Bigil Movie: ಹುಚ್ಚುತನದ ಪರಮಾವಧಿ; ಕ್ರೇನ್​ನಿಂದ ನೇತಾಡಿದ ತಮಿಳು ನಟ ವಿಜಯ್ ಫ್ಯಾನ್ಸ್; ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ

Bigil Movie: ತಮಿಳು ನಟ ವಿಜಯ್​ ಅವರ ಅಭಿಮಾನಿಗಳು ಸಹ ತಮ್ಮ ನೆಚ್ಚಿನ ನಟನ ಬಿಗಿಲ್​ ಸಿನಿಮಾದ ಯಶಸ್ಸಿಗಾಗಿ ನಾನಾ ಕಸರತ್ತುಗಳನ್ನು ಮಾಡುತ್ತಿದ್ದಾರೆ. ಅವರು ಮಾಡಿರುವ ಕೆಲಸಕ್ಕೆ ಈಗ ಸಾಮಾಜಿಕ ಜಾಲತಾಣದಲ್ಲೂ ಆಕ್ರೋಶ ವ್ಯಕ್ತವಾಗುತ್ತಿದೆ.

Anitha E | news18-kannada
Updated:October 23, 2019, 6:45 PM IST
Bigil Movie: ಹುಚ್ಚುತನದ ಪರಮಾವಧಿ; ಕ್ರೇನ್​ನಿಂದ ನೇತಾಡಿದ ತಮಿಳು ನಟ ವಿಜಯ್ ಫ್ಯಾನ್ಸ್; ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ
ನಟ ವಿಜಯ್​ ಅಭಿಮಾನಿಗಳ ಅಭಿಮಾನದ ಅತಿರೇಖ
  • Share this:
ಸ್ಟಾರ್​ ನಟ ಅಭಿಮಾನಿಗಳ ಅಭಿಮಾನಕ್ಕೆ ಪಾರವೇ ಇಲ್ಲದಂತಾಗಿದೆ. ತಮ್ಮ ನೆಚ್ಚಿನ ನಟನ ಸಿನಿಮಾ ತೆರೆ ಕಾಣುತ್ತದೆ ಎಂದರೆ ಸಾಕು ಕೆಲ ಅಭಿಮಾನಿಗಳ ಹುಚ್ಚುತನ ಬೆಳಕಿಗೆ ಬರಲು ಆರಂಭಿಸುತ್ತದೆ. ಈ ಹಿಂದೆ ಸ್ಯಾಂಡಲ್​ವುಡ್​ನಲ್ಲೂ  ಸಿನಿಮಾವೊಂದು ಬಿಡುಗಡೆಯಾದಾಗ ಅಭಿಮಾನಿಗಳು ಚಿತ್ರಮಂದಿರದ ಮುಂದೆ ಕುರಿ ಹಾಗೂ ಎಮ್ಮೆ ಕರುವನ್ನು ಬಲಿ ಕೊಟ್ಟಿದ್ದರು.

ಈಗ ತಮಿಳು ನಟ ವಿಜಯ್​ ಅವರ ಅಭಿಮಾನಿಗಳು ಸಹ ತಮ್ಮ ನೆಚ್ಚಿನ ನಟನ 'ಬಿಗಿಲ್​' ಸಿನಿಮಾದ ಯಶಸ್ಸಿಗಾಗಿ ನಾನಾ ಕಸರತ್ತುಗಳನ್ನು ಮಾಡುತ್ತಿದ್ದಾರೆ. ಅವರು ಮಾಡಿರುವ ಕೆಲಸಕ್ಕೆ ಈಗ ಸಾಮಾಜಿಕ ಜಾಲತಾಣದಲ್ಲೂ ಆಕ್ರೋಶ ವ್ಯಕ್ತವಾಗುತ್ತಿದೆ.

ಹೌದು, ನಟ ವಿಜಯ್​ ಅಭಿನಯದ ಬಹುನಿರೀಕ್ಷಿತ ಸಿನಿಮಾ 'ಬಿಗಿಲ್​' ಇದೇ ಶುಕ್ರವಾರ ತೆರೆ ಕಾಣಲಿದೆ. ಅಂದರೆ ಅ.25ರಂದು ಅದ್ಧೂರಿಯಾಗಿ ರಿಲೀಸ್​ ಆಗಲಿರುವ ಸಿನಿಮಾಗಾಗಿ ವಿಜಯ್​ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಈ ಸಿನಿಮಾ ಯಶಸ್ಸು ಕಾಣಲಿ ಎಂದು ನೆಲದ ಮೇಲೆ ಊಟ ಮಾಡುತ್ತಿದ್ದಾರೆ. ಸಾಲದಕ್ಕೆ ಬೆನ್ನಿಗೆ ಹುಕ್​ ಹಾಕಿಕೊಂಡು ಕ್ರೇನ್​ಗೆ ನೇತಾಡಿದ್ದಾರೆ.

#TuesdayMotivation #TamilNadu

ವಿಜಯ್​ ಅವರ ಅಭಿಮಾನಿಗಳು ಮಾಡಿರುವ ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದ್ದು, ಅವರ ಈ ಕೆಲಸಕ್ಕೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇಂತಹ ಹುಚ್ಚು ಅಭಿಮಾನಿಗಳ ಅತಿರೇಖಕ್ಕೆ ನಟ ವಿಜಯ್​ ಬ್ರೇಕ್​ ಹಾಕಬೇಕಿದೆ ಎಂದು ಮನವಿ ಮಾಡುತ್ತಿದ್ದಾರೆ. ಮತ್ತೆ ಕೆಲವರು ಇಂತಹ ಕೆಲಸ ಮಾಡಿದವರನ್ನು ಪೊಲೀಸರು ಬಂಧಿಸಬೇಕು ಎಂದು ಆಗ್ರಹಿಸುತ್ತಿದ್ದಾರೆ.

 

'ತೆರಿ', 'ಮರ್ಸಲ್' ಚಿತ್ರಗಳ ಬಳಿಕ ವಿಜಯ್ ಹಾಗೂ ನಿರ್ದೇಶಕ ಅಟ್ಲೀ ಕಾಂಬಿನೇಷನ್‍ನಲ್ಲಿ ಮೂಡಿಬರುತ್ತಿರುವ ಮೂರನೇ ಸಿನಿಮಾ. ಮೊದಲೆರಡು ಚಿತ್ರಗಳೂ ಬಾಕ್ಸಾಫಿಸ್ ಲೂಟಿ ಮಾಡಿದ್ದ ಕಾರಣ ಈ ಬಾರಿ ವಿಜಯ್, ಅಟ್ಲೀ ಹ್ಯಾಟ್ರಿಕ್ ಬಾರಿಸೋದು ಫಿಕ್ಸ್ ಅಂತಲೇ ಕಾಲಿವುಡ್‍ನಲ್ಲಿ ಮಾತುಗಳು ಕೇಳಿಬರ್ತಿವೆ. ಅದಕ್ಕೆ ತಕ್ಕಂತೆ ಚಿತ್ರದ ಟ್ರೈಲರ್ ವೈರಲ್ ಆಗಿದೆ. ಎಆರ್ ರೆಹಮಾನ್​ ಸಂಗೀತ ನೀಡಿರುವ ಹಾಡುಗಳು ಕೂಡ ಸಖತ್ ಸದ್ದು ಮಾಡುತ್ತಿವೆ.

Shraddha Srinath: ಹೇಗಿದ್ದ ಶ್ರದ್ಧಾ ಶ್ರೀನಾಥ್​ ಹೀಗಾಗಿದ್ದು ಹೇಗೆ ಗೊತ್ತಾ..?

First published: October 23, 2019, 6:45 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading