Beast: ಯಾರಿಗೂ ತಿಳಿಸದೆ ಒಟಿಟಿಗೆ ಬಂದ ಬೀಸ್ಟ್​! ಥಿಯೇಟರ್​ನಲ್ಲೇ ಆಗ್ಲಿಲ್ಲ, ಇನ್ನೂ ಇಲ್ಲೇನ್ ಮಾಡ್ತಾನೆ? ಎಂದು ಟ್ರೋಲ್​

ಬೀಸ್ಟ್​ ಸಿನಿಮಾದಲ್ಲಿ ಲಾಜಿಕ್ ಇಲ್ಲ, ನಾಯಕಿ ಪಾತ್ರಕ್ಕೆ ಮಹತ್ವ ಇಲ್ಲ. ಇದು ವಿಜಯ್ ಅವರ ಸಿನಿಮಾ ಅಲ್ಲ. ನಿರ್ದೇಶಕ ನೆಲ್ಸನ್​ ವಿಜಯ್​ ಅವರ ಜೊತೆ ಸಿನಿಮಾ ಮಾಡಿ ಇಮೇಜ್ ಡ್ಯಾಮೇಜ್​ ಮಾಡಿಬಿಟ್ರು ಎಂದು ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದರು. ಇದೀಗ ಈ ಸಿನಿಮಾ ಯಾರಿಗೂ ತಿಳಿಸದೇ ಸಡನ್​ ಆಗಿ ಒಟಿಟಿಗೆ ರಿಲೀಸ್​ ಆಗಿದೆ.

ಬೀಸ್ಟ್​ ಚಿತ್ರದ ಪೋಸ್ಟರ್​

ಬೀಸ್ಟ್​ ಚಿತ್ರದ ಪೋಸ್ಟರ್​

  • Share this:
ರಾಕಿಂಗ್ ಸ್ಟಾರ್ ಯಶ್ (Rocking Star Yash) ನಟನೆಯ ಕೆಜಿಎಫ್-2 (KGF 2)  ಸಿನಿಮಾ ಅರ್ಭಟದ ಮುಂದೆ ಬೀಸ್ಟ್​ (Beast) ಹೀನಾಯ ಸೋಲುಂಡಿತ್ತು. ಏಪ್ರಿಲ್ 13ರಂದು ತೆರೆಗೆ ಬಂದ ದಳಪತಿ ವಿಜಯ್ (Vijay) ನಟನೆಯ ಬೀಸ್ಟ್ ಸಿನಿಮಾಗೆ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಮೊದಲ ದಿನ ಬಾಕ್ಸ್ ಆಫೀಸ್(Box Office)ನಲ್ಲಿ ಉತ್ತಮ ಕಮಾಯಿ ಮಾಡಿದ್ದ ಬೀಸ್ಟ್, ಕೆಜಿಎಫ್-2 ಬಿಡುಗಡೆ ಬಳಿಕ ದೂಳಿಪಾಟ ಆಗಿತ್ತು. ತಮಿಳುನಾಡಿನಲ್ಲೇ ಬೀಸ್ಟ್​ ಸಿನಿಮಾ ಪ್ರದರ್ಶನಗೊಳ್ಳುತ್ತಿರುವ ಚಿತ್ರಮಂದಿರಗಳು ಖಾಲಿ ಹೊಡೆಯುತ್ತಿವೆ. ಬೀಸ್ಟ್​ ಸಿನಿಮಾ ನೋಡಿದ ಪ್ರತಿಯೊಬ್ಬರು ವಿಜಯ್​ ಈ ಸಿನಿಮಾ ಮಾಡಬಾರದಿತ್ತು ಎಂದು ಪ್ರತಿಕ್ರಿಯೆ ನೀಡಿದ್ದರು. ದಳಪತಿ ವಿಜಯ್​ ಕೆರಿಯರ್​ನಲ್ಲೇ ಇಷ್ಟು ಕೆಟ್ಟ ಸಿನಿಮಾ ಬಂದಿರಲಿಲ್ಲ ಎಂದು ಸ್ವತಃ ಅಭಿಮಾನಿಗಳೇ ಮಾತನಾಡಿದ್ದರು. ಇದೀಗ ಈ ಸಿನಿಮಾ ಒಟಿಟಿ(OTT)ಗೆ ಬಂದಿದೆ.

ಒಟಿಟಿಗೆ ಬಂದ ವಿಜಯ್​ರ ಬೀಸ್ಟ್​ ಸಿನಿಮಾ!

ಹೌದು, ಬೀಸ್ಟ್​ ಸಿನಿಮಾದಲ್ಲಿ ಲಾಜಿಕ್ ಇಲ್ಲ, ನಾಯಕಿ ಪಾತ್ರಕ್ಕೆ ಮಹತ್ವ ಇಲ್ಲ. ಇದು ವಿಜಯ್ ಅವರ ಸಿನಿಮಾ ಅಲ್ಲ. ನಿರ್ದೇಶಕ ನೆಲ್ಸನ್​ ವಿಜಯ್​ ಅವರ ಜೊತೆ ಸಿನಿಮಾ ಮಾಡಿ ಇಮೇಜ್ ಡ್ಯಾಮೇಜ್​ ಮಾಡಿಬಿಟ್ರು ಎಂದು ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದರು. ಇದೀಗ ಈ ಸಿನಿಮಾ ಯಾರಿಗೂ ತಿಳಿಸದೇ ಸಡನ್​ ಆಗಿ ಒಟಿಟಿಗೆ ರಿಲೀಸ್​ ಆಗಿದೆ. ಹಿಂದಿ, ತೆಲುಗು, ಕನ್ನಡ ಹಾಗೂ ಮಲಯಾಳಂ ವರ್ಶನ್ ಸಿನಿಮಾ ನೆಟ್​ಫ್ಲಿಕ್ಸ್​ನಲ್ಲಿ ಸ್ಟ್ರೀಮ್​ ಆಗುತ್ತಿದೆ. ಸನ್​ ನೆಟ್​ವರ್ಕ್​ನಲ್ಲಿ ತಮಿಳು ವರ್ಶನ್​ ಬೀಸ್ಟ್​​ ಸಿನಿಮಾ ಲಭ್ಯವಿದೆ.

ಒಟಿಟಿಯಲ್ಲಾದ್ರೂ  ಸೌಂಡ್​ ಮಾಡುತ್ತಾ ಬೀಸ್ಟ್​?


ವಿಜಯ್ ಸಂದರ್ಶನ ನೀಡದೆ 10 ವರ್ಷಗಳ ಮೇಲಾಗಿತ್ತು. ಬೀಸ್ಟ್ ಬಿಡುಗಡೆ ವೇಳೆ ಸಂದರ್ಶನ ನೀಡುವ ಮೂಲಕ ಅಚ್ಚರಿ ಮೂಡಿಸಿದ್ದರು. ಈ ವೇಳೆ ವಿಜಯ್ ಅನೇಕ ವಿಚಾರಗಳನ್ನು ಬಹಿರಂಗ ಪಡಿಸಿದ್ದರು. 10 ವರ್ಷಗಳು ಸಂದರ್ಶನ ನೀಡದೆ ಇರಲು ಕಾರಣವನ್ನು ತಿಳಿಸಿದ್ದರು. ಇಷ್ಟಾದರೂ ಬೀಸ್ಟ್ ಬಾಕ್ಸ್ ಆಫೀಸ್ ನಲ್ಲಿ ಸಕ್ಸಸ್ ಕಂಡಿಲ್ಲ. ಒಟಿಟಿಯಲ್ಲಾದರೂ ಲಾಭಗಳಿಸುತ್ತಾ ಎನ್ನುವುದು ಪ್ರೇಕ್ಷಕರ ಕುತೂಹಲ.

ಇದನ್ನೂ ಓದಿ: Keerthy Suresh ಮೇಲೆ ಹಲ್ಲೆ-ಫೋಟೋಗಳು ವೈರಲ್, ನಟಿಯ ಮುಖ ಕಂಡು ಬೆಚ್ಚಿ ಬಿದ್ದ ಫ್ಯಾನ್ಸ್​! ಅಸಲಿಯತ್ತೇನು?

ಸಿನಿಮಾ ಸಕ್ಸಸ್​ ಅಂತ ಪಾರ್ಟಿ ಮಾಡಿದ ಟೀಂ!

ನಿಮಾ ಫ್ಲಾಪ್​ ಆದರೂ, ದಳಪತಿ ವಿಜಯ್​ ಅವರ ಮನೆಯಲ್ಲಿ ಬೀಸ್ಟ್​ ಚಿತ್ರತಂಡ ಪಾರ್ಟಿ ಮಾಡಿದೆ. ವಿಜಯ್​ ಚಿತ್ರತಂಡದ ಎಲ್ಲರನ್ನೂ ಮನೆಗೆ ಕರೆಸಿ ಹೊಟ್ಟೆ ತುಂಬಿಸಿದ್ದಾರೆ. ಈ ಪಾರ್ಟಿಯ ಚಿತ್ರಗಳು ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗುತ್ತಿದೆ. ಈ ಪಾರ್ಟಿಯಲ್ಲಿ ಸಿನಿಮಾದ ನಿರ್ದೇಶಕ ನೆಲ್ಸನ್​ ದಿಲೀಪ್​ ಕುಮಾರ್​, ಚಿತ್ರದ ನಟಿ ಪೂಜಾ ಹೆಗ್ಡೆ, ಸಂಗೀತ ನಿರ್ದೇಶಕ ಅನಿರುದ್ಧ್​ ರವಿಚಂದರ್​ ಸೇರಿ ಚಿತ್ರತಂಡದ ಹಲವರು ಭಾಗಿಯಾಗಿದ್ದರು. "ಈ ಪಾರ್ಟಿ ಆಯೋಜಿಸಿದ್ದಕ್ಕೆ ದಳಪತಿ ವಿಜಯ್​ ಅವರಿಗೆ ಧನ್ಯವಾದಗಳು. ವಿಜಯ್​ ಅವರ ಪ್ರೀತಿ-ಪ್ರೋತ್ಸಹಕ್ಕೆ ಸದಾ ನಾನು ಚಿರಋಣಿ" ಎಂದು ನೆಲ್ಸನ್​ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ರಣವೀರ್​ ಸಿನಿಮಾಗೆ ಬಿಡುಗಡೆ​ಗೂ ಮುನ್ನವೇ ಸಂಕಷ್ಟ! ರಿಲೀಸ್​ ಆಗುತ್ತಾ 'ಜಯೇಶ್‌ಭಾಯ್ ಜೋರ್ದಾರ್'?

ಸಿಕ್ಕಾಪಟ್ಟೆ ಟ್ರೋಲ್​ ಆದ ಬೀಸ್ಟ್​ ಚಿತ್ರತಂಡ!

ಈಗಲೂ ಪ್ರೇಕ್ಷಕರು ಕೆಜಿಎಫ್-2 ನೋಡಲು ಮುಗಿಬಿದ್ದು ಟಿಕೆಟ್ ಬುಕ್ (Ticket Book) ಮಾಡುತ್ತಿದ್ದಾರೆ. ಮತ್ತೆ ಈ ವಾರ ತಮಿಳುನಾಡಿನಲ್ಲಿ ಕೆಜಿಎಫ್​ 2 ಸಿನಿಮಾಗಳು ಹೆಚ್ಚಿನ ಥಿಯೇಟರ್​ಗಳಲ್ಲಿ ಪ್ರದರ್ಶನಗೊಳ್ಳುತ್ತಿದೆ. ಬೀಸ್ಟ್ ಸಿನಿಮಾ ತಮಿಳು, ತೆಲುಗು, ಮಲಯಾಳಂ, ಕನ್ನಡ ಮತ್ತು ಹಿಂದಿ ಭಾಷೆಯಲ್ಲಿ ತೆರೆಗೆ ಬಂದಿತ್ತು. ಆದರೆ, ಹೀನಾಯವಾಗಿ ಸೋಲುಂಡಿತ್ತು. ಹೀಗಿದ್ದರೂ, ಚಿತ್ರತಂಡ ಪಾರ್ಟಿ ಮಾಡಿರೋದು ಟ್ರೋಲ್​ಗೆ ಗುರಿಯಾಗಿದೆ.

Published by:Vasudeva M
First published: