Vijay Deverakonda: ಕನ್ನಡದಲ್ಲೇ ಮಾತನಾಡಿದ ತೆಲುಗು ನಟ! ಪುನೀತ್ ಅಣ್ಣನನ್ನು ಮಿಸ್ ಮಾಡಿಕೊಳ್ತಿದ್ದಾರಂತೆ ವಿಜಯ್ ದೇವರಕೊಂಡ

ಕನ್ನಡ  ಪವರ್​ ಸ್ಟಾರ್​ ಪುನೀತ್ ರಾಜ್​ಕುಮಾರ್ ಜೊತೆಗಿನ ಒಡನಾಟದ ಬಗ್ಗೆಯೂ ವಿಜಯ್ ಮೆಲುಕು ಹಾಕಿದರು. ನಾನು ಬೆಂಗಳೂರಿಗೆ ಬಂದಾಗಲೆಲ್ಲಾ ಪುನೀತ್ ಅಣ್ಣನನ್ನು ಮೀಟ್ ಮಾಡಿ ಹೋಗುತ್ತಿದ್ದೆ. ಅವರು ನನ್ನ ಸಿನಿಮಾಗಳನ್ನು ನೋಡಿ ಫೋನ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದರು.

ಬೆಂಗಳೂರಲ್ಲಿ ಲೈಗರ್ ಚಿತ್ರತಂಡ

ಬೆಂಗಳೂರಲ್ಲಿ ಲೈಗರ್ ಚಿತ್ರತಂಡ

  • Share this:
ಟಾಲಿವುಡ್ ನಟ ವಿಜಯ್ ದೇವರಕೊಂಡ (Vijay Deverakonda) ಅಭಿನಯದ ಬಹುನಿರೀಕ್ಷಿತ ಚಿತ್ರ ಲೈಗರ್ (Liger) ಸದ್ಯ ಟ್ರೈಲರ್ ಹಾಗು ಹಾಡುಗಳಿಂದಲೇ ಸಖತ್ ಸೌಂಡ್ ಮಾಡುತ್ತಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಇದೇ ತಿಂಗಳು 25ರಂದು ಅದ್ಧೂರಿಯಾಗಿ ರಿಲೀಸ್ ಆಗಲಿದೆ. ಈ ಹಿನ್ನೆಲೆಯಲ್ಲಿ ಲೈಗರ್ ಚಿತ್ರದ ಪ್ರಚಾರ ಸಲುವಾಗಿ ನಟ ವಿಜಯ್ ದೇವರಕೊಂಡ, ನಟಿ ಅನನ್ಯಾ ಪಾಂಡೆ (Ananya Pandey) , ಖಳ ನಟನಾಗಿ ನಟಿಸಿರೋ ವಿಶ್ ರೆಡ್ಡಿ ಬೆಂಗಳೂರಿಗೆ ಆಗಮಿಸಿದ್ದಾರೆ. ಖಾಸಗಿ ಹೋಟೆಲ್​ನಲ್ಲಿ ನಡೆದ ಸುದಿಗೋಷ್ಟಿ ನಡೆಸಿದರು. 

ಕನ್ನಡದಲ್ಲಿ ಮಾತಾಡಿದ ವಿಜಯ್ ದೇವರಕೊಂಡ

ನಟ ವಿಜಯ್​ ದೇವರಕೊಂಡ ಮೊದಲಿಗೆ ಕನ್ನಡದಲ್ಲಿ ಎಲ್ಲರೂ ಚೆನ್ನಾಗಿದ್ದೀರಾ ಎಂದು ಮಾತು ಆರಂಭಿಸಿದ್ರು. ಬಳಿಕ ಚಿತ್ರ ಕುರಿತು ಮಾತಾಡಿದ ಅವರು,  ಪಾತ್ರಕ್ಕಾಗಿ ಹೆಚ್ಚು ಒತ್ತು ಕೊಡಬೇಕಾಯಿತು. ಬಾಕ್ಸರ್ ಕ್ಯಾರೆಕ್ಟರ್​ಗೆ ತುಂಬಾ ಸಿದ್ಧತೆ ಮಾಡಿದ್ದೆ. ಈ ಕಾರಣಕ್ಕೆ ನನಗೆ ಡಬ್ಬಿಂಗ್ ಮಾಡಲು ಆಗಿಲ್ಲ.

ಮುಂದಿನ ಸಿನಿಮಾಗೆ ಕನ್ನಡದಲ್ಲಿ ಡಬ್ಬಿಂಗ್ ಮಾಡುತ್ತೇನೆ 

‘ಲೈಗರ್ ನನ್ನ ವೃತ್ತಿ ಜೀವನದ ದೊಡ್ಡ ಸಿನಿಮಾ. ನಾನು ಈ ಸಿನಿಮಾದ ಕಥೆ ಕೇಳಿ ಎಗ್ಸೈಟ್ ಆದೆ. ಇದು ಮಾಸ್​ ಎಂಟರ್​ಟೇನರ್​ ಸಿನಿಮಾ. ಈ ಸಿನಿಮಾದಲ್ಲಿ ನಾನು ಡಬ್ ಮಾಡೋಕೆ ಪ್ರಯತ್ನಿಸಿದೆ. ಆದರೆ, ಕೆಟ್ಟದಾಗಿ ಕೇಳಿತು. ಈ ಕಾರಣಕ್ಕೆ ನಾನು ಆ ಪ್ರಯತ್ನಕ್ಕೆ ಮುಂದಾಗಿಲ್ಲ. ಮುಂದಿನ ದಿನಗಳಲ್ಲಿ ಆ ಬಗ್ಗೆ ಪ್ರಯತ್ನಿಸುತ್ತೇನೆ’ ಎಂದರು ವಿಜಯ್ ದೇವರಕೊಂಡ.

ಬೆಂಗಳೂರಿಗೆ ಬಂದಾಗ ಪುನೀತ್ ಅಣ್ಣನನ್ನು ಮೀಟ್​ ಮಾಡ್ತಿದ್ದೆ

ಇದೇ ವೇಳೆ ಕನ್ನಡ  ಪವರ್​ ಸ್ಟಾರ್​ ಪುನೀತ್ ರಾಜ್​ಕುಮಾರ್ ಜೊತೆಗಿನ ಒಡನಾಟದ ಬಗ್ಗೆಯೂ ವಿಜಯ್ ಮೆಲುಕು ಹಾಕಿದರು. ನಾನು ಬೆಂಗಳೂರಿಗೆ ಬಂದಾಗಲೆಲ್ಲಾ ಪುನೀತ್ ಅಣ್ಣನನ್ನು ಮೀಟ್ ಮಾಡಿ ಹೋಗುತ್ತಿದ್ದೆ. ಅವರು ನನ್ನ ಸಿನಿಮಾಗಳನ್ನು ನೋಡಿ ಫೋನ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದರು. ಹಾಗೇ ಶಿವಣ್ಣ ಕೂಡ ನನ್ನ ಸಿನಿಮಾ ನೋಡಿ ಫೋನ್ ಮಾಡಿ ಮಾತನಾಡಿದ್ದು ಇದೆ ಅಂತಾ ರಾಜ್​ಕುಮಾರ್ ಕುಟುಂಬದೊಂದಿಗೆ ಇರುವ ಬಾಂಧವ್ಯದ ಬಗ್ಗೆ ತಿಳಿಸಿದರು.



ಲೈಗರ್​ ನಂಗೆ ತುಂಬಾ ಸ್ಪೆಷನ ಎಂದ್ರು ಅನನ್ಯಾ ಪಾಂಡೆ

ನಟಿ ಅನನ್ಯಾ ಪಾಂಡೆ ಕೂಡ ಕನ್ನಡದಲ್ಲಿ ಮಾತು ಆರಂಭಿಸಿ, ನಾನು ಈ ಚಿತ್ರದಲ್ಲಿ ಸೋಷಿಯಲ್ ಕ್ರೇಜ್ ಹೊಂದಿರುವ ಹುಡುಗಿ ಪಾತ್ರ ಮಾಡಿದ್ದೇನೆ. ಲೈಗರ್ ನನ್ನ ಕೆರಿಯರ್​ನಲ್ಲಿ ಸದಾ ನೆನಪಿನಲ್ಲಿ ಉಳಿಯುವ ಸಿನಿಮಾ. ನಾನು 20, 30 ಸಿನಿಮಾ ಮಾಡಿದರೂ ಲೈಗರ್ ಚಿತ್ರ ನನ್ನ ಸಿನಿಮಾ ಜೀವನದಲ್ಲಿ ಸ್ಪೆಷಲ್ ಆಗಿ ಇರುತ್ತದೆ ಅಂತಾ ಹೇಳಿದರು.

ವಿಜಯ್​ ನೋಡಲು ಮುಗಿಬಿದ್ದ ಅಭಿಮಾನಿಗಳು

ಈಗ ಮಂತ್ರಿಮಾಲ್​ನಲ್ಲಿ ಫ್ಯಾನ್ಸ್ ಭೇಟಿ ಮಾಡಿದ್ದಾರೆ. ಈ ವೇಳೆ ದೊಡ್ಡ ಸಂಖ್ಯೆಯಲ್ಲಿ ವಿಜಯ್ ಫ್ಯಾನ್ಸ್ ಮುಗಿಬಿದ್ದಿದ್ದಾರೆ. ನಟ ವಿಜಯ್ ದೇವರಕೊಂಡ ಹಾಗೂ ಅನನ್ಯಾ ಪಾಂಡೆ ಅಭಿನಯದ ಲೈಗರ್ ಸಿನಿಮಾ ಪ್ರಮೋಷನ್​ ಕೆಲಸಕ್ಕಾಗಿ ಚಿತ್ರತಂಡ ಬೆಂಗಳೂರಿಗೆ ಆಗಮಿಸಿದೆ. ಈ ಸಂದರ್ಭ ವಿಜಯ್ ದೇವರಕೊಂಡ ಅವರು ಕಂಠೀರವ ಸ್ಟುಡಿಯೋಗೆ ಆಗಮಿಸಿದ್ದಾರೆ. 

ಇದನ್ನೂ ಓದಿ;Vijay Deverakonda: ಲೈಗರ್​ ಸಿನಿಮಾದಲ್ಲಿ ಒಂದೇ ಸಲಕ್ಕೆ 7 ಸೀನ್​ಗೆ ಕತ್ತರಿ! ಅಂಥಹ ದೃಶ್ಯಗಳೇನಿತ್ತು?

ಅಪ್ಪು ಸಮಾಧಿಗೆ ಪುಷ್ಪ ನಮನ 


Published by:Pavana HS
First published: