Vikram Bhatt| ಖ್ಯಾತ ನಿರ್ದೇಶಕ ವಿಕ್ರಮ್ ಭಟ್ ಮುದುವೆಯಾದ್ರಾ..? ಹೌದು ಎನ್ನುತ್ತದೆ ಮಡದಿಗೆ ಹುಟ್ಟುಹಬ್ಬದ ವಿಶ್ ಮಾಡಿದ ಪೋಸ್ಟ್

ವಿಕ್ರಮ್ ಭಟ್ ಹಾರರ್ ಮತ್ತು ಥ್ರಿಲ್ಲರ್ ಸಿನಿಮಾಗಳ ನಿರ್ದೇಶನದಲ್ಲಿ ಹೆಸರುವಾಸಿಯಾಗಿದ್ದಾರೆ, ಗುಲಾಂ, ರಾಜ್, 1920, ಕಸೂರ್, ಏತ್ಬಾರ್ ಮತ್ತು 1921ನಂತಹ ಚಲನಚಿತ್ರಗಳನ್ನು ನಿರ್ದೇಶಿಸಿದ್ದಾರೆ.

ವಿಕ್ರಮ್ ಭಟ್.

ವಿಕ್ರಮ್ ಭಟ್.

  • Share this:

    ಚಿತ್ರ ನಿರ್ಮಾಪಕ ವಿಕ್ರಮ್ ಭಟ್ (Vikram Bhat) ಕಳೆದ ವರ್ಷ ಲಾಕ್‍ಡೌನ್ (LockDown) ಅವಧಿಯಲ್ಲಿ ಕಲಾ ಪಂಡಿತ ಶ್ವೇತಾಂಬರಿ ಸೋನಿ ಅವರನ್ನು ವಿವಾಹವಾಗಿದ್ದಾರೆ. ಮಹೇಶ್ ಭಟ್ (Mahesh Bhat) ತಮ್ಮ ವೃತ್ತಿ ಜೀವನದ ಆರಂಭದ ದಿನಗಳಲ್ಲಿ ವಿಕ್ರಮ್ ಭಟ್‌ರಿಗೆ ಮಾರ್ಗದರ್ಶನ ನೀಡಿದ್ದರು. 2020ರ ಲಾಕ್‍ಡೌನ್ ಸಮಯದಲ್ಲಿ ಇವರಿಬ್ಬರ ಮದುವೆ ನಡೆದಿರುವ ಸುದ್ದಿಯನ್ನು ಇ ಟೈಮ್ಸ್‌ಗೆ ಬಹಿರಂಗಪಡಿಸಿದರು.ವಿಕ್ರಮ್ ಭಟ್ ಕಳೆದ ಸೆಪ್ಟೆಂಬರ್‌ನಲ್ಲಿ ಲಾಕ್‍ಡೌನ್ ಸಮಯದಲ್ಲಿ ವಿವಾಹವಾದರು. ಅವರು ನನಗೆ ಕರೆ ಮಾಡಿ ಈ ವಿಚಾರ ತಿಳಿಸಿದರು, ಬಾಸ್ ನಾನು ಮದುವೆಯಾಗುತ್ತಿದ್ದೇನೆ ಮತ್ತು ಮದುವೆ ಸಮಾರಂಭಕ್ಕೆ ನಿರ್ಬಂಧವಿರುವುದರಿಂದ ಮತ್ತು ಈ ಕೋವಿಡ್ (Covid-19) ಸಮಯದಲ್ಲಿ ನಿಮ್ಮ ಆರೋಗ್ಯ ಕಾಳಜಿ ಗಮನದಲ್ಲಿಟ್ಟುಕೊಂಡು, ನಾನು ನಿಮಗೆ ಬರುವಂತೆ ಒತ್ತಡ ಹೇರುವುದಿಲ್ಲ. ಆದರೆ ನಾವು ಇದನ್ನು ಮುಚ್ಚಿಡುತ್ತೇವೆ' ಎಂದು ಮಹೇಶ್ ಭಟ್ ಹೇಳಿದ್ದನ್ನು ಇ ಟೈಮ್ಸ್‌ ಉಲ್ಲೇಖಿಸಿದೆ.


    ಮಹೇಶ್ ಭಟ್ ವಿಕ್ರಮ್ ಭಟ್ ಅವರೊಂದಿಗೆ ನಡೆಸಿದ ಕರೆಯ ಸಂಭಾಷಣೆಯನ್ನು ಬಹಿರಂಗಪಡಿಸಿದ್ದಾರೆ. ಇದರಲ್ಲಿ ಮಹೇಶ್ ಭಟ್ ವಿಕ್ರಮ್‍ಗೆ ನೀವು ಮದುವೆಯಾದ ಸುದ್ದಿಯನ್ನು ಬಹಳ ದಿನಗಳ ಕಾಲ ಮುಚ್ಚಿಡಲು ಆಗುವುದಿಲ್ಲ ಎಂದು ಹೇಳಿದ್ದಾರೆ. ವಿಕ್ರಮ್ ನೀನು ಬೆಕ್ಕಿನಂತೆ. ಕಣ್ಣು ಮುಚ್ಚಿ ಹಾಲು ಕುಡಿಯುತ್ತಿದ್ದೀಯಾ, ಆದರೆ ಯಾರು ನಿನ್ನನ್ನು ನೋಡುತ್ತಿಲ್ಲ ಎಂದು ನೀನು ಅಂದುಕೊಂಡಿದ್ದೀಯಾ. ಇದು ಆಕ್ರಮಣಶೀಲ ಮಾಧ್ಯಮದ ಯುಗ. ನಿಮ್ಮ ಮದುವೆಯ ಸುದ್ದಿಯನ್ನು ಖಂಡಿತವಾಗಿಯೂ ತುಂಬಾ ದಿನ ಮುಚ್ಚಿಡಲಾಗುವುದಿಲ್ಲ ಎಂದು ಹೇಳಿರುವುದಾಗಿ ತಿಳಿಸಿದ್ದಾರೆ.


    ಶ್ವೇತಾಂಬರಿ ಸೋನಿ ಇನ್‍ಸ್ಟಾಗ್ರಾಮ್‍ನಲ್ಲಿ ಕಳೆದ ವರ್ಷ ಆಕೆಯ ಮದುವೆ ಸಂಭ್ರಮದ ಫೋಟೋಗಳನ್ನು ಟ್ಯಾಗ್ ಮಾಡಲಾಗಿತ್ತು.











    View this post on Instagram






    A post shared by namratasoni (@namratasoni)





    ಶ್ವೇತಾಂಬರಿ ಮೇಕಪ್ ಕಲಾವಿದೆ ನಮ್ರತಾ ಸೋನಿಯ ಸಹೋದರಿಯಾಗಿದ್ದು, ಕಳೆದ ವರ್ಷದ ಪೋಸ್ಟ್‌ನಲ್ಲಿ ಮದುವೆಯ ದಿನದ ತುಣುಕುಗಳನ್ನು ಹಂಚಿಕೊಂಡು "ಆ ದಿನ ನನ್ನ ಸಹೋದರಿ ಎಷ್ಟು ಸುಂದರವಾಗಿ ಕಾಣುತ್ತಿದ್ದಳು ಎಂಬುದನ್ನು ವಿವರಿಸಲು ಸಾಧ್ಯವಾಗುವುದಿಲ್ಲ” ಎಂದು ಬರೆದಿದ್ದರು. ಇನ್ನು ಶ್ವೇತಾಂಬರಿ ಸೋನಿಯ ಮೆಹಂದಿ ಹಬ್ಬದ ಒಂದು ನೋಟ ಹಂಚಿಕೊಂಡ ನಮ್ರತಾ "ನಿನಗೆ ಬಟ್ಟೆ ಹಾಕುವುದು ನಿಜಕ್ಕೂ ವಿಶೇಷ ಮತ್ತು ನನ್ನ ದೃಷ್ಟಿ ತಗುಲದಂತೆ ನೋಡಿಕೊಳ್ಳುವುದು ಇನ್ನೂ ಕಷ್ಟ" ಎಂದು ಬರೆದುಕೊಂಡಿದ್ದರು.


    ಬುಧವಾರ ವಿಕ್ರಮ್ ಭಟ್ ಪತ್ನಿಯ ಹುಟ್ಟುಹಬ್ಬದ ನಿಮಿತ್ತ ಬರೆದಿರುವ ಪ್ರಿತಿಯ ಮಾತುಗಳ ಮೂಲಕ ರಹಸ್ಯದ ಮದುವೆಯ ವಿಚಾರ ಬಹಿರಂಗಗೊಂಡಿದೆ ಎಂದು ಇ ಟೈಮ್ಸ್ ವರದಿ ಮಾಡಿದೆ. ನೀವು ನನ್ನೊಳಗನ್ನು ಕಂಡುಕೊಂಡು ಹೊರತರಲು ಕಾರಣರಾಗಿದ್ದೀರಿ. ಜೀವ ಏನು ಎಂಬುದನ್ನು ತಿಳಿಸಿಕೊಟ್ಟಿದ್ದೀರಿ. ನೀವು ಮಾತ್ರ. ನನ್ನ ಹೃದಯವನ್ನು ಕದ್ದದ್ದು ನೀವು ಮಾತ್ರ. ನಿಮಗೋಸ್ಕರ ನಾನು ಏನೂ ಮಾಡಲು ಸಿದ್ಧನಿದ್ದೇನೆ. ನನಗೆ ಅರ್ಥಮಾಡಿಸಿದ್ದು ನೀವು ಮಾತ್ರ.


    ನನ್ನ ಹೃದಯ ಕದ್ದಿರುವುದು ನೀವು ಮಾತ್ರ. ನನ್ನ ಪ್ರೀತಿಯೇ ಹುಟ್ಟುಹಬ್ಬದ ಶುಭಾಶಯಗಳು ಎಂದು ಇನ್‍ಸ್ಟಾಗ್ರಾಮ್‍ನಲ್ಲಿ ಬರೆದು ಜನ್ಮದಿನದ ಶುಭಾಶಯಗಳನ್ನು ತಿಳಿಸಿದ್ದಾರೆ.


    ಇದನ್ನೂ ಓದಿ: Samantha Nagachaitanya Divorce: ಹೈದರಾಬಾದಲ್ಲೇ ಬೇರೆ ಮನೆಗೆ ಶಿಫ್ಟ್ ಆಗಲಿರುವ ಸಮಂತಾ- ನಾಗಚೈತನ್ಯ ಮನೆಯಿಂದ ಎಷ್ಟು ದೂರ?

    ವಿಕ್ರಮ್ ಭಟ್ ಹಾರರ್ ಮತ್ತು ಥ್ರಿಲ್ಲರ್ ಸಿನಿಮಾಗಳ ನಿರ್ದೇಶನದಲ್ಲಿ ಹೆಸರುವಾಸಿಯಾಗಿದ್ದಾರೆ, ಗುಲಾಂ, ರಾಜ್, 1920, ಕಸೂರ್, ಏತ್ಬಾರ್ ಮತ್ತು 1921ನಂತಹ ಚಲನಚಿತ್ರಗಳನ್ನು ನಿರ್ದೇಶಿಸಿದ್ದಾರೆ.

    Published by:MAshok Kumar
    First published: