ವಿಕ್ರಾಂತ್ ರೋಣ (Vikrant Rona) ಇಡೀ ಕನ್ನಡ ಚಿತ್ರರಂಗ ಈ ಸಿನಿಮಾ ನೋಡಲು ತುದಿಗಾಲಲ್ಲಿ ನಿಂತಿದೆ. ಅದರಲ್ಲೂ ಕಿಚ್ಚ (Kiccha) ನ ಅಭಿಮಾನಿಗಳು (Fans) ಮೊದಲು ಸಿನಿಮಾ ರಿಲೀಸ್ ಆಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತಿದ್ದಾರೆ. ರಂಗಿತರಂಗ ಮೂಲಕ ಕಮಾಲ್ ಮಾಡಿದ್ದ ಅನೂಪ್ ಭಂಡಾರಿ (Anup Bhandari) ಈ ಸಿನಿಮಾವನ್ನು ನಿರ್ದೇಶಿಸಿದ್ದಾರೆ. ಅನೂಪ್ ಭಂಡಾರಿ ಸಿನಿಮಾ ಎಂದರೆ ಕೇಳಬೇಕಾ?, ವಿಭಿನ್ನ ಕಥಾಹಂದರ ಹೊಂದಿರುತ್ತದೆ. ಈಗಾಗಲೇ ಅನೂಪ್ ಭಂಡಾರಿ ಹಾಗೂ ಕಿಚ್ಚ ಸುದೀಪ್ ಮತ್ತೊಂದು ಸಿನಿಮಾ ಮಾಡ್ತಾರೆ ಎಂದು ಸುದ್ದಿಯಾಗಿತ್ತು. ಆದರೆ ಇದೀಗ ಮತ್ತೊಂದು ಹೊಸ ಸುದ್ದಿ ಕೇಳಿ ಬಂದಿದೆ. ಅದು ಅನೂಪ್ ಭಂಡಾರಿ ಬಾಲಿವುಡ್ಗೆ ಹಾರುತ್ತಿದ್ದಾರೆ ಎಂದು.
ಬಾಲಿವುಡ್ಗೆ ರಂಗಿತರಂಗ ನಿರ್ದೇಶಕ?
ಹೌದು, ಅನೂಪ್ ಭಂಡಾರಿ ಸ್ಯಾಂಡಲ್ವುಡ್ಗೆ ಬಂದು ಸುಮಾರು 7 ವರ್ಷಗಳಾಗಿರಬಹುದು. ಆದರೆ ಅವರು ಮಾಡಿರುವ ಸಿನಿಮಾಗಳು ಕೇವಲ 3. ಆದರೆ ಆ ಮೂರು ಸಿನಿಮಾಗಳು ಪ್ರೇಕ್ಷಕರ ಮೇಲೆ ಪರಿಣಾಮ ಬೀರಿದೆ ಎಂದರೆ ತಪ್ಪಲ್ಲ. 2015ರಲ್ಲಿ ಬಿಡುಗಡೆಯಾದ ರಂಗಿತರಂಗ ಸಿನಿಮಾ ಬಿಡುಗಡೆಯಾಗಿ ದಾಖಲೆ ಮಾಡಿತ್ತು. ಆ ಸಿನಿಮಾ ಸ್ಯಾಂಡಲ್ವುಡ್ನಲ್ಲಿ ಹೊಸ ಹಾದಿಯನ್ನು ಸೃಷ್ಟಿ ಮಾಡಿತ್ತು. ನಂತರ ರಾಜರಥ, ಈಗ ವಿಕ್ರಾಂತ್ ರೋಣ. ಅನುಪ್ ವಿವಿಧ ಕತೆಯ ಮೂಲಕ ಜನರ ಮುಂದೆ ಬರುತ್ತಿದ್ದಾರೆ. ಸದ್ಯ ಅವರು ತಮ್ಮ ಮೊದಲ ಸಿನಿಮಾ ರಂಗಿತರಂಗದ ಕಾರಣದಿಂದ ಬಾಲಿವುಡ್ಗೆ ಹೋಗುತ್ತಿದ್ದಾರೆ ಎನ್ನಲಾಗುತ್ತಿದೆ.
ಇದನ್ನೂ ಓದಿ: ಹಾಲಿವುಡ್ ಕ್ರಿಟಿಕ್ಸ್ ಅವಾರ್ಡ್ನಲ್ಲಿ ಎರಡನೇ ಸ್ಥಾನ ಪಡೆದ ಆರ್ಆರ್ಆರ್, ಸಿನಿಮಾ ಬಗ್ಗೆ ರೆಸುಲ್ ಪೂಕುಟ್ಟಿ ಹೀಗಂದ್ರಾ?
ಮೂಲಗಳ ಪ್ರಕಾರ ರಂಗಿತರಂಗ ಸಿನಿಮಾ ಬಾಲಿವುಡ್ನಲ್ಲಿ ರಿಮೇಕ್ ಆಗುತ್ತಿದೆ. ರಂಗಿತರಂಗ ಬಿಡುಗಡೆಯಾದ ಸಮಯದಲ್ಲಿ ಸ್ಯಾಂಡಲ್ವುಡ್ಗೆ ಎಲ್ಲರೂ ಹೊಸಬರು. ಈ ಸಿನಿಮಾ ಮೂಲಕ ನಾಯಕನಾಗಿ ನಿರೂಪ ಭಂಡಾರಿ ಮಿಂಚಿದರೆ, ನಾಯಕಿಯರಾದ ರಾಧಿಕಾ ನಾರಾಯಣ್ ಹಾಗೂ ಆವಂತಿಕಾ ಶೆಟ್ಟಿಗೆ ಸಹ ಇದು ಮೊದಲ ಸಿನಿಮಾವಾಗಿತ್ತು. ಈ ಸಿನಿಮಾ ಸೂಪರ್ ಹಿಟ್ ಆಗಿದ್ದು ಮಾತ್ರವಲ್ಲದೇ, ಈ ಹೊಸ ಪ್ರತಿಭೆಗಳಿಗೆ ಸ್ಯಾಂಡಲ್ವುಡ್ನಲ್ಲಿ ಭದ್ರ ಬುನಾದಿ ಹಾಕಿದೆ ಎನ್ನಬಹುದು.
ರಂಗಿತರಂಗ ರಿಮೇಕ್ ಮಾಡ್ತಾರಂತೆ
ಸರಿ ಸುಮಾರು 7 ವರ್ಷಗಳ ನಂತರ ನಿರ್ಮಾಪಕರೊಬ್ಬರು ಈ ಸಿನಿಮಾವನ್ನು ಹಿಂದಿಗೆ ರಿಮೇಕ್ ಮಾಡುತ್ತಿದ್ದಾರೆ. ಅದಕ್ಕೆ ಸಿದ್ದತೆಗಳು ಸಹ ಭರದಿಂದ ಸಾಗಿದ್ದು, ಈ ಸಿನಿಮಾವನ್ನು ಸಹ ಅನೂಪ್ ನಿರ್ದೇಶನ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ. ಆದರೆ ಈ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಇನ್ನು ಈ ಸಿನಿಮಾ ಬಗ್ಗೆ ಹೆಚ್ಚಿನ ಮಾಹಿತಿ ಸಿಕ್ಕಿಲ್ಲ, ಆದರೆ ಮಿಲಾಡಿ ಅಕ್ಷಯ್ ಕುಮಾರ್ ಅಥವಾ ಶಾಹಿದ್ ಕಪೂರ್ ಇಬ್ಬರಲ್ಲಿ ಒಬ್ಬರು ಈ ಸಿನಿಮಾಗೆ ನಾಯಕರಾಗಬಹುದು ಎಂಬ ಸುದ್ದಿ ಇದೆ. ಈಗಾಗಲೇ ಈ ಇಬ್ಬರು ನಟರು ದಕ್ಷಿಣ ಭಾರತದ ಸಿನಿಮಾವನ್ನು ರಿಮೇಕ್ ಮಾಡಿದ್ದಾರೆ. ಹಾಗಾಗಿ ಇಬ್ಬರಲ್ಲಿ ಒಬ್ಬರು ಈ ಸಿನಿಮಾ ಮಾಡಬಹುದು ಎಂದು ಅಂದಾಜಿಸಲಾಗಿದೆ.
ಇದನ್ನೂ ಓದಿ: ಅಪ್ಪು ಕನಸು ನನಸು ಮಾಡಲು ಶಿವಣ್ಣ ರೆಡಿ, ಚೆಲುವ ಚಾಮರಾಜನಗರ ಯೋಜನೆಗೆ ಕೈ ಜೋಡಿಸಲು ಸಿದ್ದ ಎಂದ ನಟ
ರಂಗಿತರಂಗ ಬಿಡುಗಡೆಯಾಗಿ ಉತ್ತಮ ಪ್ರದರ್ಶನ ಕಂಡಿತ್ತು. 300 ದಿನಗಳು ಕೆಲ ಚಿತ್ರಮಂದಿರಲ್ಲಿ ಪ್ರದರ್ಶನ ಕಂಡರೆ, ಒಂದು ಕಡೆ 1 ವರ್ಷ ಪ್ರದರ್ಶನ ಕಂಡು ದಾಖಲೆ ಬರೆದಿತ್ತು. ಅಲ್ಲದೇ, ಈ ಸಿನಿಮಾಗೆ ವಿದೇಶದಿಂದ ಸಹ ಮೆಚ್ಚುಗೆ ವ್ಯಕ್ತವಾಗಿತ್ತು. ಒಟ್ಟಾರೆಯಾಗಿ ಅನೂಪ್ ಭಂಡಾರಿ ಬಾಲಿವುಡ್ ಹೋಗುತ್ತಿರುವ ಸುದ್ದಿ ನಿಜವಾದರೆ ಅಭಿಮಾನಿಗಳಿ ಸಂತೋಷ ಮಾತ್ರವಲ್ಲದೇ ಸ್ಯಾಂಡಲ್ವುಡ್ಗೆ ಹೆಮ್ಮೆಯ ವಿಚಾರ ಎನ್ನಬಹುದು. ಈ ತಿಂಗಳ 28ರಂದು ಅವರ ಬಹು ನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ವಿಕ್ರಾಂತ್ ರೋಣ ತೆರೆ ಮೇಲೆ ಬರುತ್ತಿದ್ದು, ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ