ಕದ್ದ ಚಿತ್ರದಲ್ಲಿ ವಿಜಯ್ ರಾಘವೇಂದ್ರ: ಚಿನ್ನಾರಿ ಮುತ್ತನ ಸಿಂಪಲ್ಲಾಗ್ ಒಂದ್ ಸಿಗರೇಟ್ ಸ್ಟೋರಿ..!

ಸದ್ಯ ಸೀತಾರಾಮ್ ಬಿನೊಯ್ ಚಿತ್ರದ ಯಶಸ್ಸಿನ ಖುಷಿಯಲ್ಲಿರುವ ವಿಜಯ್ ರಾಘವೇಂದ್ರ ನಟಿಸುತ್ತಿರುವ ಲೇಟೆಸ್ಟ್ ಸಿನಿಮಾ ಕದ್ದ ಚಿತ್ರ. ಈ ಡಿಫರೆಂಟ್ ಟೈಟಲ್‍ನ ಚಿತ್ರದಲ್ಲಿ ಅಷ್ಟೇ ಡಿಫರೆಂಟ್ ಆಗಿ ಚಿನ್ನಾರಿ ಮುತ್ತ ಕಾಣಿಸಿಕೊಳ್ಳಲಿದ್ದಾರೆ.

ಕದ್ದ ಚಿತ್ರದಲ್ಲಿ ವಿಜಯ್ ರಾಘವೇಂದ್ರ

ಕದ್ದ ಚಿತ್ರದಲ್ಲಿ ವಿಜಯ್ ರಾಘವೇಂದ್ರ

  • Share this:
ಸ್ಟಾರ್​ಗಳು ಸಿನಿಮಾಗಳಲ್ಲಿ ತಮ್ಮ ಪಾತ್ರಕ್ಕಾಗಿ ಹೊಸ ಹೊಸ ಡ್ಯಾನ್ಸ್ ಸ್ಟೆಪ್ಸ್ ಕಲಿಯುವುದುಂಟು, ಹೊಸ ಬಗೆಯ ಆ್ಯಕ್ಷನ್ ಸೀನ್‍ಗಾಗಿ ಸ್ಟಂಟ್‍ಗಳನ್ನು ಪ್ರ್ಯಾಕ್ಟೀಸ್ ಮಾಡುವುದೂ ಸಾಮಾನ್ಯ. ಕತ್ತಿವರಸೆ, ಕುದುರೆ ಸವಾರಿ, ಮಾರ್ಷಲ್ ಆರ್ಟ್ಸ್... ಹೀಗೆ ತಮ್ಮ ಸಿನಿಮಾಗಳಲ್ಲಿ ಹೊಸ ಬಗೆಯ ಸಾಹಸ ಮಾಡಲು, ಆಗೊಮ್ಮೆ ಈಗೊಮ್ಮೆ ನಟ, ನಟಿಯರು ತರಬೇತಿ ಪಡೆಯುತ್ತಾರೆ. ಆದರೆ ಸ್ಯಾಂಡಲ್‍ವುಡ್ ಚಿನ್ನಾರಿ ಮುತ್ತ ವಿಜಯ್ ರಾಘವೇಂದ್ರ  (Vijay Raghavendra) ತಮ್ಮ ಹೊಸ ಚಿತ್ರಕ್ಕಾಗಿ ಸಿಗರೇಟ್ ಸೇದುವುದನ್ನು ಕಲಿತಿದ್ದಾರೆ. ಹೌದು, ಸದ್ಯ ಸೀತಾರಾಮ್ ಬಿನೊಯ್ ಚಿತ್ರದ ಯಶಸ್ಸಿನ ಖುಷಿಯಲ್ಲಿರುವ ವಿಜಯ್ ರಾಘವೇಂದ್ರ ನಟಿಸುತ್ತಿರುವ ಲೆಟೆಸ್ಟ್ ಸಿನಿಮಾ ಕದ್ದ ಚಿತ್ರ. ಈ ಡಿಫರೆಂಟ್ ಟೈಟಲ್‍ನ ಚಿತ್ರದಲ್ಲಿ ಅಷ್ಟೇ ಡಿಫರೆಂಟ್ ಆಗಿ ಚಿನ್ನಾರಿ ಮುತ್ತ ಕಾಣಿಸಿಕೊಳ್ಳಲಿದ್ದಾರೆ.

ಈ ಸಿನಿಮಾದ ಬಗ್ಗೆ ಮಾಹಿತಿ ನೀಡಿದ ವಿಜಯ್ ರಾಘವೇಂದ್ರ, 'ಮೂರು ವರ್ಷಗಳಿಂದ ನಿರ್ದೇಶಕ ಸುಹಾಸ್ ಮತ್ತು ನಾನು ಸಂಪರ್ಕದಲ್ಲಿದ್ದೆವು. ಸುಹಾಸ್ ಕಥೆ ಹೇಳಿ ಈ ರೀತಿ ನಿಮ್ಮನ್ನು ಪ್ರೆಸೆಂಟ್ ಮಾಡಬೇಕು ಅಂದುಕೊಂಡಿದ್ದೇನೆ ಸರ್ ಅಂದಿದ್ದರು. ಆಗ ನಾನು ಈ ಪಾತ್ರದಲ್ಲಿ ನಟಿಸಬಹುದಾ ಎಂಬ ಅನುಮಾನಗಳಿದ್ದವು. 25 ವರ್ಷಗಳಿಂದ ಚಿತ್ರಗಳಲ್ಲಿ ನಟಿಸುತ್ತಿದ್ದೇನೆ. ಆದರೆ ಇದುವರೆಗೂ ಆನ್‍ಸ್ಕ್ರೀನ್ ನಾನು ಸಿಗರೇಟ್ ಮುಟ್ಟಿಲ್ಲ. ನಿಜ ಜೀವನದಲ್ಲೂ ನಾನು ಧೂಮಪಾನ ಮಾಡುವುದಿಲ್ಲ. ಆದರೆ ಕದ್ದ ಚಿತ್ರದಲ್ಲಿ(Kaddha Chitra) ಮೊದಲ ಬಾರಿಗೆ ಸಿಗರೇಟ್ ಸೇದಿದ್ದೇನೆ. ಕೆಲ ಸಿನಿಮಾಗಳಲ್ಲಿ ಧೂಮಪಾನ ಹಾಗೂ ಮದ್ಯಪಾನದ ಸೀನ್‍ಗಳಿದ್ದರೂ, ನಾನು ಕೈಯಲ್ಲಿ ಹಿಡಿದಿದ್ದರೂ, ಬರದೇ ಇರೋ ಕೆಲಸ ಯಾಕೆ ಮಾಡುತ್ತೀಯಾ ಅಂತ ಜನ ಬೈಯುತ್ತಿದ್ದರು. ಫೈಟ್‍ಗಳನ್ನು ಮಾಡಿದ್ದೇನೆ, ಡ್ಯಾನ್ಸ್ ಮಾಡಿದ್ದೇನೆ, ಆದರೆ ಸಿಗರೇಟ್ ಸೇದುವುದು ನನಗೆ ನಿಜವಾದ ಸಾಹಸ' ಎಂದಿದ್ದಾರೆ.
'ಸಿಗರೇಟ್ ಸೇದುವುದು ಒಳ್ಳೆ ವಿಚಾರ ಅಲ್ಲ. ಎಲ್ಲರ ಆರೋಗ್ಯಕ್ಕೂ ಹಾನಿಕರ. ಆದರೆ ಕೆಲವರ ಪಾತ್ರಗಳು ಇರೋದೇ ಹಾಗೆ. ಅವರ ವ್ಯಕ್ತಿತ್ವಗಳೇ ಸಿಗರೇಟ್ ಜತೆ ಗುರುತಿಸಿಕೊಂಡಿರುತ್ತದೆ. ಆದರೆ ಅವರ ಕೆಲಸದಲ್ಲಿ ಅವರು ಗಟ್ಟಿಯಿರುತ್ತಾರೆ. ನಾನು ಈ ಚಿತ್ರದಲ್ಲಿ ಕಥೆಗಾರನ ಪಾತ್ರದಲ್ಲಿ ನಟಿಸಿದ್ದೇನೆ....' ಎಂದು ಕದ್ದ ಚಿತ್ರದಲ್ಲಿನ ತಮ್ಮ ಪಾತ್ರದ ಬಗ್ಗೆ ಹೇಳಿಕೊಳ್ಳುತ್ತಾರೆ ವಿಜಯ್ ರಾಘವೇಂದ್ರ.

ಇದನ್ನೂಓದಿ: Raj Kundra-Shamita Shetty ಗೈರಿನಲ್ಲಿ ಮಕ್ಕಳ ಜತೆ ಗಣಪತಿ ಹಬ್ಬ ಆಚರಿಸಿದ Shilpa Shetty

ಕದ್ದ ಚಿತ್ರದ ಬಗ್ಗೆ ಖುದ್ದು ವಿಜಯ್ ರಾಘವೇಂದ್ರ ಅವರಲ್ಲಿಯೇ ಸಾಕಷ್ಟು ಎಕ್ಸೈಟ್‍ಮೆಂಟ್ ಇದೆ. 'ಸೈಕಲಾಜಿಕಲ್ ಥ್ರಿಲ್ಲರ್ ಹಾಗೂ ಸಸ್ಪೆನ್ಸ್ ಸಿನಿಮಾಗಳಿಗೆ ತಮ್ಮ ಆದಂತ ಗುಣಗಳಿರುತ್ತವೆ. ಆದರೆ ಅದೆಲ್ಲವನ್ನೂ ಹೊರತುಪಡಿಸಿ ಹೀಗೂ ಸಿನಿಮಾ ಮಾಡಬಹುದು ಎನ್ನುವಂತಹ ಪ್ರಯತ್ನ ಈ ಚಿತ್ರ. ಸಿಗರೇಟ್ ಸೇದಲು ಅಭ್ಯಾಸ, ಸೇದುವಾಗ ತಲೆ ತಿರುಗುವಂತಾಗುತ್ತಿತ್ತು. ಕ್ರಮೇಣ ನಾನೇ ಸಿಗರೇಟ್ ಹಚ್ಚಲು ಪ್ರಾರಂಭಿಸಿಬಿಟ್ಟಿದ್ದೆ. ಆಗ ಇದು ಯಾಕೋ ಜಾಸ್ತಿಯಾಗುತ್ತಿದೆ ಅಂತ ಅನ್ನಿಸಿ ಮತ್ತೆ ದೂರ ಇಟ್ಟೆ. ಒಂದೊಳ್ಳೆ ಪ್ರಯತ್ನ. ಮನೆಯವರೆಲ್ಲ ಇವನ ಕೈಯಲ್ಲಿ ಇನ್ನು ಆಗುವುದಿಲ್ಲ ಅಂತ ಬಿಟ್ಟುಬಿಟ್ಟಿದ್ದರು. ಇವನು ಸಿಗರೇಟ್ ಎಲ್ಲ ಸೇದಲ್ಲ ಅಂತ ನಿರ್ಧರಿಸಿದ್ದರು. ನಾನು ಒಂದು ಬಾರಿ ಸಿನಿಮಾ ಶೂಟಿಂಗ್ ನಡೆಯುವಾಗ ಸಿಗರೇಟ್ ಹಚ್ಚಿ ಅದನ್ನು ವಿಡಿಯೋ ಮಾಡಿ ಮನೆಯವರಿಗೆ ಕಳುಹಿಸಿದೆ. ಗಾಬರಿಯಾಗಿಬಿಟ್ಟರು... ಏ ಸಾಕು ಅಂತ ತಕ್ಷಣ ಕರೆ ಮಾಡಿದರು. ಆಗ ಅನ್ನಿಸಿತು ಕರೆಕ್ಟಾಗಿ ಸಿಗರೇಟ್ ಹಚ್ಚಿದ್ದೀನಿ, ಸರಿಯಾಗಿ ಹಿಡಿದುಕೊಂಡಿದ್ದೀನಿ ಅಂತ' ತಮ್ಮ ಅನುಭವ ಹಂಚಿಕೊಂಡಿದ್ದಾರೆ ಈ ನಟ.
'ಸ್ನೇಹಿತರು ಬೈಯೋರು ಅವರ ಸಿಗರೇಟ್ ಪ್ಯಾಕ್ ತಗೊಂಡು ಬಿಸಾಕುವುದು, ಕಾರಿನಲ್ಲಿ ಹೋಗುವಾಗ ವಿಂಡೋಯಿಂದ ಎಸೆದುಬಿಡೋದು, ನೀರಿಗೆ ಬಿಸಾಕೋದೆಲ್ಲಾ ಮಾಡುತ್ತಿದ್ದೆ. ಅವರೆಲ್ಲ ಬೈದುಕೊಳ್ಳುತ್ತಿದ್ದರು, ನಿನಗೂ ಸಿಗರೇಟ್ ಸೇದುವ ಕ್ಯಾರಕ್ಟರ್ ಸಿಗಲಿ ಅಂತ. ನೋಡೋಣ ಈ ಸಿನಿಮಾ ಬಂದ ಬಳಿಕ ಅವರಿಗೆ ಸಮಾಧಾನ ಆಗಿರುತ್ತೆ ಅಂದುಕೊಂಡಿದ್ದೇನೆ...' ಎಂದು ನಗುತ್ತಾ ಹೇಳುತ್ತಾರೆ ಚಿನ್ನಾರಿ ಮುತ್ತ.

ಇದನ್ನೂ ಓದಿ: Thalaivii: ತನ್ನ ಬಯೋಪಿಕ್​ನಲ್ಲಿ ಐಶ್ವಯಾ ರೈ ನಾಯಕಿಯಾಗಬೇಕೆಂದು ಬಯಸಿದ್ದ ಜಯಲಲಿತಾ..!

ಹೀಗೆ ಕದ್ದ ಚಿತ್ರಕ್ಕಾಗಿ ಕಲಿತ ಧೂಮಪಾನವನ್ನು ಅವರು ಮುಂದುವರಿಸಿಲ್ಲ. `ಚಿತ್ರೀಕರಣ ಮುಗಿದ ಬಳಿಕ ಸಿಗರೇಟ್ ಅನ್ನೂ ದೂರ ಇಟ್ಟಿದ್ದೇನೆ. ನನಗೆ ಸಿಗರೇಟ್‍ನ ಟೇಸ್ಟ್ ಇಷ್ಟವಿಲ್ಲ, ಅದು ಬೇಕು ಅಂತ ಅನ್ನಿಸಿಯೇ ಇಲ್ಲ' ಎಂದು ಧೂಮಪಾನಿಗಳಿಗೆ ಕಿವಿಮಾತನ್ನೂ ಹೇಳುತ್ತಾರೆ ವಿಜಯ್ ರಾಘವೇಂದ್ರ.
Published by:Anitha E
First published: