• Home
  • »
  • News
  • »
  • entertainment
  • »
  • Vikram Gokhale Passes Away: ಹಿರಿಯ ನಟ ವಿಕ್ರಮ್ ಗೋಖಲೆ ಇನ್ನಿಲ್ಲ

Vikram Gokhale Passes Away: ಹಿರಿಯ ನಟ ವಿಕ್ರಮ್ ಗೋಖಲೆ ಇನ್ನಿಲ್ಲ

ವಿಕ್ರಮ್ ಗೋಖಲೆ

ವಿಕ್ರಮ್ ಗೋಖಲೆ

ವೆಂಟಿಲೇಟರ್ ಬೆಂಬಲದಲ್ಲಿದ್ದ ಬಾಲಿವುಡ್ ಹಿರಿಯ ನಟ ವಿಕ್ರಮ್ ಗೋಖಲೆ ಅವರು ಪುಣೆಯಲ್ಲಿ ನಿಧನರಾಗಿದ್ದಾರೆ. ಅವರ ಅಂತ್ಯಕ್ರಿಯೆ ಪುಣೆಯಲ್ಲಿ ನಡೆಯಲಿದೆ.

  • News18 Kannada
  • Last Updated :
  • Bangalore, India
  • Share this:

ಪುಣೆಯ (Pune) ಆಸ್ಪತ್ರೆಯಲ್ಲಿ ಚಿಕಿತ್ಸೆ (Treatment) ಪಡೆಯುತ್ತಿದ್ದ ಹಿರಿಯ ನಟ ವಿಕ್ರಮ್ ಗೋಖಲೆ (77) (Vikram Gokhale) ಅವರು ನವೆಂಬರ್ 26ರಂದು ಶನಿವಾರ ನಿಧನರಾಗಿದ್ದಾರೆ (Dead) ಎಂದು ಅವರ ಕುಟುಂಬ ದೃಢಪಡಿಸಿದೆ. ಅವರ ಪಾರ್ಥಿವ ಶರೀರವನ್ನು ಕುಟುಂಬ ಮತ್ತು ಸ್ನೇಹಿತರ ಅಂತಿಮ ದರ್ಶನಕ್ಕಾಗಿ ಸಂಜೆ 4 ಗಂಟೆಗೆ ಪುಣೆಯ ಬಾಲಗಂಧರ್ವ ರಂಗಮಂದಿರದಲ್ಲಿ ಇರಿಸಲಾಗುವುದು ಎಂದು ಹೇಳಲಾಗಿದೆ. ಸಂಜೆ 6 ಗಂಟೆಗೆ ಪುಣೆಯ ವೈಕುಂಠ ಸ್ಮಶಾನ ಭೂಮಿಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ. ಹಿರಿಯ ನಟ ಆರೋಗ್ಯ (Health) ಸುಧಾರಣೆಯ ಕೆಲವು ಲಕ್ಷಣಗಳನ್ನು ತೋರಿಸುತ್ತಿದ್ದಾರೆ ಎಂದು ಆಸ್ಪತ್ರೆಯ ಅಧಿಕಾರಿಗಳು ಹೇಳಿದ್ದರು. ಆದರೆ ಶನಿವಾರ ಅವರ ಆರೋಗ್ಯ ಹದಗೆಟ್ಟಿತು.  ಅವರನ್ನು ಮತ್ತೆ ವೆಂಟಿಲೇಟರ್ ಬೆಂಬಲಕ್ಕೆ ಇರಿಸಲಾಗಿತ್ತು.


ಕೆಲವು ದಿನಗಳ ಹಿಂದೆ ನಟ ಸಾವನ್ನಪ್ಪಿರುವ ಸುದ್ದಿ ಹರಡಿತ್ತು. ಬಾಲಿವುಡ್ ನಟ ವಿಕ್ರಮ್ ಗೋಖಲೆ ಇನ್ನಿಲ್ಲ ಎನ್ನುವ ಸುದ್ದಿ ಎಲ್ಲೆಡೆ ಹರಿದಾಡಿದ ಬೆನ್ನಲ್ಲೇ ಅವರ ಪತ್ನಿ ಪ್ರತಿಕ್ರಿಯಿಸಿ ಸ್ಪಷ್ಟನೆ ಕೊಟ್ಟಿದ್ದರು. ಅವರು ಇನ್ನೂ ಜೀವಂತವಾಗಿದ್ದಾರೆ ಎಂದು ವಿಕ್ರಮ್ ಗೋಖಲೆ ಪತ್ನಿ ಹೇಳಿದ್ದರು.


ಇದನ್ನೂ ಓದಿ: Vikram Ghokhale: ವಿಕ್ರಮ್ ಸಾವಿನ ಸುದ್ದಿ ಸುಳ್ಳು! ಹೇಗಿದ್ದಾರೆ ನಟ? ಪತ್ನಿ ಹೇಳಿದ್ದಿಷ್ಟು


ಚಿಕಿತ್ಸೆ ಪಡೆಯುವಾಗಲೇ ನಟ ಕೋಮಾಕ್ಕೆ ಜಾರಿದರು. ಅವರು ಸ್ಪರ್ಶಕ್ಕೆ ಪ್ರತಿಕ್ರಿಯಿಸಲಿಲ್ಲ. ಅವರು ವೆಂಟಿಲೇಟರ್​​ನಲ್ಲಿದ್ದಾರೆ ಎಂದು ಅವರ ಪತ್ನಿ ತಮ್ಮ ಹೇಳಿಕೆಯಲ್ಲಿ (Statement) ತಿಳಿಸಿದ್ದರು.


ನವೆಂಬರ್ 5ಕ್ಕೆ ಆಸ್ಪತ್ರೆಗೆ ದಾಖಲು


ನವೆಂಬರ್ 5ನೇ ತಾರೀಕಿನಿಂದ ವಿಕ್ರಮ್ ಗೋಖಲೆ ಅವರು ದೀನನಾಥ್ ಮಂಗೇಶ್ಕರ್ ಆಸ್ಪತ್ರೆಯಲ್ಲಿದ್ದಾರೆ ಎಂದು ಅವರ ಪತ್ನಿ ತಿಳಿಸಿದ್ದಾರೆ. ಅವರು ಸ್ವಲ್ಪ ಸುಧಾರಿಸಿದ್ದರು . ಮತ್ತೆ ಆರೋಗ್ಯ ಹದಗೆಟ್ಟಿದೆ. ಅವರಿಗೆ ಹೃದಯ ಮತ್ತು ಮೂತ್ರಪಿಂಡದ ಸಮಸ್ಯೆಯಂತಹ ಹಲವಾರು ಸಮಸ್ಯೆಗಳಿವೆ. ಸದ್ಯ ಅವರು ಬಹು ಅಂಗ ವೈಫಲ್ಯದಿಂದ ಬಳಲುತ್ತಿದ್ದಾರೆ ಎಂದಿದ್ದಾರೆ ಎಂದಿದ್ದರು. ಈಗ ನಟ ಬಹುಅಂಗ ವೈಫಲ್ಯದಿಂದ ಮೃತಪಟ್ಟಿದ್ದಾರೆ.


ಸ್ಯಾನ್ ಫ್ರಾನ್ಸಿಕೊದಿಂದ ನಟನ ಮಗಳು ಬಂದಿದ್ದಾರೆ. ಇನ್ನೊಬ್ಬರು ಪುಣೆಯಲ್ಲಿದ್ದಾರೆ. ಅವರು ಮುಂಬೈನಲ್ಲಿ ವಾಸಿಸುತ್ತಾರೆ.


ಭಾರತೀಯ ಸಿನಿಮಾದಲ್ಲಿ ಪ್ರಸಿದ್ಧಿ ಪಡೆದ ಗೋಖಲೆ ಅವರು ಮರಾಠಿ ರಂಗಭೂಮಿ ಮತ್ತು ಹಿಂದಿ ಸಿನಿಮಾ ಮತ್ತು ಕಿರುತೆರೆಯಲ್ಲಿ ಅವರ ಪಾತ್ರಗಳಿಂದ ವ್ಯಾಪಕವಾಗಿ ಮೆಚ್ಚುಗೆ ಗಳಿಸಿದ್ದಾರೆ. ಅವರು ಮರಾಠಿ ರಂಗಭೂಮಿ ಮತ್ತು ಚಲನಚಿತ್ರ ನಟ ಚಂದ್ರಕಾಂತ್ ಗೋಖಲೆಯವರ ಪುತ್ರ ಎನ್ನುವುದು ಗಮನಾರ್ಹ.


2010ರಲ್ಲಿ ನಿರ್ದೇಶನ ಆರಂಭ


ಗೋಖಲೆಯವರು 2010 ರಲ್ಲಿ ಮರಾಠಿ ಸಿನಿಮಾ ಆಗಾತ್ ಮೂಲಕ ತಮ್ಮ ನಿರ್ದೇಶನವನ್ನು ಪ್ರಾರಂಭಿಸಿದರು. ಸ್ಪ್ರಿಂಟ್ ಆರ್ಟ್ಸ್ ಕ್ರಿಯೇಷನ್ ​​ಮತ್ತು ನಿರ್ಮಾಪಕ ರಾಜೇಶ್ ಡಾಂಬಲ್ ನಿರ್ಮಿಸಿದ ಈ ಸಿನಿಮಾ ಡಾ. ನಿತಿನ್ ಲಾವಂಗರೆ ಬರೆದ ಕಥೆಯನ್ನು ಆಧರಿಸಿದೆ. ಚಿತ್ರದ ಪಾತ್ರವರ್ಗದಲ್ಲಿ ನಟರಾದ ಮುಕ್ತಾ ಬರ್ವೆ ಮತ್ತು ಡಾ. ಅಮೋಲ್ ಕೋಲ್ಹೆ ಇದ್ದರು. ಈ ಸಿನಿಮಾ ಪುಣೆಯಲ್ಲಿ ಚಿತ್ರೀಕರಿಸಲಾಗಿದೆ.


ಗೋಖಲೆ ಅವರಿಗೆ 2011 ರಲ್ಲಿ ಅವರ ರಂಗಭೂಮಿ ನಟನೆಗಾಗಿ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ನೀಡಲಾಯಿತು. ಇದನ್ನು ಸಂಗೀತ ನಾಟಕ ಅಕಾಡೆಮಿ, ಭಾರತದ ಸಂಗೀತ, ನೃತ್ಯ ಮತ್ತು ನಾಟಕದ ರಾಷ್ಟ್ರೀಯ ಅಕಾಡೆಮಿ ಈ ಪ್ರಶಸ್ತಿ ನೀಡಿತು. 2013 ರಲ್ಲಿ, ಅವರು ತಮ್ಮ ಮರಾಠಿ ಸಿನಿಮಾಗಾಗಿ ಅತ್ಯುತ್ತಮ ನಟ ವಿಭಾಗದಲ್ಲಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಪಡೆದರು.




ಹಿರಿಯ ನಟನ ಆರೋಗ್ಯದಲ್ಲಿ ಸಮಸ್ಯೆಯಾಗಿರುವುದು ಅವರ ಅಭಿಮಾನಿಗಳಲ್ಲಿ ಆತಂಕ ಸೃಷ್ಟಿಸಿದೆ. ಎಲ್ಲರೂ ಅವರು ಶೀಘ್ರ ಗುಣಮುಖರಾಗಲಿ ಎಂದು ಸೋಷಿಯಲ್ ಮೀಡಿಯಾದಲ್ಲಿ ಹಾರೈಸಿದ್ದಾರೆ. ಅವರ ಆರೋಗ್ಯ ಕುರಿತ ಹೆಚ್ಚಿ ಅಪ್ಡೇಟ್ ಇನ್ನಷ್ಟೇ ಹೊರ ಬೀಳಬೇಕಾಗಿದೆ.

Published by:Divya D
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು