ವಿಜಯ್ ದೇವರಕೊಂಡ (Vijay Deverakonda) ಪೋಷಕ ಪಾತ್ರದ ಮೂಲಕ ಸಿನಿ ರಂಗಕ್ಕೆ ಕಾಲಿಟ್ಟು, ನಂತರದಲ್ಲಿ ನಾಯಕನಾಗಿ ಬೆಳೆದ ಕಲಾವಿದೆ. ಅರ್ಜುನ್ ರೆಡ್ಡಿ (Arjun Reddy) ಸಿನಿಮಾ ರಿಲೀಸ್ ಆಗುತ್ತಿದ್ದಂತೆಯೇ ವಿಜಯ್ ದೇವರಕೊಂಡ ಅವರು ರಾತ್ರೋರಾತ್ರಿ ಸ್ಟಾರ್ ಪಟ್ಟಕ್ಕೇರಿದರು. ಈ ಸಿನಿಮಾದಲ್ಲಿನ ಅವರ ಅಭಿನಯ ಅಭಿಮಾನಿಗಳನ್ನು ಹುಚ್ಚೆಬ್ಬಿಸಿತು. ಇನ್ನು ಈ ಚಿತ್ರದ ನಂತರ ವಿಜಯ್ ದೇವರಕೊಂಡ ಟಾಲಿವುಡ್ನಲ್ಲಿ ರೌಡಿ ಎಂದೇ ಖ್ಯಾತರಾದರು. ನಂತರದಲ್ಲಿ ವಿಜಯ್ ದೇವರಕೊಂಡ ತಮ್ಮದೇ ಆದ ಬಟ್ಟೆಯ ಬ್ಯ್ರಾಂಡ್ ಅನ್ನು ಆರಂಭಿಸಿದರು. ಅದೇ ರೌಡಿ ಬ್ರ್ಯಾಂಡ್ (Rowdy Brand) ... ಸಿನಿಮಾಗಳ ಜೊತೆಗೆ ಉದ್ಯಮಿಯಾಗಿಯೂ ವಿಜಯ್ ದೇವರಕೊಂಡ ಯಶಸ್ಸು ಕಂಡಿದ್ದಾರೆ. ಈಗ ಇದೇ ನಟ ಸಿನಿಮಾಗೆ ಸಂಬಂಧಿತ ಕ್ಷೇತ್ರದಲ್ಲಿ ಮತ್ತೊಂದು ಹೆಜ್ಜೆ ಮುಂದಿಟ್ಟಿದ್ದಾರೆ.
ಈಗಾಗಲೇ ಸ್ಟಾರ್ಗಳು ಮಲ್ಟಿಪ್ಲೆಕ್ಸ್ ಉದ್ಯಮಕ್ಕೆ ಕಾಲಿಟ್ಟಿರುವ ಸಂಗತಿ ಗೊತ್ತೇ ಇದೆ. ಮಹೇಶ್ ಬಾಬು ಅವರು ಎಎಂಬಿ ಮಲ್ಪಿಪ್ಲೆಕ್ಸ್ ಅನ್ನು ಆರಂಭಿಸಿ ಸುದ್ದಿಯಾಗಿದ್ದರು. ಈಗ ಮತ್ತೋರ್ವ ಟಾಲಿವುಡ್ ನಟ ಸಹ ಮಲ್ಪಿಪ್ಲೆಕ್ಸ್ ಉದ್ಯಮಕ್ಕೆ ಕಾಲಿಟ್ಟಿದ್ದಾರೆ. ತಮ್ಮ ಕನಸನ್ನು ನನಸು ಮಾಡಿಕೊಂಡಿದ್ದಾರೆ. ಹೌದು, ಟಾಲಿವುಡ್ನಲ್ಲಿ ರೌಡಿ ಎಂದೇ ಖ್ಯಾತರಾಗಿರುವ
ವಿಜಯ್ ದೇವರಕೊಂಡ ಅವರು ತಮ್ಮ ಮೊದಲ ಮಲ್ಪಿಪ್ಲೆಕ್ಸ್ (Asian Vijay Deverakonda Cinemas) ಆರಂಭಿಸಿದ್ದಾರೆ.
ವಿಜಯ್ ದೇವರಕೊಂಡ ಅವರು ತಮ್ಮ ಅಪ್ಪ-ಅಮ್ಮನ ಸ್ವಂತ ಊರಿನಲ್ಲಿ ಮಲ್ಟಿಪ್ಲೆಕ್ಸ್ ಆರಂಭಿಸಿದ್ದಾರೆ. ಹೌದು, ಮೆಹಬೂಬ್ನಗರಲ್ಲಿ ಎವಿಡಿ ಸಿನಿಮಾಸ್ ಹೆಸರಿನಲ್ಲಿ ಐಷಾರಾಮಿ ಮಲ್ಪಿಪ್ಲೆಕ್ಸ್ ಆರಂಭಿಸಿದ್ದಾರೆ ವಿಜಯ್ ದೇವರಕೊಂಡ. ಇದು ಇದೇ ತಿಂಗಳ 2ರಂದು ವೀಕ್ಷಕರಿಗೆ ಸಮರ್ಪಣೆಯಾಗಲಿದೆ.
ಇದನ್ನೂ ಓದಿ: ಹುಟ್ಟುಹಬ್ಬದ ಸಂಭ್ರಮದಲ್ಲಿ ಡೈನಾಮಿಕ್ ಸ್ಟಾರ್ Devaraj: ವಿಶ್ ಮಾಡಿದ ಪ್ರಜ್ವಲ್ ದೇವರಾಜ್..!
ಶೇಖರ್ ಕಮ್ಮುಲ ಅವರ ಸಿನಿಮಾದಿಂದಲೇ ವಿಜಯ್ ದೇವರಕೊಂಡ ಅವರ ಸಿನಿ ಜೀವನ ಸಹ ಆರಂಭವಾಗಿದ್ದು. ಈಗ ಅವರ ಸಿನಿಮಾ ಲವ್ ಸ್ಟೋರಿ ವಿಜಯ್ ದೇವರಕೊಂಡ ಅವರ ಹೊಸ ಮಲ್ಪಿಪ್ಲೆಕ್ಸ್ನಲ್ಲಿ ರಿಲೀಸ್ ಆಗಲಿದೆ. ಈ ಸಂತೋಷದ ವಿಷಯವನ್ನು ವಿಜಯ್ ದೇವರಕೊಂಡ ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ.
ವಿಜಯ್ ದೇವರಕೊಂಡ ಮತ್ತೆ ತಮ್ಮ ಪ್ಯಾನ್ ಇಂಡಿಯಾ ಸಿನಿಮಾ ಲೈಗರ್ ಚಿತ್ರತಂಡ ಸೇರಿಕೊಂಡಿದ್ದಾರೆ. ಪೂರಿ ಜಗನ್ನಾಥ್ ನಿರ್ದೇಶನದ ಈ ಸಿನಿಮಾದ ಶೂಟಿಂಗ್ ಸದ್ಯ ಗೋವಾದಲ್ಲಿ ನಡೆಯುತ್ತಿದೆ. ವಿಜಯ್ ದೇವರಕೊಂಡ ಸದ್ಯ ಗೋವಾದಲ್ಲಿದ್ದು, ಅವರು ತಮ್ಮ ಮಲ್ಟಿಪ್ಲೆಕ್ಸ್ ಓಪನಿಂಗ್ಗೆ ಹಾಜರಾಗಲು ಆಗುತ್ತಿಲ್ಲ ಎಂದೂ ತಿಳಿಸಿದ್ದಾರೆ.
ಇದನ್ನೂ ಓದಿ: ಆಕೆ ನನ್ನ ಮಗಳಾಗದಿದ್ದರೆ ನಾನೇ ಮದುವೆಯಾಗುತ್ತಿದ್ದೆ ಎಂದಿದ್ದ ಮಹೇಶ್ ಭಟ್: ಅಪ್ಪನಂತ ಗಂಡ ಮಾತ್ರ ಬೇಡ ಎಂದಿದ್ದ ಆಲಿಯಾ ಭಟ್..!
ಮಲ್ಟಿಪ್ಲೆಕ್ಸ್ ಓಪನಿಂಗ್ನಲ್ಲಿ ಭಾಗಿಯಾಗಲು ಆಗುತ್ತಿಲ್ಲ ಎಂದು ಬೇಸರವಿಲ್ಲ. ನಾನು ಕೆಲಸ ಮಾಡುತ್ತಿರುವುದರಿಂದಲೇ ಕನಸುಗಳನ್ನು ನನಸು ಮಾಡಿಕೊಳ್ಳಲು ಸಾಧ್ಯವಾಗುತ್ತಿದೆ. ಅದಕ್ಕೆ ಸದ್ಯ ಸಿನಿಮಾ ಶೂಟಿಂಗ್ನಲ್ಲಿ ಬ್ಯುಸಿಯಾಗಿದ್ದೀನಿ. ದಯವಿಟ್ಟು ಎಲ್ಲರೂ ಮಲ್ಟಿಪ್ಲೆಕ್ಸ್ ಓಪನಿಂಗ್ಗೆ ಬಂದು ಸಿನಿಮಾ ನೋಡಿ ಹಾರೈಸಿ ಎಂದಿದ್ದಾರೆ.
ಇದನ್ನೂ ಓದಿ: ಕಟೌಟ್ ಡ್ರೆಸ್ ಧರಿಸಿ ಮುಜುಗರಕ್ಕೆ ಒಳಗಾದ ನಟಿ Nora Fatehi
ಲೈಗರ್ ಸಿನಿಮಾ ವಿಜಯ್ ದೇವರಕೊಂಡ ಅಭಿನಯದ ಮೊದಲ ಪ್ಯಾನ್ ಇಂಡಿಯಾ ಸಿನಿಮಾ ಆಗಿದ್ದು, ಇದರಲ್ಲಿ ಬಾಲಿವುಡ್ ನಟಿ ಅನನ್ಯಾ ಪಾಂಡೆ ನಾಯಕಿಯಾಗಿ ನಟಿಸುತ್ತಿದ್ದಾರೆ. ಕರಣ್ ಜೋಹರ್, ಚಾರ್ಮಿ ಕೌರ್ ಹಾಗೂ ಪೂರಿ ಜಗನ್ನಾಥ್ ಅವರು ಈ ಸಿನಿಮಾಗೆ ಹಣ ಹೂಡಿದ್ದಾರೆ. ಈ ಸಿನಿಮಾಗೆ ಮೊದಲು ಫೈಟರ್ ಎಂದು ಹೆಸರಿಡಲಾಗಿತ್ತು. ಕಾರಣಾಂತರಗಳಿಂದ ಅದನ್ನು ಬದಲಾಯಿಸಲಾಯಿತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ