ನೆನಪಿನ ಪಯಣದ ಮನಮೋಹಕ 'ಮಾಲ್ಗುಡಿ ಡೇಸ್' ಟ್ರೈಲರ್ ಔಟ್

Malgudi Days Teaser : ಮಾಲ್ಗುಡಿ ಡೇಸ್ ಸಿನಿಮಾದಲ್ಲಿ ವಿಜಯ ರಾಘವೇಂದ್ರ ಅವರಿಗೆ ಜೋಡಿಯಾಗಿ ಗ್ರೀಷ್ಮಾ ಶ್ರೀಧರ್ ನಟಿಸಿದ್ದಾರೆ. ಉದಯ್ ಲೀಲಾ ಅವರು ಕ್ಯಾಮರಾ ಕೆಲಸ ನಿರ್ವಹಿಸಿದ್ಧಾರೆ. ತುಳು ಸಿನಿರಂಗ ಮತ್ತು ಕನ್ನಡ ಕಿರುತೆರೆಯ ಹಲವು ಕಲಾವಿದರು ಈ ಚಿತ್ರಕ್ಕಾಗಿ ಬಣ್ಣ ಹಚ್ಚಿದ್ದಾರೆ.

ಮಾಲ್ಗುಡಿ ಡೇಸ್

ಮಾಲ್ಗುಡಿ ಡೇಸ್

  • Share this:
ವಿಜಯ ರಾಘವೇಂದ್ರ ಅಭಿನಯದ ಬಹುನಿರೀಕ್ಷಿತ  'ಮಾಲ್ಗುಡಿ ಡೇಸ್' ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ವಿಭಿನ್ನ ನಿರೂಪಣೆ ಮತ್ತು ನೆಲಗಟ್ಟಿನ ಕಥೆ ಹೊಂದಿರುವ ಈ ಚಿತ್ರ ಹಲವು ರೀತಿಯಲ್ಲಿ ಕುತೂಹಲ ಮೂಡಿಸಿದೆ.

ಪ್ರಯೋಗಗಳಿಗೆ ತಮ್ಮನ್ನು ತಾವು ಸದಾ ತೆರೆದುಕೊಳ್ಳುವ ವಿಜಯ ರಾಘವೇಂದ್ರ ಅವರು ಈ ಚಿತ್ರದಲ್ಲಿ 60 ವರ್ಷ ವಯಸ್ಸು ದಾಟಿದ ವಯೋವೃದ್ಧನ ಪಾತ್ರ ನಿರ್ವಹಿಸಿದ್ಧಾರೆ. ಅದರೊಂದಿಗೆ ಹದಿಹರೆಯದ ಚಿನ್ನಾರಿ ಮುತ್ತನಾಗಿಯು ಕೂಡ ಕಾಣಿಸಿಕೊಂಡಿದ್ದಾರೆ. ಎರಡು ಶೇಡ್​ಗಳಲ್ಲಿನ ವಿಜಯ್ ಅಭಿನಯ ತಮ್ಮ ಸುದೀರ್ಘ ಸಿನಿ ಪಯಣದಲ್ಲಿ ಮಾಲ್ಗುಡಿ ಡೇಸ್ ಒಂದು ಮೈಲಿಗಲ್ಲಾಗುವ ನಿರೀಕ್ಷೆ ಇದೆ.

ಟ್ರೈಲರ್​ನಲ್ಲಿ ಒಂದು ಸುಂದರ ಪಯಣ ತೋರಿಸಲಾಗಿದ್ದು, ಅದರೊಂದಿಗೆ ಕಥೆಯೂ ಕೂಡ ಸಾಗಲಿದೆ ಎಂಬುದು ಮೇಲ್ನೋಟಕ್ಕೆ ತಿಳಿಯುತ್ತದೆ. ವಿಜಯ್ ಜೊತೆಗಿನ ಪಯಣಕ್ಕೆ ನಟಿ ಗ್ರೀಷ್ಮಾ ಶ್ರೀಧರ್ ಸಾಥ್ ನೀಡಿದ್ದಾರೆ. ಯುವ ನಟಿಯ ಕ್ಯೂಟ್​ ಲುಕ್​ಗೆ ಹುಡುಗರಂತು ಕ್ಲೀನ್ ಬೋಲ್ಡ್ ಆಗಲಿದ್ದಾರೆ ಎಂದೇ ಹೇಳಬಹುದು.

ರತ್ನಾಕರ್ ಕಾಮತ್ ನಿರ್ಮಾಣ ಮಾಡಿರುವ ಈ ಚಿತ್ರದಲ್ಲಿ ಲಕ್ಷ್ಮೀ ನಾರಾಯಣ ಮಾಲ್ಗುಡಿ ಎಂಬ ಕಾಲ್ಪನಿಕ ವ್ಯಕ್ತಿಯ ಜೀವನದ ಕಥಾ ಹಂದರ ಹೊಂದಿದೆ. ಮಾಲ್ಗುಡಿ ಪಾತ್ರಕ್ಕಾಗಿ ವಿಜಯ ರಾಘವೇಂದ್ರ ಸಾಕಷ್ಟು ಶ್ರಮ ಕೂಡ ಹಾಕಿದ್ದಾರೆ. ಕಷ್ಟವೆನಿಸುವ ವಯೋವೃದ್ಧನ ಪಾತ್ರ ನಿರ್ವಹಣೆಯನ್ನು ಅವರು ಸರಾಗವಾಗಿ ಮಾಡಿದ್ಧಾರೆನ್ನಲಾಗಿದೆ. ಶೂಟಿಂಗ್ ದಿನಗಳಲ್ಲಿ ಅವರ ಮೇಕಪ್​ಗಾಗೇ ನಾಲ್ಕೈದು ಗಂಟೆ ತೆಗೆದುಕೊಳ್ಳುತ್ತಿತ್ತು. ಕೇರಳದ ರೋಷನ್ ಎಂಬುವರು ಮೇಕಪ್ ಮಾಡಿದ್ದು, ಈ ಬಗ್ಗೆ ಈಗ ಎಲ್ಲೆಡೆಯಿಂದ ಮೆಚ್ಚುಗೆಗಳು ವ್ಯಕ್ತವಾಗುತ್ತಿದೆ ಎಂದಿದ್ದಾರೆ ನಿರ್ದೇಶಕರು.

ಇನ್ನು ನಿರ್ದೇಶಕ ಕಿಶೋರ್ ಮೂಡಬಿದ್ರೆ ಅವರಿಗೆ ಇದು ಚೊಚ್ಚಲ ಕನ್ನಡ ಸಿನಿಮಾ. ಈಗಾಗಲೇ “ಅಪ್ಪೆ ಟೀಚರ್” ಎಂಬ ಸೂಪರ್ ಹಿಟ್ ತುಳು ಸಿನಿಮಾ ನಿರ್ದೇಶಿಸಿರುವ ಕಿಶೋರ್ ಅವರು ಕೆಲ ಕನ್ನಡ ಧಾರಾವಾಹಿಗಳಲ್ಲೂ ತೊಡಗಿಸಿಕೊಂಡ ಅನುಭವ ಹೊಂದಿದ್ದಾರೆ.

ಉದಯ್ ಲೀಲಾ ಅವರು ಕ್ಯಾಮರಾ ಕೆಲಸ ನಿರ್ವಹಿಸಿದ್ಧಾರೆ. ತುಳು ಸಿನಿರಂಗ ಮತ್ತು ಕನ್ನಡ ಕಿರುತೆರೆಯ ಹಲವು ಕಲಾವಿದರು ಈ ಚಿತ್ರಕ್ಕಾಗಿ ಬಣ್ಣ ಹಚ್ಚಿದ್ದಾರೆ. ಮಾಲ್ಗುಡಿ ಡೇಸ್ ನಟ ವಿಜಯ ರಾಘವೇಂದ್ರ ಮತ್ತು ನಿರ್ದೇಶಕ ಕಿಶೋರ್ ಮೂಡಬಿದ್ರೆ ಇಬ್ಬರಿಗೂ ಬಹುನಿರೀಕ್ಷೆಯ ಮತ್ತು ಅಗ್ನಿಪರೀಕ್ಷೆಯ ಸಿನಿಮಾವಾಗಿದೆ. ಈ ಚಿತ್ರವು ಕನ್ನಡ ಸಿನಿಮಾ ಫೆಬ್ರವರಿ 7ಕ್ಕೆ ಬಿಡುಗಡೆಯಾಗಲಿದೆ.

ಅಂದಹಾಗೆ ಎಂಬತ್ತರ ದಶಕದಲ್ಲಿ ಕಿರುತೆರೆಯಲ್ಲಿ ಧಾರಾವಾಹಿಯಾಗಿ ಬಂದ ಶಂಕರ್ ನಾಗ್ ಅವರ ಮಾಲ್ಗುಡಿ ಡೇಸ್ ಚಿತ್ರಕ್ಕೂ ವಿಜಯ ರಾಘವೇಂದ್ರ ಅಭಿನಯದ ಮಾಲ್ಗುಡಿ ಡೇಸ್ ಚಿತ್ರಕ್ಕೂ ಸಂಬಂಧವಿಲ್ಲ. ಇದು ಬೇರೆಯದೇ ಕಥೆಯಾಗಿದೆ ಎಂದು ನಿರ್ದೇಶಕ ಕಿಶೋರ್ ಮೂಡಬಿದ್ರೆ ತಿಳಿಸಿದ್ದಾರೆ.ಇದನ್ನೂ ಓದಿ:  Bigg Boss Kannada 7 Finale: ಬಿಗ್ ಬಾಸ್ ಫಿನಾಲೆಗೇರಿದ ಮೂವರು ಸ್ಪರ್ಧಿಗಳು ಇವರೇ..!

ಇದನ್ನೂ ಕ್ಲಿಕ್ ಮಾಡಿ: Bigg Boss Kannada 7 Finale: ಕಳೆದ ಆರು ಸೀಸನ್​ಗಳಲ್ಲಿ ಯಾರು ವಿನ್ನರ್, ಯಾರು ರನ್ನರ್? ಇಲ್ಲಿದೆ ಸಂಪೂರ್ಣ ಮಾಹಿತಿ
First published: