ಜೂನಿಯರ್ ಕನಸುಗಾರ ವಿಕ್ರಂ ರವಿಚಂದ್ರನ್ ಅಭಿನಯದ ಬಹು ನಿರೀಕ್ಷಿತ ಸಿನಿಮಾ ತ್ರಿವಿಕ್ರಮ. ಕೊರೋನಾ ಕಾಟ ಇಲ್ಲದೇ ಹೋಗಿದ್ದರೆ, ವಿಕ್ರಂ ಈಗಾಗಲೇ ಬೆಳ್ಳಿತೆರೆ ಮೇಲೆ ನಾಯಕನಾಗಿ ರಾರಾಜಿಸುತ್ತಿದ್ದರು. ಆದರೆ ಲಾಕ್ಡೌನ್ನಿಂದಾಗಿ ಚಿತ್ರತಂಡ ಹಾಕಿಕೊಂಡಿದ್ದ ಲೆಕ್ಕಾಚಾರವೆಲ್ಲ ತಲೆ ಕೆಳಗಾಗಿದೆ.
ಈಗಾಗಲೇ ತ್ರಿವಿಕ್ರಮ ಸಿನಿಮಾದ ಫಸ್ಟ್ಲುಕ್, ಟೀಸರ್ ಹಾಗೂ ಪೋಸ್ಟರ್ಗಳು ಚಿತ್ರದ ಬಗ್ಗೆ ಇದ್ದ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿವೆ. ಹೀಗಿರುವಾಗಲೇ ತ್ರಿವಿಕ್ರಮನಿಗೆ ವರಮಹಾಲಕ್ಷ್ಮಿ ಹಬ್ಬದಂದು ಲಕ್ಷ್ಮಿ ಕಟಾಕ್ಷ ಒಲಿದಿದೆ.
ಭಾರೀ ಮೊತ್ತಕ್ಕೆ ಸೇಲ್ ಆಯ್ತು 'ತ್ರಿವಿಕ್ರಮ' ಆಡಿಯೋ ರೈಟ್ಸ್
ತ್ರಿವಿಕ್ರಮ ಸಿನಿಮಾದ ಆಡಿಯೋ ಹಕ್ಕು 50 ಲಕ್ಷಕ್ಕೆ ಮಾರಾಟವಾಗಿದೆ. ಎ2 ಮ್ಯೂಸಿಕ್ ಆಡಿಯೋ ಸಂಸ್ಥೆ ತ್ರಿವಿಕ್ರಮನ ಹಾಡುಗಳನ್ನು ಕೇಳಿದ ನಂತರ ಖುಷಿಯಾಗಿ ಖರೀದಿಸಿದೆಯಂತೆ.
ಕೈಯಲ್ಲಿ ಮಲ್ಲಿಗೆ ಹೂವು, ಪೆಪ್ಪರ್ಮಿಂಟ್ ಹಿಡಿದು ರತ್ನನ್ಪ್ರಪಂಚಕ್ಕೆ ಕಾಲಿಟ್ಟ ಧನಂಜಯ್..!
ಈ ಸಿನಿಮಾದಲ್ಲಿ ಒಟ್ಟು 6 ಹಾಡುಗಳಿದ್ದು, ನಾಗೇಂದ್ರ ಪ್ರಸಾದ್, ಚೇತನ್ ಕುಮಾರ್, ಹಾಗೂ ಯೋಗರಾಜ್ ಭಟ್ ಹಾಡುಗಳನ್ನು ಬರೆದಿದ್ದಾರೆ. ಅರ್ಜುನ್ ಜನ್ಯ ಸಂಗೀತ ನಿರ್ದೇಶನ ಮಾಡಿದ್ದು, ವಿಜಯ್ ಪ್ರಕಾಶ್, ಹಾಗೂ ಸಂಚಿತ್ ಹೆಗಡೆ ಹಾಡುಗಳಿಗೆ ದನಿಯಾಗಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ