ಖ್ಯಾತ ನಿರ್ದೇಶಕ ಎಸ್ಎಸ್ ರಾಜಮೌಳಿ (S. S. Rajamouli) ಅವರ ತಂದೆ ವಿಜಯೇಂದ್ರ ಪ್ರಸಾದ್ (V. Vijayendra Prasad) ಅವರು ಅನೇಕ ಹಿಟ್ ಸಿನಿಮಾಗಳಿಗೆ (Cinema) ಕಥೆಯನ್ನು ನೀಡಿರುವುದು ಎಲ್ಲರಿಗೂ ತಿಳಿದಿರುವ ಸಂಗತಿ. ಹಿಂದಿ, ತೆಲುಗು ಮಾತ್ರವಲ್ಲದೆ ಭಾರತದ ಬಹುತೇಕ ಭಾಷೆಗಳಲ್ಲಿ ಅವರು ಕಥೆಗಳನ್ನು ನೀಡಿರುವ ಸಿನಿಮಾಗಳು ಬಿಗ್ಹಿಟ್ ಪಡೆದುಕೊಂಡಿವೆ. ಅದರಲ್ಲೂ ಭಾರತೀಯ ಸಿನಿಮಾವನ್ನು (Indian Cinema) ವಿಶ್ವವೇ ತಿರುಗಿ ನೋಡುವಂತೆ ಮಾಡಿದ್ದ ಬಾಹುಬಲಿ ಸಿನಿಮಾಗೂ ವಿಜಯೇಂದ್ರ ಪ್ರಸಾದ್ ಅವರೇ ಕಥೆ ನೀಡಿದ್ದರು. ಈ ಸಿನಿಮಾದೊಂದಿಗೆ ಬಾಲಿವುಡ್ನಿಂದಲೂ ಕೂಡ ಅವರ ಕಥೆಗಳಿಗೆ (Cinema Story) ಬೇಡಿಕೆ ಶುರುವಾಗಿತ್ತು. ತೆಲುಗು ಚಿತ್ರರಂಗದಲ್ಲಿ ಹಲವು ಸ್ಟಾರ್ ಹೀರೋಗಳು ಅವರು ನೀಡಿದ್ದ ಕಥೆಗಳೊಂದಿಗೆ ಸಿನಿರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಸಿನಿಮಾ ಕಥೆಗಳ ವಿಚಾರದಲ್ಲಿ ವಿಜಯೇಂದ್ರ ಪ್ರಸಾದ್ ಅವರು ಕಮರ್ಷಿಲ್ (Commercial Street) ಆಗಿಯೇ ನಡೆದುಕೊಳ್ಳುತ್ತಾರೆ ಎಂಬ ಮಾತು ಟಾಲಿವುಡ್ (Tollywood) ನಲ್ಲಿ ಕೇಳಿ ಬರುತ್ತದೆ.
ಬಾಹುಬಲಿ ಸಿನಿಮಾ ಸಮಯದಲ್ಲಿ ಅವರು ಬಾಲಿವುಡ್ನ ಭಜರಂಗಿ ಭಾಯಿಜಾನ್ ಸಿನಿಮಾಗೆ ಕಥೆ ಹೇಳಿದ್ದರು. ಇದಕ್ಕೂ ಮುನ್ನ ಈ ಕಥೆಯನ್ನು ಆಮಿರ್ ಖಾನ್ ಅವರಿಗೆ ಹೇಳಿದ್ದರು. ಆದರೆ ಅವರು ಕಥೆಯನ್ನು ರಿಜೆಕ್ಟ್ ಮಾಡಿದ್ದರು. ಇದರೊಂದಿಗೆ ಭಜರಂಗಿ ಭಾಯಿಜಾನ್ ಕಥೆ ಸಲ್ಮಾನ್ ಖಾನ್ ಬಳಿ ಹೋಗಿತ್ತು. ಮೊದಲು ಸಿನಿಮಾ ಕಥೆ ಕೇಳಿದ್ದ ಸಲ್ಮಾನ್ ಖಾನ್ ಸಿನಿಮಾ ಮಾಡಲು ಒಪ್ಪಿಗೆ ಸೂಚಿಸಿ ನಿರ್ಮಾಪಕರೊಂದಿಗೆ ಮಾತನಾಡಲು ಹೇಳಿದ್ದರಂತೆ. ಇದರಂತೆ ನಿರ್ಮಾಪಕರೊಬ್ಬರಿಗೆ ಕಥೆ ಕೇಳಿದ ಸಂದರ್ಭದಲ್ಲಿ ಅವರು 20 ಲಕ್ಷ ರೂಪಾಯಿ ನೀಡುವುದಾಗಿ ಹೇಳಿದ್ದರಂತೆ.
ಇದನ್ನೂ ಓದಿ: Pavitra Lokesh: ತಂದೆಯಂತೆ ಆಗಬಾರದೆಂದು ಎಷ್ಟೇ ಪ್ರಯತ್ನಿಸಿದರೂ ಪವಿತ್ರಾ ಲೋಕೇಶ್ಗೆ ಸಾಧ್ಯವಾಗಲೇ ಇಲ್ಲ
ನಿರ್ಮಾಪಕರ ಆಫರ್ ರಿಜೆಕ್ಟ್ ಮಾಡಿದ್ದ ವಿಜಯೇಂದ್ರ ಪ್ರಸಾದ್ ಅವರು, ಇದು 100 ಕೋಟಿ ರೂಪಾಯಿ ಕಲೆಕ್ಟ್ ಮಾಡುವ ಸಿನಿಮಾದ ಕಥೆ. ಈ ಕಥೆಗೆ ಎರಡು ಕೋಟಿ ರೂಪಾಯಿಗೆ ಒಂದು ರೂಪಾಯಿ ಕಡಿಮೆ ಆದರೂ ಕಥೆ ಕೊಡುವುದಿಲ್ಲ ಎಂದು ಹೇಳಿದ್ದರಂತೆ.
ಈ ವಿಚಾರ ಸಲ್ಮಾನ್ ಖಾನ್ ಅವರಿಗೆ ತಿಳಿದು ಅವರು ಬೇರೆ ನಿರ್ಮಾಪಕರನ್ನು ಕಳುಹಿಸಿದ್ದರಂತೆ. ಈ ನಿರ್ಮಾಪಕರಿಗೆ ಕಥೆ ಇಷ್ಟ ಆಗುವುದರೊಂದಿಗೆ ಕೂಡಲೇ ಎರಡು ಕೋಟಿ ರೂಪಾಯಿ ಕೊಟ್ಟು ಕಥೆಯ ಹಕ್ಕುಗಳನ್ನು ಪಡೆದುಕೊಂಡಿದ್ದರಂತೆ.
ಇನ್ನು, 2015ರಲ್ಲಿ ತೆರೆಕಂಡಿದ್ದ ಭಜರಂಗಿ ಭಾಯಿಜಾನ್ ಸಿನಿಮಾ ಬಾಕ್ಸ್ ಆಫೀಸ್ ಎದುರು ದಾಖಲೆಗಳನ್ನು ನಿರ್ಮಿಸಿತ್ತು. ಈ ಸಿನಿಮಾ ಸಲ್ಮಾನ್ ಖಾನ್ ಅವರಿಗೆ ಚಿತ್ರರಂಗದಲ್ಲಿ ಪುನರ್ಜನ್ಮ ನೀಡಿತ್ತು ಎಂದು ಸಿನಿಮಾ ವಿಶ್ಲೇಷಕರು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಸೋತು ಸುಣ್ಣವಾಗಿದ್ದ ಸಲ್ಮಾನ್ ಖಾನ್ಗೆ ಈ ಸಿನಿಮಾ ಮತ್ತೆ ಲೈಫ್ ನೀಡಿತ್ತು.
ಇದನ್ನೂ ಓದಿ: Shraddha: ಸ್ಟ್ಯಾಂಡಪ್ ಕಾಮಿಡಿಯನ್ ನೋಡಿ 'ಅಯ್ಯೋ' ಎಂದು ಕರೆದ ಪ್ರಧಾನಿ ಮೋದಿ, ಖುಷಿಯಲ್ಲಿ 'ಅಯ್ಯಯೋ' ಎಂದ ಶ್ರದ್ಧಾ!
ಭಜರಂಗಿ ಭಾಯಿಜಾನ್-2 ಸಿನಿಮಾ ಮಾಡುವುದಾಗಿ ಈ ಹಿಂದೆಯೇ ಸಲ್ಮಾನ್ ಖಾನ್ ಘೋಷಣೆ ಮಾಡಿದ್ದರು. ಈ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದ ವಿಜಯೇಂದ್ರ ಪ್ರಸಾದ್ ಅವರು, ಭಜರಂಗಿ ಭಾಯಿಜಾನ್ ಸೀಕ್ವೆಲ್ಗೆ ನಾನೇ ಕಥೆ ಬರೆಯಬೇಕು. ಈ ಕುರಿತ ಪ್ರತಿಕ್ರಿಯೆ ಆರಂಭವಾಗಿದೆ ಎಂದಿದ್ದರು. ಇನ್ನು, ಈ ಸಿನಿಮಾದಲ್ಲಿ ಟಾಲಿವುಡ್ ಸ್ಟಾರ್ ನಟ ವಿಕ್ಟರಿ ವೆಂಕಟೇಶ್ ಕೂಡ ಸಲ್ಮಾನ್ ಖಾನ್ ಸಾಥ್ ನೀಡ್ತಿದ್ದಾರೆ. ಸಿನಿಮಾದಲ್ಲಿ ಪೂಜಾ ಹೆಗ್ಡೆ ನಾಯಕಿಯಾಗಿ ನಟಿಸುತ್ತಿದ್ದಾರೆ. ಉಳಿದಂತೆ ಇತ್ತೀಚೆಗೆ ನಡೆದಿದ್ದ ಪೂಜಾ ಹೆಗ್ಡೆ ಸಹೋದರನ ಮದುವೆಯಲ್ಲೂ ಸಲ್ಮಾನ್ ಖಾನ್ ಭಾಗಿಯಾಗಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ