Anitha EAnitha E
|
news18-kannada Updated:July 10, 2020, 11:11 AM IST
ತುಘಲಕ್ ದರ್ಬಾರ್ ಸಿನಿಮಾದ ಪೋಸ್ಟರ್
ವಿಭಿನ್ನ ಪಾತ್ರಗಳು ಹಾಗೂ ನೈಜ ಅಭಿನಯದ ಮೂಲಕವೇ ಅಭಿಮಾನಿಗಳ ಮನಸ್ಸಿನಲ್ಲಿ ಪ್ರತ್ಯೇಕ ಸ್ಥಾನ ಪಡೆದಿರುವ ನಟ ವಿಜಯ್ ಸೇತುಪತಿ. ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಈ ನಟ ಹೊಸ ಸಿನಿಮಾದ ಫಸ್ಟ್ಲುಕ್ ಪೋಸ್ಟರ್ ಬಿಡುಗಡೆಯಾಗಿದೆ.
ವಿಜಯ್ ಸೇತುಪತಿ ಕಾಲಿವುಡ್ನಲ್ಲಿ ತುಘಲಕ್ ದರ್ಬಾರ್ ಆರಂಭಿಸಿದ್ದಾರೆ. ಏನಿದು ತುಘಲಕ್ ದರ್ಬಾರ್ ಅಂತಿದ್ದಾರೆ ಅಂತ ಆಶ್ಚರ್ಯ ಪಡಬೇಡಿ. ವಿಜಯ್ ಸೇತುಪತಿ ಅವರ ಹೊಸ ಸಿನಿಮಾ ತುಘಲಕ್ ದರ್ಬಾರ್ನ ಫಸ್ಟ್ಲುಕ್ ಪೋಸ್ಟರ್ ರಿಲೀಸ್ ಆಗಿದೆ.
ಈ ಚಿತ್ರದಲ್ಲಿ ಆದಿತಿ ರಾವ್ ಹೈದರಿ ಹಾಗೂ ಮಂಜಿಮಾ ಮೋಹನ್ ಅವರು ವಿಜಯ್ ಸೇತುಪತಿಗೆ ಜೊತೆಯಾಗಿದ್ದಾರೆ. ಇದೊಂದು ರಾಜಕೀಯ ಕಥಾವಸ್ತುವಿನ ಮೇಲೆ ತೆಗೆಯುತ್ತಿರುವ ಸಿನಿಮಾ ಆಗಿದ್ದು, ಫಸ್ಟ್ಲುಕ್ ಪೋಸ್ಟರ್ನಿಂದ ವಿಜಯ್ ನಟಿಸುತ್ತಿರುವ ಪಾತ್ರದ ಕುರಿತು ಕೊಂಚ ಸುಳಿವು ಸಿಕ್ಕಿದೆ.
ವಿಜಯ್ ಸೇತುಪತಿ ಒಂದೇ ನಾಣ್ಯದ ಎರಡು ಮುಖಗಳನ್ನು ತೋರುತ್ತಿರುವಂತಿರುವ ಈ ಪೋಸ್ಟರ್ ನೋಡಿದರೆ, ಅವರದ್ದು ಎರಡು ಶೇಡ್ ಇರುವ ಪಾತ್ರ ಎಂದು ತಿಳಿಯುತ್ತದೆ. ಈಗಾಗಲೇ ಅರ್ಧಭಾಗದ ಚಿತ್ರೀಕರಣ ಮುಗಿದಿರುವ ಈ ಸಿನಿಮಾಗೆ ದೆಲಿ ಪ್ರಸಾದ್ ದೀನದಯಾಳ್ ಅವರು ಆ್ಯಕ್ಷನ್ ಕಟ್ ಹೇಳಿದ್ದಾರೆ.
Ramya Krishnan: ಬಾಲ್ಯದ ನೆನಪುಗಳೊಂದಿಗೆ ಮೇಕಪ್ ಇಲ್ಲದ ಫೋಟೋ ಹಂಚಿಕೊಂಡ ರಮ್ಯಾ ಕೃಷ್ಣನ್
ಇದನ್ನೂ ಓದಿ: ಬಾಹುಬಲಿ ಸಿನಿಮಾಗೆ 5ರ ಸಂಭ್ರಮ: ಖುಷಿ ಹಂಚಿಕೊಂಡ ಪ್ರಭಾಸ್-ರಾಣಾ..!
Published by:
Anitha E
First published:
July 10, 2020, 11:11 AM IST