news18-kannada Updated:December 29, 2020, 10:26 PM IST
ಮಾಸ್ಟರ್
ಬಹುನಿರೀಕ್ಷಿತ ಸಿನಿಮಾಗಳ ಪೈಕಿ ತಮಿಳು ಸ್ಟಾರ್ ನಟ ವಿಜಯ್ ನಟನೆಯ ಮಾಸ್ಟರ್ ಸಿನಿಮಾ ಕೂಡ ಒಂದು. ಅಂದುಕೊಂಡಂತೆ ಆಗಿದ್ದರೆ ಈ ಸಿನಿಮಾ ಈಗಾಗಲೇ ಬಿಡುಗಡೆಯಾಗಬೇಕಿತ್ತು. ಆದರೆ ಕೊರೋನಾದಿಂದಾಗಿ ಹಾಕಿಕೊಂಡಿದ್ದ ಪ್ಲಾನ್ ಉಲ್ಟಾಪಲ್ಟಾ ಆಯಿತು. ಆದರೀಗ ಚಿತ್ರತಂಡ ಮಾಸ್ಟರ್ ಸಿನಿಮಾದ ಬಿಡುಗಡೆ ದಿನಾಂಕವನ್ನು ಬಹಿರಂಗ ಪಡಿಸಿದೆ.
ಲೊಕೇಶ್ ಕಣಗರಾಜ್ ನಿರ್ದೇಶನಲ್ಲಿ ಮೂಡಿ ಬರುತ್ತಿರುವ ಮಾಸ್ಟರ್ ಸಿನಿಮಾ ಬಗ್ಗೆ ಸಾಕಷ್ಟು ನಿರೀಕ್ಷೆಗಳಿಗೆ. ಅಭಿಮಾನಿಗಳಂತೂ ಈ ಸಿನಿಮಾವನ್ನು ವೀಕ್ಷಿಸಲು ತುದಿಗಾಲಿನಲ್ಲಿ ಕಾದು ಕುಳಿತಿದ್ದಾರೆ. ಅಂದಹಾಗೆಯೇ ಈ ಸಿನಿಮಾ ಜ.13ರಂದು ಬಿಡುಗಡೆಯಾಗಲಿದೆ.
ಕೊರೋನಾ ಕಾಲಘಟ್ಟದಲ್ಲಿ ಚಿತ್ರಮಂದಿರಗಳು ತೆರೆದಿವೆ. ಮತ್ತೊಂದೆಡೆ ಕೆಲವು ಸಿನಿಮಾಗಳು ಥಿಯೇಟರ್ನಲ್ಲಿ ರಿಲೀಸ್ ಆಗಿದೆ. ಆದರೆ ನಿರಿಕ್ಷೆಯಷ್ಟು ಜನರು ಥಿಯೇಟರ್ಗೆ ಪ್ರವೇಶಿಸಿಲ್ಲ. ಆದರೀಗ ಮಾಸ್ಟರ್ ಸಿನಿಮಾ ಎಲ್ಲಾ ಪ್ರೇಕ್ಷಕರನ್ನು ಥಿಯೇಟರ್ಗೆ ಕರೆದೊಯ್ಯುವ ಕೆಲಸ ಮಾಡಲಿದೆ.
ಮಾಸ್ಟರ್ ಸಿನಿಮಾ ಕನ್ನಡದಲ್ಲೂ ತೆರೆ ಕಾಣಲಿದೆ ಎಂದು ಹೇಳಲಾಗುತ್ತಿತ್ತು. ಆದರೀಗ ಅಧಿಕೃತ ಪೋಸ್ಟರ್ ರಿಲೀಸ್ ಆಗಿದ್ದು ಅದರಲ್ಲಿ ಹಿಂದಿ ಮತ್ತು ತೆಲುಗಿಗೆ ಪ್ರಾಮುಖ್ಯತೆ ನೀಡಲಾಗಿದೆ. ಮಾತ್ರವಲ್ಲದೆ ತಮಿಳುನಾಡು ಸಿಎಂ ಜೊತೆಗೆ ಈ ಬಗ್ಗೆ ಮಾತನಾಡಿದ್ದು, ಥಿಯೇಟರ್ನಲ್ಲಿ ಆಸನದ ವ್ಯವಸ್ಥೆಯನ್ನು ಶೇ.50 ರಿಂದ ಶೇ.100ರಷ್ಟು ಮಾಡುವಂತೆ ಬೇಡಿಕೆ ನೀಡಿದ್ದಾರಂತೆ.
ಒಟ್ಟಿನಲ್ಲಿ ಕೊರೋನಾ ಹಾವಳಿ ಕಡಿಮೆಯಾಗುತ್ತಿರುವ ಕಾಲಘಟ್ಟದಲ್ಲಿ ದೊಡ್ಡ ಬಜೆಟ್ ಸಿನಿಮಾವೊಂದು ಥಿಯೇಟರ್ನಲ್ಲಿ ಬಿಡುಗಡೆಯಾಗುತ್ತಿರುವುದು ಅಭಿಮಾನಿಗಳಿಗೆ ಸಂತೋಷ ತಂದಿದೆ.
Published by:
Harshith AS
First published:
December 29, 2020, 10:26 PM IST