Puri Jagannadh​ ಜೊತೆ Vijay Deverakonda ಮತ್ತೊಂದು ಸಿನಿಮಾ! ಟೈಟಲ್​ನಲ್ಲೇ ಸಖತ್​ ಕಿಕ್​ ಇದೆ

ಲೈಗರ್(Liger) ಸಿನಿಮಾ ರಿಲೀಸ್​ಗೆ ಎದುರು ನೋಡುತ್ತಿರುವ ಅಭಿಮಾನಿಗಳಿಗೆ ವಿಜಯ್ ಹಾಗೂ ಪುರಿ ಜಗನ್ನಾಥ್ ಜೋಡಿ ‘ಜನ ಗಣ ಮನ’(Jana Gana Mana) ಎಂಬ ಆಕ್ಷನ್ ಡ್ರಾಮಾ ಸಿನಿಮಾ(Action Drama Movie) ಉಣಬಡಿಸಲು ತಯಾರಾಗ್ತಿದ್ದಾರೆ.

ವಿಜಯ್​ ದೇವರಕೊಂಡ

ವಿಜಯ್​ ದೇವರಕೊಂಡ

  • Share this:
ಟಾಲಿವುಡ್(Tollywood) ಖ್ಯಾತ ನಿರ್ದೇಶಕ ಪುರಿ ಜಗನ್ನಾಥ್(Puri Jagannadh) ಹಾಗೂ ಸೂಪರ್ ಸ್ಟಾರ್(Super Star) ವಿಜಯ್ ದೇವರಕೊಂಡ(Vijay Deverakonda) ಕಾಂಬೋದ ಮತ್ತೊಂದು ಮೆಗಾ ಪ್ರಾಜೆಕ್ಟ್ ಅನೌನ್ಸ್ ಆಗಿದೆ. ಲೈಗರ್(Liger) ಸಿನಿಮಾ ರಿಲೀಸ್​ಗೆ ಎದುರು ನೋಡುತ್ತಿರುವ ಅಭಿಮಾನಿಗಳಿಗೆ ವಿಜಯ್ ಹಾಗೂ ಪುರಿ ಜಗನ್ನಾಥ್ ಜೋಡಿ ‘ಜನ ಗಣ ಮನ’(Jana Gana Mana) ಎಂಬ ಆಕ್ಷನ್ ಡ್ರಾಮಾ ಸಿನಿಮಾ(Action Drama Movie) ಉಣಬಡಿಸಲು ತಯಾರಾಗ್ತಿದ್ದಾರೆ. ಅದರ ಮೊದಲ ಭಾಗವೆಂಬಂತೆ ಇವತ್ತು ಮುಂಬೈ(Mumbai)ನಲ್ಲಿ ಅದ್ಧೂರಿಯಾಗಿ ಪ್ಯಾನ್ ಇಂಡಿಯಾ ಪ್ರಾಜೆಕ್ಟ್(Pan India Project) ಜನಗಣಮನ ಸಿನಿಮಾಗೆ ಮುನ್ನುಡಿ ಬರೆಯಲಾಯಿತು. ಜನ ಗಣ ಮನ ಸಿನಿಮಾಗೆ ಪುರಿ ಜಗನ್ನಾಥ್ ಚಿತ್ರಕಥೆ, ಡೈಲಾಗ್ ಬರೆದು ಆಕ್ಷನ್ ಕಟ್ ಹೇಳಲಿದ್ದು, ಪುರಿ ಕನೆಕ್ಟ್ ಹಾಗೂ ಶ್ರೀಕರ ಸ್ಟುಡಿಯೋ ಪ್ರೊಡಕ್ಷನ್ ನಡಿ ಚಾರ್ಮಿ ಕೌರ್, ವಂಶಿ ಪಡಿಪೆಲ್ಲಿ ಬಂಡವಾಳ ಹೂಡ್ತಿದ್ದು, ತೆಲುಗು, ಕನ್ನಡ, ತಮಿಳು, ಹಿಂದಿ ಹಾಗೂ ಮಲಯಾಳಂ ಭಾಷೆಯಲ್ಲಿ ಸಿನಿಮಾ ಮೂಡಿ ಬರಲಿದೆ.

ಪಕ್ಕಾ ಆ್ಯಕ್ಷನ್​ ಎಂಟರ್​ಟೈನರ್ ಜೆಜಿಎಮ್​!

ನಮ್ಮ ಮುಂದಿನ ಸಿನಿಮಾ JGM ಬಗ್ಗೆ ಮಾಹಿತಿ ಹಂಚಿಕೊಂಡಿರುವುದು ಖುಷಿಯಾಗ್ತಿದೆ. ವಿಜಯ್ ಜೊತೆ ಮತ್ತೆ ಕೈ ಜೋಡಿಸಿದ್ದೇನೆ. ಇದು ಪಕ್ಕಾ ಆಕ್ಷನ್ ಎಂಟರ್ ಟೈನರ್ ಸಿನಿಮಾವಾಗಿದೆ ಎಂದು ನಿರ್ದೇಶಕ ಪುರಿ ಜಗನ್ನಾಥ್ ಮಾಹಿತಿ ಹಂಚಿಕೊಂಡರು.ವಿಜಯ್ ದೇವರಕೊಂಡ, ಪುರಿ ಪ್ರಾಜೆಕ್ಟ್ ಭಾಗವಾಗಿರೋದು ಖುಷಿಯಾಗಿದೆ. ಪ್ರತಿಯೊಬ್ಬ ಭಾರತೀಯರಿಗೂ ಈ ಕಥೆ ಮನ ಮುಟ್ಟುತ್ತದೆ. ಇದು ಸವಾಲಿನ ಕಥೆಯಾಗಿದ್ದು, ಚಾರ್ಮಿ ಹಾಗೂ ಇಡೀ ತಂಡದ ಜೊತೆ ಕೆಲಸ ಮಾಡಲು ಉತ್ಸುಕನಾಗಿದ್ದೇನೆ.

ಆಗಸ್ಟ್​ 3 2023ಕ್ಕೆ ತೆರೆಗೆ ಅಪ್ಪಳಿಸಲಿದೆ ಜನ ಗಣ ಮನ!

ವಂಶಿ ಪಡಿಪೆಲ್ಲಿ, JGM ಅದ್ಭುತ ಕಥೆಯಾಗಿದ್ದು, ಇದು ಭಾರತೀಯರ ಮನತಟ್ಟುತ್ತದೆ. ವಿಜಯ್, ಪುರಿ, ಚಾರ್ಮಿ ಜೊತೆ ಪ್ರಾಜೆಕ್ಟ್ ಕೆಲಸ‌ ಮಾಡುತ್ತಿರುವುದು ಖುಷಿಕೊಟ್ಟಿದೆ ಎಂದರು. ವಿದೇಶದ ನಾನಾ ಭಾಗಳಲ್ಲಿ ಶೂಟಿಂಗ್ ನಡೆಸಲು ಪ್ಲ್ಯಾನ್ ಹಾಕಿದ್ದು, ಎಪ್ರಿಲ್ ತಿಂಗಳಿನಿಂದ ಶೂಟಿಂಗ್ ಶುರುವಾಗಲಿದೆ. ಆಕ್ಷನ್ ಎಂಟರ್ ಟೈನರ್ ಕಥಾನಕ ಹೊಂದಿರುವ JGM ಸಿನಿಮಾ ಆಗಸ್ಟ್ 3 2023 ವರ್ಲ್ಡ್ ವೈಡ್ ತೆರೆಗಪ್ಪಳಿಸಲಿದೆ.

ಇದನ್ನೂ ಓದಿ: ಕುಕ್ಕೆ ಸುಬ್ರಮಣ್ಯಕ್ಕೆ ಪವನ್​ ಕಲ್ಯಾಣ್​ ಭೇಟಿ​​.. ಯಾವ ದೋಷಕ್ಕೆ ಪೂಜೆ ಮಾಡಿಸಿದ್ರು ನೀವೇ ನೋಡಿ

ಅರ್ಜುನ್​ ರೆಡ್ಡಿ ಬಳಿಕ ಫೇಮಸ್​ ಆಗಿದ್ದ ವಿಜಯ್!

2017ರಲ್ಲಿ ಅರ್ಜುನ್ ರೆಡ್ಡಿ ಚಿತ್ರದ ಮೂಲಕ ರಾತ್ರೋ ರಾತ್ರಿ ಸೂಪರ್‌ಸ್ಟಾರ್ ಪಟ್ಟಕ್ಕೇರಿದ ನಟ ವಿಜಯ್ ದೇವರಕೊಂಡ. ಆ ಬಳಿಕ ಹಾಗೊಂದು ಹಿಟ್, ಹೀಗೊಂದು ಫ್ಲಾಪ್ ಕೊಟ್ಟರೂ, ಈ ರೌಡಿ ಹುಡುಗನಿಗೆ ಬೇಡಿಕೆ ಕಡಿಮೆ ಆಗಿಲ್ಲ. ಅದರಲ್ಲಂತೂ ಈಗೀಗ ನನ್ನ ಸಿನಿಮಾ ಥಿಯೇಟರ್‌ಗಳಲ್ಲಿ ರಿಲೀಸ್ ಆದರೆ 200 ಕೋಟಿ ರೂಪಾಯಿಗೂ ಜಾಸ್ತಿ ಗಳಿಕೆ ಮಾಡುತ್ತೆ.

ಇದನ್ನೂ ಓದಿ: ಸ್ಟಾರ್​​​ ವಾರ್​ ಯಾಕೆ, ನಾವೂ ಒಂದೇ ಇಲ್ಲಿ ಎಂಬ ಸಂದೇಶ! ಕೆಜಿಎಫ್​ 2 vs ಬೀಸ್ಟ್​​ ಗುದ್ದಾಟ ಅಂತ್ಯ

ರಿಲೀಸ್​​ಗೆ ರೆಡಿಯಾಗಿದೆ ‘ಲೈಗರ್’

ವಿಜಯ್ ದೇವರಕೊಂಡ ನಟಿಸಿರುವ ಲೇಟೆಸ್ಟ್ ಸಿನಿಮಾ ಲೈಗರ್. ಇದು ರೊಮ್ಯಾಂಟಿಕ್ ಸ್ಪೋರ್ಟ್ಸ್ ಆಕ್ಷನ್ ಸಿನಿಮಾ ಆಗಿದ್ದು ಪೂರಿ ಜಗನ್ನಾಥ್ ಆಕ್ಷನ್ ಕಟ್ ಹೇಳಿದ್ದಾರೆ. ಜೊತೆಗೆ ಪೂರಿ ಜಗನ್ನಾಥ್ ಅವರ ಜೊತೆ ಬಾಲಿವುಡ್‌ನ ಖ್ಯಾತ ನಿರ್ಮಾಪಕ ಕರಣ್ ಜೋಹರ್ ಕೂಡ ಲೈಗರ್‌ಗೆ ಹಣ ಹಾಕಿದ್ದಾರೆ. ತೆಲುಗು ಹಾಗೂ ಹಿಂದೆ ಭಾಷೆಗಳಲ್ಲಿ ಏಕಕಾಲದಲ್ಲಿಯೇ ಚಿತ್ರೀಕರಣ ಮಾಡಲಾಗಿದೆ. ದಕ್ಷಿಣದ ಬಹುಬೇಡಿಕೆಯ ಸೂಪರ್‌ಸ್ಟಾರ್ ಆಗಿರುವ ವಿಜಯ್ ದೇವರಕೊಂಡ ಅವರಿಗೆ ಈ ಚಿತ್ರದಲ್ಲಿ ಬಾಲಿವುಡ್ ಬೆಡಗಿ ಅನನ್ಯಾ ಪಾಂಡೆ ನಾಯಕಿಯಾಗಿದ್ದು ರಮ್ಯಕೃಷ್ಣ, ರೋಹಿತ್ ರಾಯ್, ಮಕರಂದ್ ದೇಶಪಾಂಡೆ, ಅಲಿ ಪ್ರಮುಖ ತಾರಾಗಣದಲ್ಲಿದ್ದಾರೆ. ತೆಲುಗು ಹಾಗೂ ಹಿಂದಿ ಜೊತೆಗೆ ತಮಿಳು, ಕನ್ನಡ ಹಾಗೂ ಮಲಯಾಳಂ ಭಾಷೆಗಳಿಗೂ ಲೈಗರ್ ಡಬ್ ಆಗಿ ರಿಲೀಸ್ ಆಗಲಿದೆ.
Published by:Vasudeva M
First published: