Karna Serial : ಮತ್ತೆ ಒಂದಾಗ್ತಾರಾ `ಅಗ್ನಿಸಾಕ್ಷಿ’ ಜೋಡಿ? ಕರ್ಣ ಸೀರಿಯಲ್​ನಲ್ಲಿ ವಿಜಯ್​ ಸೂರ್ಯ- ಸನ್ನಿಧಿ!

Karna Serial : ಹೊಸ ವಿಚಾರ ಅಂದರೆ ಜೀ ಕನ್ನಡದಲ್ಲಿ ಹೊಚ್ಚ ಹೊಸ ಸೀರಿಯಲ್​ವೊಂದು ಸೆಟ್ಟೇರಲಿದೆ. ಕರ್ಣ ಎಂಬ ಹೆಸರಿನ ಹೊಸ ಧಾರಾವಾಹಿಯೊಂದು ಶೀಘ್ರದಲ್ಲೇ ಆರಂಭವಾಗಲಿದೆ. ಈ ಸೀರಿಯಲ್​ನಲ್ಲಿ ಅಗ್ನಿ ಸಾಕ್ಷಿ ಮೂಲಕ ಹೆಸರು ಮಾಡಿದ್ದ ವಿಜಯ್​ ಸೂರ್ಯ ನಾಯಕ ನಟನಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ವಿಜಯ್ ಸೂರ್ಯ, ವೈಷ್ಣವಿ

ವಿಜಯ್ ಸೂರ್ಯ, ವೈಷ್ಣವಿ

  • Share this:
ಕರ್ನಾಟಕದಲ್ಲಿ 'ಅಗ್ನಿಸಾಕ್ಷಿ'(Agnisakshi) ಧಾರಾವಾಹಿ ಬಗ್ಗೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಯಾರ ಮನೆಗೆ ಹೋದರು ಅದೇ ಸೀರಿಯಲ್​(Serial) ನೋಡುತ್ತಿದ್ದರು. ಅಷ್ಟರ ಮಟ್ಟಿಗೆ ಆ ಸೀರಿಯಲ್​ ಸಖತ್​ ಫೇಮಸ್​ ಆಗಿತ್ತು. ಪುಟ್ಟ ಪುಟ್ಟ ಮಕ್ಕಳು ಕೂಡ ಟಿವಿ(TV)ಯಲ್ಲಿ 'ಅಗ್ನಿಸಾಕ್ಷಿ' ಧಾರಾವಾಹಿಯ ಶೀರ್ಷಿಕೆ ಗೀತೆ ಬಂತೆಂದರೆ ದನಿಗೂಡಿಸುತ್ತಿದ್ದರು. ಚಿಕ್ಕ ಮಕ್ಕಳಿಂದ ಹಿಡಿದು ವೃದ್ಧರು ಕೂಡ ಈ ಸೀರಿಯಲ್ ನೋಡುತ್ತಿದ್ದರು.  ಅದರಲ್ಲೂ ವಿಜಯ್​ ಸೂರ್ಯ(Vijay Surya) ಹಾಗೂ ವೈಷ್ಣವಿ(Vaishnavi) ಎಲ್ಲರ ಮನಸ್ಸನ್ನು ಗೆದ್ದರು. ಆರು ವರ್ಷಗಳಿಗೂ ಅಧಿಕ ಕಾಲ ಪ್ರಸಾರವಾಗಿದ್ದ 'ಅಗ್ನಿಸಾಕ್ಷಿ' ಧಾರಾವಾಹಿ ಟಿಆರ್‌ಪಿ(TRP)ಯಲ್ಲಿಯೂ ರೆಕಾರ್ಡ್ ಮಾಡಿತ್ತು. ಆ ಧಾರವಾಹಿ ಮರುಪ್ರಸಾರ(Re-Telecast) ಮಾಡಿದರೂ ಒಂದು ಎಪಿಸೋಡ್​ ಮಿಸ್​ ಮಾಡದೇ ನೋಡುವವರು ಇದ್ದಾರೆ. ಆ ಮಟ್ಟಕ್ಕೆ ಅಗ್ನಿಸಾಕ್ಷಿ ಧಾರಾವಾಹಿ ಜನರ ಮನಸ್ಸು ಗೆದ್ದಿದೆ. ಕೌಟುಂಬಿಕ ಕಲಹದ ಕಥೆಯಿದ್ದ ಈ ಧಾರಾವಾಹಿ ಹೆಂಗಳೆಯರ ಮನಸ್ಸು ಗೆದಿತ್ತು. ಹೊಸ ವಿಚಾರ ಏನಪ್ಪ ಅಂದರೆ. ಅಗ್ನಿಸಾಕ್ಷಿ ಜೋಡಿ  ಮತ್ತೆ ಒಂದಾಗುತ್ತಿದೆ ಎಂಬ ಸುದ್ದಿ ಕೇಳಿಬಂದಿದೆ . ಮತ್ತೆ ಈ ಜೋಡಿ ಕಿರುತೆರೆಯಲ್ಲಿ ಕಮಾಲ್​ ಮಾಡಲು ಒಟ್ಟಿಗೆ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಯಾವ ಸೀರಿಯಲ್​ನಲ್ಲಿ ಇವರಿಬ್ಬರು ಮತ್ತೆ ಒಟ್ಟಿಗೆ ನಟಿಸುತ್ತಾರೆ? ಯಾವ ಚಾನೆಲ್​ನ ಸೀರಿಯಲ್​? ಹೊಸ ಸೀರಿಯಲ್​ ಹೆಸರೇನು? ಈ ಎಲ್ಲ ಪ್ರಶ್ನೆಗಳಿಗೂ ಉತ್ತರ ಇಲ್ಲಿದೆ ನೋಡಿ..

ಕರ್ಣನಾಗಲಿದ್ದಾರೆ ವಿಜಯ್​ಸೂರ್ಯ್!

ಹೌದು, ಜೀ ಕನ್ನಡ ಮೊದಲಿನಿಂದಲೂ ಡಿಫ್ರೆಂಟ್​ ಡಿಫ್ರೆಂಟ್​ ಕಾನ್ಸೆಪ್ಟ್​ ಇರುವ ಸೀರಿಯಲ್​ ಹಾಗೂ ರಿಯಾಲಿಟಿ ಶೋ ಮಾಡಿ ಮೆಚ್ಚುಗೆ ಗಳಿಸಿದ್ದಾರೆ. ಈ ಚಾನೆಲ್​ನಲ್ಲಿ ಒಂದು ಸೀರಿಯಲ್​ನಲ್ಲಿ ಇದ್ಧ ಕಥೆಯಾಗಲಿ, ಕಾನ್ಸೆಪ್ಟ್​ ಆಗಲಿ ಇರುವುದಿಲ್ಲ. ಒಂದಕ್ಕಿಂತ ಒಂದು ವಿಭಿನ್ನವಾಗಿರುತ್ತೆ. ಜೊತೆ ಜೊತೆಯಲಿ, ಹಿಟ್ಲರ್​ ಕಲ್ಯಾಣ ಹೀಗೆ ಹೊಸ ಹೊಸ ಕಥೆಗಳನ್ನು ಇಟ್ಟುಕೊಂಡು ಸೀರಿಯಲ್​ ಪ್ರಸಾರವಾಗುತ್ತಿದೆ. ಹೊಸ ವಿಚಾರ ಅಂದರೆ ಜೀ ಕನ್ನಡದಲ್ಲಿ ಹೊಚ್ಚ ಹೊಸ ಸೀರಿಯಲ್​ವೊಂದು ಸೆಟ್ಟೇರಲಿದೆ. ಕರ್ಣ ಎಂಬ ಹೆಸರಿನ ಹೊಸ ಧಾರಾವಾಹಿಯೊಂದು ಶೀಘ್ರದಲ್ಲೇ ಆರಂಭವಾಗಲಿದೆ. ಈ ಸೀರಿಯಲ್​ನಲ್ಲಿ ಅಗ್ನಿ ಸಾಕ್ಷಿ ಮೂಲಕ ಹೆಸರು ಮಾಡಿದ್ದ ವಿಜಯ್​ ಸೂರ್ಯ ನಾಯಕ ನಟನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಕಿರುತೆರೆ ಬಿಟ್ಟು ಬೆಳ್ಳಿತೆರೆಗೆ ವಿಜಯ್​ ಸೂರ್ಯ ಹೋಗಿದ್ದರು. ಇದೀಗ ಮತ್ತೆ ಕಿರುತೆರೆಗೆ ಕಮ್​ ಬ್ಯಾಕ್​ ಮಾಡಲಿದ್ದಾರೆ.

ಇದನ್ನು ಓದಿ : ಊಟ ಇಲ್ಲಾಂದ್ರೂ ಓಕೆ, ಸೆಕ್ಸ್​ ಬೇಕೇ ಬೇಕಂತೆ ಸಮಂತಾಗೆ: ವಿಡಿಯೋ ವೈರಲ್​!

ವಿಜಯ್​ಸೂರ್ಯಗೆ ಮತ್ತೆ ವೈಷ್ಣವಿ ಜೋಡಿ?

ಅಗ್ನಿಸಾಕ್ಷಿ ಸೀರಿಯಲ್​ ಮೂಲಕ ಈ ಜೋಡಿ ಸಖತ್​ ಹೆಸರು ಮಾಡಿದ್ದರು. ಇದೀಗ ಮತ್ತೆ ಕಿರುತೆರೆಗೆ ಇಬ್ಬರು ಕಮ್​ ಬ್ಯಾಕ್​ ಮಾಡುವ ಸಾಧ್ಯತೆ ಹೆಚ್ಚಿದೆ. ವಿಜಯ್ ಸೂರ್ಯ ನಟನೆಯ ಕರ್ಣ ಸಿನಿಮಾಗೆ ನಟಿ ಹುಡುಕಾಟದಲ್ಲಿ ಸೀರಿಯಲ್​ ತಂಡ ಇದೆ. ಈ ಬಗ್ಗೆ ವೈಷ್ಣವಿ ಅವರೊಂದಿಗೆ ಮಾತುಕತೆ ನಡೆಸಲಾಗಿದೆ ಎಂದು ಹೇಳಲಾಗುತ್ತಿದೆ. ಬಿಗ್​ಬಾಸ್​ನಲ್ಲಿದ್ದಷ್ಟು ದಿನ ಸನ್ನಿಧಿ ಎಲ್ಲರೊಂದಿಗೆ ಒಳ್ಳೆಯ ಬಾಂಧ್ಯವ ಹೊಂದಿದ್ದರು. ಬಿಗ್​ ಬಾಸ್​ ಮನೆಯಿಂದ ಹೊರಗಡೆ ಬಂದ ಬಳಿಕ ಕೆಲವು ಸಿನಿಮಾಗಳಿಂದ ಕೂಡ ಸನ್ನಿಧಿಗೆ ಆಫರ್​​ಗಳು ಬಂದಿಯಂತೆ. ಎಲ್ಲ ಅಂದುಕೊಂಡಂತೆ ನಡೆದರೆ ಕರ್ಣ ಸೀರಿಯಲ್​ನಲ್ಲಿ ವಿಜಯ್​ ಸೂರ್ಯ ಮತ್ತು ಸನ್ನಿಧಿ ಒಟ್ಟಾಗಿ ನಟಿಸಲಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದೆ.

ಇದನ್ನು ಓದಿ : ನಮಸ್ಕಾರ.. ನಮಸ್ಕಾರ.. ನಮಸ್ಕಾರ.. : ಮತ್ತೆ ಕಿರುತೆರೆಗೆ ಬಂದ Golden Star Ganesh !

ಕರ್ಣ ಸೀರಿಯಲ್​ಗೆ ರಾಮ್​ಜಿ ಪ್ರೋಡಕ್ಷನ್​!

ವಿಜಯ್​ ಸೂರ್ಯ ನಾಯಕನಟನಾಗಿ ಕಾಣಿಸಿಕೊಳ್ಳುತ್ತಿರುವ ಕರ್ಣ ಸೀರಿಯಲ್​ಗೆ ರಾಮ್​ ಜಿ ಸಂಸ್ಥೆ ಬಂಡವಾಳ ಹೂಡಲಿದೆ. ಈಗಾಗಲೇ ಪುಟ್ಟಗೌರಿ, ನಾಗಿಣಿ ಸೇರಿ ಹಲವು ಸೀರಿಯಲ್​ಗಳನ್ನ ನಿರ್ಮಿಸಿದ್ದಾರೆ. ಈಗ ವಿಜಯ್​ ಸೂರ್ಯ ನಟಿಸುತ್ತಿರುವ ಕರ್ಣ ಸೀರಿಯಲ್​ ಅಂದುಕೊಂಡ ಕೆಲಸ ನಡೆದರೆ, ಮುಂದಿನ ಜನವರಿಯಿಂದ ಶೂಟಿಂಗ್​ ಶುರುವಾಗಲಿದೆ ಎಂಬ ಮಾಹಿತಿ ಸಿಕ್ಕಿದೆ.
Published by:Vasudeva M
First published: