ನಟ ಕಮಲ ಹಾಸನ್ (Kamala Hassan) ಅವರು ಸುಮಾರು ವರ್ಷಗಳ ನಂತರ ಇದೀಗ ಮತ್ತೆ ನಟನೆಗೆ ಮರಳಿ ವಿಕ್ರಮ್ (Vikram) ಚಿತ್ರದ ಮೂಲಕ ಮಾಸ್ ಎಂಟ್ರಿ ಕೊಟ್ಟಿದ್ದಾರೆ. ಇದೊಂದು ಪಕ್ಕ ಮಾಸ್ ಆಕ್ಷನ್ (Action) ಸಿನಿಮಾ ಎಂದು ಟ್ರೈಲರ್ ನೋಡಿದಾಗಲೇ ಗೊತ್ತಾಗುತ್ತಿತ್ತು. ಲೋಕೇಶ್ ಕನಗರಾಜನ್ (Lokesh Kangarajan) ನಿರ್ದೇಶನದಲ್ಲಿ ಮೂಡಿಬಂದ ಈ ಸಿನಿಮಾವು 2022ರ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಒಂದಾಗಿದೆ. ಕಮಲ್ ಹಾಸನ್, ವಿಜಯ್ ಸೇತುಪತಿ (Vijay Sethupathi) ಮತ್ತು ಫಹದ್ ಫಾಸಿಲ್ ಅವರ ವಿಕ್ರಮ್ ಜೂನ್ 3 ರಂದು ಥಿಯೇಟರ್ಗಳಿಗೆ ಆಗಮಿಸಿತು. ತಮಿಳುನಾಡಿನಾದ್ಯಂತ ಮುಂಜಾನೆ (4 am) ಪ್ರದರ್ಶನಗಳನ್ನು ವೀಕ್ಷಿಸಲು ಸಾವಿರಾರು ಅಭಿಮಾನಿಗಳು ಥಿಯೇಟರ್ಗಳಿಗೆ ಆಗಮಿದ್ದಾರೆ.
ಕೆಲವು ನೆಟಿಜನ್ಗಳು ವಿಕ್ರಮ್ ಅತ್ಯುತ್ತಮ ಆಕ್ಷನ್ ಎಂಟರ್ಟೈನರ್ ಎಂದು ಕರೆದಿದ್ದಾರೆ. ಅನೇಕರು ಕಮಲ್ ಹಾಸನ್, ವಿಜಯ್ ಸೇತುಪತಿ ಮತ್ತು ಫಹದ್ ಫಾಸಿಲ್ ಅವರ ಅಭಿನಯವನ್ನು ಮೆಚ್ಚಿದ್ದಾರೆ. ಅದೇ ರೀತಿ ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ಮಿಂಚಿದ ಸೂರ್ಯ ನಟನೆಗೆ ಅಭಿಮಾನಿಗಳು ಸೋತಿದ್ದಾರೆ.
'ರಾಜ್ ಕಮಲ್ ಫಿಲ್ಮ್ಸ್ ಇಂಟರ್ನ್ಯಾಷನಲ್' ಬ್ಯಾನರ್ ಮೂಲಕ ನಿರ್ಮಾಣ ಆಗಿದೆ.ನಿರ್ದೇಶಕ ಲೋಕೇಶ್ ಕನಗರಾಜ್ ಅವರ ಮೇಲೆ ಅಭಿಮಾನಿಗಳು ಅತಿಯಾದ ನಿರೀಕ್ಷೆ ಇಟ್ಟುಕೊಂಡಿದ್ದರು. ಆ ನಿರೀಕ್ಷೆಯ ಮಟ್ಟವನ್ನು ತಲುಪುವಲ್ಲಿ ಅವರು ಯಶಸ್ವಿ ಆಗಿದ್ದಾರೆ ಎಂಬ ಅಭಿಪ್ರಾಯ ಅಭಿಮಾನಿಗಳಿಂದ ಕೇಳಿಬಂದಿದೆ. 'ಇದು ನಿಜವಾಗಿಯೂ ಲೋಕೇಶ್ ಕನಗರಾಜ್ ಶೈಲಿಯ ಚಿತ್ರ. ಒಂದು ಮ್ಯಾಜಿಕ್ ರೀತಿಯಲ್ಲಿ ಇದೆ' ಎಂದು ಪ್ರೇಕ್ಷಕರು ಟ್ವೀಟ್ ಮಾಡಿದ್ದಾರೆ.
ಸಿನಿಮಾದ ಮೇಕಿಂಗ್ ಕೂಡ ಎಲ್ಲರ ಗಮನ ಸೆಳೆಯುತ್ತಿದೆ
ಸಿನಿಮಾದ ಸಾಹಸ ದೃಶ್ಯಗಳು ಮತ್ತು ಚೇಸಿಂಗ್ ದೃಶ್ಯಗಳನ್ನು ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ. ಜೊತೆಗೆ ಸಿನಿಮಾದ ಮೇಕಿಂಗ್ ಕೂಡ ಎಲ್ಲರ ಗಮನ ಸೆಳೆಯುತ್ತಿದೆ. ಒಂದು ಹಾಡಿನ ಮೂಲಕ ಕಮಲ್ ಹಾಸನ್ ಪಾತ್ರದ ಎಂಟ್ರಿ ಆಗುತ್ತದೆ. ಇದು ಅವರ ಅಭಿಮಾನಿಗಳಿಗೆ ಇಷ್ಟ ಆಗುವಂತಿದೆ.
ಕಮಲ್ ಹಾಸನ್ ಅವರಿಗೆ ಇದೊಂದು ಬೆಸ್ಟ್ ಕಮ್ ಬ್ಯಾಕ್ ಸಿನಿಮಾ
ಮೊದಲಾರ್ಧದ ಕೊನೆಯಲ್ಲಿ ಒಂದು ಸಸ್ಪೆನ್ಸ್ ಬಹಿರಂಗ ಆಗುತ್ತದೆ. ಅದನ್ನು ನೋಡಿದ ಪ್ರೇಕ್ಷಕರಿಗೆ ಸೆಕೆಂಡ್ ಹಾಫ್ ಮೇಲಿನ ಕೌತುಕ ಹೆಚ್ಚುತ್ತದೆ. ಕಮಲ್ ಹಾಸನ್ ಅವರಿಗೆ ಇದೊಂದು ಬೆಸ್ಟ್ ಕಮ್ ಬ್ಯಾಕ್ ಸಿನಿಮಾ ಆಗುವ ಎಲ್ಲ ಸಾಧ್ಯತೆ ಸೂಚನೆಯು ಆರಂಭದ ದಿನವೇ ಮನದಟ್ಟಾಗುತ್ತಿದೆ.
ಮಲಯಾಳಂನ ಸ್ಟಾರ್ ನಟ ಫಹಾದ್ ಫಾಸಿಲ್ ಮಾಡಿರುವ ಪಾತ್ರ ಸಖತ್ ಹೈಲೈಟ್
ಮಲಯಾಳಂನ ಸ್ಟಾರ್ ನಟ ಫಹಾದ್ ಫಾಸಿಲ್ ಮಾಡಿರುವ ಪಾತ್ರ ಸಖತ್ ಹೈಲೈಟ್ ಆಗಿದೆ. ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಅವರು ಯಶಸ್ವಿಯಾಗಿದ್ದಾರೆ. ಇನ್ನೂ ಅವರು ಮಾಡಿದ ಅಮರ್ ಪಾತ್ರ ಮೊದಲಾರ್ಧದುದ್ದಕ್ಕೂ ಸಾಗುತ್ತದೆ. ವಿಜಯ್ ಸೇತುಪತಿ ವಿಲನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಕಲಾವಿದರ ಕಾಂಬಿನೇಷನ್ ಕಾರಣದಿಂದ ಚಿತ್ರಕ್ಕೆ ಹೈವೋಲ್ಟೇಜ್ ಬಂದಂತೆ ಆಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ