Vijay Deverakonda: ನನ್ ಜೊತೆ ಇಬ್ಬಿಬ್ರು ಜೊತೆಗಿದ್ರೂ ನಡೆಯುತ್ತೆ ಬಿಡಿ ಅಂದಿದ್ದಾರೆ ವಿಜಯ್, ಸುಳ್ಳಲ್ಲ ನೀವೇ ವಿಡಿಯೋ ನೋಡಿ!

Koffee With Karan Season 7: ಈ ಎಲ್ಲದರ ಜೊತೆ ಅನನ್ಯಾ ಪಾಂಡೆಗೆ ಸಹ ನಿಮ್ಮ ಮತ್ತೆ ಆದಿತ್ಯ ರಾಯ್​ ಕಪೂರ್ ಮಧ್ಯೆ ಏನು ನಡೆಯುತ್ತಿದೆ ಎಂದು ಸಹ ಪ್ರಶ್ನಿಸಿದ್ದಾರೆ.

ವಿಜಯ್ ದೇವರಕೊಂಡ

ವಿಜಯ್ ದೇವರಕೊಂಡ

  • Share this:
*ಕಾಫಿ ವಿತ್ ಕರಣ್ ಶೋ, (Koffee With Karan) ಈ ಕಾರ್ಯಕ್ರಮದ ಬಗ್ಗೆ ಹೆಚ್ಚಾಗಿ ಹೇಳುವ ಅವಶ್ಯಕತೆ ಇಲ್ಲ. ಬಾಲಿವುಡ್​ನಿಂದ (Bollywood) ಹಿಡಿದು ಸೌತ್​ ಸಿನಿಮಾರಂಗದವರೆಗೂ (South Film Industry) ಈ ಶೋ ಛಾಪು ಮೂಡಿಸಿದೆ. ಈ ಕಾರ್ಯಕ್ರಮ ಒಂದು ರೀತಿಯಲ್ಲಿ ವಿವಾದಗಳು ಸೃಷ್ಟಿಯಾಗುವ ಜಾಗ ಎಂದು ಫೇಮಸ್​ ಎಂದರೆ ತಪ್ಪಲ್ಲ. ಈ ಶೋದಲ್ಲಿ ಭಾಗವಹಿಸಿದ ಹಲವಾರು ಸೆಲೆಬ್ರಿಟಿಗಳು (Celebrities)  ವಿವಾದಕ್ಕೆ ಗುರಿಯಾಗಿದ್ದಾರೆ. ಅಲ್ಲದೇ, ಇಲ್ಲಿ ಬರುವ ಸೆಲೆಬ್ರಿಟಿಗಳು ಕೊಡುವ ಹೇಳಿಕೆ ಬಹಳ ವೈರಲ್​ ಆಗುತ್ತದೆ. ಇದೀಗ ಎಲ್ಲರ ಹಾಟ್​ ಫೇವರೇಟ್​ ನಟ ವಿಜಯ್ ದೇವರಕೊಂಡ ಒಂದು ಹೇಳಿಕೆ ನೀಡಿದ್ದು, ಎಲ್ಲೆಡೆ ಅದೇ ಹರಿದಾಡುತ್ತಿದೆ.

ವಿಜಯ್ ಹೇಳಿದ ಮಾತು ಎಲ್ಲೆಡೆ ವೈರಲ್ 

ಇತ್ತೀಚೆಗಷ್ಟೇ ಕಾಫಿ ವಿತ್ ಕರಣ್ ಶೋನ 7ನೇ ಸೀನಸ್​ ಆರಂಭವಾಗಿದೆ. ಈಗಾಗಲೇ ಆಲಿಯಾ ಭಟ್​, ರಣವೀರ್ ಸಿಂಗ್ ಮತ್ತು ಅಕ್ಷಯ್ ಕುಮಾರ್ , ಸಮಂತಾ ಹಾಗೆಯೇ ಸಾರಾ ಅಲಿ ಖಾನ್, ಜಾನ್ವಿ ಕಪೂರ್ ಸಹ ಭಾಗವಹಿಸಿದ್ದರು. ಈ ವಾರದ ಅತಿಥಿಯಾಗಿ ಟಾಲಿವುಡ್​ ಸೂಪರ್ ಸ್ಟಾರ್ ವಿಜಯ ದೇವರಕೊಂಡ ಹಾಗೂ ಬಾಲಿವುಡ್​ ನಟಿ ಅನನ್ಯಾ ಪಾಂಡೆ ಕಾಣಿಸಿಕೊಂಡಿದ್ದಾರೆ. ಈ ಸಮಯದಲ್ಲಿ ವಿಜಯ್ ಹೇಳಿರುವ ಮಾತು ಈಗ ಚರ್ಚೆಗೆ ಕಾರಣವಾಗಿದೆ.

ವಿಚಾರ ಏನು ಅಂದರೆ, ಈ ಕಾರ್ಯಕ್ರಮದಲ್ಲಿ ಕರಣ್ ಜೋಹರ್ ವಿಜಯ್ ದೇವರಕೊಂಡ ಅವರ ಬಳಿ ನೀವು ಕೊನೆಯ ಬಾರಿ ಯಾವಾಗ ಸೆಕ್ಸ್​ ಮಾಡಿದ್ದು ಎಂದು ಕೇಳಿದ್ದಾರೆ, ಅದಕ್ಕೆ ವಿಜಯ್​ ದೇವರಕೊಂಡ ಸ್ಟಾಪ್​ ಎಂದಿದ್ದಾರೆ. ಆ ಸಮಯದಲ್ಲಿಅನನ್ಯಾ ಪಾಂಡೆ ನಾನು ಗೆಸ್​ ಮಾಡ್ಲಾ, ಇವತ್ತು ಬೆಳಗ್ಗೆ ಎಂದು ತಮಾಷೆ ಮಾಡಿದ್ದಾರೆ. ಇಲ್ಲಿಗೆ ಸುಮ್ಮನಾಗದ ಕರಣ್​ ವಿಜಯ್​ಗೆ ಯಾವಾಗಲಾದರೂ ಥ್ರೀಸಮ್​​ ಮಾಡಿದ್ದೀರಾ ಎಂದು ಕೇಳಿದ್ದಾರೆ. ಅದಕ್ಕೆ ಉತ್ತರ ಕೊಟ್ಟಿರುವ ವಿಜಯ್, ಇಲ್ಲ ಅಂದಿದ್ದಾರೆ. ಇನ್ನು ಮುಂದುವರೆದು, ನನಗೆ ಥ್ರೀಸಮ್​ ಮಾಡಲು ಯಾವುದೇ ಆಕ್ಷೇಪ ಇಲ್ಲ ಎಂದಿದ್ದಾರೆ. ಸದ್ಯ ಅವರ ಹೇಳಿಕೆ ಎಲ್ಲೆಡೆ ವೈರಲ್ ಆಗುತ್ತಿದೆ.

ಇದನ್ನೂ ಓದಿ: ವೈರಲ್ ಆಯ್ತು ಕ್ರೇಜಿಸ್ಟಾರ್ ಮಗನ ಮದುವೆ ಪತ್ರಿಕೆ, ಭರ್ಜರಿ ತಯಾರಿಯಲ್ಲಿ ರವಿಮಾಮ ಬ್ಯುಸಿ




ಅನನ್ಯಾಗೆ ಆದಿತ್ಯ ಬಗ್ಗೆ ಪ್ರಶ್ನೆ ಕೇಳಿದ ಕರಣ್

ಇನ್ನು ಈ ಕಾರ್ಯಕ್ರಮದಲ್ಲಿ ಕರಣ್ ವಿಜಯ್ ದೇವರಕೊಂಡ ಅವರಿಗೆ ಸಾರಾ ಅಲಿ ಖಾನ್​ ಹಾಗೂ ಜಾನ್ವಿ, ಅವರ ಬಗ್ಗೆ ಮಾತನಾಡಿರುವ ಬಗ್ಗೆ ಸಹ ಪ್ರಶ್ನಿಸಿದ್ದಾರೆ. ಈ ಎಲ್ಲದರ ಜೊತೆ ಅನನ್ಯಾ ಪಾಂಡೆಗೆ ಸಹ ನಿಮ್ಮ ಮತ್ತೆ ಆದಿತ್ಯ ರಾಯ್​ ಕಪೂರ್ ಮಧ್ಯೆ ಏನು ನಡೆಯುತ್ತಿದೆ ಎಂದು ಸಹ ಪ್ರಶ್ನಿಸಿದ್ದಾರೆ. ಒಟ್ಟಾರೆಯಾಗಿ ಈ ವಾರದ ಶೋ ಬಹಳ ಕುತೂಹಲಕಾರಿಯಾಗಿದ್ದು, ಈ ಇಬ್ಬರೂ ಇನ್ನೂ ಏನೆಲ್ಲಾ ಸೀಕ್ರೆಟ್​ಗಳನ್ನು ಬಿಚ್ಚಿಡಲಿದ್ದಾರೆ ಎಂಬುದನ್ನ ಕಾದು ನೋಡಬೇಕಿದೆ.

ಇದನ್ನೂ ಓದಿ: ಸಿನಿ ಶೆಟ್ಟಿಗೆ ಈ ಹೀರೋ ಅಂದ್ರೆ ಇಷ್ಟವಂತೆ, ಮಿಸ್ ಇಂಡಿಯಾ ಮನ ಗೆದ್ದವರ್ಯಾರು?

ಸದ್ಯ ಅನನ್ಯಾ ಪಾಂಡೆ ಹಾಗೂ ವಿಜಯ್ ದೇವರಕೊಂಡ ಪುರಿ ಜಗನ್ನಾಥ್ ನಿರ್ದೇಶನದ ಲೈಗರ್ ಸಿನಿಮಾ ಮಾಡುತ್ತಿದ್ದು, ಈ ಚಿತ್ರದಲ್ಲಿ ಖ್ಯಾತ ಬಾಕ್ಸರ್ ಮೈಕ್ ಟೈಸನ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಕೆಲ ವರದಿಗಳ ಪ್ರಕಾರ, ಲೈಗರ್ ವಿಜಯ್ ದೇವರಕೊಂಡ ಅವರು ಬಹಳ ವಿಭಿನ್ನವಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು ಅನನ್ಯಾ ಪಾಂಡೆ ಜೊತೆಗಿನ ಅವರ ಕೆಮಿಸ್ಟ್ರಿ ಹೇಗಿರಲಿದೆ ಎಂದು ನೋಡಲು ಅಭಿಮಾನಿಗಳು ಕಾಯುತ್ತಿದ್ದು,  ಈ ಸಿನಿಮಾ ಆಗಸ್ಟ್ 25, 2022 ರಂದು ಬಿಡುಗಡೆಯಾಗಲಿದೆ.
Published by:Sandhya M
First published: