• Home
  • »
  • News
  • »
  • entertainment
  • »
  • Vikram Ghokhale: ವಿಕ್ರಮ್ ಸಾವಿನ ಸುದ್ದಿ ಸುಳ್ಳು! ಹೇಗಿದ್ದಾರೆ ನಟ? ಪತ್ನಿ ಹೇಳಿದ್ದಿಷ್ಟು

Vikram Ghokhale: ವಿಕ್ರಮ್ ಸಾವಿನ ಸುದ್ದಿ ಸುಳ್ಳು! ಹೇಗಿದ್ದಾರೆ ನಟ? ಪತ್ನಿ ಹೇಳಿದ್ದಿಷ್ಟು

ವಿಕ್ರಮ್ ಗೋಖಲೆ-ವೃಷಾಲಿ

ವಿಕ್ರಮ್ ಗೋಖಲೆ-ವೃಷಾಲಿ

ನಟ ವಿಕ್ರಮ್ ಗೋಖಲೆ ಇನ್ನಿಲ್ಲ ಎನ್ನುವ ಸುದ್ದಿ ಎಲ್ಲೆಡೆ ಹರಿದಾಡಿದ ಬೆನ್ನಲ್ಲೇ ಅವರ ಪತ್ನಿ (Wife) ಅದರ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಹಿರಿಯ ನಟ ವಿಕ್ರಮ್ ಗೋಖಲೆ (Vikram Gokhale) ನಿಧನರಾಗಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

  • News18 Kannada
  • Last Updated :
  • Bangalore, India
  • Share this:

ಬಾಲಿವುಡ್ (Bollywood) ನಟ ವಿಕ್ರಮ್ ಗೋಖಲೆ ಇನ್ನಿಲ್ಲ ಎನ್ನುವ ಸುದ್ದಿ ಎಲ್ಲೆಡೆ ಹರಿದಾಡಿದ ಬೆನ್ನಲ್ಲೇ ಅವರ ಪತ್ನಿ (Wife) ಅದರ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಹಿರಿಯ ನಟ ವಿಕ್ರಮ್ ಗೋಖಲೆ (Vikram Gokhale) ನಿಧನರಾಗಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಆದರೆ ಅವರು ಈ ವಿಚಾರವಾಗಿ ಪ್ರತಿಕ್ರಿಯಿಸಿ, ಅವರು ಇನ್ನೂ ಜೀವಂತವಾಗಿದ್ದಾರೆ ಎಂದು ಹೇಳಿದ್ದಾರೆ. ಅವರು ನಿನ್ನೆ ಮಧ್ಯಾಹ್ನ ಕೋಮಾಕ್ಕೆ ಜಾರಿದರು. ಅವರು ಸ್ಪರ್ಶಕ್ಕೆ ಪ್ರತಿಕ್ರಿಯಿಸಲಿಲ್ಲ. ಅವರು ವೆಂಟಿಲೇಟರ್​​ನಲ್ಲಿದ್ದಾರೆ. ಅವರು ಸುಧಾರಿಸುತ್ತಿದ್ದಾರೆಯೇ ಅಥವಾ ಇನ್ನೂ ಪ್ರತಿಕ್ರಿಯಿಸುತ್ತಿಲ್ಲವೇ ಎಂಬುದನ್ನು ನೋಡಿಕೊಂಡರು ವೈದ್ಯರು (Doctors) ನಾಳೆ ಬೆಳಿಗ್ಗೆ ಏನು ಮಾಡಬೇಕೆಂದು ನಿರ್ಧರಿಸುತ್ತಾರೆ ಎಂದು ಅವರು ತಮ್ಮ ಹೇಳಿಕೆಯಲ್ಲಿ  (Statement) ತಿಳಿಸಿದ್ದಾರೆ.


ನವೆಂಬರ್ 5 ರಿಂದ ವಿಕ್ರಮ್ ಗೋಖಲೆ ಅವರು ದೀನನಾಥ್ ಮಂಗೇಶ್ಕರ್ ಆಸ್ಪತ್ರೆಯಲ್ಲಿದ್ದಾರೆ ಎಂದು ಅವರ ಪತ್ನಿ ಬಹಿರಂಗಪಡಿಸಿದ್ದಾರೆ. ಅವರು ಸ್ವಲ್ಪ ಸುಧಾರಿಸಿದ್ದರು ಆದರೆ ಮತ್ತೆ ಆರೋಗ್ಯ ಹದಗೆಟ್ಟಿದೆ. ಅವರಿಗೆ ಹೃದಯ ಮತ್ತು ಮೂತ್ರಪಿಂಡದ ಸಮಸ್ಯೆಯಂತಹ ಹಲವಾರು ಸಮಸ್ಯೆಗಳಿವೆ. ಸದ್ಯ ಅವರು ಬಹು ಅಂಗ ವೈಫಲ್ಯದಿಂದ ಬಳಲುತ್ತಿದ್ದಾರೆ ಎಂದಿದ್ದಾರೆ.


ವರದಿಯ ಪ್ರಕಾರ ತನ್ನ ಪತಿ 77ಗೆ ವರ್ಷ 82 ಅಲ್ಲ ಎಂದು ಅವರು ರಿವೀಲ್ ಮಾಡಿದ್ದಾರೆ. ಸ್ಯಾನ್ ಫ್ರಾನ್ಸಿಕೊದಿಂದ ನನ್ನ ಮಗಳು ಬಂದಿದ್ದಾಳೆ. ಇನ್ನೊಬ್ಬಳು ಇಲ್ಲಿಯೇ ಪುಣೆಯಲ್ಲಿದ್ದಾಳೆ. ಅವಳು ಮುಂಬೈನಲ್ಲಿ ವಾಸಿಸುತ್ತಾಳೆ ಎಂದಿದ್ದಾರೆ.


ಇದನ್ನೂ ಓದಿ: Kamal Haasan: ತೀವ್ರ ಜ್ವರದಿಂದ ಕಮಲ್ ಹಾಸನ್ ಆಸ್ಪತ್ರೆಗೆ ದಾಖಲು


ಲಾಕ್‌ಡೌನ್ ಸಮಯದಲ್ಲಿ ವಿಕ್ರಮ್ ಗೋಖಲೆ ಮುಂಬೈನಿಂದ ಪುಣೆಗೆ ಸ್ಥಳಾಂತರಗೊಂಡಿದ್ದರು. ಅವರು ಅಲ್ಲಿಯೇ ಇರಲು ನಿರ್ಧರಿಸಿದರು. ಕಳೆದ ಎರಡು ವರ್ಷಗಳಲ್ಲಿ ಮುಂಬೈಗೆ ಕೆಲವೇ ಸಲ ಬಂದರು ಎಂದು ವಿಕ್ರಮ್ ಗೋಖಲೆ ಅವರ ಸ್ನೇಹಿತ ತಿಳಿಸಿದ್ದಾರೆ. ದೀನನಾಥ್ ಮಂಗೇಶ್ಕರ್ ಆಸ್ಪತ್ರೆಗೆ ಕರೆ ಮಾಡಿದಾಗ ಅವರು ಆರೋಗ್ಮಾಯದ ಬಗ್ಗೆ ಮಾಹಿತಿ ರಿವೀಲ್ ಮಾಡಲು ನಿರಾಕರಿಸಿದರು.


ಭಾರತೀಯ ಸಿನಿಮಾದಲ್ಲಿ ಪ್ರಸಿದ್ಧಿ ಪಡೆದ ರಂಗ ನಟ, ಮರಾಠಿ ರಂಗಭೂಮಿ ಮತ್ತು ಹಿಂದಿ ಚಲನಚಿತ್ರಗಳು ಮತ್ತು ದೂರದರ್ಶನದಲ್ಲಿ ಅವರ ಪಾತ್ರಗಳಿಂದ ವ್ಯಾಪಕವಾಗಿ ಮೆಚ್ಚುಗೆ ಗಳಿಸಿದ್ದಾರೆ. ಅವರು ಮರಾಠಿ ರಂಗಭೂಮಿ ಮತ್ತು ಚಲನಚಿತ್ರ ನಟ ಚಂದ್ರಕಾಂತ್ ಗೋಖಲೆಯವರ ಪುತ್ರ ಎನ್ನುವುದು ಗಮನಾರ್ಹ.


2010ರಲ್ಲಿ ನಿರ್ದೇಶನ ಆರಂಭ


ಗೋಖಲೆಯವರು 2010 ರಲ್ಲಿ ಮರಾಠಿ ಸಿನಿಮಾ ಆಗಾತ್ ಮೂಲಕ ತಮ್ಮ ನಿರ್ದೇಶನವನ್ನು ಪ್ರಾರಂಭಿಸಿದರು. ಸ್ಪ್ರಿಂಟ್ ಆರ್ಟ್ಸ್ ಕ್ರಿಯೇಷನ್ ​​ಮತ್ತು ಕಾರ್ಯಕಾರಿ ನಿರ್ಮಾಪಕ ರಾಜೇಶ್ ಡಾಂಬಲ್ ನಿರ್ಮಿಸಿದ ಈ ಸಿನಿಮಾ ಡಾ. ನಿತಿನ್ ಲಾವಂಗರೆ ಬರೆದ ಕಥೆಯನ್ನು ಆಧರಿಸಿದೆ. ಚಿತ್ರದ ಪಾತ್ರವರ್ಗದಲ್ಲಿ ನಟರಾದ ಮುಕ್ತಾ ಬರ್ವೆ ಮತ್ತು ಡಾ. ಅಮೋಲ್ ಕೋಲ್ಹೆ ಇದ್ದರು. ಈ ಸಿನಿಮಾ ಪುಣೆಯಲ್ಲಿ ಶೂಟ್ ಮಾಡಲಾಗಿದೆ.


ಗೋಖಲೆ ಅವರಿಗೆ 2011 ರಲ್ಲಿ ಅವರ ರಂಗಭೂಮಿ ನಟನೆಗಾಗಿ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ನೀಡಲಾಯಿತು. ಇದನ್ನು ಸಂಗೀತ ನಾಟಕ ಅಕಾಡೆಮಿ, ಭಾರತದ ಸಂಗೀತ, ನೃತ್ಯ ಮತ್ತು ನಾಟಕದ ರಾಷ್ಟ್ರೀಯ ಅಕಾಡೆಮಿಯು ನೀಡಿತು. 2013 ರಲ್ಲಿ, ಅವರು ತಮ್ಮ ಮರಾಠಿ ಸಿನಿಮಾಗಾಗಿ ಅತ್ಯುತ್ತಮ ನಟ ವಿಭಾಗದಲ್ಲಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಪಡೆದರು.


ಹಿರಿಯ ನಟನ ಆರೋಗ್ಯದಲ್ಲಿ ಸಮಸ್ಯೆಯಾಗಿರುವುದು ಅವರ ಅಭಿಮಾನಿಗಳಲ್ಲಿ ಆತಂಕ ಸೃಷ್ಟಿಸಿದೆ. ಎಲ್ಲರೂ ಅವರು ಶೀಘ್ರ ಗುಣಮುಖರಾಗಲಿ ಎಂದು ಸೋಷಿಯಲ್ ಮೀಡಿಯಾದಲ್ಲಿ ಹಾರೈಸಿದ್ದಾರೆ. ಅವರ ಆರೋಗ್ಯ ಕುರಿತ ಹೆಚ್ಚಿ ಅಪ್ಡೇಟ್ ಇನ್ನಷ್ಟೇ ಹೊರ ಬೀಳಬೇಕಾಗಿದೆ.

Published by:Divya D
First published: