Vikram: ಹಿಟ್​ ಆಗಿದ್ದು ಕಮಲ್ ಸಿನಿಮಾ, ಪಾರ್ಟಿ ಕೊಟ್ಟಿದ್ದು ಮೆಗಾಸ್ಟಾರ್​! ಇವ್ರಿಗ್​ ಸಾಥ್​ ಕೊಟ್ರು ಸಲ್ಲು ಭಾಯ್​

Megastar Chiranjeevi: ಇನ್ನು ಕಮಲ್ ಹಾಸನ್ ಹಾಗೂ ಮೆಗಾಸ್ಟಾರ್ ಚಿರಂಜೀವಿ ಅವರ ಸ್ನೇಹ ಮೊದಲಿನಿಂದಲೂ ಬಹಳ ಚೆನ್ನಾಗಿದೆ. ಇಬ್ಬರೂ ಕೂಡ ಒಬ್ಬರಿಗೊಬ್ಬರಿಗೆ ಸಹಾಯ ಹಾಗೂ ಸಹಕಾರ ಮಾಡುತ್ತಾ ಬಂದಿದ್ದಾರೆ.

ಕಮಲ್ ಹಾಸನ್, ಸಲ್ಮಾನ್ ಖಾನ್, ಚಿರಂಜೀವಿ

ಕಮಲ್ ಹಾಸನ್, ಸಲ್ಮಾನ್ ಖಾನ್, ಚಿರಂಜೀವಿ

  • Share this:
ನಟ ಕಮಲ ಹಾಸನ್ (Kamala Hassan) ಅವರು ಸುಮಾರು ವರ್ಷಗಳ ನಂತರ ಇದೀಗ ಮತ್ತೆ ನಟನೆಗೆ ಮರಳಿ ವಿಕ್ರಮ್ (Vikram) ಚಿತ್ರದ ಮೂಲಕ‌ ಮಾಸ್ ಎಂಟ್ರಿ ಕೊಟ್ಟಿದ್ದಾರೆ. ಇದೊಂದು ಪಕ್ಕ ಮಾಸ್ ಆಕ್ಷನ್ (Action) ಸಿನಿಮಾ ಎಂದು ಟ್ರೈಲರ್ ನೋಡಿದಾಗಲೇ ಗೊತ್ತಾಗುತ್ತಿತ್ತು. ಬಿಡುಗಡೆಯ ನಂತರ ಸಿನಿಮಾ ಉತ್ತಮ ಪ್ರತಿಕ್ರಿಯೆ ಪಡೆದಿದ್ದು, ಕೋಟಿ ಕೋಟಿ ಬಾಚುತ್ತಿದೆ. ಕಮಲ್ ಹಾಸನ್ ಅಭಿನಯದ ಈ ಸಿನಿಮಾ ಬಾಕ್ಸ್​ ಆಫೀಸ್​ನಲ್ಲಿ  (Box Office) ಧೂಳೆಬ್ಬಿಸಿದ್ದು, ದಾಖಲೆಗಳನ್ನು ಧೂಳಿಪಟ ಮಾಡುತ್ತಿದೆ.

ಇನ್ನು ಸಿನಿಮಾ ಉತ್ತಮ ರೀತಿಯಲ್ಲಿ ಓಡುತ್ತಿರುವ ಕಾರಣ ಈ ಚಿತ್ರದ ಸಕ್ಸಸ್​ ಪಾರ್ಟಿಯನ್ನು ಆಯೋಜಿಸಲಾಗಿತ್ತು, ಈ ಕಾರ್ಯಕ್ರಮಕ್ಕೆ ಮೆಗಾಸ್ಟಾರ್ ಚಿರಂಜೀವಿ ಹಾಗೂ ಬಾಲಿವುಡ್ ಭಾಯ್​ಜಾನ್ ಸಲ್ಮಾನ್ ಖಾನ್​ ಕೂಡ ಆಗಮಿಸಿದ್ದರು. ವಿಶೇಷ  ಎಂದರೆ ಚಿರಂಜೀವಿ ಅವರೇ ಈ ಸಕ್ಸಸ್​ ಪಾರ್ಟಿ ಆಯೋಜಿಸಿದ್ದು.  ಬಹುಭಾಷೆಗಳಲ್ಲಿ ತೆರೆಕಂಡಿರುವ ಈ ಚಿತ್ರ ಜನರ ಮೆಚ್ಚುಗೆಗೆ ಪಡೆದಿದ್ದು, ಜನರು ಮುಗಿಬಿದ್ದಿ ಸಿನಿಮಾ ನೋಡುತ್ತಿದ್ದಾರೆ.

ಕಮಲ್ ಹಾಸನ್​ಗೆ ಸನ್ಮಾನ ಮಾಡಿದ ಮೆಗಾಸ್ಟಾರ್ 

ಈ ಕಾರ್ಯಕ್ರಮದಲ್ಲಿ ಮೆಗಾಸ್ಟಾರ್ ಚಿರಂಜೀವಿ ಅವರು ಕಮಲ್​ ಹಾಸನ್ ಅವರಿಗೆ ಸನ್ಮಾನ ಮಾಡಿದ್ದು, ಈ ಸಿನಿಮಾ ನಿರ್ದೇಶಕ ಲೋಕೇಶ್ ಕನಗರಾಜ್ ಕೂಡ ಇದ್ದರು.  ಇನ್ನು ಈ ಸಮಾರಂಭದ ಬಗ್ಗೆ ಟ್ವಿಟ್ಟರ್​ನಲ್ಲಿ ಫೋಟೋ ಹಂಚಿಕೊಂಡಿದ್ದು, ಸಿನಿಮಾವನ್ನು ಹೊಗಳಿದ್ದಾರೆ. ಅಲ್ಲದೇ ಗೆಳೆಯ ಕಮಲ್ ಹಾಸನ್ ಬಗ್ಗೆ ಸಹ ಮೆಚ್ಚುಗೆ ವ್ಯಕ್ತಪಡಿಸಿದ್ದು, ಖುಷಿಯಿಂದ ಹಂಚಿಕೊಂಡಿದ್ದಾರೆ. ಇನ್ನು ಚಿರಂಜೀವಿಗೆ ಅವರ ಈ ಪೋಸ್ಟ್ ಹಾಗೂ ಅವರ ಪ್ರೀತಿಗೆ ನಟ ಕಮಲ್ ಹಾಸನ್ ಸಹ ಕೂಡ ಧನ್ಯವಾದ ತಿಳಿಸಿದ್ದಾರೆ.

ಇದನ್ನೂ ಓದಿ: ಜೈ ಜಗದೀಶ್​ ಹಲ್ಲೆ ಪ್ರಕರಣ ಸುಖಾಂತ್ಯ, ಕೈಕುಲುಕಿ ರಾಜಿ ಮಾಡಿಕೊಂಡ ದೂರುದಾರ

ಇನ್ನು ಕಮಲ್ ಹಾಸನ್ ಹಾಗೂ ಮೆಗಾಸ್ಟಾರ್ ಚಿರಂಜೀವಿ ಅವರ ಸ್ನೇಹ ಮೊದಲಿನಿಂದಲೂ ಬಹಳ ಚೆನ್ನಾಗಿದೆ. ಇಬ್ಬರೂ ಕೂಡ ಒಬ್ಬರಿಗೊಬ್ಬರಿಗೆ ಸಹಾಯ ಹಾಗೂ ಸಹಕಾರ ಮಾಡುತ್ತಾ ಬಂದಿದ್ದಾರೆ. ಮೆಗಾಸ್ಟಾರ್ ಅವರು ಕಮಲ್ ಹಾಸನ್ ಅವರ ಸಿನಿಮಾದ ಸಕ್ಸಸ್​ಗೆ ಪಾರ್ಟಿ ಆಯೋಜಿಸಿರುವುದು ಇದೇ ಮೊದಲೇನಲ್ಲ.

ಕೆಲ ವರ್ಷಗಳ ಹಿಂದೆ ಚಿರಂಜೀವಿ ಅವರು ಕಮಲ್ ಹಾಸನ್ ಅವರ ಸಿನಿಮಾವೊಂದರ ಯಶಸ್ಸಿನ ಪಾರ್ಟಿಯನ್ನು ಆಯೋಜಿಸಿದ್ದರು.  1986ರಲ್ಲಿ ಬಿಡುಗಡೆಯಾದ ಸ್ವಾತಿಮುತ್ಯಂ ಸಿನಿಮಾ ಕೂಡ ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿತ್ತು. ಆ ಸಮಯದಲ್ಲಿ ಸಹ ಮೆಗಾಸ್ಟಾರ್ ಕಮಲ್ ಹಾಸನ್ ಅವರಿಗಾಗಿ ಪಾರ್ಟಿ ಹಮ್ಮಿಕೊಂಡಿದ್ದರು. ಅಲ್ಲದೇ, ಅವರಿಗೆ ಕಾಣಿಕೆಯನ್ನು ಸಹ ಕೊಟ್ಟಿದ್ದರು.

ಜನರಿಂದ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದೆ 

ಇನ್ನು ವಿಕ್ರಮ್ ಸಿನಿಮಾ ಬಗ್ಗೆ ಜನರು ಉತ್ತಮ ಪ್ರತಿಕ್ರಿಯೆ ನೀಡಿದ್ದು, ಕೆಲವು ನೆಟಿಜನ್‌ಗಳು ವಿಕ್ರಮ್  ಅತ್ಯುತ್ತಮ ಆಕ್ಷನ್ ಎಂಟರ್ಟೈನರ್ ಎಂದು ಕರೆದಿದ್ದಾರೆ. ಅನೇಕರು ಕಮಲ್ ಹಾಸನ್, ವಿಜಯ್ ಸೇತುಪತಿ ಮತ್ತು ಫಹದ್ ಫಾಸಿಲ್ ಅವರ ಅಭಿನಯವನ್ನು ಮೆಚ್ಚಿದ್ದಾರೆ. ಅದೇ ರೀತಿ ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ಮಿಂಚಿದ ಸೂರ್ಯ ನಟನೆಗೆ ಅಭಿಮಾನಿಗಳು ಮನ ಸೋತಿದ್ದಾರೆ.

ಇದನ್ನೂ ಓದಿ: ಈ ಕಾರಣಕ್ಕೆ ಅನುಪಮಾ ಗೌಡ ರಾಜಾ-ರಾಣಿ ಶೋ ನಿರೂಪಣೆ ಮಾಡ್ತಿಲ್ವಂತೆ

'ರಾಜ್​ ಕಮಲ್​ ಫಿಲ್ಮ್ಸ್​ ಇಂಟರ್​ನ್ಯಾಷನಲ್​' ಬ್ಯಾನರ್​ ಮೂಲಕ ನಿರ್ಮಾಣ ಆಗಿದೆ.ನಿರ್ದೇಶಕ ಲೋಕೇಶ್​ ಕನಗರಾಜ್​ ಅವರ ಮೇಲೆ ಅಭಿಮಾನಿಗಳು ಅತಿಯಾದ ನಿರೀಕ್ಷೆ ಇಟ್ಟುಕೊಂಡಿದ್ದರು. ಆ ನಿರೀಕ್ಷೆಯ ಮಟ್ಟವನ್ನು ತಲುಪುವಲ್ಲಿ ಅವರು ಯಶಸ್ವಿ ಆಗಿದ್ದಾರೆ ಎಂಬ ಅಭಿಪ್ರಾಯ ಅಭಿಮಾನಿಗಳಿಂದ ಕೇಳಿಬಂದಿದೆ. 'ಇದು ನಿಜವಾಗಿಯೂ ಲೋಕೇಶ್​ ಕನಗರಾಜ್ ಶೈಲಿಯ ಚಿತ್ರ. ಒಂದು ಮ್ಯಾಜಿಕ್​ ರೀತಿಯಲ್ಲಿ ಇದೆ' ಎಂದು ಪ್ರೇಕ್ಷಕರು ಟ್ವೀಟ್​ ಮಾಡಿದ್ದಾರೆ.
Published by:Sandhya M
First published: