ಕಿಚ್ಚ ಸುದೀಪ್ (Kiccha Sudeep) ಅಭಿನಯದ ವಿಕ್ರಾಂತ್ ರೋಣ (Vikrant Rona) ವಿಶ್ವದಾದ್ಯಂತ ಬಾಕ್ಸ್ ಆಫೀಸ್ನಲ್ಲಿ (Box Office) 150 ಕೋಟಿ ರೂ.ಗಳತ್ತ ಸಾಗುತ್ತಿದೆ. ಕರ್ನಾಟಕದ ಹೊರತಾಗಿ, ತೆಲುಗು ರಾಜ್ಯಗಳಲ್ಲಿ ಮತ್ತು ಇತರ ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಚಿತ್ರವು ಉತ್ತಮ ವ್ಯಾಪಾರವನ್ನು ಮಾಡುತ್ತಿದೆ. ವ್ಯಾಪಾರ ವರದಿಗಳ ಪ್ರಕಾರ ವಿಕ್ರಾಂತ್ ರೋಣ ಒಂದೆರಡು ದಿನಗಳಲ್ಲಿ ಲಾಭದತ್ತ ಮುಖಮಾಡಲಿದೆ. ಇಂದಿನ ಈ ಸಿನಿಮಾ ಬಿಡುಗಡೆಯಾಗಿ ಒಂದು ವಾರವಾಗಿದ್ದು, ಹೇಗಿದೆ ಒಟ್ಟಾರೆ ಕಲೆಕ್ಷನ್? ಇಲ್ಲಿದೆ ಸಂಪೂರ್ಣ ಮಾಹಿತಿ.
ಉತ್ತಮ ಕಲೆಕ್ಷನ್ ಮಾಡ್ತಿದೆ ಸಿನಿಮಾ
ಚಿತ್ರದಲ್ಲಿ ಸುದೀಪ್ ಜೊತೆಗೆ ಜಾಕ್ಲೀನ್ ಫರ್ನಾಂಡೀಸ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾ ವಿಶ್ವದಾದ್ಯಂತ ಸದ್ದು ಮಾಡುತ್ತಿದ್ದು, ಎಲ್ಲರಿಗೂ ಬಹಳ ಇಷ್ಟವಾಗಿದೆ. ಏಳನೇ ದಿನ ವಿಕ್ರಾಂತ್ ರೋಣ 5.5 ರಿಂದ 6 ಕೋಟಿ ಕಲೆಕ್ಷನ್ ಮಾಡಿದ್ದು, ಹಿಡಿತ ಸಾಧಿಸಿದೆ ಎಂದು ಅಂದಾಜಿಸಲಾಗಿದೆ. ಎರಡನೇ ವಾರದ ಪ್ರದರ್ಶನದಲ್ಲಿ ವಿಕ್ರಾಂತ್ ರೋಣ ದಕ್ಷಿಣ ಸಿನಿಮಾ ರಂಗದಿಂದ ಮತ್ತೊಂದು ಸೂಪರ್ ಹಿಟ್ ಸಿನಿಮಾಗಳ ಲಿಸ್ಟ್ಗೆ ಸೇರುತ್ತದೆ.
ವಿಕ್ರಾಂತ್ ರೋಣ ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ 10 ಕೋಟಿ ರೂ. ಕಲೆಕ್ಷನ್ ಮಾಡಿದ್ದು, ಈ ಸಿನಿಮಾ ಮಿಶ್ರ ಪ್ರತಿಕ್ರಿಯೆ ಪಡೆದಿದೆ. ಆದರೆ 3D ಅನುಭವದಿಂದಾಗಿ ಅಭಿಮಾನಿಗಳು ಥಿಯೇಟರ್ಗಳಲ್ಲಿ ಸಿನಿಮಾ ನೋಡಲು ಮುಗಿಬೀಳುತ್ತಿದ್ದಾರೆ. VFX ಎಫೆಕ್ಟ್, ಸ್ಪೆಷಲ್ ಎಫೆಕ್ಟ್ (SFX), ಕಿಚ್ಚ ಸುದೀಪ್ ಅಭಿನಯ ಮತ್ತು ಜಾಕ್ಲೀನ್ ಮತ್ತು ಸುದೀಪ್ ಒಟ್ಟಿಗೆ ಕುಣಿದಿರುವ "ರಾ ರಕ್ಕಮ್ಮ ಹಾಡು" ಚಿತ್ರದ ಹೈಲೈಟ್ಗಳಾಗಿದ್ದು, ಎಲ್ಲೆಡೆ ಸದ್ಯ ವಿಕ್ರಾಂತ್ ರೋಣ ಸದ್ದು ಮಾಡುತ್ತಿದೆ. ಟ್ರೆಂಡ್ಗಳ ಪ್ರಕಾರ, ಕಿಚ್ಚ ಅಭಿನಯದ ಈ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಭರ್ಜರಿ ಕಲೆಕ್ಷನ್ ಮಾಡುತ್ತಿದ್ದು, ಕಿಚ್ಚನ ಮೊದಲ ಪ್ಯಾನ್ ಇಂಡಿಯಾ ಸಿನಿಮಾ ಅಭಿಮಾನಿಗಳನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ.
ಇದನ್ನೂ ಓದಿ: ಮತ್ತೆ ಸುದ್ದಿಯಾಗ್ತಿದೆ ಶೋಭಿತಾ - ನಾಗಚೈತನ್ಯ ಸ್ಟೋರಿ, ಇದಕ್ಕೆಲ್ಲಾ ಚೈ ರಿಯಾಕ್ಷನ್ ಕಾರಣವಂತೆ
ಕಿಚ್ಚ ಸುದೀಪ್ ಅಭಿನಯದ ಸೂಪರ್ ಹಿಟ್ ಚಿತ್ರ ವಿಕ್ರಾಂತ್ ರೋಣ ಚಿತ್ರವು ಈಗಾಗಲೇ ಕನ್ನಡ, ತೆಲುಗು, ತಮಿಳು, ಹಿಂದಿ ಮತ್ತು ಮಲೆಯಾಳಂ ಭಾಷೆಗಳಲ್ಲಿ ಬಿಡುಗಡೆ ಆಗಿದೆ. ನಿನ್ನೆ ಕಿಚ್ಚ ಸುದೀಪ್ ಈ ಸಿನಿಮಾ ಜಪಾನ್ನಲ್ಲಿ ಸಹ ಬಿಡುಗಡೆಯಾಗುವ ಬಗ್ಗೆ ಮಾಹಿತಿ ನೀಡಿದ್ದಾರೆ. ಜಪಾನಿನ ಸುದೀಪ್ ಅಭಿಮಾನಿಯೊಬ್ಬರು ಅಕುರಿ ಎಂಬುವವರು ವಿಕ್ರಾಂತ್ ರೋಣ ಚಿತ್ರವನ್ನು ಜಪಾನ್ನಲ್ಲಿ ನೋಡಲು ಕಾಯುತ್ತಿರುವುದಾಗಿ ಟ್ವೀಟ್ ಮಾಡಿದ್ದಾರೆ. ಈ ಟ್ವಿಟ್ಗೆ ಪ್ರತಿಕ್ರಿಯಿಸಿರುವ ಕಿಚ್ಚ ಅವರು ಶೀಘ್ರದಲ್ಲೇ' ಎಂದು ಹೇಳಿದ್ದಾರೆ.
#VikrantRona AP&TS set to gross ₹10Cr+, more than #VirataParvam #ThankYou & #RamaRaoOnDuty!
But it’s not as if #VR had WoM working, which is still mixed. It is the 3D which is driving numbers, which stresses on the need to make more films Relevant for Theatrical Experience! pic.twitter.com/6WwVZIiiNm
— AndhraBoxOffice.Com (@AndhraBoxOffice) August 2, 2022
ಇದನ್ನೂ ಓದಿ: ಟಾಲಿವುಡ್ ಬಿಕ್ಕಟ್ಟಿಗೆ ಕಾರಣ ಇವರಂತೆ, ಹೀಗ್ಯಾಕಂದ್ರು ರಾಮ್ ಗೋಪಾಲ್ ವರ್ಮಾ?
ಈ ಒಂದು ಸಂತಸದ ವಿಚಾರದ ನಡುವೆಯೇ ಜರ್ಮನಿಯ ಅಭಿಮಾನಿಯೊಬ್ಬರು ವಿಕ್ರಾಂತ್ ರೋಣ' ಚಿತ್ರವನ್ನು ನೋಡಲು 300 ಕಿ.ಮೀ ಪ್ರಯಾಣ ಮಾಡಿದ್ದಾರಂತೆ. ಇನ್ನು ಹಿಂದಿ ಬೆಲ್ಟ್ನಲ್ಲಿ ಸುಮಾರು 8 ಕೋಟಿ ರೂಪಾಯಿ ಕಲೆಕ್ಷನ್ ಮಾಡುವ ಮೂಲಕ ಚಿತ್ರ ಉತ್ತಮ ಪ್ರದರ್ಶನ ನೀಡುತ್ತಿದೆ. ವಾರದ ದಿನಗಳಲ್ಲಿ ವಿಕ್ರಾಂತ್ ರೋಣ ಯಾವ ರೀತಿ ಪ್ರದರ್ಶನ ನೀಡಲಿದೆ ಎಂಬುದನ್ನು ಕಾದು ನೋಡಬೇಕಿದೆ. ಟ್ರೇಡ್ ವರದಿಗಳ ಪ್ರಕಾರ ವಿಕ್ರಾಂತ್ ರೋಣ ಈ ವಾರ ಕಲೆಕ್ಷನ್ನಲ್ಲಿ ಸ್ವಲ್ಪ ಕುಸಿತವನ್ನು ಕಾಣಬಹುದು ಎನ್ನಲಾಗುತ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ