ಕಾಲಿವುಡ್​ನಲ್ಲಿ ​ಮ್ಯಾಜಿಕ್​ ಮಾಡಲು ಮುಂದಾದ ಅಪ್ಪ-ಮಗ; ವಿಕ್ರಂ 6ಂನೇ ಸಿನಿಮಾ ಪೋಸ್ಟರ್​ ಔಟ್​​!

Chiyaan 60: ಅಂದಹಾಗೆ,  ಧ್ರುವ ವಿಕ್ರಂ ಅವರಿಗೆ ಇದು 2ನೇ ಸಿನಿಮಾವಾಗಿದೆ. ಈ ಹಿಂದೆ ತೆಲುಗಿನ ಅರ್ಜುನ್​ ರೆಡ್ಡಿ ಸಿನಿಮಾ ತಮಿಳಿಗೆ ರಿಮೇಕ್​ ಆಗಿತ್ತು. ತಮಿಳಿನಲ್ಲಿ ‘ಆದಿತ್ಯ ವರ್ಮಾ‘ ಟೈಟಲ್​ನಲ್ಲಿ ಬಿಡುಗಡೆಗೊಂಡಿತ್ತು. ಈ ಸಿನಿಮಾದಲ್ಲಿ ಮೊದಲ ಬಾರಿಗೆ ಧ್ರುವ ವಿಕ್ರಂ ನಾಯಕ ನಟನಾಗಿ ಕಾಣಿಸಿಕೊಂಡರು. ಇದೀಗ ತಂದೆಯೊಂದಿಗೆ ಮಗ ಬಣ್ಣ ಹಚ್ಚಲಿದ್ದಾರೆ. ಒಂದೇ ಸ್ಕ್ರೀನ್​ ಮೇಲೆ ವಿಕ್ರಂ ಮತ್ತು ಧ್ರುವ ವಿಕ್ರಂರನ್ನು ಅಭಿಮಾನಿಗಳು ನೋಡಲಿದ್ದಾರೆ.

ವಿಕ್ರಂ- ಧ್ರುವ ವಿಕ್ರಂ

ವಿಕ್ರಂ- ಧ್ರುವ ವಿಕ್ರಂ

 • Share this:
  ಕಾಲಿವುಡ್​ ನಟ ವಿಕ್ರಂ ನಟನೆಯ 60ನೇ ಸಿನಿಮಾ ಪೋಸ್ಟರ್​ ಬಿಡುಗಡೆಯಾಗಿದೆ. ಈ ಬಾರಿ ಮಗ ಧ್ರುವ ವಿಕ್ರಂ ಜೊತೆಗೆ ನಟಿಸುವ ಮೂಲಕ ವಿಕ್ರಂ ತೆರೆಗೆ ಬರಲಿದ್ದಾರೆ. ‘ಚಿಯಾನ್​ 60‘ ಎಂಬ ಟೈಟಲ್​ನಲ್ಲಿ ಪೋಸ್ಟರ್​​ ರಿಲೀಸ್​ ಆಗಿದ್ದು, ಅಪ್ಪ-ಮಗ ಒಂದೇ ಸ್ಕ್ರೀನ್​ ಹಂಚಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ.

  ಸಾಕಷ್ಟು ಹಿಟ್​​ ಸಿನಿಮಾಗಳನ್ನು ನೀಡಿದ್ದ ವಿಕ್ರಂ ‘ಚಿಯಾನ್​ 60‘ ಸಿನಿಮಾದಲ್ಲಿ ವಿಭಿನ್ನ ಗೆಟಪ್​ನಲ್ಲಿ ಕಾಣಿಸಿಕೊಳ್ಳಲ್ಲಿದ್ದಾರೆ ಎಂಬ ಮಾತುಗಳು ಕಾಲಿವುಡ್​ನಲ್ಲಿ ಹರಿದಾಡುತ್ತಿದೆ. ಮತ್ತೊಂದೆಡೆ ಅಪ್ಪ ವಿಕ್ರಂ ಮತ್ತು ಮಗ ಧ್ರುವ ವಿಕ್ರಂ ಈ ಬಾರಿ ಭರ್ಜರಿ ಸದ್ದು ಮಾಡುವುದರಲ್ಲಿ ಸಂಶಯವೇ ಇಲ್ಲ ಎಂದು ಅಭಿಮಾನಿಗಳು ಪಿಸುಗುಟ್ಟುತ್ತಿದ್ದಾರೆ.

  ಅಂದಹಾಗೆ,  ಧ್ರುವ ವಿಕ್ರಂ ಅವರಿಗೆ ಇದು 2ನೇ ಸಿನಿಮಾವಾಗಿದೆ. ಈ ಹಿಂದೆ ತೆಲುಗಿನ ಅರ್ಜುನ್​ ರೆಡ್ಡಿ ಸಿನಿಮಾ ತಮಿಳಿಗೆ ರಿಮೇಕ್​ ಆಗಿತ್ತು. ತಮಿಳಿನಲ್ಲಿ ‘ಆದಿತ್ಯ ವರ್ಮಾ‘ ಟೈಟಲ್​ನಲ್ಲಿ ಬಿಡುಗಡೆಗೊಂಡಿತ್ತು. ಈ ಸಿನಿಮಾದಲ್ಲಿ ಮೊದಲ ಬಾರಿಗೆ ಧ್ರುವ ವಿಕ್ರಂ ನಾಯಕ ನಟನಾಗಿ ಕಾಣಿಸಿಕೊಂಡರು. ಇದೀಗ ತಂದೆಯೊಂದಿಗೆ ಮಗ ಬಣ್ಣ ಹಚ್ಚಲಿದ್ದಾರೆ. ಒಂದೇ ಸ್ಕ್ರೀನ್​ ಮೇಲೆ ವಿಕ್ರಂ ಮತ್ತು ಧ್ರುವ ವಿಕ್ರಂರನ್ನು ಅಭಿಮಾನಿಗಳು ನೋಡಲಿದ್ದಾರೆ.

     ‘ಚಿಯಾನ್​ 60‘ ಸಿನಿಮಾಗೆ ಕಾರ್ತಿಕ್​ ಸುಬ್ಬರಾಜ್​​ ಆ್ಯಕ್ಷನ್​ ಕಟ್​ ಹೇಳುತ್ತಿದ್ದಾರೆ. ಲಲಿತ್​​ ಕುಮಾರ್​ ಸಿನಿಮಾ ನಿರ್ಮಾಣದ ಹೊರೆ ಹೊತ್ತಿದ್ದಾರೆ. ಖ್ಯಾತ ಸಂಗೀತ ನಿರ್ದೇಶಕ ಅನಿರುದ್ಧ್​ ಸಂಗೀತ ಸಂಯೋಜನೆ ಮಾಡಲಿದ್ದಾರೆ.
  First published: