ತಮಿಳು ನಟ ವಿಜಯ್​ಗೆ ಮಾಜಿ ಕೇಂದ್ರ ಸಚಿವರೊಬ್ಬರು ಛೀಮಾರಿ ಹಾಕಿದ್ದು ಏಕೆ ಗೊತ್ತಾ?

news18
Updated:June 25, 2018, 12:39 PM IST
ತಮಿಳು ನಟ ವಿಜಯ್​ಗೆ ಮಾಜಿ ಕೇಂದ್ರ ಸಚಿವರೊಬ್ಬರು ಛೀಮಾರಿ ಹಾಕಿದ್ದು ಏಕೆ ಗೊತ್ತಾ?
news18
Updated: June 25, 2018, 12:39 PM IST
ನ್ಯೂಸ್​ 18 ಕನ್ನಡ 

ತಮಿಳು ನಟ ವಿಜಯ್‍ಗೆ ಮಾಜಿ ಕೇಂದ್ರ ಸಚಿವರೊಬ್ಬರು ಛೀಮಾರಿ ಹಾಕಿದ್ದಾರೆ. ನಿಮಗೆ ನಾಚಿಕೆ ಆಗಬೇಕು ಅಂತ ತರಾಟೆಗೆ ತೆಗೆದುಕೊಂಡಿದ್ದಾರೆ. ಅರೇ ! ಏನು ವಿಷಯ? ಅಷ್ಟಕ್ಕೂ ವಿಜಯ್ ಮಾಡಿದ ತಪ್ಪಾದರೂ ಏನು ಅಂತೀರಾ? ಈ ಕುರಿತ ಒಂದು ಆಸಕ್ತಿಕರ ವರದಿ ಇಲ್ಲಿದೆ.

`ಮರ್ಸೆಲ್' ನಂತರ ನಟ ವಿಜಯ್ ಮತ್ತೊಂದು ವಿವಾದಕ್ಕೆ ಸಿಲುಕಿದ್ದಾರೆ. ಈ ಬಾರಿ ಅವರು ವಿವಾದಕ್ಕೀಡಾಗಿರೋದು 'ಸರ್ಕಾರ್' ಚಿತ್ರದ ಪೋಸ್ಟರ್ ವಿಚಾರವಾಗಿ. ಇದರ ಅಸಲಿ ಮ್ಯಾಟರ್ ಏನಪ್ಪ ಅಂದರೆ ? ನಟ ವಿಜಯ್ ಹಾಗೂ ಮುರುಗದಾಸ್ ಮಾಡುತ್ತಿರುವ 'ಸರ್ಕಾರ್' ಎಂಬ ಚಿತ್ರ ಬರುತ್ತಿದೆ. ಇತ್ತೀಚೆಗಷ್ಟೆ ಇದರ ಫಸ್ಟ್​ಲುಕ್ ಪೋಸ್ಟರ್ ಬಿಡುಗಡೆಯಾಗಿದ್ದು, ಇದರಲ್ಲಿ ವಿಜಯ್ ಕೈಯಲ್ಲಿ ಸಿಗರೇಟ್ ಹಿಡಿದು, ಸ್ಟೈಲಿಶ್ ಆಗಿ ಪೋಸ್ ಕೊಟ್ಟಿದ್ದಾರೆ.

ಇದನ್ನ ನೋಡಿ ಕೆಂಡಾಮಡಲವಾಗಿರೋ ಮಾಜಿ ಕೇಂದ್ರ ಸಚಿವ ಅನ್ಬುಮಣಿ ರಾಮದಾಸ್ ಈ ಕುರಿತು ಟ್ವೀಟ್ ಮಾಡಿದ್ದಾರೆ. ನಿಮಗೆ ನಾಚಿಕೆಯಾಗಬೇಕು, ಒಬ್ಬ ನಟನಾಗಿ ಧೂಮಪಾನಕ್ಕೆ ಪ್ರಚಾರ ನೀಡುತ್ತೀದ್ದೀರಲ್ಲ ಎಂದು ಕಿಡಿಕಾರಿದ್ದಾರೆ.

 ಅಂದಹಾಗೆ ಇದೇ ಅನ್ಬುಮಣಿ ಅವರ ತಂದೆ ಎಸ್ ರಾಮದಾಸ್, 'ಬಾಬಾ' ಚಿತ್ರದ ವೇಳೆ ರಜಿನಿಗೂ ತರಾಟೆ ತೆಗೆದುಕೊಂಡಿದ್ದರು. ನಿಮಗೆಲ್ಲ ಗೊತ್ತಿದೆ ಸ್ಟೈಲ್ ಐಕಾನ್ ರಜಿನಿ ಕೈಯಲ್ಲಿ ಸಿಗರೇಟ್ ಹಿಡಿದರೂ ಸ್ಟೈಲಿಶ್ ಆಗಿ ಹಿಡಿತಾರೆ. ಇನ್ನೂ ಅವರು ಸಿಗರೇಟು ಸೇದುವುದರಲ್ಲೂ ಒಂದು ಸ್ಟೈಲ್ ಇದೆ. ಅವರ ಪ್ರತಿ ಚಿತ್ರದಲ್ಲೂ ಧೂಮಪಾನದ ದೃಶ್ಯ ಅನ್ನೋದು ಸಾಮಾನ್ಯ ಎನ್ನುವಂತಿರುತ್ತಿತ್ತು. ಹೀಗಾಗಿ ರಾಮ್‍ದಾಸ್ ಆ ಸಮಯಕ್ಕೆ ರಜಿನಿಗೆ ತರಾಟೆಗೆ ತೆಗೆದುಕೊಂಡಿದ್ದರು.

 ಲಕ್ಷಾಂತರ ಜನ ನಿಮ್ಮನ್ನ ಅನುಸರಿಸುತ್ತಾರೆ. ನೀವು ಈ ರೀತಿ ತೆರೆಯ ಮೇಲೆ ಧೂಮಪಾನ ಮಾಡೋದನ್ನ ವಿಜೃಂಭಿಸಿದಷ್ಟೂ ನಿಮ್ಮ ಅಭಿಮಾನಿಗಳು ಸಹಿತ ಅದನ್ನೇ ಅನುಸರಿಸುತ್ತಾರೆ. ಹೀಗಾಗಿ ನೀವು ತೆರೆಯ ಮೇಲೆ ಸಿಗರೇಟ್​ ಹಿಡಿದು ಪೋಸು ಕೊಡುವುದನ್ನು ಬಿಡಬೇಕು ಅಂತ ಆಗ್ರಹಿಸಿದ್ದರು. ಇದಕ್ಕೆ ಸಕರಾತ್ಮಕವಾಗಿ ಸ್ಪಂದಿಸಿದ ರಜಿನಿ ಮುಂದಿನ ಚಿತ್ರಗಳಲ್ಲಿ ಸಿಗರೇಟ್ ಸೇದುವ ದೃಶ್ಯಗಳಿಗೆ ನೋ ಅಂದರು.

ಸದ್ಯ ವಿಜಯ್ ತಮಿಳು ಚಿತ್ರರಂಗದ ಟಾಪ್‍ಸ್ಟಾರ್ ಅವರನ್ನ ಲಕ್ಷಾಂತರ ಜನರು ಮಾದರಿಯಾಗಿ ತೆಗೆದುಕೊಂಡಿದ್ದಾರೆ. ರಜಿನಿಯ ದಾರಿಯಲ್ಲೇ ವಿಜಯ್ ನಡೀತಾರಾ? ತೆರೆ ಮೇಲೆ ಧೂಮಪಾನ ಮಾಡೋದನ್ನ ನಿಲ್ಲಿಸುತ್ತಾರಾ ಅನ್ನೋದು ಸದ್ಯಕ್ಕಿರೋ ಪ್ರಶ್ನೆಯಾಗಿದೆ.
First published:June 25, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...