ಹುಡುಗಿಯರ ಜೊತೆ ಸಖತ್​ ಫ್ಲರ್ಟ್ ಮಾಡ್ತಾರೆ ವಿಜಯ್ ದೇವರಕೊಂಡ!; ಬಯಲಾಯ್ತು ಅಚ್ಚರಿಯ ವಿಚಾರ

ವಿಜಯ್​ ಮುಂದಿನ ಚಿತ್ರಕ್ಕೆ‘ಮಳ್ಳಿ ಮಳ್ಳಿ ಇದಿ ರಾಣಿ ರೋಜು’ ಖ್ಯಾತಿಯ ಕ್ರಾಂತಿ ಮಾಧವ್​ ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ‘ಅರ್ಜುನ್​ ರೆಡ್ಡಿ’ ಚಿತ್ರದ ಮಾದರಿಯ ಪಾತ್ರ ಮಾಡುತ್ತಿರುವುದು ಅಭಿಮಾನಿಗಳಿಗೆ ಖುಷಿ ನೀಡಿದೆ.

Rajesh Duggumane | news18
Updated:January 13, 2019, 12:59 PM IST
ಹುಡುಗಿಯರ ಜೊತೆ ಸಖತ್​ ಫ್ಲರ್ಟ್ ಮಾಡ್ತಾರೆ ವಿಜಯ್ ದೇವರಕೊಂಡ!; ಬಯಲಾಯ್ತು ಅಚ್ಚರಿಯ ವಿಚಾರ
ವಿಜಯ್​ ದೇವರಕೊಂಡ
Rajesh Duggumane | news18
Updated: January 13, 2019, 12:59 PM IST
ವಿಜಯ್​ ದೇವರಕೊಂಡ ಹುಡುಗಿಯರ ಜೊತೆ ಫ್ಲರ್ಟ್​​ ಮಾಡಲು ಆರಂಭಿಸಿದ್ದಾರಂತೆ! ಸಿಕ್ಕ ಸಿಕ್ಕ ಹುಡುಗಿಯರ ನಂಬರ್​ ತೆಗೆದುಕೊಂಡು ಮೆಸೇಜ್​ ಮಾಡುವುದು, ಪ್ರೀತಿಯ ಮುಖವಾಡ ಹಾಕಿ ಫ್ಲರ್ಟ್​​ ಮಾಡುವುದು. ಬೇಸರ ಬಂತೆಂದರೆ, ಹುಡುಗಿಯನ್ನು ವಾಹನ ಬದಲಾಯಿಸಿದಂತೆ ಬದಲಾಯಿಸಿ ಬಿಡುವುದು! ಅಷ್ಟಕ್ಕೂ ವಿಜಯ್​ ದೇವರಕೊಂಡ ಈ ರೀತಿ ಮಾಡುತ್ತಿರುವುದೇಕೆ ಎಂದು ಅಚ್ಚರಿ ಪಡಬೇಡಿ. ಇದು ವಿಜಯ್​ ನಿಜ ಜೀವನದ ಕಥೆಯಲ್ಲ. ಅವರ ಮುಂಬರುವ ಸಿನಿಮಾದ ವಿಚಾರ.

ಈ ಮೊದಲು ತೆರೆಕಂಡಿದ್ದ ‘ಅರ್ಜುನ್​ ರೆಡ್ಡಿ’ ಚಿತ್ರದಲ್ಲಿ ವಿಜಯ್​ ಬೇರೆ ರೀತಿಯ ಪಾತ್ರ ನಿರ್ವಹಿಸಿದ್ದರು. ಪ್ರೀತಿಸಿದ ಹುಡುಗಿ ಕೈಕೊಟ್ಟ ನಂತರ ಪ್ಲೇಬಾಯ್​ ಆಗಿ ಬದಲಾಗುತ್ತಾನೆ ನಾಯಕ. ನಂತರ ಎಲ್ಲ ಹುಡುಗಿಯರ ಜೊತೆ ಫ್ಲರ್ಟ್​ ಮಾಡಲು ಆರಂಭಿಸುತ್ತಾನೆ. ಈ ಪಾತ್ರ ಬಹುತೇಕರಿಗೆ ಇಷ್ಟವಾಗಿತ್ತು. ವಿಜಯ್​ ಆ್ಯಟಿಟ್ಯೂಡ್ ನೋಡಿ ಹಲವರು ಫಿದಾ ಆಗಿದ್ದರು. ನಂತರ ತೆರೆಕಂಡ ‘ಗೀತ ಗೋವಿಂದಂ’ ಚಿತ್ರದಲ್ಲಿ ವಿಜಯ್​ ಪಾತ್ರ ಬೇರೆ ರೀತಿಯಲ್ಲೇ ಇತ್ತು. ಈಗ, ಮುಂದಿನ ಚಿತ್ರದಲ್ಲಿ ‘ಅರ್ಜುನ್​ ರೆಡ್ಡಿ’ ಚಿತ್ರದ ಮಾದರಿಯ ಪಾತ್ರ ಮಾಡುತ್ತಿರುವುದು ಅಭಿಮಾನಿಗಳಿಗೆ ಖುಷಿ ನೀಡಿದೆ.

ಇದನ್ನೂ ಓದಿ: ಪತಿ ರಣವೀರ್​ ಸಿಂಗ್​ ಜೊತೆ ನಟಿಸಲು 'ನೋ' ಅಂದ್ರು ದೀಪಿಕಾ ಪಡುಕೋಣೆ!

ವಿಜಯ್​ ಮುಂದಿನ ಚಿತ್ರಕ್ಕೆ‘ಮಳ್ಳಿ ಮಳ್ಳಿ ಇದಿ ರಾಣಿ ರೋಜು’ ಖ್ಯಾತಿಯ ಕ್ರಾಂತಿ ಮಾಧವ್​ ನಿರ್ದೇಶನ ಮಾಡುತ್ತಿದ್ದಾರೆ. ಸದ್ಯ ಚಿತ್ರದ ಸ್ಕ್ರಿಪ್ಟ್​ ಕೆಲಸಗಳು ನಡೆಯುತ್ತಿವೆ. ಕಥೆಗೆ ತಕ್ಕಂತೆ ಚಿತ್ರದಲ್ಲಿ ಮೂವರು ನಾಯಕಿಯರಿದ್ದಾರೆ. ರಾಶಿ ಖನ್ನಾ, ಐಶ್ವರ್ಯಾ ರಾಜೇಶ್​ ಹಾಗೂ ಕ್ಯಾಥರೀನಾ ತ್ರೆಸಾ ಚಿತ್ರದಲ್ಲಿ ಬಣ್ಣ ಹಚ್ಚುತ್ತಿದ್ದಾರೆ. ವಿಜಯ್​ ‘ಡಿಯರ್​ ಕಾಮ್ರೇಡ್​’ ಚಿತ್ರದಲ್ಲೂ ಬಣ್ಣ ಹಚ್ಚುತ್ತಿದ್ದಾರೆ. ಈ ಚಿತ್ರಕ್ಕೆ ರಶ್ಮಿಕಾ ಮಂದಣ್ಣ ನಾಯಕಿ. ಈಗಾಗಲೇ ಚಿತ್ರದ ಶೂಟಿಂಗ್​ ಕೂಡ ಆರಂಭವಾಗಿದೆ.

ಇದನ್ನೂ ಓದಿ: ತುಚ್ಛವಾಗಿ ಮಾತನಾಡಿದ ರಣವೀರ್​ಗೆ ಕ್ಲಾಸ್​ ತೆಗೆದುಕೊಂಡ ಅನುಷ್ಕಾ ಶರ್ಮಾ, ವಿಡಿಯೋ ವೈರಲ್​

First published:January 13, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ