ರಾಕಿಂಗ್ ಸ್ಟಾರ್ ಯಶ್(Rocking Star Yash) ನಟನೆಯ ಕೆಜಿಎಫ್-2 (KGF 2) ಸಿನಿಮಾ ಅರ್ಭಟದ ಮುಂದೆ ಬೀಸ್ಟ್ (Beast) ಹೀನಾಯ ಸೋಲುಂಡಿತ್ತು. ಏಪ್ರಿಲ್ 13ರಂದು ತೆರೆಗೆ ಬಂದ ದಳಪತಿ ವಿಜಯ್ (Vijay) ನಟನೆಯ ಬೀಸ್ಟ್ ಸಿನಿಮಾಗೆ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಮೊದಲ ದಿನ ಬಾಕ್ಸ್ ಆಫೀಸ್ (Box Office) ನಲ್ಲಿ ಉತ್ತಮ ಕಮಾಯಿ ಮಾಡಿದ್ದ ಬೀಸ್ಟ್, ಕೆಜಿಎಫ್-2 ಬಿಡುಗಡೆ ಬಳಿಕ ದೂಳಿಪಾಟ ಆಗಿತ್ತು. ತಮಿಳುನಾಡಿನಲ್ಲೇ ಬೀಸ್ಟ್ ಸಿನಿಮಾ ಪ್ರದರ್ಶನಗೊಳ್ಳುತ್ತಿರುವ ಚಿತ್ರಮಂದಿರಗಳು ಖಾಲಿ ಹೊಡೆಯುತ್ತಿವೆ. ಬೀಸ್ಟ್ ಸಿನಿಮಾ ನೋಡಿದ ಪ್ರತಿಯೊಬ್ಬರು ವಿಜಯ್ ಈ ಸಿನಿಮಾ ಮಾಡಬಾರದಿತ್ತು ಎಂದು ಪ್ರತಿಕ್ರಿಯೆ ನೀಡಿದ್ದರು. ದಳಪತಿ ವಿಜಯ್ ಕೆರಿಯರ್ನಲ್ಲೇ ಇಷ್ಟು ಕೆಟ್ಟ ಸಿನಿಮಾ ಬಂದಿರಲಿಲ್ಲ ಎಂದು ಸ್ವತಃ ಅಭಿಮಾನಿಗಳೇ ಮಾತನಾಡಿದ್ದರು. ಆದರೆ ಚಿತ್ರತಂಡ ಸಕ್ಸಸ್ ಪಾರ್ಟಿ ಮಾಡಿದೆ.
ದಳಪತಿ ವಿಜಯ್ ಮನೆಯಲ್ಲೇ 'ಬೀಸ್ಟ್' ಪಾರ್ಟಿ
ಬೀಸ್ಟ್ ಸಿನಿಮಾದಲ್ಲಿ ಲಾಜಿಕ್ ಇಲ್ಲ, ನಾಯಕಿ ಪಾತ್ರಕ್ಕೆ ಮಹತ್ವ ಇಲ್ಲ. ಇದು ವಿಜಯ್ ಅವರ ಸಿನಿಮಾ ಅಲ್ಲ. ನಿರ್ದೇಶಕ ನೆಲ್ಸನ್ ವಿಜಯ್ ಅವರ ಜೊತೆ ಸಿನಿಮಾ ಮಾಡಿ ಇಮೇಜ್ ಡ್ಯಾಮೇಜ್ ಮಾಡಿಬಿಟ್ರು ಎಂದು ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದರು. ಸಿನಿಮಾ ಫ್ಲಾಪ್ ಆದರೂ, ದಳಪತಿ ವಿಜಯ್ ಅವರ ಮನೆಯಲ್ಲಿ ಬೀಸ್ಟ್ ಚಿತ್ರತಂಡ ಪಾರ್ಟಿ ಮಾಡಿದೆ. ವಿಜಯ್ ಚಿತ್ರತಂಡದ ಎಲ್ಲರನ್ನೂ ಮನೆಗೆ ಕರೆಸಿ ಹೊಟ್ಟೆ ತುಂಬಿಸಿದ್ದಾರೆ. ಈ ಪಾರ್ಟಿಯ ಚಿತ್ರಗಳು ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.
ಪಾರ್ಟಿ ಬಳಿಕ ನಿರ್ದೇಶಕ ನೆಲ್ಸನ್ ಹೇಳಿದ್ದೇನು?
ಈ ಪಾರ್ಟಿಯಲ್ಲಿ ಸಿನಿಮಾದ ನಿರ್ದೇಶಕ ನೆಲ್ಸನ್ ದಿಲೀಪ್ ಕುಮಾರ್, ಚಿತ್ರದ ನಟಿ ಪೂಜಾ ಹೆಗ್ಡೆ, ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಸೇರಿ ಚಿತ್ರತಂಡದ ಹಲವರು ಭಾಗಿಯಾಗಿದ್ದರು. "ಈ ಪಾರ್ಟಿ ಆಯೋಜಿಸಿದ್ದಕ್ಕೆ ದಳಪತಿ ವಿಜಯ್ ಅವರಿಗೆ ಧನ್ಯವಾದಗಳು. ವಿಜಯ್ ಅವರ ಪ್ರೀತಿ-ಪ್ರೋತ್ಸಹಕ್ಕೆ ಸದಾ ನಾನು ಚಿರಋಣಿ. ನಿಮ್ಮ ಜೊತೆ ಕೆಲಸ ಮಾಡಲು ಬಹಳ ಖುಷಿಯಾಗುತ್ತದೆ. ಈ ಕ್ಷಣವನ್ನು ನಾನು ಜೀವನವಿಡಿ ನೆನಪಿಟ್ಟುಕೊಳ್ಳುತ್ತೇನೆ" ಎಂದು ನೆಲ್ಸನ್ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ವ್ಹಾ, ಕೊನೆಗೂ ಕೆಜಿಎಫ್ 3 ಸುಳಿವು ಕೊಟ್ಟ ಯಶ್! ಅದ್ರಲ್ಲಿ ಮತ್ಯಾವ ಸಾಮ್ರಜ್ಯ ಆಳ್ತಾರೋ ರಾಕಿ ಭಾಯ್?
ಸಿಕ್ಕಾಪಟ್ಟೆ ಟ್ರೋಲ್ ಆದ ಬೀಸ್ಟ್ ಚಿತ್ರತಂಡ!
ಈಗಲೂ ಪ್ರೇಕ್ಷಕರು ಕೆಜಿಎಫ್-2 ನೋಡಲು ಮುಗಿಬಿದ್ದು ಟಿಕೆಟ್ ಬುಕ್ (Ticket Book) ಮಾಡುತ್ತಿದ್ದಾರೆ. ಮತ್ತೆ ಈ ವಾರ ತಮಿಳುನಾಡಿನಲ್ಲಿ ಕೆಜಿಎಫ್ 2 ಸಿನಿಮಾಗಳು ಹೆಚ್ಚಿನ ಥಿಯೇಟರ್ಗಳಲ್ಲಿ ಪ್ರದರ್ಶನಗೊಳ್ಳುತ್ತಿದೆ. ಬೀಸ್ಟ್ ಸಿನಿಮಾ ತಮಿಳು, ತೆಲುಗು, ಮಲಯಾಳಂ, ಕನ್ನಡ ಮತ್ತು ಹಿಂದಿ ಭಾಷೆಯಲ್ಲಿ ತೆರೆಗೆ ಬಂದಿತ್ತು. ಆದರೆ, ಹೀನಾಯವಾಗಿ ಸೋಲುಂಡಿತ್ತು. ಹೀಗಿದ್ದರೂ, ಚಿತ್ರತಂಡ ಪಾರ್ಟಿ ಮಾಡಿರೋದು ಟ್ರೋಲ್ಗೆ ಗುರಿಯಾಗಿದೆ.
ಇದನ್ನೂ ಓದಿ: ಎಲ್ಲಾ ರೆಕಾರ್ಡ್ ಮುರಿದ ರಾಕಿ ಭಾಯ್ ಗೆ ಅದೊಂದು ದಾಖಲೆ ಟಚ್ ಮಾಡಕ್ಕಾಗಿಲ್ವಂತೆ! ಏನದು?
ನೆಲ್ಸನ್ ವಿರುದ್ಧ ಹರಿಹಾಯ್ದ ವಿಜಯ್ ತಂದೆ!
ಅದಮ್ಯ ವಿಶ್ವಾಸದೊಂದಿಗೆ 'ಬೀಸ್ಟ್' ಸಿನಿಮಾವು 'ಕೇಜಿಎಫ್ 2' ಸಿನಿಮಾದ ಎದುರಾಳಿಯಾಗಿ ಬಿಡುಗಡೆ ಆಗಿತ್ತು. ಆದರೆ, ರಾಕಿ ಭಾಯ್ ಎದುರು ಸೋತು ಸುಣ್ಣವಾಗಿತ್ತು. ಇದೀಗ ಸಿನಿಮಾ ಬಗ್ಗೆ ವಿಜಯ್ರ ತಂದೆ ಎಸ್ಎ ಚಂದ್ರಶೇಖರ್ ತೀವ್ರ ಅಸಮಾಧಾನಗೊಂಡಿದ್ದು, ಸಿನಿಮಾ ನಿರ್ದೇಶಕ ನೆಲ್ಸನ್ ದಿಲೀಪ್ ವಿರುದ್ಧ ಕಿಡಿಕಾರಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿರುವ ಎಸ್ಎ ಚಂದ್ರಶೇಖರ್, ''ಅಂತರಾಷ್ಟ್ರೀಯ ಭಯೋತ್ಪಾದಕೆಯ ವಿಷಯದ ಬಗ್ಗೆ ಸಿನಿಮಾ ಮಾಡಬೇಕಾದರೆ ದೊಡ್ಡ ಮಟ್ಟದಲ್ಲಿ ಕತೆ ಹೇಳಬೇಕಾಗುತ್ತದೆ. ಅದನ್ನು ಬಿಟ್ಟು ಒಂದು ಮಾಲ್ನಲ್ಲಿ ಹಿರೋ ಅನ್ನಿಟ್ಟು ಅಂತರಾಷ್ಟ್ರೀಯ ಮಟ್ಟದ ವಿಷಯದ ಕತೆ ಹೇಳಲು ಸಾಧ್ಯವಿಲ್ಲ'' ಎಂದು ಅವರು ಟೀಕಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ