Kannada Serial: ಮಂಗಳಾ ರಾಘವೇಂದ್ರ ರಾಜ್ಕುಮಾರ್ ನಿರ್ಮಾಣದ ಅದ್ದೂರಿ ಧಾರಾವಾಹಿ ವಿಜಯದಶಮಿ ಶೀಘ್ರವೇ ಪ್ರಸಾರ
'ವಿಜಯ ದಶಮಿ' ಧಾರಾವಾಹಿಯ ಪ್ರಮೋ ಲಾಂಚ್ ಆಗಿದೆ. ಖ್ಯಾತ ನಟಿ ಶ್ರೀಮತಿ ಪ್ರಿಯಾಂಕ ಉಪೇಂದ್ರ, ನಟ ನೆನಪಿರಲಿ ಪ್ರೇಮ್, ನಟ, ನಿರ್ದೇಶಕ, ನಿರ್ಮಾಪಕ ರಿಷಬ್ ಶೆಟ್ಟಿ ಹಾಗೂ ನಟ ಅಭಿಷೇಕ್ ಅಂಬರೀಶ್ ಅವರು ಪ್ರೊಮೋ ಲಾಂಚ್ ಮಾಡಿದ್ದಾರೆ.
ವಿನೂತನ ಧಾರಾವಾಹಿಗಳು (New Serials), ಸದಭಿರುಚಿಯ ಕಾರ್ಯಕ್ರಮಗಳು (Programs) , ಹೊಸ ಶೋಗಳ (New Shows) ಮೂಲಕ ಕನ್ನಡಿಗರ (Kannadiga) ಮನೆ ಮನ ತಲುಪಿತ್ತಿರುವ ಮನರಂಜನಾ ವಾಹಿನಿ (Entertainment Channel) ಎಂದರೆ ಅದು ಸಿರಿ ಕನ್ನಡ ಟಿವಿ (Siri Kannada TV). ಈಗಾಗಲೇ ಸಿರಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಧಾರಾವಾಹಿಗಳು, ಕಾರ್ಯಕ್ರಮಗಳು ಕನ್ನಡಿಗರಿಗೆ ಇಷ್ಟವಾಗುತ್ತಿದೆ. ಕೆಲ ದಿನಗಳ ಹಿಂದಷ್ಟೇ ಎಸ್ಎನ್ ಸೇತುರಾಂ (SN Seturam) ನಿರ್ದೇಶನದ (Direction) ಯುಗಾಂತರ, ಹಿಂದೂ ಮುಸ್ಲಿಂ ಪ್ರೇಮ ಕಥೆಯ (Hindu Muslim Love Story) ರಜಿಯಾ ರಾಮ್ ಹಾಗೂ ಮರೆತು ಹೋದವರು ಎಂಬ ಮೂರು ವಿನೂತನ ಕಥಾ ಹಂದರದ ಧಾರಾವಾಹಿಗಳನ್ನು ಪ್ರಸಾರ ಮಾಡುತ್ತಿದೆ. ಇದೀಗ ಈ ಧಾರಾವಾಹಿಗಳ ಸಾಲಿಗೆ ಮತ್ತೊಂದು ಹೊಸತನದ ಕಥೆಯುಳ್ಳ (Story), ಅದ್ಧೂರಿ ಧಾರಾವಾಹಿ ಸೇರಲಿದೆ. ಅದೇ ವಿಜಯ ದಶಮಿ (Vijaya Dashami). ಕನ್ನಡಿಗರ ಕಣ್ಮಣಿ ಡಾ. ರಾಜ್ಕುಮಾರ್ ಕುಟುಂಬದ (Dr Rajkumar’s Family) ಹೆಮ್ಮೆಯ ಕೊಡುಗೆ ವಿಜಯ ದಶಮಿ ಧಾರಾವಾಹಿ.
ಮಂಗಳಾ ರಾಘವೇಂದ್ರ ರಾಜ್ಕುಮಾರ್ ನಿರ್ಮಾಣದ ಧಾರಾವಾಹಿ
ವಿಜಯ ದಶಮಿ ಧಾರಾವಾಹಿಯನ್ನು ನಿರ್ಮಾಣ ಮಾಡುತ್ತಿರುವುದು ಡಾ ರಾಜ್ಕುಮಾರ್ ಅವರ ಪುತ್ರ ರಾಘವೇಂದ್ರ ರಾಜ್ಕುಮಾರ್ ಅವರ ಪತ್ನಿ, ಶ್ರೀಮಂತಿ ಮಂಗಳಾ ರಾಘವೇಂದ್ರ ರಾಜ್ಕುಮಾರ್. ರಾಜ್ ಫ್ಯಾಮಿಲಿ ನಿರ್ಮಾಣದ ಈ ಅದ್ದೂರಿ ದೃಶ್ಯ ಕಾವ್ಯ ‘ವಿಜಯದಶಮಿ’ ಧಾರಾವಾಹಿ ಶೀಘ್ರವೇ ನಿಮ್ಮ ನೆಚ್ಚಿನ 'ಸಿರಿ ಕನ್ನಡ' ವಾಹಿನಿಯಲ್ಲಿ ಪ್ರಸಾರವಾಗಲಿದೆ ಅಂತ ಸಿರಿ ವಾಹಿನಿ ಹೇಳಿದೆ.
ಪ್ರೊಮೋ ಲಾಂಚ್ ಮಾಡಿದ ಸಿನಿ ರಂಗದ ಗಣ್ಯರು
ವಿಜಯ ದಶಮಿ ಧಾರಾವಾಹಿಯ ಪ್ರೋಮೋ ಲಾಂಚ್ ಆಗಿದೆ. ಖ್ಯಾತ ನಟಿ ಶ್ರೀಮತಿ ಪ್ರಿಯಾಂಕ ಉಪೇಂದ್ರ, ನಟ ನೆನಪಿರಲಿ ಪ್ರೇಮ್, ನಟ, ನಿರ್ದೇಶಕ, ನಿರ್ಮಾಪಕ ರಿಷಬ್ ಶೆಟ್ಟಿ ಹಾಗೂ ನಟ ಅಭಿಷೇಕ್ ಅಂಬರೀಶ್ ಅವರು ಪ್ರೊಮೋ ಲಾಂಚ್ ಮಾಡಿದ್ದಾರೆ.
ಖ್ಯಾತ ನಟ, ನಿರ್ದೇಶಕ, ರಂಗಕರ್ಮಿ ಎಸ್ಎನ್ ಸೇತುರಾಂ ಸಿರಿ ವಾಹಿನಿಯ ಮೂಲಕ ಕಮ್ಬ್ಯಾಕ್ ಮಾಡಿದ್ದಾರೆ. ಟಿಎನ್ ಸೀತಾರಾಂ ನಿರ್ದೇಶನದ ಮಾಯಾಮೃಗ ಧಾರಾವಾಹಿಯಲ್ಲಿ ನಾರಾಯಣ ಮೂರ್ತಿಯಾಗಿ ಅಭಿನಯಿಸಿದ್ದ ಸೇತುರಾಂ, ಅಪಾರ ವೀಕ್ಷಕರನ್ನು ಸೃಷ್ಟಿಸಿಕೊಂಡಿದ್ದರು. ಇದಾದ ಬಳಿಕ ಮಂಥನ ಸೇರಿದಂತೆ ಹಲವು ಜನಪ್ರಿಯ ಧಾರಾವಾಹಿಗಳನ್ನು ನಿರ್ದೇಶನ ಮಾಡಿದ್ದರು. ಇದೀಗ ಅವರು ಬರೋಬ್ಬರಿ 13 ವರ್ಷಗಳ ನಂತರ ಮರಳಿ ಕಿರುತೆರೆಗೆ ಬಂದಿದ್ದಾರೆ. ಸಿರಿ ಧಾರಾವಾಹಿಯಲ್ಲಿ ಯುಗಾಂತರ ಎಂಬ ಧಾರಾವಾಹಿ ನಿರ್ದೇಶನ ಮಾಡಿದ್ದಾರೆ. ಪ್ರತಿ ರಾತ್ರಿ 9.30ಕ್ಕೆ ಪ್ರಸಾರವಾಗುತ್ತಿರುವ ಯುಗಾಂತರ ಈಗಾಗಲೇ ಅಪಾರ ವೀಕ್ಷಕರನ್ನು ಗಳಿಸಿದೆ.
ಎರಡು ಧರ್ಮಗಳ ಪ್ರೀತಿಯ ಕಥೆ ರಜಿಯಾ ರಾಮ್
ಹಿಂದೂ ಹಾಗೂ ಮುಸ್ಲಿಂ ಯುವಕ ಯುವತಿಯ ಪ್ರೀತಿಯ ಕಥೆ ಹೊಂದಿರುವ ರಜಿಯಾ ರಾಮ್ ಎಂಬ ಧಾರಾವಾಹಿ ಈಗಾಗಲೇ ಪ್ರಸಾರವಾಗುತ್ತಿದೆ. ಹಿಂದೆಂದೂ ಇರದಂತ ಹೊಸ ಕಥೆಯುಳ್ಳು ಸೀರಿಯಲ್ ಇದಾಗಿದ್ದು, ಈಗಾಗಲೇ ವೀಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ.
ಈಗಿನ ಯುವಕರಿಗೆ ಸಂಬಂಧಿಕರು ಯಾರು ಎಂಬುದು ಹೆಚ್ಚಾಗಿ ಗೊತ್ತಿರಲ್ಲ. ಎಷ್ಟೋ ದಿನಗಳು ಒಬ್ಬರನೊಬ್ಬರು ನೋಡಿರುವುದಿಲ್ಲ. ಸಂಬಂಧಗಳೇ ಇಲ್ಲ ಅಂದ ಮೇಲೆ ಸಂಭ್ರಮ ಎಲ್ಲಿರತ್ತೆ ? ಮರೆಯಾದ ಸಂಬಂಧಗಳನ್ನು ಒಂದುಗೂಡಿಸಿ ಮದುವೆ ಮಾಡಿಕೊಳ್ಳುವ ಆಶಯ ಇಲ್ಲಿನ ಯುವ ಜೋಡಿಯದು. ಮರೆತು ಹೋದ ಸಂಬಂಧಗಳ ಹುಡುಕಾಟವೇ 'ಮರೆತುಹೋದವರು' ಎಂಬ ಧಾರಾವಾಹಿ. ಈ ಧಾರಾವಾಹಿ ಕೂಡ ಸಿರಿ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಿ ವೀಕ್ಷಕರ ಮನಗೆದ್ದಿದೆ.
Published by:Annappa Achari
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ