• Home
  • »
  • News
  • »
  • entertainment
  • »
  • Vijay Deverakonda: ಅಭಿಮಾನಿಗಳಿಗಾಗಿ 'ದೇವಸಾಂತಾ' ಕೊಟ್ರು ಭರ್ಜರಿ ಗಿಫ್ಟ್! ವಿಜಯ್ ದೇವರಕೊಂಡ ಫ್ಯಾನ್ಸ್ ಫುಲ್ ಖುಷ್

Vijay Deverakonda: ಅಭಿಮಾನಿಗಳಿಗಾಗಿ 'ದೇವಸಾಂತಾ' ಕೊಟ್ರು ಭರ್ಜರಿ ಗಿಫ್ಟ್! ವಿಜಯ್ ದೇವರಕೊಂಡ ಫ್ಯಾನ್ಸ್ ಫುಲ್ ಖುಷ್

ವಿಜಯ್ ದೇವರಕೊಂಡ

ವಿಜಯ್ ದೇವರಕೊಂಡ

ಕ್ರಿಸ್‌ಮಸ್ ಹಬ್ಬಕ್ಕೆ ಅರ್ಜುನ್ ರೆಡ್ಡಿ ಖ್ಯಾತಿಯ ಸ್ಟಾರ್ ತನ್ನ 100 ಅಭಿಮಾನಿಗಳಿಗೆ ದುಬಾರಿ ಪ್ರವಾಸವನ್ನು ಗಿಫ್ಟ್​ ಘೋಷಿಸಿದ್ದಾರೆ.

  • Trending Desk
  • Last Updated :
  • Karnataka, India
  • Share this:

ಚಿತ್ರೋದ್ಯಮದ (Film Industry) ನಟ-ನಟಿಯರಿಗೆ ಮತ್ತು ಕ್ರಿಕೆಟಿಗರಿಗೆ ಇರುವಷ್ಟು ಅಭಿಮಾನಿಗಳು (Fans) ಬಹುಶಃ ಯಾರಿಗೂ ಇರುವುದಿಲ್ಲ ಅಂತ ಹೇಳಬಹುದು. ಹೌದು.. ಅದರಲ್ಲೂ ನಮ್ಮ ಭಾರತ ದೇಶದಲ್ಲಿರುವ ಕೆಲವು ಚಿತ್ರೋದ್ಯಮದಲ್ಲಿರುವ ಕೆಲವು ನಟರಿಗಿರುವ ಅಭಿಮಾನಿಗಳ ಸಂಖ್ಯೆ ನೋಡಿದರೆ, ಎಂತವರಿಗಾದರೂ ಅಚ್ಚರಿ ಆಗದೆ ಇರದು. ಬಾಲಿವುಡ್ ನಲ್ಲಿ ಬಿಗ್ ಬಿ ಅಮಿತಾಭ್ ಬಚ್ಚನ್ (Amitabh Bachchan), ಶಾರುಖ್ ಖಾನ್, ಸಲ್ಮಾನ್ ಖಾನ್, ಆಮಿರ್ ಖಾನ್ ಅವರಿಗಿರುವಷ್ಟು ಅಭಿಮಾನಿಗಳು ಇನ್ನೂ ಉಳಿದ ನಟರಿಗಿಲ್ಲ ಅಂತಾನೆ ಹೇಳಬಹುದು.


ಹಾಗೆಯೇ ನಮ್ಮ ಕನ್ನಡಕ್ಕೆ ಬಂದಾಗ ಕಿಚ್ಚ ಸುದೀಪ್, ಮತ್ತು ರಾಕಿಂಗ್ ಸ್ಟಾರ್ ಯಶ್ ಅವರಿಗಿರುವ ಅಭಿಮಾನಿಗಳ ಸಂಖ್ಯೆ ಸಹ ಏನು ಕಮ್ಮಿ ಇಲ್ಲ ಅಂತ ಹೇಳಬಹುದು. ತೆಲುಗು ಚಿತ್ರರಂಗಕ್ಕೆ ಬಂದರೆ ಅಲ್ಲಿಯೂ ಸಹ ತುಂಬಾ ಜನ ನಟರು ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ್ದಾರೆ.


ಫ್ಯಾನ್ಸ್ ಗೆ ನಟ ವಿಜಯ್ ನೀಡಿದ ಉಡುಗೊರೆ ಎಂತದ್ದು ನೋಡಿ


ಅಭಿಮಾನಿಗಳು ದೇವರು ಅಂತ ತಿಳಿದಿರುವ ನಟರು ಸಹ ಇದ್ದಾರೆ. ಅಭಿಮಾನಿಗಳಿಗೆ ಸಹಾಯ ಮಾಡುವ ಮತ್ತು ಅವರಿಗೆ ಉಡುಗೊರೆ ನೀಡುವುದರ ಮೂಲಕ ಅವರಿಗೆ ಪ್ರೀತಿಯನ್ನು ತೋರಿಸುವ ಕೆಲಸ ಸಹ ಮಾಡುತ್ತಾರೆ ಈ ನಟರು.




ಮೊನ್ನೆ ತಾನೇ ಕ್ರಿಸ್‌ಮಸ್ ಹಬ್ಬ ಮುಗಿದಿದೆ. ಈ ನಟರು ತಮ್ಮ ಅಭಿಮಾನಿಗಳಿಗೆ ಏನು ಉಡುಗೊರೆ ನೀಡಿದರು ಅಂತ ತಿಳಿದುಕೊಳ್ಳಲು ತುಂಬಾ ಜನರಿಗೆ ಕಾತುರತೆ ಇರುತ್ತದೆ. ತೆಲುಗು ನಟ ವಿಜಯ್ ದೇವರಕೊಂಡ ಅವರು ತಮ್ಮ ಅಭಿಮಾನಿಗಳಿಗಾಗಿ ಸಾಂತಾಕ್ಲಾಸ್ ಆಗಿದ್ದಾರೆ ನೋಡಿ. ಕೆಲವು ವರ್ಷಗಳಿಂದ ಪ್ರತಿ ಕ್ರಿಸ್‌ಮಸ್ ಹಬ್ಬಕ್ಕೆ ನಟ ವಿಜಯ್ ತಮ್ಮ ವಿಶೇಷ ಕೃತಜ್ಞತೆಯ ಭಾವದಿಂದ ತಮ್ಮ ಅಭಿಮಾನಿಗಳನ್ನು ಅಚ್ಚರಿಗೊಳಿಸುತ್ತಾರೆ. ಈ ಕ್ರಿಸ್‌ಮಸ್ ಹಬ್ಬಕ್ಕೆ 'ಅರ್ಜುನ್ ರೆಡ್ಡಿ' ಖ್ಯಾತಿಯ ಸ್ಟಾರ್ ತನ್ನ 100 ಅಭಿಮಾನಿಗಳಿಗೆ ದುಬಾರಿ ಪ್ರವಾಸವನ್ನು ಉಡುಗೊರೆಯಾಗಿ ಘೋಷಿಸಿದ್ದಾರೆ.


ಫ್ಯಾನ್ಸ್ ಗೆ ಯಾವ ಸ್ಥಳಕ್ಕೆ ಹೋಗಲು ಬಯಸ್ತೀರಾ ಅಂತ ಕೇಳಿದ ವಿಜಯ್


ತಮ್ಮ ಅಭಿಮಾನಿಗಳಿಗೆ ನೀಡಲು ಪ್ರಯಾಣದ ಸ್ಥಳವನ್ನು ಆಯ್ಕೆ ಮಾಡಲು ವಿಜಯ್ ತಮ್ಮ ಅಭಿಮಾನಿಗಳಿಗಾಗಿ ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಸಮೀಕ್ಷೆಯನ್ನು ಮಾಡಿಸಿದ್ದಾರೆ. ತಮ್ಮ ಅಭಿಮಾನಿಗಳು ಭಾರತದ ಪರ್ವತಗಳು, ಭಾರತದ ಕಡಲತೀರಗಳು, ಭಾರತದ ಸಾಂಸ್ಕೃತಿಕ ಪ್ರವಾಸ ಅಥವಾ ಭಾರತದ ಮರುಭೂಮಿಗಳಿಗೆ ಪ್ರವಾಸವನ್ನು ಬಯಸುತ್ತಾರೆಯೇ ಎಂದು ಅವರು ಕೇಳಿದರು.


"ದೇವಸಾಂತಾ, ನಾನು 5 ವರ್ಷಗಳ ಹಿಂದೆ ಪ್ರಾರಂಭಿಸಿದ ಒಂದು ಸಂಪ್ರದಾಯ ಇದು. ಈ ವರ್ಷ ನಾನು ಒಂದು ಉತ್ತಮವಾದ ಯೋಚನೆಯನ್ನು ಹೊಂದಿದ್ದೇನೆ. ನಾನು ನಿಮ್ಮಲ್ಲಿ 100 ಜನರನ್ನು ಎಲ್ಲಾ ವೆಚ್ಚಗಳಿಗೆ ಪಾವತಿಸಿದ ರಜಾದಿನಕ್ಕೆ ಕಳುಹಿಸಲಿದ್ದೇನೆ. ಗಮ್ಯಸ್ಥಾನವನ್ನು ಆಯ್ಕೆ ಮಾಡಲು ನನಗೆ ಸಹಾಯ ಮಾಡಿ” ಎಂದು ವಿಜಯ್ ಹೇಳಿದ್ದಾರೆ.


ವಿಜಯ್ ಅವರ ಪೋಸ್ಟ್ ನೋಡಿ ಅವರ ಅಭಿಮಾನಿಗಳು ತುಂಬಾನೇ ಖುಷಿ ಪಟ್ಟಿದ್ದಾರೆ. ಅವರು ವಿಜಯ್ ಅವರ ಟ್ವಿಟ್ಟರ್ ಪೋಸ್ಟ್ ಗೆ ಲೈಕ್ ಮಾಡಿ ಅನೇಕ ಕಾಮೆಂಟ್ ಗಳಿಂದ ತುಂಬಿದರು.


ಇದನ್ನೂ ಓದಿ: Salman Khan: ನಟ ಸಲ್ಮಾನ್ ಖಾನ್​ಗೆ ಹುಟ್ಟುಹಬ್ಬದ ಸಂಭ್ರಮ; 57ನೇ ವಸಂತಕ್ಕೆ ಕಾಲಿಟ್ಟ ಸಲ್ಲು


ಗಿಫ್ಟ್ ಬಗ್ಗೆ ಕೇಳಿ ಏನಂದ್ರು ಫ್ಯಾನ್ಸ್?


"ಅತ್ಯುತ್ತಮ ಕ್ರಿಸ್‌ಮಸ್ ಉಡುಗೊರೆ... ಧನ್ಯವಾದಗಳು ಅಣ್ಣಾ" ಎಂದು ಸಾಮಾಜಿಕ ಮಾಧ್ಯಮ ಬಳಕೆದಾರರೊಬ್ಬರು ಕಾಮೆಂಟ್ ಮಾಡಿದ್ದಾರೆ. "ಪ್ರವಾಸಕ್ಕೆ ಕಳುಹಿಸುವುದಕ್ಕಿಂತ ನನ್ನನ್ನು ನೀವು ಎಲ್ಲಿಯಾದರೂ ಭೇಟಿ ಮಾಡಿ" ಎಂದು ಇನ್ನೊಬ್ಬ ಬಳಕೆದಾರರು ಬರೆದಿದ್ದಾರೆ.


ಇನ್ನೂ ಕೆಲಸದ ವಿಷಯಕ್ಕೆ ಬಂದರೆ ನಟ ವಿಜಯ್ ಅವರು ನಟಿ ಸಮಂತಾ ಅವರೊಂದಿಗೆ ಮುಂಬರುವ ‘ಖುಷಿ’ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರವು 2023 ರಲ್ಲಿ ಬಿಡುಗಡೆಯಾಗಲಿದೆ. ಇನ್ನೂ ನಟ ಹೊಸ ಯೋಜನೆಗಾಗಿ ಜರ್ಸಿ ಖ್ಯಾತಿಯ ಗೌತಮ್ ತಿನ್ನನುರಿ ಅವರೊಂದಿಗೆ ಕೈಜೋಡಿಸಲು ಸಜ್ಜಾಗಿದ್ದಾರೆ ಎಂದು ಹೇಳಲಾಗುತ್ತಿದೆ.

Published by:ಪಾವನ ಎಚ್ ಎಸ್
First published: