Vikrant Rona: ರಿಲೀಸ್‌ಗೆ 2 ದಿನ ಮುನ್ನವೇ ಬಹುತೇಕ ಟಿಕೆಟ್ ಸೋಲ್ಡ್‌ ಔಟ್, ದಾಖಲೆ ಬರೆಯಲು ಸಜ್ಜಾದ ವಿಕ್ರಾಂತ್ ರೋಣ

Vikrant Rona Film Pre Booking: ಚಿಕ್ಕಮಂಗಳೂರು ಜಿಲ್ಲೆ, ಮೈಸೂರು ಸೇರಿದಂತೆ ಅನೇಕ ಕಡೆ ಥಿಯೇಟರ್​ಗಳಲ್ಲಿ ಟಿಕೆಟ್​ ಖಾಲಿ ಆಗಿದ್ದು, ಮೊದಲ ದಿನ ಶೋ ನೋಡಬೇಕು ಎಂದು ಆಸೆ ಹೊಂದಿದ್ದ ಅನೇಕ ಅಭಿಮಾನಿಗಳಿಗೆ ನಿರಾಸೆ ಆಗಿದೆ.

ವಿಕ್ರಾಂತ್ ರೋಣ

ವಿಕ್ರಾಂತ್ ರೋಣ

  • Share this:
ಸ್ಯಾಂಡಲ್​ವುಡ್​ನ (sandalwood) ಬಹು ನಿರೀಕ್ಷಿತ ಸಿನಿಮಾವಾದ ವಿಕ್ರಾಂತ್ ರೋಣ (Vikrant Rona) ಬಿಡುಗಡೆಗೆ ಕೇವಲ 2 ದಿನ ಬಾಕಿ ಇದೆ. ಈಗಾಗಲೇ ಸಿನಿಮಾದ ಪ್ರೀ ಬುಕ್ಕಿಂಗ್ (Pre Booking) ಆರಂಭವಾಗಿದ್ದು, ಎಲ್ಲೆಡೆ ಭರ್ಜರಿ ಅಭಿಮಾನಿಗಳು (Fans) ಮೊದಲ ದಿನಕ್ಕೆ ಟಿಕೆಟ್​ ಖರೀದಿ ಮಾಡಿದ್ದಾರೆ. ರಾಜ್ಯದ ವಿವಿಧ ಭಾಗಗಳಲ್ಲಿ ಈಗಾಗಲೇ ಬಹುತೇಕ ಟಿಕೆಟ್​ ಸೋಲ್ಡ್​ ಔಟ್​ (ticket Sold Out) ಆಗಿದೆ ಎನ್ನಲಾಗುತ್ತಿದೆ. ಈ ಬಗ್ಗೆ ಕಿಚ್ಚನ ಅಭಿಮಾನಿಗಳು ಸೋಷಿಯಲ್​ ಮೀಡಿಯಾದಲ್ಲಿ  ಹಂಚಿಕೊಳ್ಳುತ್ತಿದ್ದು, ಎಲ್ಲೆಲ್ಲಿ ಟಿಕೆಟ್​ ಮಾರಾಟವಾಗಿದೆ ಎಂದು ಸಂತೋಷದಿಂದ ಹೇಳಿಕೊಳ್ಳುತ್ತಿದ್ದಾರೆ.  

ಬಹುತೇಕ ಟಿಕೆಟ್​ ಮಾರಾಟ

ಚಿಕ್ಕಮಂಗಳೂರು ಜಿಲ್ಲೆ, ಮೈಸೂರು ಸೇರಿದಂತೆ ಅನೇಕ ಕಡೆ ಥಿಯೇಟರ್​ಗಳಲ್ಲಿ ಟಿಕೆಟ್​ ಖಾಲಿ ಆಗಿದ್ದು, ಮೊದಲ ದಿನ ಶೋ ನೋಡಬೇಕು ಎಂದು ಆಸೆ ಹೊಂದಿದ್ದ ಅನೇಕ ಅಭಿಮಾನಿಗಳಿಗೆ ನಿರಾಸೆ ಆಗಿದೆ. ಕೇವಲ ರಾಜ್ಯದಲ್ಲಿ ಮಾತ್ರವಲ್ಲದೇ ಜರ್ಮನಿಯಲ್ಲಿ ಸಹ ಈ ಸಿನಿಮಾಗೆ ಬಹಳ ಬೇಡಿಕೆ ಇದ್ದು, ಈಗಾಗಲೇ ಅರ್ಧಕ್ಕಿಂತ ಹೆಚ್ಚು ಟಿಕೆಟ್​ಗಳು ಸೋಲ್ಡ್​ ಆಗಿದೆ.  ವಿಕ್ರಾಂತ್ ಸಿನಿಮಾ ಬಗ್ಗೆ ಜನರಲ್ಲಿ ಬಹಳ ನಿರೀಕ್ಷೆ ಇದೆ. ಇದು ಪ್ಯಾನ್​ ಇಂಡಿಯಾ ಸಿನಿಮಾವಾಗಿದ್ದು, ಕೆಜಿಎಫ್​ ನಂತರ ಮತ್ತೊಮ್ಮೆ ಸ್ಯಾಂಡಲ್​ವುಡ್​ನ ಸಿನಿಮಾ ಎಲ್ಲೆಡೆ ಟ್ರೆಂಡಿಂಗ್​ನಲ್ಲಿದೆ.

ಇದನ್ನೂ ಓದಿ: ಚಿರಯೌವ್ವನೆ ಸುಮನ್ ರಂಗನಾಥ್‌ಗೆ ಬರೀ 48 ವರ್ಷ! ಸಿನಿಮಾದಲ್ಲಿ ನಟಿಸುತ್ತಲೇ ಇರಲಿ ಇನ್ನೂ ನೂರಾರು ವರುಷ



ಕರ್ನಾಟಕದಲ್ಲಿ 400ಕ್ಕೂ ಹೆಚ್ಚು ಥಿಯೇಟರ್ ಗಳಲ್ಲಿ ರಿಲೀಸ್ ಮಾಡಲಾಗುತ್ತಿದೆ, ಅಲ್ಲದೇ, ವಿಶ್ವದಲ್ಲಿ 3200ಕ್ಕೂ ಹೆಚ್ಚು  ಬಾಲಿವುಡ್ ನಲ್ಲಿ 900ಕ್ಕೂ ಹೆಚ್ಚು ಥಿಯೇಟರ್​ಗಳಲ್ಲಿ ಬಿಡುಗಡೆಯಾಗುತ್ತಿದೆ. ಇನ್ನು ಹಿಂದಿಯಲ್ಲಿ 90% 3Dಯಲ್ಲಿ ರಿಲೀಸ್ ಆಗುತ್ತದೆ. ಈಗಾಗಲೇ, ವರ್ಡ್ ವೈಡ್ 800ಕ್ಕೂ ಹೆಚ್ಚು  ಶೋ ಅಡ್ವಾನ್ಸ್ ಬುಕ್ಕಿಂಗ್ ಆಗಿದೆ. 3D ಇರೋ ಕಡೆ ತುಂಬಾ ಪಾಸ್ಟ್ ಆಗಿ ಬುಕಿಂಗ್ ಆಗುತ್ತಿದೆ.  ಇಂದಿನಿಂದ ಮಲ್ಟಿಪ್ಲೆಕ್ಸ್ ಗಳಲ್ಲಿ ಬುಕಿಂಗ್ ಓಪನ್ ಆಗಲಿದೆ ಎಂದು ನಿನ್ನೆ ಸುದ್ದಿಗೋಷ್ಟಿ ನಡೆಸಿದ್ದ ಸಿನಿಮಾ ನಿರ್ಮಾಪಕ ಜಾಕ್​ ಮಂಜು ಮಾಹಿತಿ ನೀಡಿದ್ದಾರೆ.



ಇದನ್ನೂ ಓದಿ: ವಿಕ್ರಾಂತ್ ರೋಣ ಸಂಭ್ರಮಾಚರಣೆ ಶುರು, ಸಿನಿಮಾ ಬಿಡುಗಡೆ ಮೊದಲೇ ಥಿಯೇಟರ್ ಸಿಂಗಾರ ಮಾಡಿದ ಫ್ಯಾನ್ಸ್

ಇಂದು ಸಂಜೆ ಪ್ರೀ ರಿಲೀಸ್ ಈವೆಂಟ್

ಇನ್ನು ಇಂದು ಸಂಜೆ ಬೆಂಗಳೂರಿನಲ್ಲಿ ಪ್ರೀ ರಿಲೀಸ್ ಈವೆಂಟ್​ಗೆ ಉಪೇಂದ್ರ ಗೆಸ್ಟ್ ಆಗಿ ಬರಲಿದ್ದು, ವಿಕ್ರಾಂತ್ ರೋಣನ ಆರ್ಭಟಕ್ಕೆ ಸ್ಯಾಂಡಲ್​ವುಡ್​ ಸಜ್ಜಾಗಿದೆ. ಈಗಾಗಲೇ ರಾಜ್ಯದ ಹಲವು ಕಡೆ ಸಂಭ್ರಮಾಚರಣೆ ಆರಂಭವಾಗಿದ್ದ, ಕೋಲಾರ ಜಿಲ್ಲೆಯ ಮಾಲೂರು ಪಟ್ಟಣದ ಬಾಲಾಜಿ ಚಿತ್ರ ಮಂದಿರದಲ್ಲಿ ಸಿನಿಮಾ ಬಿಡುಗಡೆಗೆ ಅಭಿಮಾನಿಗಳು ಈಗಾಗಲೇ ಸಿದ್ದತೆ ಆರಂಭಿಸಿದ್ದು, ಸಿನಿಮಾ ಬಿಡುಗಡೆಗೆ ಇನ್ನು 3 ದಿನ ಬಾಕಿ ಇರುವ ಮೊದಲೇ ಚಿತ್ರಮಂದಿರ ಬಳಿ ಅಭಿಮಾನಿಗಳ ಸಂಭ್ರಮಾಚರಣೆ ಮಾಡುತ್ತಿದ್ದಾರೆ. ಹೌದು, ಬಾಲಾಜಿ ಸಿನಿಮಾ ಥಿಯೇಟರ್ ಅನ್ನು ಅಭಿಮಾನಿಗಳು ಮದು ಮಗಳಂತೆ ಸಿಂಗಾರ ಮಾಡಿದ್ದು, ನಟ ಸುದೀಪ್ ಕಟೌಟ್ ಕಟ್ಟಿ ಸಂಭ್ರಮಾಚರಣೆ ಆರಂಭಿಸಿದ್ದಾರೆ.
Published by:Sandhya M
First published: