Bigil: ಭರ್ಜರಿ ಬಿಗಿಲ್ ಟ್ರೈಲರ್​ಗೆ ಸಿನಿಪ್ರಿಯರು ಫುಲ್ ಫಿದಾ..!

Bigil Trailer: ಬಿಗಿಲ್​ಗೆ ನಾಯಕಿಯಾಗಿ ಲೇಡಿ ಸೂಪರ್ ಸ್ಟಾರ್ ನಯನತಾರಾ ಬಣ್ಣ ಹಚ್ಚಿದ್ದು, ಇವರೊಂದಿಗೆ ಕತಿರ್, ಜಾಕಿ ಶ್ರಾಫ್, ಯೋಗಿ ಬಾಬು, ಕನ್ನಡತಿ ವರ್ಷ ಬೊಳ್ಳಮ್ಮ ಕೂಡ ಚಿತ್ರದಲ್ಲಿ ನಟಿಸಿದ್ದಾರೆ.

news18-kannada
Updated:October 13, 2019, 1:57 PM IST
Bigil: ಭರ್ಜರಿ ಬಿಗಿಲ್ ಟ್ರೈಲರ್​ಗೆ ಸಿನಿಪ್ರಿಯರು ಫುಲ್ ಫಿದಾ..!
ಬಿಗಿಲ್​ ಸಿನಿಮಾದ ಪೋಸ್ಟರ್​
  • Share this:
ಕಾಲಿವುಡ್​ನ ಮಾಸ್ ಮಹಾರಾಜ ಇಳಯ ದಳಪತಿ ವಿಜಯ್ ಅಭಿನಯದ ಬಹುನಿರೀಕ್ಷಿತ 'ಬಿಗಿಲ್' ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಲವ್, ಸೆಂಟಿಮೆಂಟ್​, ಕ್ರೀಡಾ ಸ್ಫೂರ್ತಿಯಿಂದ ಕೂಡಿರುವ ಈ ವಿಡಿಯೋ ತುಣುಕು ಸಿನಿಪ್ರಿಯರ ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ.

ಚಿತ್ರದಲ್ಲಿ ವಿಜಯ್ ಎರಡು ಶೇಡ್ ಹೊಂದಿರುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಒಂದರಲ್ಲಿ ಫುಟ್​ಬಾಲ್ ಆಟಗಾರ, ಕೋಚ್ ಮೈಕೆಲ್ ಆಗಿ ಎಂಟ್ರಿ ಕೊಡಲಿದ್ದಾರೆ. ಮತ್ತೊಂದರಲ್ಲಿ ಖಳರನ್ನು ಚೆಂಡಾಡುವ ರಗಡ್ ರಾಯಪ್ಪನ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಇದನ್ನೂ ಓದಿ: ಕನ್ನಡ ಚಿತ್ರನಟನ ಮಗಳೊಂದಿಗೆ ಕ್ರಿಕೆಟಿಗ ಕೆ.ಎಲ್ ರಾಹುಲ್ ಲವ್ವಿ-ಡವ್ವಿ?

ಸಖತ್ ಕಲರ್​ಫುಲ್ ಆಗಿ ಮೂಡಿ ಬಂದಿರುವ ಟ್ರೈಲರ್​ನಲ್ಲಿ ಮಾಸ್ ಡೈಲಾಗ್ ಅಣಿಮುತ್ತುಗಳನ್ನು ಇಳಯ ದಳಪತಿ ಉದುರಿಸಿದ್ದು, ಎಆರ್​. ರೆಹಮಾನ್ ಬ್ಯಾಕ್​ಗ್ರೌಂಡ್ ಮ್ಯೂಸಿಕ್, ನಾಯಕನ ಹೊಸ ಲುಕ್ ಹಾಗೂ ಡೈಲಾಗ್​ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.

ಇನ್ನು 'ಬಿಗಿಲ್'​ಗೆ ನಾಯಕಿಯಾಗಿ ಲೇಡಿ ಸೂಪರ್ ಸ್ಟಾರ್ ನಯನತಾರಾ ಬಣ್ಣ ಹಚ್ಚಿದ್ದು, ಇವರೊಂದಿಗೆ ಕತಿರ್, ಜಾಕಿ ಶ್ರಾಫ್, ಯೋಗಿ ಬಾಬು, ಕನ್ನಡತಿ ವರ್ಷ ಬೊಳ್ಳಮ್ಮ ಕೂಡ ಚಿತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾವನ್ನು ಎಜಿಎಸ್ ಎಂಟರ್ಟೈನ್ಮೆಂಟ್ ಸಂಸ್ಥೆ ನಿರ್ಮಿಸಿದ್ದು, 'ರಾಜಾ ರಾಣಿ', 'ಮೆರ್ಸಲ್' ಖ್ಯಾತಿಯ ಅಟ್ಲಿ ಆ್ಯಕ್ಷನ್ ಕಟ್ ಹೇಳಿದ್ದಾರೆ. ಅಕ್ಟೋಬರ್ 27 ರಂದು ದೀಪಾವಳಿ ಹಬ್ಬದಂದು ವಿಶ್ವದಾದ್ಯಂತ ಬಿಗಿಲ್ ಅಬ್ಬರ ಶುರುವಾಗಲಿದೆ.

 
First published:October 13, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading