ತಮ್ಮ ಸಿನಿಮಾ (Film) ಮತ್ತು ವೈಯಕ್ತಿಕ ವಿಷಯಗಳಿಂದಲೇ ಹೆಚ್ಚಾಗಿ ಬಾಲಿವುಡ್ ನಟಿ ಕಂಗನಾ ರಣಾವತ್ ಸುದ್ದಿಯಲ್ಲಿ ಇದ್ದಾರೆ. ಇದೀಗ ಅವರ ಮುಂದಿನ ಚಿತ್ರ ಎಮೆರ್ಜೆನ್ಸಿ (Emergency) ಬಿಡುಗಡೆಗೆ ಸಜ್ಜಾಗುತ್ತಿದೆ. ಅದಕ್ಕೂ ಮೊದಲೇ ಸಿನಿಮಾವನ್ನ ನೋಡಿರುವ ಖ್ಯಾತ ಕಥೆಗಾರ ವಿಜಯೇಂದ್ರ ಪ್ರಸಾದ್ ಅವರು ಕಣ್ಣೀರು ಸುರಿಸಿದ್ದಾರೆ. ಬಾಲಿವುಡ್‌ನ ಕ್ವಿನ್ ಕಂಗನಾ ರಣಾವತ್ (Kangana Ranaut) ಈಗ ಇಂದಿರಾಗಾಂಧಿ ಆಗಿದ್ದಾರೆ. ಹೌದು, ತಮ್ಮ ಮುಂದಿನ ಚಿತ್ರ "ಎಮೆರ್ಜೆನ್ಸಿ"ಯಲ್ಲಿ ಕಂಗನಾ ರಣಾವತ್ ಇಂದಿರಾಗಾಂಧಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. 1975ರ ತುರ್ತುಪರಿಸ್ಥಿತಿಯ ಕಥಾಹಂದರವನ್ನ ಸಿನಿಮಾ (Film) ಹೊಂದಿದೆ. ತುರ್ತುಪರಿಸ್ಥಿತಿಯ ವೇಳೆ ದೇಶದಲ್ಲಿ ಎಂತಹ ಪರಿಸ್ಥಿತಿ ತಲೆದೋರಿತ್ತು. ಇಂದಿರಾ ಗಾಂಧಿ ಅವರು ಕೈಗೊಂಡ ಕ್ರಮದಿಂದಾಗಿ ಜನರು ಎಂತಹ ಸ್ಥಿತಿಗೆ ಸಿಲುಕಿದ್ರು ಹೋರಾಟಗಾರರು ಅನುಭವಿಸಿದ ಕಷ್ಟಗಳ ಕುರಿತು ಕಂಗನಾರ ಎಮೆರ್ಜೆನ್ಸಿ ಸಿನಿಮಾದಲ್ಲಿ ಎಳೆ ಎಳೆಯಾಗಿ ವಿವರಿಸಲಾಗಿದೆ.
ಚಿತ್ರ ನೋಡಿ ಕಣ್ಣೀರು ಸುರಿಸಿದ ರಾಜಮೌಳಿ ತಂದೆ
ಇದೀಗ ಸಿನಿಮಾದ ಪೋಸ್ಟ್ ಪ್ರೊಡೆಕ್ಷನ್ ಕೆಲಸಗಳು ನಡೆಯುತ್ತಿವೆ. ಸಿನಿಮಾದ ಎಡಿಟಿಂಗ್ ಕೆಲಸಗಳು ಮುಗಿದಿದ್ದು, ಚಿತ್ರವನ್ನ ಅನೇಕ ದಿಗ್ಗಜರಿಗೆ ಕಂಗಾನಾ ತೋರಿಸಿದ್ದಾರೆ. ಈ ಪೈಕಿ ಖ್ಯಾತ ನಿರ್ದೇಶಕ ರಾಜಮೌಳಿ ಅವರ ತಂದೆ, ಪದ್ಮಶ್ರೀ ಪುರಸ್ಕೃತ, ಕಥೆಗಾರ ವಿಜಯೇಂದ್ರ ಪ್ರಸಾದ್ ಅವರಿಗೆ ಸಿನಿಮಾವನ್ನ ತೋರಿಸಿದ್ದಾರೆ. ಎಮರ್ಜೆನ್ಸಿ ಸಿನಿಮಾವನ್ನ ನೋಡಿರುವ ವಿಜಯೇಂದ್ರ ಪ್ರಸಾದ್ ಅವರು, ಕಂಗನಾಗೆ ಶಹಬ್ಬಾಸ್ ಹೇಳಿದ್ದಾರೆ.. ಇನ್ನು, ಚಿತ್ರವನ್ನ ವೀಕ್ಷಿಸುವ ವೇಳೆ ವಿಜಯೇಂದ್ರ ಪ್ರಸಾದ್ ಅವರು ಭಾವುಕರಾಗಿದ್ದು, ಅನೇಕ ಸಲ ಅವರ ಕಣ್ಣಿನಿಂದ ಹನಿಗಳು ಜಿನುಗಿದ್ದನ್ನ ನಾನು ಕಂಡೆ ಅಂತ ಕಂಗನಾ ರಣಾವತ್ ಹೇಳಿದ್ದಾರೆ.
ಈ ಕುರಿತು ತಮ್ಮ ಇನ್‌ಸ್ಟಾ ಖಾತೆಯಲ್ಲಿ ಕಂಗನಾ ಅವರು ಪೋಸ್ಟ್ ಮಾಡಿದ್ದಾರೆ. ನನ್ನ ಗುರು ಹಾಗೂ ಹಿತೈಶಿಗಳು ಸಿನಿಮಾವನ್ನ ನೋಡಿ ಹಾರೈಸಿದ್ದಾರೆ. ಇದು ನನ್ನ ಉತ್ಸಾಹವನ್ನ ದುಪ್ಪಟ್ಟು ಮಾಡಿದೆ. ಸಿನಿಮಾದ ಪೋಸ್ಟ್ ಪ್ರೊಡೆಕ್ಷನ್ ಕೆಲಸಗಳು ಆರಂಭವಾಗಲಿದ್ದು, ಶೀಘ್ರವೇ ಬಿಡುಗಡೆ ದಿನಾಂಕವನ್ನ ಪ್ರಕಟ ಮಾಡುತ್ತೇವೆ ಅಂತ ತಿಳಿಸಿದ್ದಾರೆ.
ಇದನ್ನೂ ಓದಿ: ಕೇರಳ ಸ್ಟೋರಿಯಲ್ಲ, ಸುಳ್ಳಿನ ಸ್ಟೋರಿ! ಪ್ರಕಾಶ್ ರೈ ಟೀಕೆ
ನಿರ್ದೇಶಕನ ಕ್ಯಾಪ್ ತೊಟ್ಟ ಕಂಗನಾ!
ಹೌದು! ಎಮೆರ್ಜೆನ್ಸಿ ಸಿನಿಮಾವನ್ನ ಕಂಗನಾ ಅವರೇ ನಿರ್ದೇಶನ ಮಾಡಿದ್ದಾರೆ. ಮೊದಲ ಸಲ ಡೈರೆಕ್ಟರ್ ಕ್ಯಾಪ್ ತೊಟ್ಟಿರುವ ಕಂಗನಾ, 1975ರಲ್ಲಿನ ತುರ್ತು ಪರಿಸ್ಥಿತಿಯ ಕಥೆಯನ್ನ ಹೇಳಲು ಹೊರಟಿದ್ದಾರೆ. ಎಮೆರ್ಜೆನ್ಸಿ ಸಿನಿಮಾದಲ್ಲಿ ಕಂಗನಾ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕಂಗನಾ ಜೊತೆಗೆ ಸಿನಿಮಾದಲ್ಲಿ ಅನುಪಮ್ ಖೇರ್, ಮಿಲಂದ್ ಸೋನಮ್, ಮಹಿಮಾ ಚೌದರಿ, ವಿಶಾಖ್ ನಾಯರ್, ಸತೀಶ್ ಕೌಶಿಕ್ ಸೇರಿದಂತೆ ಅನೇಕರು ನಟಿಸಿದ್ದಾರೆ.
ಇದನ್ನೂ ಓದಿ: ಕಪಿಲ್ ದೇವ್, ರಜನಿಕಾಂತ್ ಒಟ್ಟಿಗೆ ನಿಂತಿರುವ ಫೋಟೋ ಇಲ್ಲಿದೆ ನೋಡಿ! ಇದನ್ನು ಶೇರ್ ಮಾಡಿದ್ದು ಯಾರು ಗೊತ್ತೇ?
ಈಗಾಗಲೇ ಸಿನಿಮಾದಲ್ಲಿ ಫಸ್ಟ್ ಲುಕ್ ಬಿಡುಗಡೆಯಾಗಿದ್ದು ಅದ್ರಲ್ಲಿ ಇಂದಿರಾ ಲುಕ್‌ನಲ್ಲಿ ಕಂಗನಾ ಇರೋದು ರಿವೀಲ್ ಆಗಿತ್ತು. ಇದೀಗ ಚಿತ್ರ ಸಂಪೂರ್ಣ ಮುಕ್ತಾಯವಾಗಿದ್ದು ಬಿಡುಗಡೆಗೆ ಸಜ್ಜಾಗಿದೆ.. ಇನ್ನು, ಸಿನಿಮಾದಲ್ಲಿ ಕಾಂಗ್ರೆಸ್ ಸರ್ಕಾರದ ಆಡಳಿತವನ್ನ ಟೀಕಿಸುವ, ತುರ್ತು ಪರಿಸ್ಥಿತಿಯಲ್ಲಿ ಇಂದಿರಾ ನಡೆದುಕೊಂಡ ರೀತಿಯನ್ನ ವಿವರಿಸುವ ಹಲವು ಅಂಶಗಳು ಇರುವ ಸಾಧ್ಯತೆ ಇದೆ. ಹೀಗಾಗಿ, ಸಿನಿಮಾಗೆ ಕಾಂಗ್ರೆಸ್ ಪಕ್ಷದಿಂದ ಆಕ್ಷೇಪ ವ್ಯಕ್ತವಾಗುವ ಸಾಧ್ಯತೆ ಇದೆ. ಆದರೆ, ಈಗಾಗಲೇ ಕಂಗನಾ ಪ್ರಧಾನಿ ಮೋದಿ ಪರ ಹಾಗೂ ಬಲಪಂಥೀಯ ನಡೆಗಳ ಮೂಲಕ ಗುರುತಿಸಿಕೊಂಡಿದ್ದಾರೆ. ಹೀಗಾಗಿ ಈ ಸಿನಿಮಾಗೆ ಬಿಜೆಪಿ ಪರ ನಾಯಕರು ಮೃಧುಧೋರಣೆ ತಾಳುವ ಸಾಧ್ಯತೆ ಇದೆ.
ಇನ್ನು, ಬಾಹುಬಲಿಯಂತಹ ಕಥೆಗಳನ್ನ ರಚಿಸಿರುವ ವಿಜಯೇಂದ್ರ ಪ್ರಸಾದ್ ಅವರು ಕೂಡ ಈ ಹಿಂದೆ ಆರ್‌ಎಸ್‌ಎಸ್ ಕುರಿತಾದ ತಮ್ಮ ಒಲವನ್ನು ಪ್ರಕಟಿಸಿದ್ರು. ಆರ್‌ಎಸ್‌ಎಸ್ ಸಂಘಟನೆಯ ಕುರಿತು ತಾವೊಂದು ಕಥೆ ಬರೆಯೋದಾಗಿ ತಿಳಿಸಿದ್ರು. ಇದೀಗ ಅವರು ಕಂಗನಾ ಅವರು ನಿರ್ದೇಶಿಸಿರುವ ಸಿನಿಮಾವನ್ನ ನೋಡಿದ್ದು, ನಟಿಗೆ ಫುಲ್ ಮಾರ್ಕ್ಸ್ ಕೊಟ್ಟಿದ್ದಾರೆ. ನಟನೆ ಜೊತೆಗೆ ನಿರ್ದೇಶನದ ಮೂಲಕ ಬಾಲಿವುಡ್‌ನ ಕ್ವಿನ್ ದೊಡ್ಡಮಟ್ಟದಲ್ಲಿ ಸದ್ದು ಮಾಡಲು ಸಜ್ಜಾಗುತ್ತಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ