ಕ್ಷಿಣ ಚಿತ್ರರಂಗದಲ್ಲಿ (South Industry) ಹಲವಾರು ಸಿನಿಮಾಗಳು (Cinema) ರೆಡಿಯಾಗುತ್ತಿವೆ. ಬ್ಯಾಕ್ ಟು ಬ್ಯಾಕ್ ಸಿನಿಮಾಗಳು ಬಿಡುಗಡೆಯಾಗುತ್ತಲೇ (Release) ಇವೆ. ಸೀತಾ ರಾಮಂನಂತರ ಸೂಪರ್ ಹಿಟ್ ಲವ್ಸ್ಟೋರಿ ಸಿನಿಮಾ ಕೊಟ್ಟ ತೆಲುಗು (Telugu) ಇಂಡಸ್ಟ್ರಿಯಲ್ಲಿ ಈಗ ಮತ್ತೊಂದು ಪ್ರೇಮಕಥೆ ಸಿನಿಮಾ ರೆಡಿಯಾಗುತ್ತಿದೆ. ನಟಿ ಸಮಂತಾ (Samantha) ಹಾಗೂ ವಿಜಯ್ ದೇವರಕೊಂಡ (Vijay Deverakonda) ಅಭಿನಯಿಸಿದ ಈ ರೊಮ್ಯಾಂಟಿಕ್ ಲವ್ಸ್ಟೋರಿ ಶೂಟಿಂಗ್ ಭರದಲ್ಲಿ ಸಾಗಿದ್ದು ಇದರ ಕುರಿತು ಎಕ್ಸೈಟಿಂಗ್ ಅಪ್ಡೇಟ್ಗಳು (Updates) ಹೊರ ಬೀಳುತ್ತಿವೆ. ಈ ಸಿನಿಮಾಗೆ ಸಂಬಂಧಿಸಿ ಆಸಕ್ತಿಕರ ವಿಚಾರಗಳು ರಿವೀಲ್ ಆಗುತ್ತಿದ್ದು ಈಗ ವಿಜಯ್ ದೇವರಕೊಂಡ ಕ್ಯಾಂಡಿಡ್ ವಿಡಿಯೋ (Video) ಒಂದನ್ನು ಶೇರ್ ಮಾಡಿದ್ದಾರೆ.
ವಿಡಿಯೋ ಶೇರ್ ಮಾಡಿದ ವಿಜಯ್ ದೇವರಕೊಂಡ
ಅವಳಿಗೆ ತಿಳಿಯದಂತೆ ಈ ಹಾಡಿಗೆ ಒಂದು ವಿಡಿಯೋ ಮಾಡಿದೆ ಎಂದು ಬರೆದು ಕಾಣುವ ಸ್ಲೈಡ್ ಮೂಲಕ ವಿಡಿಯೋ ಶುರುವಾಗುತ್ತದೆ. ವಿಡಿಯೋದಲ್ಲಿ ಸಮಂತಾ ಮಾತನಾಡುತ್ತಿದ್ದು ಹಿನ್ನೆಲೆಯಲ್ಲಿ ವಿಜಯ್ ನಗುವುದನ್ನು ಕಾಣಬಹುದು. ಇನ್ನೊಂದರಲ್ಲಿ ಸಮಂತಾ ಮಾತನಾಡುವಾಗ ವಿಜಯ್ ಹಾರ್ಟ್ ಸಿಂಬಲ್ ತೋರಿಸುತ್ತಾರೆ.
ಇನ್ನೊಂದರಲ್ಲಿ ಸಮಂತಾ ವಿಜಯ್ ಜೊತೆ ಬೈಕ್ನಲ್ಲಿ ಕುಳಿತಿದ್ದು ತಕ್ಷಣ ವಿಡಿಯೋ ಮಾಡಲಾಗಿದೆ. ಇನ್ನೊಂದರಲ್ಲಿ ಸಮಂತಾ ಮಾತನಾಡುತ್ತಾ ನಿಂತಿದ್ದಾಗ ವಿಜಯ್ ಬಂದು ಅವರನ್ನು ಹಿಂದಿನಿಂದ ಅಪ್ಪಿಕೊಳ್ಳುತ್ತಾರೆ. ಈ ವಿಡಿಯೋವನ್ನು ನಟ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಶೇರ್ ಮಾಡಿದ್ದಾರೆ.
View this post on Instagram
ನಾಗ ಚೈತನ್ಯಗೆ ಬೇಜಾರಾಗುತ್ತೆ ಎಂದ ನೆಟ್ಟಿಗರು
ವಿಡಿಯೋ ನೋಡಿದ ನೆಟ್ಟಿಗರು ಕಮೆಂಟ್ ಮಾಡಿ ಹೀಗೆ ಮಾಡಿದರೆ ನಾಗ ಚೈತನ್ಯ ಅವರಿಗೆ ಬೇಜಾರಾಗುತ್ತದೆ ಎಂದಿದ್ದಾರೆ. ಇನ್ನೂ ಕೆಲವರು ನಿಮ್ಮಿಬ್ಬರನ್ನು ಖುಷಿ ಖುಷಿಯಾಗಿ ನೋಡುವುದಕ್ಕೆ ನಮಗೂ ಖುಷಿಯಾಗುತ್ತಿದೆ ಎಂದಿದ್ದಾರೆ. ಇನ್ನು ಕೆಲವರು ನಿಮ್ಮಿಬ್ಬರ ಕಾಂಬಿನೇಷನ್ ಆನ್ಸ್ಕ್ರೀನ್ನಲ್ಲಿ ತುಂಬಾ ಚೆನ್ನಾಗಿದೆ ಎಂದು ಹೊಗಳಿದ್ದಾರೆ.
ರಶ್ಮಿಕಾನ ನೆನಪಿಸಿಕೊಂಡ ನೆಟ್ಟಿಗರು
ರಶ್ಮಿಕಾ ಹಾಗೂ ವಿಜಯ್ ಡೇಟಿಂಗ್ ಮಾಡುತ್ತಿರುವುದು ಎಲ್ಲರಿಗೂ ಗೊತ್ತು. ಹಾಗಾಗಿ ನಟ ಸಮಂತಾ ಜೊತೆ ಕ್ಲೋಸ್ ಆಗುತ್ತಿರುವುದನ್ನು ಗಮನಿಸಿದ ನೆಟ್ಟಿಗರು ನೀವ್ ಹೀಗೆ ಮಾಡಿದ್ರೆ ಸಮಂತಾ ಕಥೆ ಏನು ಎಂದು ಚರ್ಚಿಸುತ್ತಿದ್ದಾರೆ. ಅಂತೂ ಈ ಜೋಡಿ ಈಗ ಸೂಪರ್ ಹಿಟ್ ಆಗಿದೆ.
ಖುಷಿ ಮೊದಲ ಹಾಡು ರಿಲೀಸ್
ಬಹುನಿರೀಕ್ಷಿತ ಸಿನಿಮಾದ ಮೊದಕ ಹಾಡು ರಿಲೀಸ್ ಆಗಿದ್ದು ಇದರಲ್ಲಿ ಸಮಂತಾ ಅವರು ಹಿಜಾಬ್ (Hijab) ಧರಿಸಿದ್ದನ್ನು ನೋಡಿ ನೆಟ್ಟಿಗರು ಅಚ್ಚರಿಪಡುತ್ತಿದ್ದಾರೆ. ಅಂತೂ ಈ ಸಿನಿಮಾ ಕೂಡಾ ಒಂದು ಅಂತರ್ಧರ್ಮೀಯ ಲವ್ಸ್ಟೋರಿ (Love Story) ಎನ್ನುವ ಹಿಂಟ್ ಸಿಕ್ಕಿದೆ.
ಸಿನಿಮಾ ನಿರ್ದೇಶಕ ಶಿವ ನಿರ್ವಾಣ ಅವರು ಬಹಳ ಸೂಕ್ಷ್ಮ ಕಾನ್ಸೆಪ್ಟ್ ಒಂದನ್ನು ಸಿನಿಮಾ ಆಗಿ ತೋರಿಸಲಿದ್ದಾರೆ ಎನ್ನುತ್ತಿದ್ದಾರೆ ನೆಟ್ಟಿಗರು. ಮಲಯಾಳಂ ಸಿನಿಮಾ ಹೃದಯಂಗೆ ಸಂಗೀತ ಒದಗಿಸಿದ ಹೇಶಮ್ ಅಬ್ದುಲ್ ವಹಾಬ್ ಅವರು ಸಮಂತಾ ತನ್ನ ಬದುಕಿಗೆ ಎಷ್ಟು ಮುಖ್ಯ ಎಂದು ಹೀರೋ ಹೇಳುವ ಹಾಡೊಂದಕ್ಕೆ ಸಂಗೀತ ಒದಗಿಸಿದ್ದಾರೆ.
ಹೀರೋ ಆಗಿರುವ ವಿಜಯ್ ದೇವರಕೊಂಡ ತನ್ನ ಪ್ರೇಯಸಿಯಾಗಿರುವ ಸಮಂತಾ ಅವರ ಸೌಂದರ್ಯ ಹೊಗಳಿ ಆಕೆಯನ್ನು ತನ್ನ ರಾಣಿ ಎಂದು ಕರೆದಿದ್ದಾರೆ. ತನ್ನ ಪ್ರೀತಿಯ ಹೆಜ್ಜೆಯನ್ನು ಫಾಲೋ ಮಾಡಿಕೊಂಡು ಬದುಕುತ್ತೇನೆಂದು ಹೀರೋ ಹೇಳುತ್ತಾನೆ. ಈ ಹಾಡು ಹಿಟ್ ಆಗಿದೆ.
ಈ ಸಿನಿಮಾದ ದೃಶ್ಯಗಳನ್ನು ಕಾಶ್ಮೀರಗಳನ್ನು ಶೂಟಿಂಗ್ ಮಾಡಲಾಗಿದೆ ಎನ್ನಲಾಗುತ್ತಿದೆ. ಸಿನಿಮಾದ ಹಾಡಿನಲ್ಲಿ ಕೆಲವೊಂದು ದೃಶ್ಯಗಳನ್ನು ತೋರಿಸಲಾಗಿದೆ. ಈ ಸಿನಿಮಾದ ತಮಿಳು ವರ್ಷನ್ ಹಾಡನ್ನು ಕಾರ್ಕಿ ಬರೆದಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ