Vijay Deverakonda: ಮುಗ್ಗರಿಸಿದ ಲೈಗರ್, ರೇಟಿಂಗ್​ನಲ್ಲಿ ಲಾಲ್ ಸಿಂಗ್ ಚಡ್ಡಾಗಿಂತ ಹಿಂದೆ ಬಿತ್ತಾ ವಿಜಯ್ ದೇವರಕೊಂಡ ಚಿತ್ರ?

ಪೂರಿ ಜಗನ್ನಾಥ್ ನಿರ್ದೇಶನದ ಲೈಗರ್​ ಚಿತ್ರಕ್ಕೆ ದಿ ಇಂಟರ್​ ನೆಟ್​ ಮೂವಿ ಡೇಟಾಬೇಸ್​ (IMDB) ವೆಬ್​ ಸೈಟ್​ನಲ್ಲಿ ಕೇವಲ 1.7 ರೇಟಿಂಗ್ ಸಿಕ್ಕಿದೆ. ಇತ್ತೀಚಿಗೆ ಬಿಡುಗಡೆಯಾದ ಲಾಲ್​ ಸಿಂಗ್ ಚಡ್ಡಾ ಚಿತ್ರಕ್ಕೆ 5 ರೇಟಿಂಗ್ ನೀಡಲಾಗಿತ್ತು. ಆದರೂ ಅದು ಕಳಪೆ ಚಿತ್ರ ಎಂದು ಪರಿಗಣಿಸಲಾಗಿತ್ತು.

ವಿಜಯ್ ದೇವರಕೊಂಡ, ಆಮೀರ್ ಖಾನ್​

ವಿಜಯ್ ದೇವರಕೊಂಡ, ಆಮೀರ್ ಖಾನ್​

  • Share this:
ಬಿಡುಗಡೆಗೂ ಮುನ್ನ ಭಾರೀ ನಿರೀಕ್ಷೆ ಮೂಡಿಸಿದ್ದ ನಟ ವಿಜಯ್ ದೇವರಕೊಂಡ (Vijay Deverakonda) ಮತ್ತು ಅನನ್ಯ ಪಾಂಡೆ ಕಾಂಬಿನೇಷನ್ ನಲ್ಲಿ ತೆರೆಕಂಡ ಲೈಗರ್ (Liger) ಚಿತ್ರ ಇದೀಗ ಮಕಾಡೆ ಮಲಗಿದೆ. ಬಾಕ್ಸ್ ಆಫೀಸಿನಲ್ಲಿ (Box Office) ಈ ಚಿತ್ರ ಭಾರೀ ಸೌಂಡ್ ಮಾಡಲಿದೆ ಎಂದು ಅಂದಾಜಿಸಲಾಗಿದೆ. ಹಾಗಾಗಿಯೇ ಈ ಸಿನಿಮಾ ಕೊಳ್ಳಲು ಮುಗಿಬಿದ್ದಿದ್ದರು. ಆದರೆ, ನಿರೀಕ್ಷಿತ ಫಲಿತಾಂಶ (Result) ಬಂದಿಲ್ಲ ಎನ್ನುತ್ತಿವೆ ಮೂಲಗಳು. ಲೈಗರ್ ಚಿತ್ರ ನೋಡಿದ ಪ್ರೇಕ್ಷಕರು ಕೂಡ ಮಿಶ್ರ ಪ್ರತಿಕ್ರಿಯೆ ನೀಡಿದ್ದಾರೆ. ಹಾಗಾಗಿ ರಿಲೀಸ್ ಆದ ಮೊದಲ ದಿನವೇ ಸಿನಿಮಾ (Tollywood Movie) ಮುಗ್ಗರಿಸಿದೆ.

ಲೈಗರ್​ ಚಿತ್ರಕ್ಕೆ IMDBಯಿಂದ 1.7 ರೇಟಿಂಗ್​

ಪೂರಿ ಜಗನ್ನಾಥ್ ನಿರ್ದೇಶನದ ಲೈಗರ್​ ಚಿತ್ರಕ್ಕೆ ದಿ ಇಂಟರ್​ ನೆಟ್​ ಮೂವಿ ಡೇಟಾಬೇಸ್​ (IMDB) ವೆಬ್​ ಸೈಟ್​ನಲ್ಲಿ ಕೇವಲ 1.7 ರೇಟಿಂಗ್ ಸಿಕ್ಕಿದೆ. ಇತ್ತೀಚಿಗೆ ಬಿಡುಗಡೆಯಾದ ಲಾಲ್​ ಸಿಂಗ್ ಚಡ್ಡಾ ಚಿತ್ರಕ್ಕೆ 5 ರೇಟಿಂಗ್ ನೀಡಲಾಗಿತ್ತು. ಆದರೂ ಅದು ಕಳಪೆ ಚಿತ್ರ ಎಂದು ಪರಿಗಣಿಸಲಾಗಿತ್ತು. ಇದೀಗ ಲೈಗರ ಚಿತ್ರಕ್ಕೆ ಅದಕ್ಕಿಂತ ಕಳಪೆ ರೇಟಿಂಗ್​ ನೀಡಲಾಗಿದೆ.

Liger Movie netizens reaction in twitter people call Pogaru is better than Liger see updates
ಲೈಗರ್


ಲೈಗರ್​​ ಕಲೆಕ್ಷನ್​​ನಲ್ಲಿ ಭಾರೀ ಕುಸಿತ

ಮೊದಲ ದಿನವೇ 19 ಕೋಟಿ ಕಲೆಕ್ಷನ್​ ಮಾಡಿದ್ದ ಲೈಗರ್​ ಚಿತ್ರ, ಎರಡನೇ ದಿನಕ್ಕೆ ಅಂದರೆ ಶುಕ್ರವಾರಕ್ಕೆ ಸಿನಿಮಾದ ಕಲೆಕ್ಷನ್ ಮೊದಲ ದಿನದ ಅರ್ಧದಷ್ಟು ಕಡಿಮೆ ಆಗಿದೆ. ಮೊದಲ ದಿನ 19 ಕೋಟಿ ಕಲೆಕ್ಷನ್ ಆಗಿದ್ದರೆ ಎರಡನೇ ದಿನ  ಸಿನಿಮಾದ ಒಟ್ಟು ಕಲೆಕ್ಷನ್ 9.25 ಕೋಟಿ ಆಗಿದೆ. ಅಲ್ಲಿಗೆ ಎರಡು ದಿನದ ಒಟ್ಟು ಕಲೆಕ್ಷನ್ 28.25 ಕೋಟಿ ಆಗಿದೆ. ವರ್ಷದಲ್ಲೇ ಅತಿ ಕಡಿಮೆ ರೇಟಿಂಗ್ ಪಡೆದ ಹಿಂದಿ ಚಿತ್ರ ಎಂಬ ಕುಖ್ಯಾತಿಗೂ ಪಾತ್ರವಾಗಿದೆ.

ಅಭಿಮಾನಿಗಳು ವಿಮರ್ಶಕರಿಂದ ನೆಗೆಟಿವ್​ ಕಾಮೆಂಟ್​

ಚಿತ್ರದ ನೋಡಿದ ಪ್ರೇಕ್ಷಕರು ಸಹ ಸಾಮಾಜಿಕ ಜಾಲತಾಣದಲ್ಲಿ ನೆಗೆಟಿವ್ ಕಾಮೆಂಟ್​ ಮಾಡಿದ್ದಾರೆ. ಲೈಗರ್​ ಚಿತ್ರ ಭಾರೀ ನಿರಾಸೆ ಮೂಡಿಸಿದೆ ಎಂದು ವಿಜಯ್ ದೇವರಕೊಂಡ ಅಭಿಮಾನಿಗಳು ಹೇಳಿದ್ದಾರೆ. ಇತ್ತ ವಿಮರ್ಶಕರು ಸಹ ಈ ಚಿತ್ರ ನೋಡಿ ಬೇಸರ ವ್ಯಕ್ತಪಡಿಸಿದ್ದಾರೆ. ಲೈಗರ್​ ಚಿತ್ರವನ್ನು ಕಸದ ಬುಟ್ಟಿಗೆ ಎಸೆಯೋದು ಒಳ್ಳೆಯದು ಎಂದು ವಿಮರ್ಶಕರು ಹೇಳಿದ್ದಾರೆ.

'ಲೈಗರ್' ಸಿನಿಮಾದ ಬಗ್ಗೆ ಭಾರಿ ಋಣಾತ್ಮಕ ವಿಮರ್ಶೆಗಳು ವ್ಯಕ್ತವಾಗಿವೆ. ಸಿನಿಮಾದಲ್ಲಿ ವಿಜಯ್ ದೇವರಕೊಂಡ ಹೊರತಾಗಿ ಇನ್ನೇನು ಉತ್ತಮ ಅಂಶವಿಲ್ಲ ಎನ್ನಲಾಗಿದೆ. ಪುರಿ ಜಗನ್ನಾಥ್ ಬಹಳ ಕಳಪೆ ನಿರ್ದೇಶನ ಮಾಡಿದ್ದಾರೆ ಎಂದು ಟೀಕಿಸಿದ್ದಾರೆ ವಿಮರ್ಶಕರು. ಅನನ್ಯಾ ಪಾಂಡೆ ನಟನೆಯೂ ತೀರ ಕಳಪೆಯಾಗಿದೆಯಂತೆ.



'ಲೈಗರ್' ಸಿನಿಮಾವು ಎಂಎಂಎ ಫೈಟರ್ ಒಬ್ಬನ ಕತೆಯನ್ನು ಹೊಂದಿದೆ. ಸಿನಿಮಾದಲ್ಲಿ ಅನನ್ಯಾ ಪಾಂಡೆ ನಾಯಕಿ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾ ನಿರ್ದೇಶನ ಮಾಡಿರುವುದು ಪುರಿ ಜಗನ್ನಾಥ್, ನಿರ್ಮಾಣವೂ ಅವರದ್ದೇ ನಟಿ ಚಾರ್ಮಿ ಸಹ ನಿರ್ಮಾಪಕಿ. ವಿಜಯ್ ದೇವರಕೊಂಡ ತಾಯಿಯ ಪಾತ್ರದಲ್ಲಿ ರಮ್ಯಾ ಕೃಷ್ಣ ನಟಿಸಿದ್ದಾರೆ.
Published by:Pavana HS
First published: