ಸ್ಯಾಂಡಲ್ವುಡ್ನ (Sandalwood) ಕಿಚ್ಚ ಸುದೀಪ್ (Kiccha Sudeep) ಅಭಿನಯದ ಬಹುನಿರೀಕ್ಷಿತ ವಿಕ್ರಾಂತ್ ರೋಣ (Vikrant Rona) ಸಿನಿಮಾ ಅದ್ಧೂರಿಯಾಗಿ ತೆರೆಕಂಡಿದ್ದು, ಎಲ್ಲಡೆ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಅಲ್ಲದೇ ಬಾಕ್ಸ್ ಆಫೀಸ್ನಲ್ಲಿ ಕಿಚ್ಚನ ಅಬ್ಬರ ಪ್ರಾರಂಭವಾಗಿದೆ. ಹೌದು, ಮೊದಲ ದಿನದ ಕಲೆಕ್ಷನ್ ರಿಪೋರ್ಟ್ ಈಗಾಗಲೇ ಬಡಿಉಗಡೆ ಆಗಿದ್ದು, ಅನೇಕ ದಾಖಲೆಗಳನ್ನು ಕಿಚ್ಚ ಅಳಿಸಿ ಹಾಕಿದ್ದಾರೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಕಿಚ್ಚ ಭರ್ಜರಿಯಾಗಿ ತಮ್ಮ ಪ್ರದರ್ಶನ ಮುಂದುವರೆಸಿದ್ದಾರೆ. ಸುದೀಪ್ ವೈತ್ತಿ ಜೀವನದಲ್ಲಿ ಇದೊಂದು ಬ್ಲಾಕ್ಬಸ್ಟರ್ ಸಿನಿಮಾ ಆಗಿ ಹೊರಹೊಮ್ಮಿದೆ. ಮೂಲಗಳ ಪ್ರಕಾರ ಚಿತ್ರವು ಮೊದಲ ದಿನವೇ 50 ಕೋಟಿ ಕಲೆಕ್ಷನ್ ಮಾಡಿದೆ ಎಂದು ತಿಳಿದುಬಂದಿದೆ.
ಪುಷ್ಪ-ಚಾರ್ಲಿ-ಕೆಜಿಎಫ್ ಚಿತ್ರಕ್ಕೆ ಠಕ್ಕರ್ ನೀಡಿದ ಗುಮ್ಮ:
ಹೌದು, ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಆಗಿರುವ ವಿಕ್ರಾಂತ್ ರೋಣ ಸಿನಿಮಾ ಕನ್ನಡ, ಹಿಂದಿ, ತೆಲುಗು, ತಮಿಳು ಮತ್ತು ಮಲೆಯಾಳಂ ಭಾಷೆಗಳಲ್ಲಿ ಚಿತ್ರ ಬಿಡುಗಡೆ ಆಗಿದೆ. ಇದರ ನಡುವೆ ಚಿತ್ರವು ಅನೇಕ ದಾಖಲೆಗಳನ್ನು ಅಳಿಸಿ ಹಾಕಿದೆ. ಅದರಲ್ಲಿಯೂ ಪ್ರಮುಖವಾಗಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಅಬ್ಬರಿಸಿದ್ದ, ಕೆಜಿಎಫ್ 1, 777 ಚಾರ್ಲಿ, ಪುಷ್ಪ ಚಿತ್ರಗಳ ಮೊದಲ ದಿನದ ಕಲೆಕ್ಷನ್ ಅನ್ನು ದೂಳಿಪಟ ಮಾಡಿ ಹಾಕಿದೆ.
ಅಲ್ಲು ಅರ್ಜುನ್ ಅಭಿನಯದ ಮೊದಲ ಪ್ಯಾನ್ ಇಂಡಿಯಾ ಸಿನಿಮಾ ಪುಷ್ಪ ಬಿಡುಗಡೆ ಆದ ಮೊದಲ ದಿನ ಭಾದತದಾದ್ಯಂತ ಬರೋಬ್ಬರಿ 50 ಕೋಟಿ ಕಲೆಕ್ಷನ್ ಮಾಡಿತ್ತು. ಅದೇ ರೀತಿ ಇದಿಘ ವಿಕ್ರಾಂತ್ ರೋಣ ಸಿನಿಮಾ ಸಹ 50 ಕೋಟಿ ಕಲೆಕ್ಷನ್ ಮಾಡಿದೆ ಎನ್ನಲಾಗುತ್ತಿದ್ದು, ತೆಲುಗಿನ ಪ್ಯಾನ್ ಇಂಡಿಯಾ ಸಿನಿಮಾಗೆ ಸರಿಸಮನಾಗಿ ನಿಂತಿದೆ.
ಇದನ್ನೂ ಓದಿ: Vikrant Rona: ಬಾಕ್ಸಾಫೀಸ್ನಲ್ಲಿ ವಿಕ್ರಾಂತ್ ರೋಣನ ದರ್ಬಾರ್! ಮೊದಲ ದಿನವೇ ಕಲೆಕ್ಷನ್ನಲ್ಲಿ ದಾಖಲೆ ಬರೆದ ಗುಮ್ಮ
ಇನ್ನು, ಯಶ್ ಅಭಿನಯದ ಕೆಜಿಎಫ್ 2 ಚಿತ್ರ ಬಿಡುಗಡೆ ಆಗಿ ಅಬ್ಬರಿಸಿದ್ದು ಎಲ್ಲರಿಗೂ ತಿಳಿದಿಎ. ಆಧರೆ ಕೆಜಿಎಫ್ ಚಾಪ್ಟರ್ 1 ಮೊದಲ ದಿನ ಭಾರತದಾದ್ಯಂತ 18.01 ಕೋಟಿ ಗಳಿಕೆ ಮಾಡಿತ್ತು. ಆದರೆ ಇದೀಗ ವಿಕ್ರಾಂತ್ ರೋಣ ಬರೋಬ್ಬರೊ 50 ಕೋಟಿ ಮಾಡುವ ಮೂಲಕ ಕನ್ನಡದ್ದೇ ಆದ ಕೆಜಿಎಫ್ 1 ಕಲೆಕ್ಷನ್ ಅನ್ನು ಬೀಟ್ ಮಾಡಿದೆ.
ಉಳಿದಂತೆ ರಕ್ಷಿತ್ ಶೆಟ್ಟಿ ಅಭಿನಯದ 777 ಚಾರ್ಲಿ ಚಿತ್ರ ಸಹ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಆಗಿ ಉತ್ತಮ ಗಳಿಕೆ ಮಾಡಿತ್ತು. ಆದರೆ ಈ ಚಿತ್ರ ಮೊದಲ ದಿನದ ಕಲೆಕ್ಷನ್ 6.2 ಕೋಟಿರೂ ಗಳಿಸಿತ್ತು. ಈ ಸಿನಿಂಆದ ದಾಖಲೆಯನ್ನೂ ಗುಮ್ಮ ಮುರಿದು ಹಾಕಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ದಾಖಲೆಗಳನ್ನು ಅಳಿಸಿ ಹಾಕುವುದರಲ್ಲಿ ಅನುಮಾನವಿಲ್ಲ ಎನ್ನಲಾಗುತ್ತಿದೆ.
ವಿಕ್ರಾಂತ್ ರೋಣ ಮೊದಲ ದಿನದ ಕಲೆಕ್ಷನ್ ಎಷ್ಟು?:
ವಿಕ್ರಾಂತ್ ರೋಣ ಸಿನಿಮಾ ಕರ್ನಾಟಕದಲ್ಲಿ ಸುಮಾರು 325 ಸಿಂಗಲ್ ಸ್ಕ್ರೀನ್ ನಲ್ಲಿ ಬಿಡುಗಡೆ ಆಗಿದೆ. ಉಳಿದಂತೆ 325 ಥಿಯೇಟರ್, 65 ಮಲ್ಟಿಫೆಕ್ಸ್ ಸ್ಕ್ರೀನ್ಸ್ ಗಳಲ್ಲಿ 2500ಕ್ಕೂ ಹೆಚ್ಚು ಶೋ ಪ್ರದರ್ಶನ ಕಂಡಿದೆ. ಅದರಲ್ಲಿಯೂ ಬೆಂಗಳೂರಿನಲ್ಲೆ 1200 ಶೋ ನೀಡಲಾಗಿದೆ. ಕರ್ನಾಟಕದಲ್ಲಿ ಮೊದಲ ದಿನವೇ 18 ರಿಂದ 21 ಕೋಟಿ ಗಳಿಸಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: Vikrant Rona: ಮೊದಲ ದಿನವೇ ಕೆಜಿಎಫ್ 2 ದಾಖಲೆ ಮುರಿದ ವಿಕ್ರಾಂತ್ ರೋಣ
ಉತ್ತರ ಭಾರತದಲ್ಲಿ ಒಟ್ಟು 690 ಸ್ಕ್ರೀನ್ ಗಳಲ್ಲಿ ವಿಕ್ರಾಂತ್ ರೋಣ ಬಿಡುಗಡೆ ಆಗಿದ್ದು, ಬಾಲಿವುಡ್ನಲ್ಲಿ 8 ರಿಂದ 10 ಕೋಟಿ, ಆಂಧ್ರ ಮತ್ತು ತೆಲಂಗಾಣದಲ್ಲಿ 7 ರಿಂದ 8 ಕೋಟಿ, ತಮಿಳುನಾಡಿನಲ್ಲಿ 2 ಕೋಟಿ ಗಳಿಕೆ ಮಾಡಿದ್ದು, ಈ ಮೂಲಕ ವಿಕ್ರಾಂತ್ ರೋಣ ಚಿತ್ರವು ಭಾರತದಲ್ಲಿ ಒಟ್ಟು 40 ಕೋಟಿಗೂ ಅಧಿಕ ಹಣ ಗಳಿಸಿರುವ ಸಾಧ್ಯತೆ ಇದ್ದು, ವಿದೇಶಗಳಲ್ಲೂ ಭರ್ಜರಿ ಕಲೆಕ್ಷನ್ ಮಾಡಿದೆ ಎಂದು ಹೇಳಲಾಗಿದೆ. ಒಟ್ಟಾರೆ ಸಿನಿ ಪಂಡಿತರ ಹಾಗೂ ಮೂಲಗಳ ಪ್ರಕಾರ ಪ್ರಪಂಚದಾದ್ಯಂತ ಫಸ್ಟ್ ಡೇ 50 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆ ಎಂದು ಹೇಳಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ