• ಹೋಂ
  • »
  • ನ್ಯೂಸ್
  • »
  • ಮನರಂಜನೆ
  • »
  • Vijay Sethupathi: ಪುಷ್ಪ 2 ಸಿನಿಮಾದಲ್ಲಿ ವಿಜಯ್ ಸೇತುಪತಿ? ಕುತೂಹಲ ಹೆಚ್ಚಿಸುತ್ತಿದೆ ಹೊಸ ಅಪ್​ಡೇಟ್​

Vijay Sethupathi: ಪುಷ್ಪ 2 ಸಿನಿಮಾದಲ್ಲಿ ವಿಜಯ್ ಸೇತುಪತಿ? ಕುತೂಹಲ ಹೆಚ್ಚಿಸುತ್ತಿದೆ ಹೊಸ ಅಪ್​ಡೇಟ್​

ವಿಜಯ್ ಸೇತುಪತಿ

ವಿಜಯ್ ಸೇತುಪತಿ

Pushpa 2: ಇನ್ನೊಂದೆಡೆ ರಶ್ಮಿಕಾ ಪಾತ್ರಕ್ಕೆ ಕತ್ತರಿ ಹಾಕಲಾಗಿದೆ ಎಂಬ ಸುದ್ದಿ ಸಹ ಕೇಳಿ ಬಂದಿದೆ. ಇದರಲ್ಲಿ ಶ್ರೀವಲ್ಲಿ ಪಾತ್ರದಲ್ಲಿ ಸ್ವಲ್ಪ ಬದಲಾವಣೆ ಆಗಲಿದೆಯಂತೆ.  ಸದ್ಯದ ಮಾಹಿತಿ ಪ್ರಕಾರ ಪುಷ್ಪ 2 ಸಿನಿಮಾದಲ್ಲಿ ಹೆಚ್ಚು ಪುಷ್ಪರಾಜ್​ ಮೇಲೆ ಮಾತ್ರ ಫೋಕಸ್​ ಮಾಡಲಾಗಿದೆಯಂತೆ.

ಮುಂದೆ ಓದಿ ...
  • Share this:

ಕಳೆದ ವರ್ಷ ಬಿಡುಗಡೆಯಾದ ಪುಷ್ಪ (Pushpa) ಆ ವರ್ಷದ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರಗಳಲ್ಲಿ ಒಂದು ಎನಿಸಿಕೊಂಡಿದೆ. ಅಲ್ಲು ಅರ್ಜುನ್ (Allu Arjun) ಮತ್ತು ರಶ್ಮಿಕಾ ಮಂದಣ್ಣ (Rashmika Mandanna) ಪ್ರಮುಖ ಪಾತ್ರದಲ್ಲಿ ನಟಿಸಿದ್ದ ಆ ಸಿನಿಮಾ ದಾಖಲೆ ಬರೆದಿತ್ತು. ಈ ಸಿನಿಮಾದಲ್ಲಿ ಮಲಯಾಳಂ ನಟ ಫಹಾದ್ ಫಾಸಿಲ್‌ನ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದರು. ಒಟ್ಟಾರೆಯಾಗಿ ಪುಷ್ಟ ಸಿನಿಮಾ ಜನರಿಗೆ ಇಷ್ಟವಾಗಿ, ಸೂಪರ್ ಹಿಟ್​ ಎನಿಸಿಕೊಂಡಿತ್ತು. ಸದ್ಯ ಪುಷ್ಪ 2 ಸಿನಿಮಾ ತಯಾರಿಯ ಹಂತದಲ್ಲಿದೆ. ಆದರೆ ಈ ಸಿನಿಮಾ ಬಗ್ಗೆ ಬಹಳಷ್ಟು ಅಪ್​ಡೇಟ್​ಗಳು ಬರುತ್ತಿದ್ದು, ಅಭಿಮಾನಿಗಳಲ್ಲಿ ಕುತೂಹಲವನ್ನು ಹೆಚ್ಚಿಸುತ್ತಿದೆ.  ಪುಷ್ಪ 2 ಸಿನಿಮಾ ಶೂಟಿಂಗ್ ಆರಂಭವಾಗಿದೆ ಎನ್ನುವ ಮಾತು ಈಗಾಗಲೇ ಕೇಳಿ ಬಂದಿದೆ. ಆದರೆ ಇನ್ನೂ ಅದರ ಸ್ಕ್ರಿಪ್​ ಕೊನೆಯ ಹಂತದಲ್ಲಿದೆ ಎನ್ನುವುದು ಮುಖ್ಯ ವಿಚಾರ.


ಡಾಲಿ ಧನಂಜಯ್ ಪಾತ್ರಕ್ಕೆ ಹೆಚ್ಚಿನ ಮಹತ್ವ? 


ಪುಷ್ಪ ಸಿನಿಮಾದಲ್ಲಿ ನಮ್ಮ ಕನ್ನಡದ ಡಾಲಿ ಧನಂಜಯ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಅದರಲ್ಲಿ ಅವರ ಪಾತ್ರಕ್ಕೆ ಹೆಚ್ಚಿನ ಪ್ರಾಶಸ್ತ್ಯ ಕೊಟ್ಟಿರಲಿಲ್ಲ. ಆದರೆ ಈ ಬಾರಿ ಪುಷ್ಪ 2 ಸಿನಿಮಾದಲ್ಲಿ ಅವರ ಪಾತ್ರಕ್ಕೆ ಹೆಚ್ಚಿನ ಪ್ರಾಮುಖ್ಯತೆ ಕೊಡಲಾಗಿದೆ. ಇದು ಒಂದು ಖುಷಿಯ ವಿಚಾರವಾದರೇ, ಮತ್ತೊಂದು ಸುದ್ದಿ ಎಂದರೆ, ಈ ಬಾರಿ ತಮಿಳು ಸ್ಟಾರ್ ಒಬ್ಬರು ಸಹ ಈ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.


ಸುಕುಮಾರ್ ನಿರ್ದೇಶಿಸಿದ, ಭಾಗ 1 ಬಾಕ್ಸ್ ಆಫೀಸ್‌ನಲ್ಲಿ 300 ಕೋಟಿಗೂ ಹೆಚ್ಚು ಹಣವನ್ನು ಗಳಿಕೆ ಮಾಡಿದೆ. ಇದೀಗ ಇದರ ಮುಂದುವರೆದ ಭಾಗದಲ್ಲಿ ತಮಿಳು ನಟ ವಿಜಯ್ ಸೇತುಪತಿ ಸಹ ಇರಲಿದ್ದಾರೆ ಎಂಬ ಹೊಸ ಸುದ್ದಿ ಈಗ ಹೊರಬಂದಿದೆ.  ಹೌದು, ಸುಕುಮಾರ್ ತಮ್ಮ ತಂಡದೊಂದಿಗೆ ಪುಷ್ಪ 2 ರ ಕಥೆಗೆ ಫೈನಲ್ ಟಚ್​ ನೀಡುತ್ತಿದ್ದು, ಇದು ಕೆಲವೇ ತಿಂಗಳುಗಳಲ್ಲಿ ಶೂಟಿಂಗ್ ಆರಂಭಿಸುವ ನಿರೀಕ್ಷೆ ಇದೆ. Tollywood.net ಪ್ರಕಾರ, ಮುಂಬರುವ ಚಿತ್ರದಲ್ಲಿ ಅಲ್ಲು ಅರ್ಜುನ್ ಮತ್ತು ಫಹದ್ ಫಾಸಿಲ್ ನಡುವೆ ದೊಡ್ಡ ಫೈಟ್​ ಆಗಲಿದೆ.


ಇದನ್ನೂ ಓದಿ: ಏನೇ ಆಗ್ಲೀ, ನರೇಶ್​ಗೆ ಡೈವೋರ್ಸ್ ಕೊಡಲ್ಲ ಅಂದ ರಮ್ಯಾ ರಘುಪತಿ


ಹೊಸ ಪಾತ್ರದಲ್ಲಿ ವಿಜಯ್ ಸೇತುಪತಿ


ಅಲ್ಲದೇ ಈ ಸಿನಿಮಾದ ಪ್ರಮುಖ ಪಾತ್ರದಲ್ಲಿ ವಿಜಯ್ ಸೇತುಪತಿ ಕಾಣಿಸಿಕೊಳ್ಳಲಿದ್ದಾರೆ.  ವರದಿಯ ಪ್ರಕಾರ, ವಿಜಯ್ ಸೇತುಪತಿ ಈ ಸಿನಿಮಾ ಮಾಡಲು ಒಪ್ಪಿಕೊಂಡಿದ್ದಾರೆ. ಪುಷ್ಪ 2 ರಲ್ಲಿ ಹಿರಿಯ ಪೊಲೀಸ್ ಅಧಿಕಾರಿಯ ಪಾತ್ರವನ್ನು ನಿರ್ವಹಿಸಲಿದ್ದಾರೆ ಎನ್ನಲಾಗುತ್ತಿದೆ. ಇಂಡಿಯಾ ಟುಡೇ ವರದಿ ಪ್ರಕಾರ, ಸೇತುಪತಿ ಈ ಸಿನಿಮಾದಲ್ಲಿ ಅರಣ್ಯ ಅಧಿಕಾರಿಯಾಗಿ ನಟಿಸಬೇಕಿತ್ತು ಆದರೆ ಆಂಧ್ರಪ್ರದೇಶದ ಅರಣ್ಯಾಧಿಕಾರಿಗಳು ಕೆಲ ತಮಿಳಿಗರನ್ನು ಕಳ್ಳಸಾಗಣೆದಾರರು ಎಂದು ಭಾವಿಸಿ ಶೂಟ್​ ಮಾಡಿದ್ದರು. ಹಾಗಾಗಿ ಈ ಕಾರಣದಿಂದ ಪಾತ್ರವನ್ನು ಮಾಡಲು ಹಿಂದೇಟು ಹಾಕಿದ್ದಾರೆ ಎನ್ನಲಾಗುತ್ತಿದೆ.


ಇನ್ನೊಂದೆಡೆ ರಶ್ಮಿಕಾ ಪಾತ್ರಕ್ಕೆ ಕತ್ತರಿ ಹಾಕಲಾಗಿದೆ ಎಂಬ ಸುದ್ದಿ ಸಹ ಕೇಳಿ ಬಂದಿದೆ. ಇದರಲ್ಲಿ ಶ್ರೀವಲ್ಲಿ ಪಾತ್ರದಲ್ಲಿ ಸ್ವಲ್ಪ ಬದಲಾವಣೆ ಆಗಲಿದೆಯಂತೆ.  ಸದ್ಯದ ಮಾಹಿತಿ ಪ್ರಕಾರ ಪುಷ್ಪ 2 ಸಿನಿಮಾದಲ್ಲಿ ಹೆಚ್ಚು ಪುಷ್ಪರಾಜ್​ ಮೇಲೆ ಮಾತ್ರ ಫೋಕಸ್​ ಮಾಡಲಾಗಿದೆಯಂತೆ. ಪುಷ್ಪ ಮೊದಲ ಭಾಗದ ಶೂಟಿಂಗ್​ ಮಾಡುವಾಗ ಪುಷ್ಪ 2 ಸಿನಿಮಾದ ಕೆಲ ಭಾಗಗಳನ್ನೂ ಸಹ ಶೂಟಿಂಗ್ ಮಾಡಲಾಗಿತ್ತು. ಆದರೆ ಈ ಸಿನಿಮಾ ನಿರೀಕ್ಷೆಗೂ ಮೀರಿದ ಸಕ್ಸಸ್​ ಕಂಡ ಹಿನ್ನೆಲೆ ಸ್ವಲ್ಪ ಬದಲಾವಣೆ ಮಾಡಿ, ಮತ್ತೆ ಶೂಟಿಂಗ್ ಮಾಡಲು ನಿರ್ಧರಿಸಲಾಗಿದೆಯಂತೆ.


ಇದನ್ನೂ ಓದಿ: ಕಾಫಿ ವಿತ್ ಕರಣ್ ಶೋಗೆ ಹೋಗಲ್ವಾ ಸಮಂತಾ? ಬನ್ನಿ ಅಂದ್ರು ರೆಸ್ಪಾನ್ಸ್ ಮಾಡಿಲ್ವಂತೆ ಸುಂದರಿ!


ಪುಷ್ಪ 2 ಸಿನಿಮಾದಲ್ಲಿ ಈ ಬಾರಿ ಅಲ್ಲು ಅರ್ಜುನ್​ಗೆ ಹೆಚ್ಚು ಪ್ರಾಮುಖ್ಯತೆ ನೀಡಲಾಗುತ್ತಿದೆಯಂತೆ. ಪುಷ್ಪರಾಜ್​ ಹೇಗೆ ಬೆಳೆಯುತ್ತಾ ಹೋಗುತ್ತಾನೆ ಹಾಗೂ ಹೇಗೆ ಯಶಸ್ಸು ಪಡೆಯುತ್ತಾ ಎಂಬುದನ್ನ ತೋರಿಸಲಾಗುತ್ತದೆ.  ಅಲ್ಲದೇ, ಇಡೀ ಪುಷ್ಪ 2  ಚಿತ್ರದಲ್ಲಿ ಪುಷ್ಪರಾಜ್ ಆರ್ಭಟ ಹೆಚ್ಚಿರಲಿದೆ, ಹಾಗಾಗಿ ರಶ್ಮಿಕಾ ಮಂದಣ್ಣ ಪಾತ್ರದಲ್ಲಿ ಬದಲಾವಣೆಯಾಗುತ್ತದೆ. ಹೆಚ್ಚಾಗಿ ಅವರನ್ನು ತೋರಿಸುವುದಿಲ್ಲವಂತೆ. ಅವಶ್ಯಕ ಇರುವ ಜಾಗಗಳಲ್ಲಿ ಮಾತ್ರ ರಶ್ಮಿಕಾ ಕಾಣಿಸಿಕೊಳ್ಳಲಿದ್ದಾರೆ. ಅವರ ಪಾತ್ರದ ಡ್ಯೂರೇಷನ್​ ಕಡಿಮೆ ಮಾಡಲಾಗಿದೆ.

Published by:Sandhya M
First published: