ಮತ್ತೆ ಒಂದಾಗಲಿದೆ ಟಗರು ಜೋಡಿ; ಈ ಬಾರಿ ಆ್ಯಕ್ಷನ್ ಕಟ್ ಹೇಳ್ತಿರೋದು ತಮಿಳಿನ ಖ್ಯಾತ ನಿರ್ದೇಶಕ

2018ರಲ್ಲಿ ತೆರೆಗೆ ಬಂದಿದ್ದ ಟಗರು ಚಿತ್ರದಲ್ಲಿ ಶಿವರಾಜ್​ಕುಮಾರ್​ ಹಾಗೂ ಡಾಲಿ ಧನಂಜಯ್​ ಕಾಂಬಿನೇಷನ್​ ಪ್ರೇಕ್ಷಕರಿಗೆ ಇಷ್ಟವಾಗಿತ್ತು. ಈಗ ಮತ್ತೊಮ್ಮೆ ಈ ಕಾಂಬಿನೇಷನ್​ ತೆರೆ ಮೇಲೆ ಬರಲು ಸಿದ್ಧವಾಗಿದೆ.

ಧನಂಜಯ್​-ಶಿವರಾಜ್​ಕುಮಾರ್​

ಧನಂಜಯ್​-ಶಿವರಾಜ್​ಕುಮಾರ್​

 • Share this:
  ಶಿವರಾಜ್​ಕುಮಾರ್​ ಹಾಗೂ ಡಾಲಿ ಧನಂಜಯ್​ ಕಾಂಬಿನೇಷನ್​ನಲ್ಲಿ ಮೂಡಿ ಬಂದಿದ್ದ ‘ಟಗರು’ ಚಿತ್ರ ಸ್ಯಾಂಡಲ್​ವುಡ್​ನಲ್ಲಿ ಧೂಳೆಬ್ಬಿಸಿತ್ತು. ಸಿನಿಮಾ ತೆರೆಗೆ ಬಂದು 2 ವರ್ಷ ಕಳೆದಿದ್ದರೂ ಜನರು ಈ ಕಾಂಬಿನಷೇನ್​​ಅನ್ನು ಮರೆತಿಲ್ಲ. ಈಗ ಇದೇ ಜೋಡಿ ಮತ್ತೆ ತೆರೆಮೇಲೆ ಬರಲು ಸಿದ್ಧವಾಗಿದೆ. ಈ ಬಾರಿ ಆ್ಯಕ್ಷನ್​ ಕಟ್​ ಹೇಳುತ್ತಿರುವುದು ತಮಿಳಿನ ಸ್ಟಾರ್​ ನಿರ್ದೇಶಕ!

  ತಮಿಳಿನ ‘ಗೋಲಿ ಸೋಡ’ ಖ್ಯಾತಿಯ ವಿಜಯ್​ ಮಿಲ್ಟನ್​ ಶಿವರಾಜ್​ಕುಮಾರ್​ 124ನೇ ಸಿನಿಮಾಗೆ ಆ್ಯಕ್ಷನ್​ ಕಟ್​ ಹೇಳುತ್ತಿದ್ದಾರೆ. ಈ ಮೊದಲು ಕ್ಯಾಮೆರಾ ಮೆನ್​ ಆಗಿ ಕೆಲಸ ಮಾಡುತ್ತಿದ್ದ ಅವರು ನಿರ್ದೇಶಕರಾಗಿ ಬಡ್ತಿ ಪಡೆದಿದ್ದಾರೆ.

  ಅಂದಹಾಗೆ, ವಿಜಯ್​ ಮಿಲ್ಟನ್​ಗೆ ಸ್ಯಾಂಡಲ್​ವುಡ್​ ಹೊಸದಲ್ಲ. ಈ ಮೊದಲು ಅವರು ಕನ್ನಡದಲ್ಲಿ ತೆರೆಕಂಡಿದ್ದ ‘ಅಟ್ಟಹಾಸ’ ಚಿತ್ರಕ್ಕೆ ಛಾಯಾಗ್ರಾಹಕರಾಗಿ ಕೆಲಸ ಮಾಡಿದ್ದರು. ಈಗ ಅವರು ಸ್ಯಾಂಡಲ್​ವುಡ್​ಗೆ ನಿರ್ದೇಶಕರಾಗಿ ಎಂಟ್ರಿ ಕೊಡುತ್ತಿದ್ದಾರೆ.

  ಇದನ್ನೂ ಓದಿ: ಶಸ್ತ್ರಚಿಕಿತ್ಸೆಗಾಗಿ ಲಂಡನ್​ಗೆ ತೆರಳಿದ ಹ್ಯಾಟ್ರಿಕ್ ಹೀರೋ ಶಿವರಾಜ್​ಕುಮಾರ್​

  ಶಿವರಾಜ್​ಕುಮಾರ್​ ಜೊತೆ ಶಿವರಾಜ್​ಕುಮಾರ್ಅವರನ್ನು ಚಿತ್ರಕ್ಕೆ ಆಯ್ಕೆ ಮಾಡಿಕೊಳ್ಳಬೇಕು ಎನ್ನುವ ಆಲೋಚನೆ ವಿಜಯ್​ ಅವರದ್ದು. ಅಂದಹಾಗೆ, ಧನಂಜಯ್​ ನೆಗೆಟಿವ್​ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರಾ ಅಥವಾ ಅವರು ಕೂಡ ಹೀರೋ ಆಗಿ ಕಾಣಿಸಿಕೊಳ್ಳಲಿದ್ದಾರಾ ಎನ್ನುವುದು ಇನ್ನಷ್ಟೇ ಗೊತ್ತಾಗಬೇಕಿದೆ.
  First published: