ರಾಕಿಂಗ್ ಸ್ಟಾರ್ ಯಶ್(Rocking Star Yash) ನಟನೆಯ ಕೆಜಿಎಫ್-2 (KGF 2) ಸಿನಿಮಾ ಅರ್ಭಟದ ಮುಂದೆ ಬೀಸ್ಟ್ (Beast) ಹೀನಾಯ ಸೋಲುಂಡಿತ್ತು. ಏಪ್ರಿಲ್ 13ರಂದು ತೆರೆಗೆ ಬಂದ ದಳಪತಿ ವಿಜಯ್ (Vijay) ನಟನೆಯ ಬೀಸ್ಟ್ ಸಿನಿಮಾಗೆ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಮೊದಲ ದಿನ ಬಾಕ್ಸ್ ಆಫೀಸ್ (Box Office) ನಲ್ಲಿ ಉತ್ತಮ ಕಮಾಯಿ ಮಾಡಿದ್ದ ಬೀಸ್ಟ್, ಕೆಜಿಎಫ್-2 ಬಿಡುಗಡೆ ಬಳಿಕ ದೂಳಿಪಾಟ ಆಗಿತ್ತು. ತಮಿಳುನಾಡಿನಲ್ಲೇ ಬೀಸ್ಟ್ ಸಿನಿಮಾ ಪ್ರದರ್ಶನಗೊಳ್ಳುತ್ತಿರುವ ಚಿತ್ರಮಂದಿರಗಳು ಖಾಲಿ ಹೊಡೆಯುತ್ತಿವೆ. ಈಗಲೂ ಪ್ರೇಕ್ಷಕರು ಕೆಜಿಎಫ್-2 ನೋಡಲು ಮುಗಿಬಿದ್ದು ಟಿಕೆಟ್ ಬುಕ್ (Ticket Book) ಮಾಡುತ್ತಿದ್ದಾರೆ. ಮತ್ತೆ ಈ ವಾರ ತಮಿಳುನಾಡಿನಲ್ಲಿ ಕೆಜಿಎಫ್ 2 ಸಿನಿಮಾಗಳು ಹೆಚ್ಚಿನ ಥಿಯೇಟರ್ಗಳಲ್ಲಿ ಪ್ರದರ್ಶನಗೊಳ್ಳುತ್ತಿದೆ. ಬೀಸ್ಟ್ ಸಿನಿಮಾ ತಮಿಳು, ತೆಲುಗು, ಮಲಯಾಳಂ, ಕನ್ನಡ ಮತ್ತು ಹಿಂದಿ ಭಾಷೆಯಲ್ಲಿ ತೆರೆಗೆ ಬಂದಿತ್ತು. ಆದರೆ, ಹೀನಾಯವಾಗಿ ಸೋಲುಂಡಿತ್ತು.
ನೆಲ್ಸನ್ ವಿರುದ್ಧ ಹರಿಹಾಯ್ದ ವಿಜಯ್ ತಂದೆ!
ಅದಮ್ಯ ವಿಶ್ವಾಸದೊಂದಿಗೆ 'ಬೀಸ್ಟ್' ಸಿನಿಮಾವು 'ಕೇಜಿಎಫ್ 2' ಸಿನಿಮಾದ ಎದುರಾಳಿಯಾಗಿ ಬಿಡುಗಡೆ ಆಗಿತ್ತು. ಆದರೆ, ರಾಕಿ ಭಾಯ್ ಎದುರು ಸೋತು ಸುಣ್ಣವಾಗಿತ್ತು. ಇದೀಗ ಸಿನಿಮಾ ಬಗ್ಗೆ ವಿಜಯ್ರ ತಂದೆ ಎಸ್ಎ ಚಂದ್ರಶೇಖರ್ ತೀವ್ರ ಅಸಮಾಧಾನಗೊಂಡಿದ್ದು, ಸಿನಿಮಾ ನಿರ್ದೇಶಕ ನೆಲ್ಸನ್ ದಿಲೀಪ್ ವಿರುದ್ಧ ಕಿಡಿಕಾರಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿರುವ ಎಸ್ಎ ಚಂದ್ರಶೇಖರ್, ''ಅಂತರಾಷ್ಟ್ರೀಯ ಭಯೋತ್ಪಾದಕೆಯ ವಿಷಯದ ಬಗ್ಗೆ ಸಿನಿಮಾ ಮಾಡಬೇಕಾದರೆ ದೊಡ್ಡ ಮಟ್ಟದಲ್ಲಿ ಕತೆ ಹೇಳಬೇಕಾಗುತ್ತದೆ. ಅದನ್ನು ಬಿಟ್ಟು ಒಂದು ಮಾಲ್ನಲ್ಲಿ ಹಿರೋ ಅನ್ನಿಟ್ಟು ಅಂತರಾಷ್ಟ್ರೀಯ ಮಟ್ಟದ ವಿಷಯದ ಕತೆ ಹೇಳಲು ಸಾಧ್ಯವಿಲ್ಲ'' ಎಂದು ಅವರು ಟೀಕಿಸಿದ್ದಾರೆ.
ಹೆಚ್ಚು ಹೋಂವರ್ಕ್ ಮಾಡಿಲ್ವಂತೆ ನೆಲ್ಸನ್!
"ನಿರ್ದೇಶಕ ನೆಲ್ಸನ್, ಈ ಸಿನಿಮಾ ಮಾಡುವ ಮುನ್ನ ಹೆಚ್ಚು ಹೋಮ್ವರ್ಕ್ ಮಾಡಿಲ್ಲ ಎಂದಿರುವ ಚಂದ್ರಶೇಖರ್, ಈಗಿನ ಯುವ ನಿರ್ದೇಶಕರು ಮೊದಲೆರಡು ಸಿನಿಮಾಕ್ಕೆ ಬಹಳ ಕಷ್ಟಪಡುತ್ತಾರೆ. ಆದರೆ ಯಾವಾಗ ಅವರಿಗೆ ಸ್ಟಾರ್ ನಟನ ಸಿನಿಮಾ ಸಿಗುತ್ತದೆಯೋ ಆಗ ಎಲ್ಲವನ್ನೂ ಸ್ಟಾರ್ಡಮ್ ಮೇಲೆ ಹಾಕಿ ತಾವು ಆರಾಮವಾಗಿಬಿಡುತ್ತಾರೆ'' ಎಂದಿದ್ದಾರೆ ಚಂದ್ರಶೇಖರ್. ಅವರಂದಂತೆಯೇ ನೆಲ್ಸನ್ರ ಮೊದಲೆರಡು ಸಿನಿಮಾ ಹಿಟ್ ಆಯಿತು. ಮೊದಲ ಬಾರಿಗೆ ಸ್ಟಾರ್ ನಟನೊಟ್ಟಿಗೆ ಸಿನಿಮಾ ಮಾಡಿದ ಸಿನಿಮಾ ಫ್ಲಾಪ್ ಆಗಿದೆ.
ಇದನ್ನೂ ಓದಿ: ಆ ಮಗು ಛತ್ರಿ ತಂದಿದ್ದು ಏಕೆ? ಭಾವನಾತ್ಮಕ ಕಥೆ ಹೇಳಿ ಧನ್ಯವಾದ ಅರ್ಪಿಸಿದ ಯಶ್
ಶೀಘ್ರದಲ್ಲೇ ಒಟಿಟಿಗೆ ಬರ್ತಿದೆ ಬೀಸ್ಟ್!
ಚಿತ್ರಮಂದಿರಗಳಲ್ಲಿ ಯಶಸ್ಸು ಕಾಣದ ಸಿನಿಮಾಗಳನ್ನು ಶೀಘ್ರದಲ್ಲೇ ಒಟಿಟಿಯಲ್ಲಿ ಬಿಡುಗಡೆ ಮಾಡಲು ನಿರ್ಮಾಪಕರು ತಯಾರಿ ನಡೆಸುತ್ತಾರೆ. ಇದೀಗ ಬೀಸ್ಟ್ ಕೂಡ ಅದೇ ದಾರಿ ಹಿಡಿದಿದೆ. ಕೆಜಿಎಫ್-2 ನೆಟ್ ಫ್ಲಿಕ್ಸ್ ನಲ್ಲಿ ಸ್ಟ್ರೀಮಿಂಗ್ ಗೆ ರೆಡಿಯಾಗಿದೆ. ಸಿನಿಮಾ ಬಿಡುಗಡೆಯಾಗಿ 5 ದಿನಗಳಲ್ಲೇ ಒಟಿಟಿಗೆ ಬರಲು ಪ್ಲಾನ್ ಮಾಡಲಾಗಿದೆ. ಮೂಲಗಳ ಪ್ರಕಾರ ಬೀಸ್ಟ್ ಸಿನಿಮಾ ಮೇ 11ರಂದು ಒಟಿಟಿಯಲ್ಲಿ ಬಿಡುಗಡೆಯಾಗಲಿದೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: ಈ ಯುವ ನಟನ ಜೊತೆ ಅಮಿತಾಭ್ ಬಚ್ಚನ್ ಮೊಮ್ಮಗಳು ಡೇಟಿಂಗ್? ವಿಷಯ ಗೊತ್ತಾದ್ರೆ ಸುಮ್ನೆ ಬಿಡ್ತಾರಾ?
ಒಟಿಟಿಯಲ್ಲಾದರೂ ಸದ್ದು ಮಾಡುತ್ತಾ ಬೀಸ್ಟ್?
ವಿಜಯ್ ಸಂದರ್ಶನ ನೀಡದೆ 10 ವರ್ಷಗಳ ಮೇಲಾಗಿತ್ತು. ಬೀಸ್ಟ್ ಬಿಡುಗಡೆ ವೇಳೆ ಸಂದರ್ಶನ ನೀಡುವ ಮೂಲಕ ಅಚ್ಚರಿ ಮೂಡಿಸಿದ್ದರು. ಈ ವೇಳೆ ವಿಜಯ್ ಅನೇಕ ವಿಚಾರಗಳನ್ನು ಬಹಿರಂಗ ಪಡಿಸಿದ್ದರು. 10 ವರ್ಷಗಳು ಸಂದರ್ಶನ ನೀಡದೆ ಇರಲು ಕಾರಣವನ್ನು ತಿಳಿಸಿದ್ದರು. ಇಷ್ಟಾದರೂ ಬೀಸ್ಟ್ ಬಾಕ್ಸ್ ಆಫೀಸ್ ನಲ್ಲಿ ಸಕ್ಸಸ್ ಕಂಡಿಲ್ಲ. ಒಟಿಟಿಯಲ್ಲಾದರೂ ಲಾಭಗಳಿಸುತ್ತಾ ಎನ್ನುವುದು ಪ್ರೇಕ್ಷಕರ ಕುತೂಹಲ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ