• Home
  • »
  • News
  • »
  • entertainment
  • »
  • Vikram Vedha Movie Review: ಒರಿಜಿನಲ್ ಸಿನಿಮಾವನ್ನೇ ಮರೆಸುತ್ತಂತೆ ಹಿಂದಿ ವಿಕ್ರಂ ವೇದಾ! ಹೇಗಿದೆ ಸಿನಿಮಾ?

Vikram Vedha Movie Review: ಒರಿಜಿನಲ್ ಸಿನಿಮಾವನ್ನೇ ಮರೆಸುತ್ತಂತೆ ಹಿಂದಿ ವಿಕ್ರಂ ವೇದಾ! ಹೇಗಿದೆ ಸಿನಿಮಾ?

 ವಿಕ್ರಂ-ವೇದಾ ಸಿನೆಮಾ

ವಿಕ್ರಂ-ವೇದಾ ಸಿನೆಮಾ

Vikram Vedha: ವಿಕ್ರಂ ವೇದಾ ಸಿನಿಮಾ ತೆರೆಕಂಡಿದೆ. ಸೈಫ್ ಅಲಿ ಖಾನ್ ಹಾಗೂ ಹೃತಿಕ್ ರೋಷನ್ ಅಭಿನಯದ ಬಹುನಿರೀಕ್ಷಿತ ರಿಮೇಕ್ ಸಿನಿಮಾ ನೋಡಿ ಏನಂತಿದ್ದಾರೆ ಜನ?

  • Share this:

ತಮಿಳಿನಲ್ಲಿ ಸೂಪರ್ ಹಿಟ್ ಆದ ಸಿನಿಮಾ ವಿಕ್ರಂ ವೇದಾ (Vikram Vedha) ಹಿಂದಿಯಲ್ಲಿ (Hindi) ಭಾರೀ ನಿರೀಕ್ಷೆಯನ್ನು ಹುಟ್ಟು ಹಾಕಿತ್ತು. ಈಗ ಸಿನಿಮಾ  (Cinema) ರಿಲೀಸ್ ಆಗಿದೆ. ಹೃತಿಕ್ ರೋಷನ್ (Hrithik Roshan) ಹಾಗೂ ಸೈಫ್ ಅಲಿ ಖಾನ್ (Saif ali khan) ನಟಿಸಿದ ಸಿನಿಮಾ ಹೇಗಿದೆ? ರೇಟಿಂಗ್ ಹೇಗಿದೆ ಎನ್ನುವ ಕುತೂಹಲ ಇದೆಯಾ? ಪ್ರೇಕ್ಷಕರು ಮೊದಲ ದಿನ ಸಿನಿಮಾ ನೋಡಿ ಇಷ್ಟಪಟ್ಟಿದ್ದು, ಒಂದಷ್ಟು ಜನರು ಹಿಂದಿಯ ವಿಕ್ರಂ ವೇದಾ ತಮಿಳಿಗಿಂತ (Tamil) ಚೆನ್ನಾಗಿ ಬಂದಿದೆ ಎಂದು ಮುಕ್ತವಾಗಿ ಹೊಗಳಿದ್ದಾರೆ. ಲಕ್ನೋ ಪೊಲೀಸರೊಂದಿಗೆ (Police) ಪ್ರಾಮಾಣಿಕ ಅಧಿಕಾರಿಯಾಗಿರುವ ವಿಕ್ರಮ್, ರೌಡಿ ವೇದನನ್ನು ಪತ್ತೆ ಹಚ್ಚಿ ಹೆಡೆಮುರಿ ಕಟ್ಟುವ ಕಾರ್ಯಾಚರಣೆಯಲ್ಲಿದ್ದಾರೆ. ಆದಾರೂ ವೇದಾ ಪೊಲೀಸರಿಗೆ ಶರಣಾಗಿ ವಿಕ್ರಮ್‌ಗೆ ಕಥೆಗಳನ್ನು ಹೇಳಲು ಪ್ರಾರಂಭಿಸಿದಾಗ, ಅಲ್ಲಿ ಒಳ್ಳೆಯದು ಮತ್ತು ಕೆಟ್ಟದ್ದ ಕುರಿತ ತಿಳುವಳಿಕೆ ಬದಲಾಗುತ್ತದೆ.


ತಮಿಳಿನ ಹಿಟ್‌ ವಿಕ್ರಂ ವೇದಾ ರಿಮೇಕ್ 'ವಿಕ್ರಮ್ ವೇದ' ನಿಯೋ-ನಾಯರ್ ಆಕ್ಷನ್ ಥ್ರಿಲ್ಲರ್ ಆಗಿದ್ದು, ಇದು ಜನಪ್ರಿಯ ಭಾರತೀಯ ಜಾನಪದ ಕಥೆ ಬೇತಾಳದ ಕುರಿತ ಸ್ಟೋರಿಯಲ್ಲಿ ಬೇರೂರಿದೆ. ಲಕ್ನೋ ಪೊಲೀಸ್ ವಿಶೇಷ ಕಾರ್ಯಪಡೆಯ ಉನ್ನತ ಅಧಿಕಾರಿ ವಿಕ್ರಮ್, ರೌಡಿ ವೇದಾನನ್ನು ಹುಡುಕಿ ಕೊಲ್ಲಲು ನಿಯೋಜಿಸಲ್ಪಟ್ಟಿರುತ್ತಾನೆ. ಆದರೆ, ವೇದಾ ಪೊಲೀಸರಿಗೆ ಶರಣಾಗುತ್ತಾನೆ.
ವಿಚಾರಣೆಯ ಸಮಯದಲ್ಲಿ, ಅವನು ವಿಕ್ರಮ್‌ಗೆ ಕಥೆಗಳನ್ನು ಹೇಳಲು ಪ್ರಾರಂಭಿಸುತ್ತಾನೆ. ಕಲ್ಪನಾತ್ಮಕವಾಗಿ, ಚಲನಚಿತ್ರವನ್ನು ಚೆನ್ನಾಗಿ ಮಾಡಲಾಗಿದೆ. ಎರಡು ಕೇಂದ್ರ ಪಾತ್ರಗಳನ್ನು ಸಾಕಷ್ಟು ಬಲವಾದ ರೀತಿಯಲ್ಲಿ ಪ್ರಸ್ತುತಪಡಿಸಿ ನಂತರ ಕಥೆಯ ಹರಿವನ್ನು ಬಿಡುವುದು ಈ ಸಿನಿಮಾದ ಒಂದು ಪ್ರಮುಖ ಅಂಶವಾಗಿದೆ.


ಸಾಹಸ ದೃಶ್ಯಗಳಲ್ಲಿ ಬಳಸಿಕೊಂಡಿರುವ ರಾಜ್ ಕಪೂರ್ ಹಾಡುಗಳಿಗೆ ವೇದಾ ಅವರ ಅತಿಯಾದ ಒಲವಿದೆ. ಈ ರೀತಿಯ ಸೂಕ್ಷ್ಮ ವಿಷಯಗಳನ್ನು ನಿರೂಪಣೆಯಲ್ಲಿ ಆಕರ್ಷಕವಾಗಿ ಹೆಣೆಯಲಾಗಿದೆ.


ಆ್ಯಕ್ಷನ್ ದೃಶ್ಯಗಳನ್ನು ಚೆನ್ನಾಗಿ ಕೊರಿಯೋಗ್ರಫಿ ಮಾಡಲಾಗಿದೆ. ಮೊದಲ ಅರ್ಧದ ಆಕ್ಷನ್ ಸೀಕ್ವೆನ್ಸ್‌ನಂತೆ ಪೊಲೀಸರು ವೇದಾನನ್ನು ಕೆಡವಲು ಮಾಡುವ ಸೀನ್ ಹಾಗೂ ಅವನು ಹೇಗೆ ಕಂಟೈನರ್ ಯಾರ್ಡ್‌ಗೆ ತಪ್ಪಿಸಿಕೊಳ್ಳುತ್ತಾನೆ ಎಂಬುದನ್ನು ಸಾಕಷ್ಟು ನಾಜೂಕಾಗಿ ತೋರಿಸಲಾಗಿದೆ. ಹೃತಿಕ್ ನೃತ್ಯದೊಂದಿಗೆ ಆಲ್ಕೋಲಿಯಾ ಟ್ರ್ಯಾಕ್ ಸೂಪರ್ ಆಗಿ ಮೂಡಿಬಂದಿದೆ. ಆದರೆ ಈ ಸಾಂಗ್ ಅಗತ್ಯವಿತ್ತೇ ಎನ್ನುವುದು ಪ್ರೇಕ್ಷಕರ ಪ್ರಶ್ನೆ.


ಹೃತಿಕ್ ಅತ್ಯುತ್ತಮವಾಗಿ ನಿರ್ವಹಿಸಿದ ವೇದಾ ಪಾತ್ರದ ಕಡೆಗೆ ಚಿತ್ರವು ವಾಲುತ್ತದೆ. ವೇದಾ ನಿರ್ದಯಿಯಾಗಿ ಇನ್ನೂ ಕೆಲವು ಭಾಗಗಳಲ್ಲಿ ಅತ್ಯಂತ ಭಾವನಾತ್ಮಕವಾಗಿ ಕಾಣಿಸಿಕೊಳ್ಳುತ್ತಾನೆ. ಸೈಫ್ ಒಬ್ಬ ಪ್ರಾಮಾಣಿಕ ಪೋಲೀಸ್ ಆಗಿ ಕಾಣಿಸಿಕೊಂಡಿದ್ದಾರೆ.


ಇದನ್ನೂ ಓದಿ: Kantara Movie Ramya Reaction: ಕಾಂತಾರ ಸಿನಿಮಾ ಬಗ್ಗೆ ರಮ್ಯಾ ಮಾತು! ಆ ದೈವ ರೂಪ ಕಂಡು ನಟಿ ರಮ್ಯಾ ಹೇಳಿದ್ದೇನು?


2017 ರಲ್ಲಿ ಬಿಡುಗಡೆಯಾಗಿರುವ ತಮಿಳು ಹಿಟ್ ಚಿತ್ರಗಳಲ್ಲಿ ವಿಕ್ರಂ-ವೇದಾ ಒಂದಾಗಿದೆ. ಮಾಧವನ್ ಹಾಗೂ ಸೇತುಪತಿ ತಮ್ಮದೆ ಅದ್ಭುತ ನಟನಾ ಶೈಲಿಯಿಂದ ಜನರ ಮನಸ್ಸನ್ನು ಗೆಲ್ಲುತ್ತಾರೆ. ಮಾಧವನ್ ಸ್ಟೈಲಿಶ್ ಹಾಗೂ ಗಂಭೀರ ಸ್ವಭಾವದ ನಾಯಕನಾಗಿ ಮಿಂಚಿದರೆ ಸೇತುಪಟಿ ತಮ್ಮ ವಿಶೇಷ ಮ್ಯಾನರಿಸಮ್ ಹಾಗೂ ಭಿನ್ನತೆಯಿರುವ ನಟನೆಯಿಂದಾಗಿ ತಮ್ಮದೆ ಆದ ಛಾಪನ್ನು ಈ ಚಿತ್ರದಲ್ಲಿ ಮೂಡಿಸಿದ್ದಾರೆ. ದೊಡ್ಡ ಪರದೆಯ ಮೇಲೆ ಈ ಇಬ್ಬರು ಮಹಾರಥಿಗಳ ನಟನೆ ಕಣ್ತುಂಬ ತುಂಬಿಕೊಳ್ಳುವುದೇ ದೊಡ್ಡ ಹಬ್ಬ ಎಂದೆನಿಸುತ್ತದೆ.
ಈ ಚಿತ್ರದ ಕಥೆ ಹೇಗಿದೆ


ಇನ್ನೊಂದು ವಿಶೇಷವೆಂದರೆ ಈ ಚಿತ್ರದ ಕಥೆಯೇ ಬಲು ವಿಶಿಷ್ಟವಾಗಿದೆ. ನಮ್ಮ ಪುರಾಣ-ಗ್ರಂಥಗಳಲ್ಲಿ ಬರುವ ವಿಕ್ರಂ ಮತ್ತು ಬೇತಾಳ ಕಥೆಯ ಮುಖ್ಯ ತಿರುಳು ಎನ್ನಬಹುದಾದ ಬೇತಾಳ ವಿಕ್ರಮನಿಗೆ ಕಥೆ ಹೇಳಿ ನಂತರ ಅದರಲ್ಲಿರುವ ಕಷ್ಟಕರ ಪ್ರಸಂಗಗಳ ಬಗ್ಗೆ ವಿಕ್ರಂನಿಗೆ ಪ್ರಶ್ನೆ ಕೇಳಿ ನ್ಯಾಯಯುತವಾದ ಉತ್ತರ ಕೇಳುವ ಪರಿಕಲ್ಪನೆಯಿತ್ತೋ ಅದೇ ರೀತಿಯ ವಿಶಿಷ್ಟ ಪರಿಕಲ್ಪನೆಯ ಸಿದ್ಧಾಂತದೊಂದಿಗೆ ಆಧುನಿಕ ಜೀವನದಲ್ಲಿ ನಡೆಯುವ ಹಲವು ಪ್ರಸಂಗಗಳನ್ನು ವಿಕ್ರಂ ಹೇಗೆ ಎದುರಿಸುತ್ತಾನೆ, ನಿಜವಾಗಿಯೂ ನ್ಯಾಯಪರವಾಗಿ ಅವನು ಏನು ಮಾಡಬೇಕು ಎಂಬೆಲ್ಲ ಸ್ಥಿತಿಗಳನ್ನು ಹೆಣೆಯುವ ಕಥಾ ಹಂದರವುಳ್ಳ ಕಥೆ ಇದಾಗಿದೆ.

Published by:Divya D
First published: