Vikrant Rona: ಬಾಕ್ಸ್ ಆಫೀಸ್​ನಲ್ಲಿ 11ನೇ ದಿನವೂ ಭರ್ಜರಿ ಕಲೆಕ್ಷನ್; 200 ಕೋಟಿ ಕ್ಲಬ್ ಸೇರಲಿದ್ಯಾ ಕಿಚ್ಚ ಸುದೀಪ್ ಚಿತ್ರ!?

ವಿಕ್ರಾಂತ್ ರೋಣ ಚಿತ್ರ  11ನೇ ದಿನ ವಿಶ್ವಾದ್ಯಂತ 3.5 ಕೋಟಿ ಗಳಿಸುವಲ್ಲಿ ಯಶಸ್ವಿಯಾಗಿದೆ. ಗಲ್ಲಾಪೆಟ್ಟಿಗೆಯಲ್ಲಿ ತನ್ನ ಓಟವನ್ನು ಮುಂದುವರೆಸಿದ್ದು, ಸದ್ಯದಲ್ಲೇ ಚಿತ್ರ 200 ಕೋಟಿ ಕ್ಲಬ್ ಸೇರಲಿದೆ ಎನ್ನಲಾಗ್ತಿದೆ.

ವಿಕ್ರಾಂತ್ ರೋಣ

ವಿಕ್ರಾಂತ್ ರೋಣ

  • Share this:
ಕಿಚ್ಚ ಸುದೀಪ್ ಅಭಿನಯದ ವಿಕ್ರಾಂತ್ ರೋಣ (Vikrant Rona) ಚಿತ್ರ ಥಿಯೇಟರ್‌ಗೆ ಕಾಲಿಟ್ಟಾಗಿನಿಂದಲೂ ಬಾಕ್ಸ್ ಆಫೀಸ್ ಕೊಳ್ಳೆ (Vikrant Rona Box Office Collection) ಹೊಡೆಯುತ್ತಿದೆ. ಚಿತ್ರ ರಿಲೀಸ್​ ಆಗಿ 11 ದಿನ ಕಳೆದ್ರೂ  ಕಿಚ್ಚ ಸುದೀಪ್ (Kichcha Sudeep)​ ಹವಾ ಕಡಿಮೆಯಾಗಿಲ್ಲ, 11 ದಿನ ವಿಕ್ರಾಂತ್​ ರೋಣ ಚಿತ್ರವು ವಿಶ್ವಾದ್ಯಂತ 3.5 ಕೋಟಿ ರೂಪಾಯಿಗಳನ್ನು ಗಳಿಸಿದೆ ಎಂದು ಅಂದಾಜಿಸಲಾಗಿದೆ. ಇದು ಚಿತ್ರ ರಿಲೀಸ್​ ಆಗಿರೋ 2ನೇ ವಾರದಲ್ಲೇ ಉತ್ತಮ ಕಲೆಕ್ಷನ್​ ಆಗಿದೆ. ಚಿತ್ರಮಂದಿರಲ್ಲಿ ಚಿತ್ರ ನೋಡಲು ಅಭಿಮಾನಿಗಳು ಹರಿದು ಬರ್ತಿದ್ದು, ಚಿತ್ರ ಕಲೆಕ್ಷನ್​ 200 ಕೋಟಿ ರೂಪಾಯಿ ದಾಟುವ ಸಾಧ್ಯತೆ ಇದೆ ಎನ್ನಲಾಗ್ತಿದೆ.

ವಿಕ್ರಾಂತ್​ ರೋಣ ಭರ್ಜರಿ ಪ್ರದರ್ಶನ

ಅನುಪ್ ಭಂಡಾರಿ ನಿರ್ದೇಶನದ ಕಿಚ್ಚ ಸುದೀಪ್ ಅಭಿನಯದ ಫ್ಯಾಂಟಸಿ ಅಡ್ವೆಂಚರ್ ಥ್ರಿಲ್ಲರ್ ಚಿತ್ರವಾಗಿರೋ ವಿಕ್ರಾಂತ್​ ರೋಣ ಜುಲೈ 28 ರಂದು ಚಿತ್ರಮಂದಿರಗಳಲ್ಲಿ ತೆರೆಕಂಡಿದ್ದು, ಭರ್ಜರಿ ಪ್ರದರ್ಶನ ಕಾಣ್ತಿದೆ. ಚಿತ್ರಕ್ಕೆ ವಿಮರ್ಶಕರು ಮತ್ತು ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆಗಳು ವ್ಯಕ್ತವಾಗ್ತಿದೆ.

200 ಕೋಟಿ ಕ್ಲಬ್​ ಸೇರಲಿದ್ಯಾ ಕಿಚ್ಚನ ಸಿನಿಮಾ?

ವರದಿಗಳ ಪ್ರಕಾರ, ವಿಕ್ರಾಂತ್ ರೋಣ ಚಿತ್ರ  11ನೇ ದಿನ ವಿಶ್ವಾದ್ಯಂತ 3.5 ಕೋಟಿ ಗಳಿಸುವಲ್ಲಿ ಯಶಸ್ವಿಯಾಗಿದೆ. ಗಲ್ಲಾಪೆಟ್ಟಿಗೆಯಲ್ಲಿ ತನ್ನ ಓಟವನ್ನು ಮುಂದುವರೆಸಿದ್ದು, ಸದ್ಯದಲ್ಲೇ ಚಿತ್ರ 200 ಕೋಟಿ ಕ್ಲಬ್ ಸೇರಲಿದೆ ಎನ್ನಲಾಗ್ತಿದೆ.

ಸುದೀಪ್​ ಚಿತ್ರಕ್ಕೆ ಸಲ್ಲು ಸಖತ್​ ರಿವ್ಯೂ

ಸಲ್ಮಾನ್ ಖಾನ್ ವಿಕ್ರಾಂತ್ ರೋಣಗೆ ಗ್ಲೋಯಿಂಗ್ ರಿವ್ಯೂ ನೀಡಿದ್ದಾರೆ. ಸಲ್ಮಾನ್ ಖಾನ್ ವಿಕ್ರಾಂತ್ ರೋಣದ ಹಿಂದಿ ಆವೃತ್ತಿಯನ್ನು ಬಿಡುಗಡೆ ಮಾಡಿದ್ರು. ಪ್ರೀ ರಿಲೀಸ್ ಸಮಾರಂಭದಲ್ಲಿ ಅವರು ಚಿತ್ರದ ಬಗ್ಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ.

ಇದು ತುಂಬಾ ಒಳ್ಳೆಯ ಚಿತ್ರ. ನಾನು ವಿಕ್ರಾಂತ್​ ರೋಣ ಚಿತ್ರ ನೋಡಿದೆ. ಸುದೀಪ್ ಅದನ್ನು ನನಗೆ ಮನೆಯಲ್ಲಿ ತೋರಿಸಿದರು. ದೊಡ್ಡ ಪರದೆಯ ಮೇಲೆ ಬಿಡುಗಡೆ ಮಾಡುವ ಮೊದಲು ನಾನು ಅದನ್ನು ಮತ್ತೆ ನೋಡುತ್ತೇನೆ. ಮತ್ತು ನಾನು ಚಿತ್ರೀಕರಣದ ಉದ್ದಕ್ಕೂ ರಶಸ್ ಅನ್ನು ನೋಡಿದ್ದೇನೆ. ಇದು ಸುಂದರವಾಗಿ ಕಾಣುತ್ತಿದೆ. ಎಲ್ಲರೂ ಚೆನ್ನಾಗಿ ಮಾಡಿದ್ದಾರೆ ಎಂದು ಸಲ್ಮಾನ್​ ಖಾನ್​ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Vikrant Rona: ವಿಕ್ರಾಂತ್ ರೋಣ ಮೊದಲ ದಿನದ ಕಲೆಕ್ಷನ್ ಎಷ್ಟು? ಕಿಚ್ಚನ ಅಬ್ಬರಕ್ಕೆ ಬಾಕ್ಸ್ ಆಫೀಸ್ ಶೇಕ್!

Vikrant Rona
ವಿಕ್ರಾಂತ್ ರೋಣ


ಮೊದಲ ದಿನವೇ 20-22 ಕೋಟಿ ಕಲೆಕ್ಷನ್​

ಬಾಕ್ಸ್​ ಆಫೀಸ್​ ಟ್ರೇಡ್​ ವಿಶ್ಲೇಷಕರು ‘ವಿಕ್ರಾಂತ್​ ರೋಣ’ ಸಿನಿಮಾದ ಕಲೆಕ್ಷನ್​ ಬಗ್ಗೆ ಅಂದಾಜಿಸಿದ್ದಾರೆ. ಕರ್ನಾಟಕದಿಂದ ಸುಮಾರು 16 ಕೋಟಿ ರೂಪಾಯಿ ಸಂಗ್ರಹ ಆಗಿರಬಹುದು. ಆಂಧ್ರ, ತೆಲಂಗಾಣ, ತಮಿಳುನಾಡು ಹಾಗೂ ಹಿಂದಿ ಭಾಷಿಕ ರಾಜ್ಯಗಳ ಕಲೆಕ್ಷನ್​ ಕೂಡ ಸೇರಿಸಿದರೆ ಒಟ್ಟು 20ರಿಂದ 22 ಕೋಟಿ ರೂಪಾಯಿ ಆದಾಯ ಬಂದಿರಬಹುದು ಎಂದು ಹೇಳಲಾಗುತ್ತಿದೆ. ಚಿತ್ರತಂಡದ ಕಡೆಯಿಂದಲೇ ಪಕ್ಕಾ ಮಾಹಿತಿ ಸಿಗಲಿ ಎಂದು ಎಲ್ಲರೂ ಕಾಯುತ್ತಿದ್ದಾರೆ.

2ನೇ ದಿನವೂ ಭರ್ಜರಿ ಕಲೆಕ್ಷನ್​

'ವಿಕ್ರಾಂತ್ ರೋಣ' ಸಿನಿಮಾ ಸಾಕಷ್ಟು ನಿರೀಕ್ಷೆಯೊಂದಿಗೆ ತೆರೆಗೆ ಬಂತು. ಅದರಂತೆಯೇ ಮೊದಲ ದಿನ ಉತ್ತಮ ಓಪನಿಂಗ್ ಪಡೆದುಕೊಂಡಿದೆ. ಈ ಸಿನಿಮಾ ವಿಶ್ವದಾದ್ಯಂತ ಎಷ್ಟು ಗಳಿಕೆ ಕಂಡಿದೆ ಎನ್ನುವ ಬಾಕ್ಸಾಫೀಸ್ ಲೆಕ್ಕಾಚಾರ ಹೊರ ಬಿದ್ದಿದೆ. ಎರಡನೇ ದಿನ ವಿಶ್ವದಾದ್ಯಂತ 'ವಿಕ್ರಾಂತ್ ರೋಣ' ಸರಿ ಸುಮಾರು ₹45 ಕೋಟಿ ರೂ.ಗಿಂತಲೂ ಅಧಿಕ ಮೊತ್ತ ಕಲೆ ಹಾಕಿದೆ ಎನ್ನಲಾಗಿದೆ. ಮೊದಲ ದಿನ ವಿಕ್ರಾಂತ್ ರೋಣ ₹22 ಕೋಟಿಗೂ ಅಧಿಕ ಮೊತ್ತ ಕಲೆ ಹಾಕಿದ್ದು, ಎರಡನೇ ದಿನಕ್ಕೆ ₹45 ರಿಂದ ₹47 ಕೋಟಿ ರೂ ತನಕ ಗಳಿಸಿದೆ.

ಇದನ್ನೂ ಓದಿ: Vikrant Rona: ವಿಕ್ರಾಂತ್​ ರೋಣ ಚಿತ್ರಕ್ಕೆ ಪೈರಸಿ ಕಾಟ, ಸಂಪೂರ್ಣ ಚಿತ್ರ ಆನ್​​ಲೈನ್​ನಲ್ಲಿ ಲೀಕ್​

ಹಲವು ವಿಶೇಷತೆಗಳೊಂದಿಗೆ ಮೂಡಿಬಂದ ‘ವಿಕ್ರಾಂತ್​ ರೋಣ’ ಸಿನಿಮಾವನ್ನು ನೋಡಲು ಸುದೀಪ್​ ಅಭಿಮಾನಿಗಳು ಅನೇಕ ತಿಂಗಳಿಂದ ಕಾದಿದ್ದರು. ಸಿನಿಮಾ ರಿಲೀಸ್​ ಆಗ್ತಿದ್ದಂತೆ ಮುಗಿಬಿದ್ದು ಚಿತ್ರ ನೋಡ್ತಿದ್ದಾರೆ. ಅನುಪ್ ಭಂಡಾರಿ ನಿರ್ದೇಶನದ ವಿಕ್ರಾಂತ್ ರೋಣ ಚಿತ್ರದಲ್ಲಿ ಕಿಚ್ಚ ಸುದೀಪ್, ಜಾಕ್ವೆಲಿನ್ ಫರ್ನಾಂಡೀಸ್, ನಿರೂಪ್ ಭಂಡಾರಿ ಮತ್ತು ನೀತಾ ಅಶೋಕ್ ಸೇರಿದಂತೆ ಅನೇಕ ಪ್ರಮುಖ ಪಾತ್ರಗಳು ಕಾಣಿಸಿಕೊಂಡಿದ್ದಾರೆ.
Published by:Pavana HS
First published: