HOME » NEWS » Entertainment » VIJAY STARRER TAMIL MOVIE BIGIL NEW SONG IS GETTING VERY GOOD RESPONSE AE

Bigil: ಸಖತ್ ಸದ್ದು ಮಾಡ್ತಿದೆ ಬಿಗಿಲ್ ಸಾಂಗ್ !

Vijay: ಬಿಗಿಲ್ ಒಂದು ಸ್ಪೋರ್ಟ್ಸ್​​ ಆ್ಯಕ್ಷನ್ ಚಿತ್ರವಾಗಿದ್ದು, ಮರ್ಸಲ್ ಯಶಸ್ಸಿನ ಬಳಿಕ ಅಟ್ಲೀ ಕುಮಾರ್​ ಮತ್ತೆ ವಿಜಯ್ ಅವರ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಈಗಾಗಲೇ ಬಿಡುಗಡೆಯಾಗಿರುವ ಈ ಚಿತ್ರದ ಹಾಡು ಸೂಪರ್ ಹಿಟ್​ ಆಗಿದೆ.

Anitha E | news18-kannada
Updated:September 5, 2019, 10:48 AM IST
Bigil: ಸಖತ್ ಸದ್ದು ಮಾಡ್ತಿದೆ ಬಿಗಿಲ್ ಸಾಂಗ್ !
ಬಿಗಿಲ್​ ಸಿನಿಮಾದ ಪೋಸ್ಟರ್​
  • Share this:
ಕಾಲಿವುಡ್ ಇಳಯದಳಪತಿ ವಿಜಯ್‍ ಅವರ 63ನೇ ಸಿನಿಮಾ 'ಬಿಗಿಲ್'. ಈಗಾಗಲೇ ವಿಜಯ್​,  ವಿಭಿನ್ನ ಲುಕ್‍ಗಳಿರುವ ಫಸ್ಟ್ ಲುಕ್ ಪೋಸ್ಟರ್​ಗಳಿಂದಲೇ ಸಾಕಷ್ಟು ಕುತೂಹಲ ಮೂಡಿಸಿದ್ದಾರೆ.

'ಬಿಗಿಲ್' ಒಂದು ಸ್ಪೋರ್ಟ್ಸ್​​ ಆ್ಯಕ್ಷನ್ ಚಿತ್ರವಾಗಿದ್ದು, 'ಮರ್ಸಲ್' ಯಶಸ್ಸಿನ ಬಳಿಕ ಅಟ್ಲೀ ಕುಮಾರ್​ ಮತ್ತೆ ವಿಜಯ್ ಅವರ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಈಗಾಗಲೇ ಬಿಡುಗಡೆಯಾಗಿರುವ ಈ ಚಿತ್ರದ ಹಾಡು ಸೂಪರ್ ಹಿಟ್​ ಆಗಿದೆ.

ಬಿಗಿಲ್
'ಬಿಗಿಲ್' ಸಿನಿಮಾದಲ್ಲಿ ವಿಜಯ್​


 

ಇದರ ಬೆನ್ನಲ್ಲೇ  ಇತ್ತೀಚೆಗಷ್ಟೇ ಚಿತ್ರತಂಡ ಒಂದು ಪೆಪ್ಪಿ ಲಿರಿಕಲ್ ಸಾಂಗ್ ಬಿಡುಗಡೆ ಮಾಡಿದೆ. ಈ ಲಿರಿಕಲ್​ ವಿಡಿಯೋ ಕಮ್​ ಮೇಕಿಂಗ್​ ವಿಡಿಯೋ ಸಖತ್ ಟ್ರೆಂಡಿಯಾಗಿ ಮೂಡಿ ಬಂದಿದೆ. ಈ ಹಾಡಿಗೆ ಯೂಟ್ಯೂಬ್​ನಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.ಬರೋಬ್ಬರಿ ಹತ್ತು ವರ್ಷಗಳ ಬಳಿಕ ವಿಜಯ್‍ಗೆ ನಯನ ತಾರಾ ಈ ಸಿನಿಮಾದಲ್ಲಿ ಜೋಡಿಯಾಗಿದ್ದಾರೆ. ಜತೆಗೆ ವಿವೇಕ್, ಜಾಕಿ ಶ್ರಾಫ್, ಯೋಗಿಬಾಬು ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಬರೋಬ್ಬರಿ 140 ಕೋಟಿ ಬಜೆಟ್‍ನಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ಎ.ಆರ್. ರೆಹಮಾನ್​ ಸಂಗೀತ ನೀಡಿದ್ದಾರೆ. ಎಲ್ಲವೂ ಅಂದುಕೊಂಡಂತಾದರೆ 'ಬಿಗಿಲ್' ಇದೇ ದೀಪಾವಳಿ ಹಬ್ಬಕ್ಕೆ ತೆರೆ ಕಾಣಲಿದೆ. 

ಇದನ್ನೂ ಓದಿ: ಮುಂಬೈನಲ್ಲಿ 'ಪೈಲ್ವಾನ್'​ ಅಬ್ಬರ: ಕಿಚ್ಚನನ್ನು ಕೊಂಡಾಡಿದ  ಪಾರುಲ್​ ಯಾದವ್​..!

 

Regina Cassandra: ಹೊಸ ಫೋಟೋಶೂಟ್​ನಲ್ಲಿ ಮಿಂಚಿದ ಎವರು ಸಿನಿಮಾ ಖ್ಯಾತಿಯ ಹಾಟ್​ ನಟಿ ರೆಜಿನಾ..!
 

 

 
First published: September 4, 2019, 3:35 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories