Amazon Primeನಲ್ಲಿ ಬರ್ತಿದ್ದಾನೆ ‘ಮಹಾ ಪುರುಷ’, ಕನ್ನಡಕ್ಕೂ ಡಬ್ ಆಗಿದೆ ವಿಕ್ರಮ್ ಚಿತ್ರ

ತಮಿಳು ನಟ ವಿಕ್ರಮ್ ಅಭಿನಯ ಮಹಾ ಪುರುಷ ಚಿತ್ರದಲ್ಲಿ ಅಪ್ಪ-ಮಗ ಒಟ್ಟಿಗೆ ಕಾಣಿಸಿಕೊಳ್ತಿದ್ದಾರೆ. ಕನ್ನಡದಲ್ಲಿಯೂ ಚಿತ್ರ ಬಿಡುಗಡೆಗೆ ರೆಡಿಯಾಗಿದೆ.

ಮಹಾಮಪುರುಷ ಪೋಸ್ಟರ್

ಮಹಾಮಪುರುಷ ಪೋಸ್ಟರ್

  • Share this:
ತಮಿಳು ನಟ ವಿಕ್ರಮ್ (Tamil actor Vikram) ಅಭಿನಯದ ಬಹುನಿರೀಕ್ಷಿತ ಆಕ್ಷನ್ ಡ್ರಾಮಾ ಮಹಾ ಪುರುಷ (Maha purusha) ರಿಲೀಸ್​ಗೆ ರೆಡಿಯಾಗಿದೆ. ಚಿತ್ರತಂಡ ತಮಿಳಿನ ಮಹಾನ್​ ಸಿನಿಮಾ ಬಿಡುಗಡೆಯ ಡೇಟ್ ಘೋಷಣೆ ಮಾಡಿದೆ. ​ಫೆಬ್ರವರಿ 10ರಂದು ಅಮೆಜಾನ್​ ಪ್ರೈಮ್​ ವಿಡಿಯೋ (Amazon prime video) ದಲ್ಲಿ ಚಿತ್ರ ವಿಶ್ವದಾದ್ಯಂತ ಪ್ರೀಮಿಯರ್​ (Premier) ಆಗಲಿದೆ. ಕನ್ನಡ, ತಮಿಳು, ತೆಲುಗು, ಮಲಯಾಳಂ ಭಾಷೆಗಳಲ್ಲಿ ಚಿತ್ರ ಬಿಡುಗಡೆಯಾಗ್ತಿದೆ. ಮಹಾ ಪುರುಷ ಹೆಸರಿನಲ್ಲಿ ಕನ್ನಡಕ್ಕೆ ಈ ಚಿತ್ರವನ್ನು ಡಬ್​ ಮಾಡಲಾಗಿದೆ. ಈ ಚಿತ್ರದಲ್ಲಿ ತಮಿಳು ನಟ ವಿಕ್ರಮ್ ಮತ್ತು ಅವರ ಪುತ್ರ ಧ್ರುವ್ ವಿಕ್ರಮ್ (Dhruv vikram)​ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಈ ಚಿತ್ರಕ್ಕೆ ಕಾರ್ತಿಕ್ ಸುಬ್ಬರಾಜ್​ ಆ್ಯಕ್ಷನ್ ಕಟ್​​ ಹೇಳಿದ್ದಾರೆ. ಈ ಚಿತ್ರ ಸಾಮಾನ್ಯ ಮನುಷ್ಯನ ಜೀವನದಲ್ಲಿ ನಡೆಯೋ ಕಥೆಯನ್ನೇ ಆಧರಿಸಿದೆ.

ಒಂದೇ ಫ್ರೇಮ್​ನಲ್ಲಿ ಮಿಂಚಿದ ಅಪ್ಪ-ಮಗ

ತಮಿಳು ನಟ ವಿಕ್ರಮ್ ಮತ್ತು ಅವರ ಪುತ್ರ ಧ್ರುವ್​ ವಿಕ್ರಮ್ ಒಟ್ಟಿಗೆ ಸಿನಿಮಾ ಮಾಡ್ತಾರೆ ಎಂದಾಗಲೇ ನಿರೀಕ್ಷೆ ಜೋರಾಗಿತ್ತು. ಇದೀಗ ವಿಕ್ರಮ್​ ಅಭಿಮಾನಿಳು ಮಗನ ಜೊತೆ ತಂದೆಯ​ ಅಭಿನಯ ನೋಡಲು ಕಾತುರದಿಂದ ಕಾಯ್ತಿದ್ದಾರೆ. ಮಹಾನ್ ಪುರುಷ ಚಿತ್ರದಲ್ಲಿ ಬಾಬಿ ಸಿಂಹ ಹಾಗೂ ಸಿಮ್ರನ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಆಕ್ಷನ್​ ಡಾಮ್ರಾ ಮಹಾ ಪುರುಷ

ಲಲಿತ್ ಕುಮಾರ್ ನಿರ್ಮಾಣ ಮಾಡಿರೋ ಮಹಾ ಪುರುಷ ಸಿನಿಮಾವು ಸಾಮಾನ್ಯ ಮನುಷ್ಯನ ಇಡೀ ಜೀವನವನ್ನು ಮತ್ತು ಅವನ ಸುತ್ತಲಿನ ಎಲ್ಲ ಜನರನ್ನು ಪರಿವರ್ತಿಸುವ ಘಟನಾ ಸರಣಿಯ ನಿರೂಪಣೆಯಾಗಿದೆ' ಎಂದು ಚಿತ್ರತಂಡ ಹೇಳಿಕೊಂಡಿದೆ. ವೈಯಕ್ತಿಕ ಸ್ವಾತಂತ್ರ್ಯದ ಹುಡುಕಾಟ, ಸೈದ್ಧಾಂತಿಕ ಬದುಕಿನ ಹೋರಾಟ, ರೋಮಾಂಚಕ, ಸಾಹಸಮಯ ಪ್ರಯಾಣ, ಅನಿರೀಕ್ಷಿತ ಘಟನೆಗಳು ಹೀಗೆ ಸಾಕಷ್ಟು ವಿಶಿಷ್ಠ ಅಂಶಗಳನ್ನು ಇಟ್ಟುಕೊಂಡು ಈ ಸಿನಿಮಾ ಸಾಗಲಿದೆ.

ಇದನ್ನೂ ಓದಿ: Weekend Planner: ಸಿನಿರಸಿಕರಿಗೆ ಈ ವಾರ OTT ಕಿಕ್, 20ಕ್ಕೂ ಹೆಚ್ಚು ಸಿನಿಮಾ, ಸೀರಿಸ್​ ರಿಲೀಸ್..ಮನೆಯಲ್ಲೇ ಮಸ್ತ್ ಮಜಾ ಮಾಡಿ!

ಫೆಬ್ರವರಿ 10ಕ್ಕೆ ಚಿತ್ರ ರಿಲೀಸ್

'ಪ್ರೈಮ್ ವಿಡಿಯೋದಲ್ಲಿ ಈ ಸಿನಿಮಾ ಪ್ರೀಮಿಯರ್ ಆಗುತ್ತಿರುವುದರ ಬಗ್ಗೆ ನಾನು ಉತ್ಸುಕನಾಗಿದ್ದೇನೆ. ಕಾರ್ತಿಕ್ ಸುಬ್ಬರಾಜ್ ಅವರು ಈ ಸಿನಿಮಾ ಮೂಲಕ ಆಕ್ಷನ್, ಡ್ರಾಮಾ ಮತ್ತು ಭಾವನೆಗಳ ಪರಿಪೂರ್ಣ ಮಿಶ್ರಣವನ್ನು ರಚಿಸುವಲ್ಲಿ ಅಸಾಧಾರಣ ಕೆಲಸವನ್ನು ಮಾಡಿದ್ದಾರೆ. ಈ ಚಿತ್ರವು ಪ್ರತಿಭಾವಂತ ಮತ್ತು ಅದ್ಭುತವಾದ ತಾರಾಬಳಗವನ್ನು ಹೊಂದಿದೆ. ಎಲ್ಲರ ಅದ್ಭುತವಾದ ಅಭಿನಯವನ್ನು ಪ್ರೇಕ್ಷಕರು ಮೆಚ್ಚುತ್ತಾರೆ ಎಂಬ ನಂಬಿಕೆ ಇದೆ' ಎಂದು ನಿರ್ಮಾಪಕ ಲಲಿತ್ ಕುಮಾರ್ ಹೇಳಿದ್ದಾರೆ.

ನಿಜ ಜೀವನದಲ್ಲಿ ತಂದೆ-ಮಗನಾಗಿರೋ ವಿಕ್ರಮ್ ಮತ್ತು ಧ್ರುವ್ ವಿಕ್ರಮ್ ಮೊದಲ ಬಾರಿಗೆ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಜೊತೆಗೆ ಬಾಬಿ ಸಿಂಹ, ವಾಣಿ ಬೋಜನ್ ಮತ್ತು ಸಿಮ್ರನ್ ಪ್ರಮುಖ ಪಾತ್ರಗಳಲ್ಲಿದ್ದಾರೆ.ಚಿತ್ರಕ್ಕೆ ಸಂತೋಷ್ ನಾರಾಯಣನ್‌ ಸಂಗೀತ ನೀಡಿದ್ದರೆ, ಶ್ರೇಯಸ್ ಕೃಷ್ಣ ಛಾಯಾಗ್ರಹಣ ಮಾಡಿದ್ದಾರೆ.

ನಾಲ್ಕು ಭಾಷೆಯಲ್ಲಿ ಮಹಾನ್ ರಿಲೀಸ್​

ಮೂಲ ತಮಿಳು ಭಾಷೆಯಲ್ಲಿ ಸಿದ್ಧಗೊಂಡಿರುವ ಈ ಸಿನಿಮಾವು ಕನ್ನಡ, ತೆಲುಗು, ಮಲಯಾಳಂ ಭಾಷೆಯಲ್ಲೂ ರಿಲೀಸ್ ಆಗಲಿದೆ. ಈಚೆಗೆ 'ಸೂರರೈ ಪೊಟ್ರು', 'ಮಾನಾಡು', 'ಅಣ್ಣಾಥೆ' ಸೇರಿದಂತೆ ಸಾಕಷ್ಟು ತಮಿಳು ಸಿನಿಮಾಗಳು ಕನ್ನಡಕ್ಕೆ ಡಬ್ ಆಗಿವೆ. ಇದೀಗ ಆ ಸಾಲಿಗೆ ವಿಕ್ರಮ್ ಅವರ ಈ ಹೊಸ ಸಿನಿಮಾವು ಸೇರ್ಪಡೆ ಆಗಲಿದೆ.

ಇದನ್ನೂ ಓದಿ: RRR: ಹೊಸ ವರ್ಷದಲ್ಲೇ ಸಿನಿರಸಿಕರಿಗೆ ಭಾರೀ ನಿರಾಸೆ: `ಆರ್​ಆರ್​ಆರ್​’ ಸಿನಿಮಾ ರಿಲೀಸ್​​ ಡೇಟ್​ ಮುಂದೂಡಿಕೆ!

ದೇಶದಾದ್ಯಂತ ಕೊರೊನಾ 3ನೇ ಅಲೆ ಅಬ್ಬರ ಜೋರಾಗಿರೋ ಹಿನ್ನೆಲೆ ಚಿತ್ರ ತಯಾರಕರೆಲ್ಲಾ ಒಟಿಟಿಗಳತ್ತ ಮುಖ ಮಾಡಿದ್ದಾರೆ. ಥಿಯೇಟರ್​ಗಳಿಗೆ ಜನ ಬರಲು ಹಿಂದೆ ಮುಂದೆ ನೋಡ್ತಾರೆ ಹೀಗಾಗಿ ಮನೆಯಲ್ಲಿ ಕುಳಿತು ಚಿತ್ರ ನೋಡಿ ಸಿನಿಮಾ ಗೆಲ್ಲಿಸಲಿ ಅಂತ ಹಲವು ಸಿನಿಮಾ ತಯಾರಕರು ಚಿತ್ರಗಳನ್ನ ಒಟಿಟಿಯಲ್ಲೇ ಬಿಡುಗಡೆ ಮಾಡ್ತಿದ್ದಾರೆ.
Published by:Pavana HS
First published: