Titanic 1 ಕೋಟಿ ಆಗಿದ್ದಕ್ಕೆ ಈಗ ಬಾಹುಬಲಿ ಅವತಾರದಲ್ಲಿ Nayantara - Samantha

Kaathu Vaakula Rendu Kaadhal: ನಟಿ ನಯನತಾರಾ ಮತ್ತು ಸಮಂತಾ ಇದೇ ಮೊದಲ ಬಾರಿಗೆ ತೆರೆಯನ್ನು ಒಟ್ಟಿಗೆ ಹಂಚಿಕೊಳ್ಳುತ್ತಿದ್ದಾರೆ ಮತ್ತು ಅವರ ಅಭಿಮಾನಿಗಳು ಇವರಿಬ್ಬರು ಒಟ್ಟಿಗೆ ನಟಿಸುವುದನ್ನು ನೋಡಲು ತುಂಬಾನೇ ಕುತೂಹಲದಿಂದ ಕಾಯುತ್ತಿದ್ದಾರೆ ಎಂದು ಹೇಳಬಹುದು.

ಚಿತ್ರದ ಪೋಸ್ಟರ್​

ಚಿತ್ರದ ಪೋಸ್ಟರ್​

  • Share this:
ದಕ್ಷಿಣ ಭಾರತದ (South Indian Film Industry)  ಚಿತ್ರೋದ್ಯಮದ ಜನಪ್ರಿಯ ನಟಿಯರಾದ ಸಮಂತಾ (samantha) ಮತ್ತು ನಯನತಾರಾ (Nayanathara) ಅವರು ಇಬ್ಬರು ಒಂದೇ ಚಿತ್ರದಲ್ಲಿ ನಟಿಸುತ್ತಿರುವ ಸುದ್ದಿ ಈಗಾಗಲೇ ಇವರಿಬ್ಬರ ಬಹುತೇಕ ಅಭಿಮಾನಿಗಳಿಗೆ ತಿಳಿದಿರುವ ವಿಚಾರವೇ ಆಗಿದೆ. ಹೌದು. ಇವರಿಬ್ಬರು ನಟ ವಿಜಯ್ ಸೇತುಪತಿ (Vijay Sethupathi)  ಅವರೊಂದಿಗೆ ಒಂದು ತ್ರಿಕೋನ ಪ್ರೇಮ ಕಥೆಯ ಚಿತ್ರ ‘ಕಾತು ವಾಕುಲ ರೆಂಡು ಕಾದಲ್’ (Kaathu Vaakula Rendu Kaadhal) ನಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರವು ಕೆವಿಆರ್‌ಕೆ ಅವರ ಬಹುನಿರೀಕ್ಷಿತ ತಮಿಳು (tamil) ಚಿತ್ರಗಳಲ್ಲಿ ಒಂದಾಗಿದೆ ಎಂದು ಹೇಳಬಹುದು. ತಮಿಳು ಅಲ್ಲದೇ ತೆಲುಗು ಭಾಷೆಯಲ್ಲಿ ಸಹ ಬಿಡುಗಡೆ ಹೊಂದುತ್ತಿರುವ ಈ ವಿಘ್ನೇಶ್ ಶಿವನ್ (Vignesh Shivan) ನಿರ್ದೇಶನದ ಚಿತ್ರದಲ್ಲಿ ಸಮಂತಾ, ನಯನತಾರಾ ಮತ್ತು ವಿಜಯ್ ಸೇತುಪತಿ ಮುಖ್ಯ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಚಿತ್ರದ ಸುತ್ತಲೂ ಇನ್ನೂ ಅನೇಕ ಗೊಂದಲವಿದ್ದರೂ ಸಹ ‘ಕಾತು ವಾಕುಲ ರೆಂಡು ಕಾದಲ್’ ಚಿತ್ರ ತಯಾರಕರು ಚಿತ್ರದ ಟೀಸರ್ ಮತ್ತು ಕಣ್ಣು ಸೆಳೆಯುವ ಪೋಸ್ಟರ್ ಅನ್ನು ಈಗಾಗಲೇ ಬಿಡುಗಡೆ ಮಾಡಿದ್ದಾರೆ.

ಈ ಪೋಸ್ಟರ್‌ನಲ್ಲಿ ನಟ ವಿಜಯ್ ಸೇತುಪತಿ ಅವರೊಂದಿಗೆ ಒಂದು ದೃಶ್ಯವನ್ನು ಚಿತ್ರೀಕರಿಸಲಾಗಿದ್ದು, ಈ ದೃಶ್ಯವು ನೋಡುಗರಿಗೆ ಟೈಟಾನಿಕ್ ಚಿತ್ರದಲ್ಲಿ ನಾಯಕ ನಟ ಮತ್ತು ನಟಿ ಇಬ್ಬರು ದೊಡ್ಡ ಹಡಗಿನ ಕೊನೆಯಲ್ಲಿ ನಿಂತಿರುವ ದೃಶ್ಯವನ್ನು ನೆನಪಿಸುವಂತಿದೆ ಎಂದು ಹೇಳಲಾಗುತ್ತಿದೆ. ಈ ಪ್ರಣಯ ಭಂಗಿಯನ್ನು ಮರುಸೃಷ್ಟಿಸುವಾಗ ನಟಿ ಸಮಂತಾ ಮತ್ತು ಇನ್ನೊಬ್ಬ ನಟಿ ನಯನತಾರಾ ಅವರು ಟೈಟಾನಿಕ್ ಚಿತ್ರದಲ್ಲಿ ನಟಿ ಹಾಕಿದಂತಹ ಉಡುಪನ್ನೇ ಧರಿಸಿದ್ದು ಇನ್ನೂ ವಿಶೇಷವಾಗಿದೆ.

ಒಟ್ಟಿನಲ್ಲಿ ಹೇಳುವುದಾದರೆ ಇದು ಹಾಲಿವುಡ್ ಚಿತ್ರ ಟೈಟಾನಿಕ್ ಭಂಗಿಗೆ ಗಮನಾರ್ಹ ಹೋಲಿಕೆಯನ್ನು ಹೊಂದಿದೆ. ಸರಿ, ಚಿತ್ರದ ಪ್ರತಿಯೊಂದು ಪೋಸ್ಟರ್ ಗಮನವನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ ಎಂದರೆ ತಪ್ಪಾಗುವುದಿಲ್ಲ. ತಮಿಳು ಮತ್ತು ತೆಲುಗು ಭಾಷೆಯಲ್ಲಿ ಬಹುನಿರೀಕ್ಷಿತ ‘ಕಾತು ವಾಕುಲ ರೆಂಡು ಕಾದಲ್’ ಚಿತ್ರದ ಟೀಸರ್ ಫೆಬ್ರವರಿ 11 ಬಿಡುಗಡೆಯಾಗಿದೆ . ಈ ಮಧ್ಯೆ, ಟೀಸರ್ ಪೋಸ್ಟರ್ ಅನ್ನು ನೋಡಿ ಮತ್ತು ಅದರ ಬಗ್ಗೆ ನಿಮ್ಮ ಆಲೋಚನೆಗಳನ್ನು ಕೆಳಗಿನ ಕಾಮೆಂಟ್ ವಿಭಾಗದಲ್ಲಿ ಹಂಚಿಕೊಳ್ಳಿ ಎಂದು ಹೇಳಿ ಸೆವೆನ್ ಸ್ಕ್ರೀನ್ ಸ್ಟುಡಿಯೋಸ್ ಅವರು ತಮ್ಮ ಟ್ವಿಟ್ಟರ್ ಖಾತೆಯ ಪುಟದಲ್ಲಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ಕರೀನಾ ಸ್ನೇಹಿತನಿಗೆ ಡ್ರೈವರ್​​ ಜೊತೆ ಕೂತು ಊಟ ಮಾಡು ಅಂದಿದ್ರಂತೆ ಅವ್ರ ಅಪ್ಪ!

ಟೈಟಾನಿಕ್ ಆಯ್ತು ಬಾಹುಬಲಿ ಪೋಸ್​

ಇನ್ನು ಟೈಟಾನಿಕ್ ಪೋಸ್​ನಲ್ಲಿ ಒಮದು ಪೋಸ್ಟರ್ ಆದ್ರೆ ಇದೀಗ ಬಾಹುಬಲಿ ಶೈಲಿಯಲ್ಲಿ ಒಮದು ಪೋಸ್ಟರ್ ಬಿಡುಗಡೆ ಮಾಡಿದ್ದು, ಅದೇ ಪೋಸ್​ನ ಮರುಸೃಷ್ಟಿ ಮಾಡಿದ್ದಾರೆ.




ನಟಿ ನಯನತಾರಾ ಮತ್ತು ಸಮಂತಾ ಇದೇ ಮೊದಲ ಬಾರಿಗೆ ತೆರೆಯನ್ನು ಒಟ್ಟಿಗೆ ಹಂಚಿಕೊಳ್ಳುತ್ತಿದ್ದಾರೆ ಮತ್ತು ಅವರ ಅಭಿಮಾನಿಗಳು ಇವರಿಬ್ಬರು ಒಟ್ಟಿಗೆ ನಟಿಸುವುದನ್ನು ನೋಡಲು ತುಂಬಾನೇ ಕುತೂಹಲದಿಂದ ಕಾಯುತ್ತಿದ್ದಾರೆ ಎಂದು ಹೇಳಬಹುದು.

‘ಕಾತು ವಾಕುಲ ರೆಂಡು ಕಾದಲ್’ ಚಿತ್ರವನ್ನು ರೌಡಿ ಪಿಕ್ಚರ್ಸ್ ಮತ್ತು ಸೆವೆನ್ ಸ್ಕ್ರೀನ್ ಸ್ಟುಡಿಯೋಸ್ ನಿರ್ಮಿಸಿದೆ. ಅನಿರುದ್ಧ್ ರವಿಚಂದರ್ ಸಂಗೀತ ಮತ್ತು ವಿಜಯ್ ಕಾರ್ತಿಕ್ ಕಣ್ಣನ್ ಮತ್ತು ಎ. ಶ್ರೀಕರ್ ಪ್ರಸಾದ್ ಕ್ರಮವಾಗಿ ಛಾಯಾಗ್ರಾಹಕ ಮತ್ತು ಸಂಪಾದಕರಾಗಿ ಕೆಲಸ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.

ಏಪ್ರಿಲ್​ನಲ್ಲಿ ಚಿತ್ರ ಬಿಡುಗಡೆ

ಈ ಹಿಂದೆ ಫೆಬ್ರವರಿ 2 ರಂದು ಚಿತ್ರದ ನಿರ್ದೇಶಕ ವಿಘ್ನೇಶ್ ಶಿವನ್ ಟ್ವಿಟ್ಟರ್‌ನಲ್ಲಿ ಫೆಬ್ರವರಿ 11 ರಂದು ಟೀಸರ್ ಹೊರಬರಲಿದೆ ಎಂದು ಘೋಷಿಸಲು ಸುಂದರವಾದ ಹೊಸ ಪೋಸ್ಟರ್ ಅನ್ನು ಹಂಚಿಕೊಂಡಿದ್ದರು. ರೋಮ್ಯಾಂಟಿಕ್ ಎಂಟರ್‌ಟೈನರ್ ಏಪ್ರಿಲ್‌ನಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: `ಗರಡಿ’ ಸಿನಿಮಾದಿಂದ ಹೊರಬಂದ ರಚ್ಚು.. ಇವ್ರ ಜಾಗಕ್ಕೆ ಬಂದಿದ್ದಾರೆ ಸ್ಯಾಂಡಲ್​ವುಡ್​ ಕ್ಯೂಟಿ!

‘ಕಾತು ವಾಕುಲ ರೆಂಡು ಕಾದಲ್’ ಚಿತ್ರವು ಡಿಸೆಂಬರ್ 2021ರಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತದೆ ಎಂದು ಮೊದಲು ತಿಳಿಸಲಾಗಿತ್ತು. ಆದರೆ ಈ ಕೋವಿಡ್-19 ಸಾಂಕ್ರಾಮಿಕ ರೋಗದ ಹಾವಳಿಯಿಂದಾಗಿ ಚಿತ್ರದ ಬಿಡುಗಡೆಯನ್ನು ಮುಂದೂಡಲಾಗಿತ್ತು. ಈಗ ಈ ಚಿತ್ರವು ಏಪ್ರಿಲ್‌ನಲ್ಲಿ ಬಿಡುಗಡೆಯಾಗಲಿದೆಯಾದರೂ, ಅಧಿಕೃತ ದಿನಾಂಕವನ್ನು ಇನ್ನೂ ಚಿತ್ರದ ನಿರ್ದೇಶಕರು ಘೋಷಿಸಿಲ್ಲ.
Published by:Sandhya M
First published: