ಕೊನೆಯ ಹಂತದತ್ತ 'ತ್ರಿವಿಕ್ರಮ'ನ ಹೈವೋಲ್ಟೇಜ್ ಲವ್ ​ಸ್ಟೋರಿ

'ರೋಸ್' ಮತ್ತು 'ಮಾಸ್ ಲೀಡರ್'​ನಂತಹ ಚಿತ್ರಗಳಿಗೆ ಆ್ಯಕ್ಷನ್ ಕಟ್ ಹೇಳಿರುವ ಸಹನಾಮೂರ್ತಿ ಜೂನಿಯರ್ ಕ್ರೇಜಿಸ್ಟಾರ್​ರನ್ನು ಪರಿಚಯಿಸುವ ಜವಾಬ್ದಾರಿ ಹೊತ್ತುಕೊಂಡಿದ್ದಾರೆ.

ತ್ರಿವಿಕ್ರಮ ಸಿನಿಮಾದ ಶೂಟಿಂಗ್ ಬಹುತೇಕ ಮುಗಿದಿದ್ದು, ಎರಡು ಸಾಂಗ್ಸ್ ಶೂಟಿಂಗ್ ಮಾತ್ರ ಭಾಕಿ ಇದೆ. ಲಾಕ್​​ಡೌನ್ ಮುಗಿಯುತ್ತಿದ್ದಂತೆ ಹಾಡುಗಳ ಚಿತ್ರೀಕರಣ ಮುಗಿಸಿ ಸೆಪ್ಟೆಂಬರ್​ ಅಥವಾ ಅಕ್ಟೋಬರ್​​ನಲ್ಲಿ ಜೂ.ಕ್ರೇಜಿಸ್ಟಾರ್​ನ್ನು ಪರಿಚಯಿಸಲಿದ್ದಾರೆ.

ತ್ರಿವಿಕ್ರಮ ಸಿನಿಮಾದ ಶೂಟಿಂಗ್ ಬಹುತೇಕ ಮುಗಿದಿದ್ದು, ಎರಡು ಸಾಂಗ್ಸ್ ಶೂಟಿಂಗ್ ಮಾತ್ರ ಭಾಕಿ ಇದೆ. ಲಾಕ್​​ಡೌನ್ ಮುಗಿಯುತ್ತಿದ್ದಂತೆ ಹಾಡುಗಳ ಚಿತ್ರೀಕರಣ ಮುಗಿಸಿ ಸೆಪ್ಟೆಂಬರ್​ ಅಥವಾ ಅಕ್ಟೋಬರ್​​ನಲ್ಲಿ ಜೂ.ಕ್ರೇಜಿಸ್ಟಾರ್​ನ್ನು ಪರಿಚಯಿಸಲಿದ್ದಾರೆ.

  • Share this:
ಕ್ರೇಜಿಸ್ಟಾರ್‌ ರವಿಚಂದ್ರನ್‌ ಫ್ಯಾಮಿಲಿಯಿಂದ ಮತ್ತೊಬ್ಬರು ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಡ್ತಿರೋದು ನಿಮಗೆ ಗೊತ್ತೇ ಇದೆ. ತ್ರಿವಿಕ್ರಮ ಚಿತ್ರದ ಮೂಲಕ ರವಿಚಂದ್ರನ್‌ ಎರಡನೇ ಪುತ್ರ ವಿಕ್ರಮ್‌ ಭರ್ಜರಿಯಾಗಿಯೇ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ.

ಕಳೆದ ತಿಂಗಳು ವಾಲೆಂಟೈನ್ಸ್ ಡೇ ಪ್ರಯುಕ್ತ ಕಲರ್​ಫುಲ್ ಪೋಸ್ಟರ್​ಗಳಿಂದ ಗಮನ ಸೆಳೆದಿದ್ದ ತ್ರಿವಿಕ್ರಮ ಇದೀಗ ಹೊಸ ಅಪ್​ಡೇಟ್​ನೊಂದಿಗೆ ಬಂದಿದ್ದಾನೆ. ಅದೇನಂದರೆ ತ್ರಿವಿಕ್ರಮ ಚಿತ್ರತಂಡ ಡಬ್ಬಿಂಗ್‌ ಕಾರ್ಯ ಆರಂಭಿಸಿದೆ. ಚಿತ್ರದ ಶೂಟಿಂಗ್ ಮುಗಿಯುವ ಹಂತಕ್ಕೆ ಬಂದಿದ್ದು, ಈಗಾಗಲೇ ಪ್ರಮುಖ ಪಾತ್ರಗಳ ಡಬ್ಬಿಂಗ್ ಶುರು ಮಾಡಿಕೊಂಡಿದ್ದಾರೆ.

ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಪುತ್ರನ ಮೊದಲ ಚಿತ್ರ ಅಂದಕೂಡಲೇ ಸ್ಯಾಂಡಲ್​ವುಡ್​ನಲ್ಲಿ ನಿರೀಕ್ಷೆಗಳು ಹೆಚ್ಚಿರುತ್ತವೆ. ಸಾಂಗ್ ಟೀಸರ್ ಮತ್ತು ಹೊಸ ಲುಕ್​ನ ಪೋಸ್ಟರ್ಸ್ ಈ ಚಿತ್ರದ ಮೇಲೆ ನಿರೀಕ್ಷೆ ಹೆಚ್ಚು ಮಾಡಿದ್ದು ಸುಳ್ಳಲ್ಲ. ಹೀಗಾಗಿ ನಿರ್ದೇಶಕ ಸಹನಾಮೂರ್ತಿ ಹೆಚ್ಚು ಟೈಮ್‌ ತೆಗೆದುಕೊಂಡು ಶೂಟಿಂಗ್ ಮಾಡಿದ್ದಾರೆ.

ಇನ್ನು ಚಿತ್ರತಂಡ 2 ಹಾಡಿನ ಚಿತ್ರೀಕರಣಕ್ಕಾಗಿ ಆಸ್ಟ್ರೇಲಿಯಾಗೆ ತೆರಳಲಿದ್ದಾರೆ. ವಿಕ್ರಮ್ ಮತ್ತು ಆಕಾಂಕ್ಷಾ ಶರ್ಮಾ ಲೀಡ್‌ರೋಲ್‌ನಲ್ಲಿರೋ ಈ ಚಿತ್ರದಲ್ಲಿ ದೊಡ್ಡ ತಾರಬಳಗವೇ ಇದೆ. ಹೈ ಬಜೆಟ್‌ನಲ್ಲಿ ನಿರ್ಮಾಣವಾಗ್ತಿರುವ ಈ ಚಿತ್ರಕ್ಕೆ ಬಂಡವಾಳ ಹಾಕಿರೋದು ಸೋಮಣ್ಣ. ಆರಂಭದಿಂದಲೂ ತ್ರಿವಿಕ್ರಮನ ಆರ್ಭಟ ಜೋರಾಗಿದ್ದು, ಕ್ರೇಜಿಸ್ಟಾರ್ ಕಿರಿಮಗ ಚಿತ್ರರಂಗದಲ್ಲಿ ನೆಲೆಯೂರಲಿದ್ದಾರೆ ಎಂಬ ಮಾತುಗಳು ಸಿನಿರಂಗದವರಿಂದಲೇ ಕೇಳಿಬರುತ್ತಿವೆ.
First published: