ಕಿಚ್ಚ ಸುದೀಪ್ (Kiccha Sudeep) ಅಭಿನಯದ ವಿಕ್ರಾಂತ್ ರೋಣ ಕಳೆದ ವಾರ ಥಿಯೇಟರ್ಗಳಲ್ಲಿ ಬಿಡುಗಡೆಯಾಗಿದ್ದು, ಬಾಕ್ಸ್ ಆಫೀಸ್‌ನಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಈ ವಾರ ವಿಶ್ವದಾದ್ಯಂತ 150 ಕೋಟಿ ರೂಪಾಯಿಗಳನ್ನು ಮೀರುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಆರ್‌ಆರ್‌ಆರ್, ಕೆಜಿಎಫ್ 2 ಮತ್ತು ವಿಕ್ರಮ್ ನಂತರ, ವಿಕ್ರಾಂತ್ ರೋಣ ದೇಶಾದ್ಯಂತ ಅಸಾಧಾರಣ ಪ್ರದರ್ಶನ ನೀಡುತ್ತಿದೆ. ಈ ಸಿನಿಮಾ ರಣಬೀರ್ ಕಪೂರ್ ಅವರ ಶಂಶೇರಾ ಮತ್ತು ಅರ್ಜುನ್ ಕಪೂರ್-ಜಾನ್ ಅಬ್ರಹಾಂ ಅವರ ಏಕ್ ವಿಲನ್ ರಿಟರ್ನ್ಸ್ ಅನ್ನು ಮೀರಿಸಿದೆ ಎಂದು ವ್ಯಾಪಾರ ವರದಿಗಳು ಹೇಳಿದೆ.
ಹಿಂದಿ ಸಿನಿಮಾಗಳನ್ನು ಮೀರಿಸಿದ ವಿಕ್ರಾಂತ್ ರೋಣ
ಕೊರೊನಾ ಕಾರಣದಿಂದ ಹಲವಾರು ಬಾರಿ ಮುಂದೂಡಲ್ಪಟ್ಟ ನಂತರ ವಿಕ್ರಾಂತ್ ರೋಣ ಸಿನಿಮಾ ಜುಲೈ 28 ರಂದು ರಿಲೀಸ್ ಆಗಿದ್ದು, ಚಿತ್ರ ಐದು ಭಾಷೆಗಳಲ್ಲಿ ಬಿಡುಗಡೆಯಾಗಿದೆ. ಆರನೇ ದಿನ ವಿಕ್ರಾಂತ್ ರೋಣ ಅಂದಾಜು 6 ಕೋಟಿ ಕಲೆಕ್ಷನ್ ಮಾಡಿದೆ. ಚಿತ್ರವು ತನ್ನ ಕಲೆಕ್ಷನ್‌ಗಳಲ್ಲಿ ಕುಸಿತ ಕಂಡರೂ, ಇದು ಇನ್ನೂ ಶಂಶೇರಾ ಮತ್ತು ಏಕ್ ವಿಲನ್ ರಿಟರ್ನ್ಸ್‌ಗಳನ್ನು ಮೀರಿಸಿದೆ. ವಿಕ್ರಾಂತ್ ರೋಣ ಈ ವಾರ ಬಾಕ್ಸ್ ಆಫೀಸ್ ನಲ್ಲಿ 150 ಕೋಟಿ ದಾಟಲಿದೆ ಎನ್ನಲಾಗುತ್ತಿದೆ.
ಕಿಚ್ಚ ಸುದೀಪ್ ಅಭಿನಯದ ಸೂಪರ್ ಹಿಟ್ ಚಿತ್ರ ವಿಕ್ರಾಂತ್ ರೋಣ ಚಿತ್ರವು ಈಗಾಗಲೇ ಕನ್ನಡ, ತೆಲುಗು, ತಮಿಳು, ಹಿಂದಿ ಮತ್ತು ಮಲೆಯಾಳಂ ಭಾಷೆಗಳಲ್ಲಿ ಬಿಡುಗಡೆ ಆಗಿದೆ. ನಿನ್ನೆ ಕಿಚ್ಚ ಸುದೀಪ್ ಈ ಸಿನಿಮಾ ಜಪಾನ್‌ನಲ್ಲಿ ಸಹ ಬಿಡುಗಡೆಯಾಗುವ ಬಗ್ಗೆ ಮಾಹಿತಿ ನೀಡಿದ್ದಾರೆ. ಜಪಾನಿನ ಸುದೀಪ್ ಅಭಿಮಾನಿಯೊಬ್ಬರು ಅಕುರಿ ಎಂಬುವವರು ವಿಕ್ರಾಂತ್ ರೋಣ ಚಿತ್ರವನ್ನು ಜಪಾನ್‌ನಲ್ಲಿ ನೋಡಲು ಕಾಯುತ್ತಿರುವುದಾಗಿ ಟ್ವೀಟ್ ಮಾಡಿದ್ದಾರೆ. ಈ ಟ್ವಿಟ್ಗೆ ಪ್ರತಿಕ್ರಿಯಿಸಿರುವ ಕಿಚ್ಚ ಅವರು ಶೀಘ್ರದಲ್ಲೇ' ಎಂದು ಹೇಳಿದ್ದಾರೆ.
ಈ ಒಂದು ಸಂತಸದ ವಿಚಾರದ ನಡುವೆಯೇ ಜರ್ಮನಿಯ ಅಭಿಮಾನಿಯೊಬ್ಬರು ವಿಕ್ರಾಂತ್ ರೋಣ' ಚಿತ್ರವನ್ನು ನೋಡಲು 300 ಕಿ.ಮೀ ಪ್ರಯಾಣ ಮಾಡಿದ್ದಾರಂತೆ. ಇನ್ನು ಹಿಂದಿ ಬೆಲ್ಟ್‌ನಲ್ಲಿ ಸುಮಾರು 7 ಕೋಟಿ ರೂಪಾಯಿ ಕಲೆಕ್ಷನ್ ಮಾಡುವ ಮೂಲಕ ಚಿತ್ರ ಉತ್ತಮ ಪ್ರದರ್ಶನ ನೀಡುತ್ತಿದೆ. ವಾರದ ದಿನಗಳಲ್ಲಿ ವಿಕ್ರಾಂತ್ ರೋಣ ಯಾವ ರೀತಿ ಪ್ರದರ್ಶನ ನೀಡಲಿದೆ ಎಂಬುದನ್ನು ಕಾದು ನೋಡಬೇಕಿದೆ. ಟ್ರೇಡ್ ವರದಿಗಳ ಪ್ರಕಾರ ವಿಕ್ರಾಂತ್ ರೋಣ ಈ ವಾರ ಕಲೆಕ್ಷನ್‌ನಲ್ಲಿ ಸ್ವಲ್ಪ ಕುಸಿತವನ್ನು ಕಾಣಬಹುದು ಎನ್ನಲಾಗುತ್ತಿದೆ.
ಇದನ್ನೂ ಓದಿ: ಪ್ಯಾರಿಸ್ ಟ್ರಿಪ್ ಮುಗಿಸಿ ಬಂದ ವಿರುಷ್ಕಾ, ಮಗಳ ಫೋಟೋ ತೆಗೆಯದಂತೆ ಪಾಪರಾಜಿಗಳಿಗೆ ವಿರಾಟ್ ಮನವಿ
ಸೂಪರ್ ಹಿಟ್ ಆಗ್ತಿದೆ ಅನೂಪ್ ಭಂಡಾರಿ ಸಿನಿಮಾ
ಕನ್ನಡ ಮಾತ್ರವಲ್ಲದೆ ತೆಲುಗು ಮತ್ತು ಹಿಂದಿಯಲ್ಲೂ ವಿಕ್ರಾಂತ್ ರೋಣ ಉತ್ತಮ ಪ್ರದರ್ಶನ ನೀಡುತ್ತಿದ್ದು, ಚಿತ್ರವು ದೇಶಾದ್ಯಂತ ಉತ್ತಮ ಕಲೆಕ್ಷನ್ ಮಾಡುತ್ತಿದೆ. ವಿಕ್ರಾಂತ್ ರೋಣ ಚಿತ್ರವನ್ನು ಅನೂಪ್ ಭಂಡಾರಿ ಕಥೆ ಬರೆದು ನಿರ್ದೇಶಿಸಿದ್ದಾರೆ. ಕಿಚ್ಚ ಸುದೀಪ್ ಮುಖ್ಯ ಪಾತ್ರದಲ್ಲಿ ನಟಿಸಿದ್ದು, ಬಾಲಿವುಡ್ ಬೆಡಗಿ ಜಾಕ್ಲೀನ್ ಫರ್ನಾಂಡಿಸ್, ನಿರೂಪ್ ಭಂಡಾರಿ ಮತ್ತು ನೀತಾ ಅಶೋಕ್ ಇತರ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಶಾಲಿನಿ ಮಂಜುನಾಥ್ ಮತ್ತು ಜಾಕ್ ಮಂಜುನಾಥ್ ನಿರ್ಮಾಣದ ಈ ಚಿತ್ರಕ್ಕೆ ಅಜನೀಶ್ ಲೋಕನಾಥ್ ಅವರ ಸಂಗೀತ, ಆಶಿಕ್ ಕುಡುಗೊಲ್ಲಿ ಅವರ ಸಂಕಲನ ಮತ್ತು ವಿಲಿಯಂ ಡೇವಿಡ್ ಅವರ ಛಾಯಾಗ್ರಹಣವಿದೆ.
ಇದನ್ನೂ ಓದಿ: ರಣ ವಿಕ್ರಮ ಬೆಡಗಿಯ ಸೌಂದರ್ಯಕ್ಕೆ ಸಾಟಿ ಯಾರು? ಈ ನಟಿ ಹಾಕೋ ಫೋಟೋಗಳಿಗೆಲ್ಲಾ ಫಿದಾ ಆಗ್ತಾರೆ ಫ್ಯಾನ್ಸ್!
ವಿಕ್ರಾಂತ್ ರೋಣ ಸಿನಿಮಾ ಕರ್ನಾಟಕದಲ್ಲಿ ಸುಮಾರು 325 ಸಿಂಗಲ್ ಸ್ಕ್ರೀನ್ ನಲ್ಲಿ ಬಿಡುಗಡೆ ಆಗಿದೆ. ಉಳಿದಂತೆ 325 ಥಿಯೇಟರ್, 65 ಮಲ್ಟಿಫೆಕ್ಸ್ ಸ್ಕ್ರೀನ್ಸ್ ಗಳಲ್ಲಿ 2500ಕ್ಕೂ ಹೆಚ್ಚು ಶೋ ಪ್ರದರ್ಶನ ಕಂಡಿದೆ. ಅದರಲ್ಲಿಯೂ ಬೆಂಗಳೂರಿನಲ್ಲೆ 1200 ಶೋ ನೀಡಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ