುತ್ತಿದ್ದರು.

ಜಾಕ್ ಮಂಜು

ಜಾಕ್ ಮಂಜು

  • Share this:
ಸ್ಯಾಂಡಲ್​ವುಡ್​ನ (Sandalwood) ಬಹು ನಿರೀಕ್ಷಿತ ಸಿನಿಮಾ ವಿಕ್ರಾಂತ್ ರೋಣದ (Vikrant Rona)  ನಿರ್ಮಾಪಕ ಜಾಕ್‌ ಮಂಜು (Jack Manju) ಆಸ್ಪತ್ರೆಗೆ ದಾಖಲಾಗಿದ್ದಾರೆ. ನಟ ಕಿಚ್ಚ ಸುದೀಪ್ ಅವರಿಗೆ ಬಹಳ ಆತ್ಮೀಯರಾಗಿರುವ ಜಾಕ್​ ಮಂಜು ಅವರು, ಬನ್ನೇರುಘಟ್ಟ ಬಳಿ ಇರೋ ಅಪೋಲೋ ಆಸ್ಪತ್ರೆಗೆ (Apollo Hospitals)  ದಾಖಲಾಗಿರುವ ಬಗ್ಗೆ ತಿಳಿದು ಬಂದಿದೆ. ಕಾರ್ಯಕ್ರಮಕ್ಕೆ ಹೋದಾಗ ಎಡವಿ ಬಿದ್ದು ಕಾಲು ಮುರಿದುಕೊಂಡಿದ್ದ ನಿರ್ಮಾಪಕ ಜಾಕ್ ಮಂಜು ಎರಡು ದಿನದ ದಿಂದ ಆಸ್ಪತ್ರೆಯಲ್ಲಿದ್ದಾರೆ ಎಂಬ ಮಾಹಿತಿ ಇದೆ. ಕಾಲಿನ ಸಮಸ್ಯೆಯಿಂದ  ಆಸ್ಪತ್ರೆಗೆ ದಾಖಲು

ಕಳೆದ 20 ದಿನದ ಹಿಂದೆ ಈ ಘಟನೆ ನಡೆದಿತ್ತು. ಎಡವಿ ಬಿದ್ದು ಕಾಲು ಮುರಿದುಕೊಂಡಿದ್ದರಂತೆ. ಕೊನೆಗೆ‌ ಕಾಲಿನ ಸಮಸ್ಯೆಗೆ ಚಿಕಿತ್ಸೆಯನ್ನು ಪಡೆಯುತ್ತಿದ್ದರು. ಆದರೆ ಯಾವುದೇ ಉಪಯೋಗವಾಗಿರಲಿಲ್ಲ. ದಿನ ಕಳೆದಂತೆ ಕಾಲಿನಲ್ಲಿ ರಕ್ತ ಹೆಪ್ಪುಗಟ್ಟಿ ಊತ ಬರಲು ಆರಂಭವಾಗಿತ್ತು, ಹೀಗಾಗಿ ಎರಡು‌ ದಿನದ ಹಿಂದೆ ಆಸ್ಪತ್ರೆಗೆ ದಾಖಲಾಗಿ ಆಪರೇಷನ್ ಮಾಡಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.ಜಾಕ್​ ಮಂಜು ಸ್ಯಾಂಡಲ್​ವುಡ್​ನಲ್ಲಿ ನಿರ್ಮಾಪಕರಾಗಿದ್ದು, ಕಿಚ್ಚ ಸುದೀಪ್ ಅಭಿನಯದ ಬಹು ನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ವಿಕ್ರಾಂತ್ ರೋಣವನ್ನು ಸಹ ಇವರೇ ನಿರ್ಮಾಣ ಮಾಡುತ್ತಿದ್ದಾರೆ. ಅಲ್ಲದೇ, ಜಾಕ್ ಮಂಜು ಕನ್ನಡ ಚಿತ್ರರಂಗದ ಪ್ರಮುಖ ನಿರ್ಮಾಪಕರು ಮತ್ತು ಚಿತ್ರ ವಿತರಕರು.` ಅಂಬಿ ನಿಂಗ್ ವಯಸ್ಸಾಯ್ತೋ!',`ಲೈಫು ಇಷ್ಟೇನೆ' ಮುಂತಾದ ಚಿತ್ರಗಳನ್ನು ನಿರ್ಮಿಸಿದ್ದಾರೆ.

ಇದನ್ನೂ ಓದಿ: ಸುಶಾಂತ್ ಇಲ್ಲದೇ ಇಂದಿಗೆ 2 ವರ್ಷ, ಜನಮಾನಸದಲ್ಲಿ ಮಾನವ್ ನೆನಪು ಎಂದಿಗೂ ಅಜರಾಮರ

ಮಂಜು ನಿರ್ಮಾಣದ ವಿಕ್ರಾಂತ್ ರೋಣ ಸದ್ಯದಲ್ಲೇ ರಿಲೀಸ್ 

ಸದ್ಯ ಅವರ ನಿರ್ಮಾಣದ ಪ್ಯಾನ್​ ಇಂಡಿಯಾ ಸಿನಿಮಾ ರಿಲೀಸ್​ ಆಗುತ್ತಿದ್ದು, ಇದು ಸ್ಯಾಂಡಲ್​ವುಡ್​ನಲ್ಲಿ ಹೊಸ ರೀತಿಯ ಸಿನಿಮಾವಾಗಿದೆ. ವಿಕ್ರಾಂತ್ ರೋಣ ಇಡೀ ಕನ್ನಡ ಚಿತ್ರರಂಗ ಈ ಸಿನಿಮಾ ನೋಡಲು ತುದಿಗಾಲಿನಲ್ಲಿ ನಿಂತಿದೆ. ಅದರಲ್ಲೂ ಕಿಚ್ಚ ನ ಅಭಿಮಾನಿಗಳು  ಮೊದಲು ಸಿನಿಮಾ ರಿಲೀಸ್ ಆಗಲಿ ದೇವರಲ್ಲಿ ಪ್ರಾರ್ಥಿಸುತ್ತಿದ್ದಾರೆ. ರಂಗಿತರಂಗ ಮೂಲಕ ಕಮಾಲ್ ಮಾಡಿದ್ದ ಅನೂಪ್ ಭಂಡಾರಿ  ಈ ಸಿನಿಮಾವನ್ನು ನಿರ್ದೇಶಿಸಿದ್ದಾರೆ. ಅದರ ಜೊತೆಗ ಈ ಸಿನಿಮಾ 3ಡಿಯಲ್ಲಿ ತೆರೆಕಾಣುತ್ತಿರುವುದು ಮತ್ತೊಂದು ವಿಶೇಷ. ಪೋಸ್ಟರ್  ಟೀಸರ್​ ಹಾಗೂ  ಲಿರಿಕಲ್ ಹಾಡುಳಿಂದಲೇ ಸಾಕಷ್ಟು ಸದ್ದು ಮಾಡುತ್ತಿದೆ.

ಕಳೆದ ವರ್ಷ ಚಿತ್ರದ ಫಸ್ಟ್ ಲುಕ್ ಅನ್ನು ದೇಶಾದ್ಯಂತ ಥಿಯೇಟರ್‌ಗಳಲ್ಲಿ 3D ನಲ್ಲಿ ಬಿಡುಗಡೆ ಮಾಡಿ, ಪ್ರೇಕ್ಷಕರ ನಿರೀಕ್ಷೆ ಹೆಚ್ಚು ಮಾಡಿತ್ತು. ಕನ್ನಡ, ಹಿಂದಿ, ತಮಿಳು, ಮಲಯಾಳಂ, ತೆಲುಗಿನಲ್ಲಿ ಈ ಚಿತ್ರ ಬಿಡುಗಡೆ ಆಗಲಿದೆ. ಅಲ್ಲದೇ ಅರೇಬಿಕ್, ಜರ್ಮನ್, ರಷ್ಯನ್, ಮ್ಯಾಂಡರಿನ್ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದ್ದು, ಕಿಚ್ಚನ ಸಿನಿ ಜರ್ನಿಯಲ್ಲಿ ದಾಖಲೆಯ ಚಿತ್ರವಾಗುವುದರಲ್ಲಿ ಅನುಮಾನವಿಲ್ಲ.

ಇದನ್ನೂ ಓದಿ: ಡ್ರಗ್ಸ್​ ಪ್ರಕರಣದಲ್ಲಿ ಸಿದ್ಧಾಂತ್ ಕಪೂರ್​ಗೆ ಜಾಮೀನು, ವಿಚಾರಣೆಗೆ ಹಾಜರಾಗುವಂತೆ ಸೂಚನೆ

ಕಿಚ್ಚನ ಸಿನಿಮಾ ಇದೇ ಮೊದಲ ಬಾರಿಗೆ ಇಡೀ ವಿಶ್ವದಾದ್ಯಂತ ಗ್ರ್ಯಾಂಡ್ ಆಗಿ ರಿಲೀಸ್ ಆಗುತ್ತಿದೆ. ಅಲ್ಲದೆ, 3ಡಿಯಲ್ಲಿ ಸಿನಿಮಾ ರಿಲೀಸ್ ಆಗುತ್ತಿರುವುದರಿಂದ ಎಲ್ಲೆಡೆ ಕುತೂಹಲ ಹೆಚ್ಚಾಗಿದೆ. ಈಗಾಗಲೇ ಓವರ್‌ಸೀನ್ ಸಿನಿಮಾ ರೈಟ್ಸ್ ಅನ್ನು 'ಒನ್ ಟ್ವೆಂಟಿ 8 ಮೀಡಿಯಾ' ಭಾರಿ ಮೊತ್ತಕ್ಕೆ ಪಡೆದುಕೊಂಡಿದೆ. ಇವರೇ ವಿಶ್ವದಾದ್ಯಂತ 'ವಿಕ್ರಾಂತ್ ರೋಣ' ಸಿನಿಮಾವನ್ನು ರಿಲೀಸ್ ಮಾಡಲಿದ್ದಾರೆ. 'ಒನ್ ಟ್ವೆಂಟಿ 8 ಮೀಡಿಯಾ' ಸುಮಾರು 1.3 ಮಿಲಿಯನ್‌ಗೆ ಓವರ್‌ಸೀಸ್ ಹಕ್ಕುಗಳನ್ನು ಪಡೆದುಕೊಂಡಿದೆ. ಅಂದರೆ, ಭಾರತದ 10 ಕೋಟಿ ರೂಪಾಯಿಗೆ ಸೇಲ್ ಆಗಿದೆ ಎನ್ನಲಾಗಿದೆ.
Published by:Sandhya M
First published: