ಮುತ್ತಯ್ಯ ಮುರಳೀಧರನ್ ಜೀವನಾಧಾರಿತ ಚಿತ್ರವಾದ '800' ಸಿನಿಮಾದಿಂದ ನಟ ವಿಜಯ್ ಸೇತುಪತಿ ಹೊರ ನಡೆದಿದ್ದಾರೆ. ಶ್ರೇಷ್ಠ ಬೌಲರ್ ಆಗಿದ್ದ ಮುತ್ತಯ್ಯ ಮುರಳೀಧರನ್ ಪಾತ್ರಕ್ಕೆ ಬಣ್ಣ ಹಚ್ಚಲು ಮುಂದಾಗಿದ್ದ ಸೇತುಪತಿ ವಿರುದ್ಧ ತಮಿಳುನಾಡಿನಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಇದರಿಂದಾಗಿ ಚಿತ್ರದಿಂದ ಹೊರನಡೆಯುವಂತೆ ಮುತ್ತಯ್ಯ ಮುರಳೀಧರನ್ ಅವರೇ ವಿಜಯ್ ಸೇತುಪತಿಗೆ ಟ್ವೀಟರ್ನಲ್ಲಿ ಮನವಿ ಮಾಡಿದ್ದಾರೆ. ಇದಕ್ಕೆ ಪ್ರತ್ಯುತ್ತರ ನೀಡಿರುವ ಅವರು, ಧನ್ಯವಾದ… ನಮಸ್ಕಾರ ಎಂದಿದ್ದಾರೆ. ನಟ ವಿಜಯ್ ಸೇತುಪತಿ ಚಿತ್ರದಿಂದ ಹೊರ ನಡೆದಿರುವ ಬಗ್ಗೆ ಸೇತುಪತಿ ಪ್ರಚಾರಕ ಕೂಡ ದೃಢಪಡಿಸಿದ್ದಾರೆ.
ವಿಜಯ್ ಸೇತುಪತಿ ಈ ಸಿನಿಮಾದಲ್ಲಿ ಭಾಗಿಯಾದಗಿನಿಂದ ತಮಿಳುನಾಡಿನಲ್ಲಿ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು. ಒಬ್ಬ ತಮಿಳು ನಟರಾಗಿ ಅವರ ಸಮುದಾಯದ ಭಾವನೆಗೆ ಧಕ್ಕೆ ತರುತ್ತಿದ್ದಾರೆ ಎಂಬ ಟೀಕೆ ವ್ಯಕ್ತವಾಗಿತ್ತು. ಅಲ್ಲದೇ #ShameonVijaySethupathi ಎಂಬ ಹ್ಯಾಷ್ಟ್ಯಾಗ್ ಮೂಲಕ ಸೇತುಪತಿ ವಿರುದ್ಧ ತಮಿಳಿಗರು ಆಕ್ರೋಶ ವ್ಯಕ್ತಪಡಿಸಿದ್ದರು.
நன்றி.. வணக்கம் 🙏🏻 pic.twitter.com/PMCPBDEgAC
— VijaySethupathi (@VijaySethuOffl) October 19, 2020
ವಿಜಯ್ ಸೇತುಪತಿಗೆ ಮುತ್ತಯ್ಯ ಮುರಳೀಧರನ್ ಪಾತ್ರ ಮಾಡದಂತೆ ದ್ರಾವಿಡ ಸಂಘ ಒತ್ತಾಯಿಸಿದ್ದಾರೆ. ಭಾರತೀಯ ಮೂಲದ ಶ್ರೀಲಂಕಾ ದೇಶದ ಪ್ರಜೆಯಾಗಿರುವ ಮುತ್ತಯ್ಯ ಅವರು ಸಿಂಹಳವನ್ನು ಬೆಂಬಲಿಸಿದವರು. ವಿಶ್ವಾದಾದ್ಯಂತ ತಮಿಳು ಅಭಿಮಾನಿಯನ್ನು ಹೊಂದಿರುವ ವಿಜಯ್ ಸೇತುಪತಿ ಈ ಚಿತ್ರ ಮಾಡಿದರೆ ತಮಿಳರ ಭಾವನೆಗೆ ವಿರುದ್ಧವಾಗುತ್ತದೆ ಈ ಹಿನ್ನಲೆಯಲ್ಲಿ ಮಾಡಬಾರದು ಎಂಬ ಕೂಗು ಕೇಳಿಬಂದಿತು.
MURALIDARAN BIOPIC... Motion poster of #MuralidaranBiopic... Titled #800TheMovie... Stars #VijaySethupathi as cricketer #MuthiahMuralidaran... Directed by #MSSripathy... Produced by Movie Train Motion Pictures and Vivek Rangachari. pic.twitter.com/9RuAeCK7BB
— taran adarsh (@taran_adarsh) October 13, 2020
ಕಳೆದ ವಾರವಷ್ಟೇ ಚಿತ್ರದ ಮೊದಲ ಪೋಸ್ಟರ್ ಬಿಡುಗಡೆಯಾಗಿತ್ತು. ಈ ಮೋಷನ್ ಪೋಸ್ಟರ್ ಥೇಟ್ ಮುತ್ತಯ್ಯ ಮುರಳೀಧರನ್ ರಂತೆ ಕಾಣುತ್ತಿದ್ದ ಅವರ ಈ ಲುಕ್ ಬೆರಗು ಮೂಡಿಸಿತ್ತು. ಅವರ ಫೋಟೊಗೆ ಪ್ರಶಂಸೆಗಳು ವ್ಯಕ್ತವಾಗಿದ್ದವು. ಇನ್ನು ಈ ಮೋಷನ್ ಪೋಸ್ಟರ್ನಲ್ಲಿರುವುದು ವಿಜಯ್ ಸೇತುಪತಿ ಕ್ಯಾರಿಕ್ಯಚರ್ ಆಗಿತ್ತು. ಮುರಳೀಧರನ್ ಅವರ ಚಿತ್ರವನ್ನು ಮಾರ್ಫ್ ಮಾಡಿ ನಟನನ್ನು ಹೋಲುವಂತೆ ಮಾಡಲಾಗಿತ್ತು. ಸಂಪೂರ್ಣ ಅನಿಮೇಟೆಡ್ ಗ್ರಾಫಿಕ್ಸ್ ಬಳಸಿ ಒಂದು ನಿಮಿಷದ ಮೋಷನ್ ಪೋಸ್ಟರ್ ನಲ್ಲಿ ಯುದ್ಧದಿಂದ ಹಾನಿಗೊಳಗಾದ ದೇಶದಲ್ಲಿ ಕ್ರಿಕೆಟಿಗನೊಬ್ಬ ಹುಟ್ಟಿದ ಕಥೆಯನ್ನು ಇದರಲ್ಲಿ ತೋರಿಸಲಾಗಿತ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ